ಯತೀಂದ್ರ ನಡೆಗಳಿಂದ ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೆ ಮುಜುಗರಕ್ಕೆ ಒಳಗಾಗಿದ್ದಾರೆ: ಪ್ರತಾಪ್ ಸಿಂಹ
ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, “ಯತೀಂದ್ರ ಸಿದ್ದರಾಮಯ್ಯ ಅವರ ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು. “ಮೈಸೂರಿನ ಉಸ್ತುವಾರಿ ಸಚಿವರು ವರ್ಷದಲ್ಲಿ ಕೇವಲ ಮೂರು ದಿನ ಮಾತ್ರ ಜಿಲ್ಲೆಗೆ ಬರುತ್ತಾರೆ – ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ದಸರಾ ಸಂದರ್ಭಗಳಲ್ಲಿ. ಇಡೀ ಮೈಸೂರು ಅಭಿವೃದ್ಧಿ ಸ್ಥಗಿತಗೊಂಡಂತಾಗಿದೆ,” ಎಂದು ಅವರು ಟೀಕಿಸಿದರು.
ಮೈಸೂರಿನಲ್ಲಿ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಾಪ್ ಸಿಂಹ, “ಯತೀಂದ್ರ ಅವರು ಮೈಸೂರಿನ ಅಭಿವೃದ್ಧಿಗಾಗಿ ಏನಾದರೂ ಸ್ಪಷ್ಟ ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ. ಸಿದ್ದರಾಮಯ್ಯ ಅವರು ತಮ್ಮ ಹೆಜ್ಜೆ ಹೆಜ್ಜೆಗೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ,” ಎಂದರು. ಇದೇ ವೇಳೆ, ಬಿಬಿಎಂಪಿ ಮತ್ತು ಮೈಸೂರು ಪಾಲಿಕೆ ಚುನಾವಣೆಗಳನ್ನು ಉಲ್ಲೇಖಿಸಿದ ಅವರು, “ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಕಾಂಗ್ರೆಸ್‌ಗೆ ಧೈರ್ಯವಿಲ್ಲ. ಅಧಿಕಾರ ಹಸ್ತಾಂತರವಾಗುವುದಿಲ್ಲ ಎಂಬ ಯತೀಂದ್ರ ಹೇಳಿಕೆ ಅವರ ತಂದೆಯ ಮನದ ಮಾತಿನ ಪ್ರತಿಬಿಂಬವಾಗಿದೆ,” ಎಂದು ಅಭಿಪ್ರಾಯಪಟ್ಟರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹನೂರು
ಮಾದಪ್ಪನ ಭಕ್ತನ ಮೇಲೆ ಚಿರತೆ ದಾಳಿ: ಪ್ರಾಣಾಪಾಯದಿಂದ ಪಾರದ ಬಾಲಕ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಪೊನ... ಓದನ್ನು ಮುಂದುವರಿಸಿ
ಲಕ್ಕುಂಡಿ ಪುರಾತನ ದೇವಸ್ಥಾನ ಆವರಣದಲ್ಲಿ ನಿಜ ನಾಗಸರ್ಪ ಪತ್ತೆ; ಕಾರ್ಮಿಕರಲ್ಲಿ ಆತಂಕ!
ಗದಗ: ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತನ ದೇ... ಓದನ್ನು ಮುಂದುವರಿಸಿ
ಶಿಕಾರಿಪುರ
ಚಕ್ರ ತುಂಡಾಗಿ ತೋಟಕ್ಕೆ ನುಗ್ಗಿದ ಖಾಸಗಿ ಬಸ್; ಸ್ವಲ್ಪದರಲ್ಲೇ ಪಾರಾದ 25ಕ್ಕೂ ಹೆಚ್ಚು ಪ್ರಯಾಣಿಕರು!
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ಗ್ರಾಮದಲ್ಲಿ ಖಾಸಗಿ... ಓದನ್ನು ಮುಂದುವರಿಸಿ
17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು; ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ ಹೋಗಿದ್ದೇಕೆ?
ಚಿಕ್ಕಬಳ್ಳಾಪುರ: ಜಿಲ್ಲಾ ಚಿಕ್ಕಬಳ್ಳಾಪುರದಲ್ಲಿ 17 ವರ್ಷದ ಬಾಲಕಿ... ಓದನ್ನು ಮುಂದುವರಿಸಿ
ನಂಜನಗೂಡು
“ಗ್ರಾಮ ದೇವತೆ ಜಾತ್ರೆ: ಮಹಿಳೆಯರ ವಿಡಿಯೋ ಚಿತ್ರೀಕರಣ, ಕುಡಿದು ಗಲಾಟೆ ಮಾಡಿದ್ರೆ ₹30,000 ದಂಡ”
ಮೈಸೂರು: ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಲ್ಲಿ ನಡೆಯಲಿರುವ... ಓದನ್ನು ಮುಂದುವರಿಸಿ
ಬಸ್ ಅಂಡರ್‌ಪಾಸ್ ಗೋಡೆಗೆ ಡಿಕ್ಕಿ – 19 ಪ್ರಯಾಣಿಕರಿಗೆ ಸಣ್ಣ ಗಾಯಗಳು
ಮಂಡ್ಯ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ... ಓದನ್ನು ಮುಂದುವರಿಸಿ
ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ: ಭೂಕಾಂತ್ ಪ್ರಕರಣಕ್ಕೆ ತೆರೆ
ಬೆಂಗಳೂರು: ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ಒಟ್ಟು 54 ಅಧ್ಯಕ್ಷ... ಓದನ್ನು ಮುಂದುವರಿಸಿ
ಗ್ರಾಹಕರ ಕಾಲಹರಣಕ್ಕೆ ಹೋಟೆಲ್‌ಗಳಿಗೆ ತೊಂದರೆ – “ಟೇಬಲ್ ಚಾರ್ಜ್” ಪರಿಹಾರ ಪರಿಗಣನೆ
ಬೆಂಗಳೂರು: ನಗರದ ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳಲ್ಲಿ ಗ್ರಾಹಕರು<... ಓದನ್ನು ಮುಂದುವರಿಸಿ
ಕನಕಗಿರಿ
ಕನಕಗಿರಿ ಸರಣಿ ಕಳ್ಳತನ ಪ್ರಕರಣಗಳು – ಸಾರ್ವಜನಿಕರಲ್ಲಿ ಭೀತಿ, ಸಚಿವರು ಪೊಲೀಸರಿಗೆ ತ್ವರಿತ ಕ್ರಮ ಸೂಚನೆ
ಕೊಪ್ಪಳ: ಕೊಪ್ಪಳದ ಕನಕಗಿರಿಯಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕ... ಓದನ್ನು ಮುಂದುವರಿಸಿ
ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾಮಗಾರಿ ನಿಧಾನ, ರೈತರಲ್ಲಿ ಆತಂಕ
ವಿಜಯನಗರ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾ... ಓದನ್ನು ಮುಂದುವರಿಸಿ