ಟ್ರೋಲ್ ಒತ್ತಡ, ಮಾನಸಿಕ ಸಂಕಷ್ಟ – ಸಿನಿಮಾ ರಂಗ ತೊರೆಯಲು ತೀರ್ಮಾನಿಸಿದ್ದ ಶ್ರೀಲೀಲಾ

ಬೆಂಗಳೂರು: ಕನ್ನಡದ ನಟಿ ಶ್ರೀಲೀಲಾ ಇಂದಿನ ದಿನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ತೆಲುಗಿನಲ್ಲೇ ನಂಬರ್ 1 ನಟಿಯಾಗಿ ಗುರುತಿಸಿಕೊಂಡ ಅವರು, ಮಹೇಶ್ ಬಾಬು, ಪವನ್ ಕಲ್ಯಾಣ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿಯೂ ಭಾರೀ ಬೇಡಿಕೆ ಪಡೆದಿದ್ದಾರೆ.

 

ಆದರೆ ಇಷ್ಟೊಂದು ಯಶಸ್ಸಿನ ಹಿಂದೆ ತಮ್ಮಿಗೆ ಭಾರೀ ನೋವು ಇರುವುದನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಿರೂಪಕಿ ಸುಮಾ ಕನಕಾಲ ನಡೆಸಿದ ಸಂದರ್ಶನದಲ್ಲಿ ಶ್ರೀಲೀಲಾ ಹೇಳಿದ್ದಾರೆ:

 

“ಚಿತ್ರರಂಗದ ಆರಂಭದಲ್ಲಿ ಟ್ರೋಲ್‌ಗಳಿಂದ ತೀವ್ರ ಮಾನಸಿಕ ಒತ್ತಡ ಅನುಭವಿಸಿದ್ದೆ. ಕೆಲವೊಮ್ಮೆ ಎಲ್ಲವನ್ನೇ ಬಿಡಲು ಯೋಚಿಸಿದ್ದೆ, ಶಾಲೆ ಅಥವಾ ಕಾಲೇಜಿಗೆ ಹಿಂತಿರುಗುವ ಆಸೆ ಹುಟ್ಟಿತ್ತು.”

 

ಈಗ ಅವರು ಟ್ರೋಲ್‌ಗಳನ್ನು ಎದುರಿಸಲು ಕಲಿತಿದ್ದಾರೆ ಮತ್ತು ಜನರು ಸ್ವಲ್ಪ ಹೆಚ್ಚು ಸಂವೇದನಾಶೀಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಟಿ ರಾಶಿ ಖನ್ನಾ ಸಹ ತಮ್ಮ ಅನುಭವ ಹಂಚಿಕೊಂಡು, ಟ್ರೋಲ್‌ಗಳು ಮಾನಸಿಕವಾಗಿ ನೋವುಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.

 

ಪ್ರಸ್ತುತ ಶ್ರೀಲೀಲಾ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಆಶಿಖಿ 3 ನಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿದ್ದಾರೆ, ಹಾಗೂ ಇನ್ನೂ ಎರಡು ಹಿಂದಿ ಮತ್ತು ಹಲವು ತೆಲುಗು-ತಮಿಳು ಚಿತ್ರಗಳಲ್ಲಿ ಸಹ ಅಭಿನಯಿಸುತ್ತಿದ್ದಾರೆ. ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೆರೆದಾಡುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1

‘ಧುರಂಧರ್ 2’: ಪಾಕಿಸ್ತಾನದಲ್ಲಿ ಪೈರಸಿ ಹಬ್ಬ, ಜನಪ್ರಿಯತೆಯ ರೆಕಾರ್ಡ್

ಪಾಕಿಸ್ತಾನ: ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

‘ನಾನು ನಿಮ್ಮೊಂದಿಗೆ ಅಭಿನಯಿಸಲು ಬಯಸುತ್ತೇನೆ’ – ವಿಜಯ್ ಸೇತುಪತಿ ರಿಷಬ್ ಶೆಟ್ಟಿ ಭೇಟಿಯಲ್ಲಿ ಘೋಷಣೆ

ಬೆಂಗಳೂರು: ತಮಿಳು ಸಿನಿಮಾ ರಂಗದ ಪ್ರಮುಖ ಸ್ಟಾರ್ ವಿಜಯ್ ಸೇತುಪತಿ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ರಶ್ಮಿಕಾ–ವಿಜಯ್ ಹನಿಮೂನ್ ಫೋಟೋಗಳು ವೈರಲ್ – ಮೆಟ್ಟಿಲುಗಳ ಮೇಲೆ ಪ್ರೀತಿ ಕ್ಷಣ

ದೇವರಕೊಂಡ ತಮ್ಮ ಮದುವೆಯ ನಂತರ ಹನಿಮೂನ್‌ಗೆ ತೆರಳಿದ್ದಾರೆ. ಮದುವೆ ಫೆಬ್ರವರಿ 26 ರಂದು... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಐಶ್ವರ್ಯ ರೈ ಬಳಿ ಕ್ಷಮೆ ಕೇಳಿದ ಸ್ನೇಹಾ ಉಲ್ಲಾಳ್ – ಬಾಲಿವುಡ್ ಪ್ರವೇಶದ ಕಥೆ

ಮುಂಬೈ: ಮಂಗಳೂರು ಮೂಲದ ಸ್ನೇಹಾ ಉಲ್ಲಾಳ್ ತಮ್ಮ ಬಾಲಿವುಡ್ ಪ್ರವೇಶ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಧುರಂಧರ್ 2 ಪ್ರದರ್ಶನದಲ್ಲಿ ಕೆನಡಾದ ಚಿತ್ರಮಂದಿರದಲ್ಲಿ ಹಿಂಸಾಚಾರ: ತಾಂತ್ರಿಕ ತೊಂದರೆ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣ

ಮುುಂಬೈ/ಕೆನಡಾ: ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ಹಾಗೂ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

‘ಸರ್ಸೆ ಸೆರಗ ಸರ್ಸೆ’ ವಿವಾದ: ಗಾಯಕಿ ಮಂಗ್ಲಿ ಕ್ಷಮೆಯಾಚನೆ, ಹಾಡನ್ನು ಮರುರೆಕಾರ್ಡ್ ಮಾಡಿ ಬಿಡುಗಡೆ

ಬೆಂಗಳೂರು: ಕೆಡಿ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಸುತ್ತಲೂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

‘ದೃಶ್ಯಂ 3’ ಬಿಡುಗಡೆ ವಿಳಂಬ: ಗಲ್ಫ್ ಸಂಘರ್ಷ ಕಾರಣ, ಮೋಹನ್ ಲಾಲ್ ಚಿತ್ರ ಮೇ–ಜೂನ್ 2026 ರವರೆಗೆ ಮುಂದೂಡಿಕೆ

ಬೆಂಗಳೂರು: ಮೋಹನ್ ಲಾಲ್ ನಟನೆಯ ಬಹುನಿರೀಕ್ಷಿತ ‘ದೃಶ್ಯಂ’ ಸರಣಿಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಎಸ್‌ಎಸ್ ರಾಜಮೌಳಿ ಮೆಚ್ಚು: ‘ಧುರಂಧರ್ 2’ನಲ್ಲಿ ಬರಹ, ಅಭಿನಯ ಮತ್ತು ನಿರ್ದೇಶನ ಎಲ್ಲವೂ ಶ್ರೇಷ್ಟ

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ತಮ್ಮ ಅನೇಕ ಸೂಪರ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

‘ದಿ ಡೈರಿ ಆಫ್ ಮಣಿಪುರ’ ನಿರ್ದೇಶಕ ಸನೋಜ್ ಮಿಶ್ರಾ: ಮೊನಾಲಿಸಾ–ಫರ್ಮಾನ್ ವಿವಾಹದ ಮೇಲೆ ಗಂಭೀರ ಆರೋಪ

ಬೆಂಗಳೂರು: ಕುಂಭಮೇಳದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ 2 ದಂಗಲ್ : ರಣವೀರ್ ಸಿಂಗ್‌ಗೆ ದೊಡ್ಡ ಗೆಲುವು: ದೀಪಿಕಾ ಪ್ರತಿಕ್ರಿಯೆ ಏಕೆ ಇಲ್ಲ?

ಮುಂಬೈ: ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಧುರಂಧರ್ 2’ ಬಾಕ್ಸ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1