1ರೊಳಗೆ ಲೇಖಕಿ: ಬಾಲಕಿ ಪರಿಣಿತಾಳ ಸಾಧನೆಗೆ TA ಶರವಣ ಪ್ರಶಂಸೆ”
ಬೆಂಗಳೂರು: ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಬಾಲಕಿ ಪರಿಣಿತಾ ತನ್ನ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದಾರೆ. ಹನ್ನೊಂದು ವರ್ಷದ ಬೆಳವಣಿಗೆಯಲ್ಲಿರುವ ಆಕೆಯ ಕಥಾ ಸಂಕಲನ “Tales by Pari – If I Had Wings and Other Stories” ಮೂಲಕ ಮೊದಲಿನಿಂದಲೇ ಗಮನ ಸೆಳೆದ ಈ ಪ್ರತಿಭಾವಂತಿ, ಇದೀಗ ಎರಡನೇ ಪುಸ್ತಕ ಬಿಡುಗಡೆ ಮೂಲಕ ಮತ್ತೆ ಎಲ್ಲರ ಗಮನ ಸೆಳೆಯಿದ್ದಾರೆ.
ನಗರದ ನಾಯಂಡಹಳ್ಳಿಯ ಅಪಾರ್ಟ್‌ಮೆಂಟ್ ಪಾರ್ಟಿ ಹಾಲ್‌ನಲ್ಲಿ ಆಯೋಜಿಸಲಾದ ಸರಳ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎ. ಶರವಣ ಅವರು, “ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ ರಚನೆಗೆ ಕೈಹಾಕಿರುವುದು ಅಪೂರ್ವ ಸಾಧನೆ. ಇಂದಿನ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚುತ್ತಿದೆ, ಆದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸುವುದು ಬಹಳ ಮುಖ್ಯ. ಪರಿಣಿತಾ ಅವರ ಬರವಣಿಗೆ ಕೌಶಲ್ಯವು ಭವಿಷ್ಯದಲ್ಲಿ ದೊಡ್ಡ ಮಟ್ಟದ ಸಾಧನೆಗೆ ದಾರಿ ಮಾಡಿಕೊಡುತ್ತದೆ,” ಎಂದು ಅಭಿಪ್ರಾಯಪಟ್ಟರು.
ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಾಲಾಜಿ ಹಾಗೂ ಡಾ. ಅನುಷಾ ದಂಪತಿಯ ಪುತ್ರಿಯಾದ ಪರಿಣಿತಾ, ಈಗಾಗಲೇ ತನ್ನ ಎರಡನೇ ಪುಸ್ತಕವನ್ನು ಪ್ರಕಟಿಸಿರುವುದು ವಿಶೇಷ. ಬಾಲ್ಯದಲ್ಲೇ ಓದು ಮತ್ತು ಬರವಣಿಗೆಯ ಮೇಲೆ ಆಸಕ್ತಿ ಬೆಳೆಸಿಕೊಂಡಿರುವ ಆಕೆ, ತನ್ನ ಕಲ್ಪನೆ ಮತ್ತು ಅನುಭವಗಳನ್ನು ಕಥೆಗಳ ರೂಪದಲ್ಲಿ ಓದುಗರಿಗೆ ಪರಿಚಯಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಆಕೆಯ ಪ್ರತಿಭೆಯನ್ನು ಕೊಂಡಾಡಿ, “ಪರಿಣಿತಾ ಮುಂದಿನ ದಿನಗಳಲ್ಲಿ ಖ್ಯಾತ ಲೇಖಕಿಯಾಗಿ ಬೆಳೆಯಲಿ” ಎಂದು ಹಾರೈಸಿದರು. ಈ ಮೂಲಕ, ಬಾಲ ಪ್ರತಿಭೆಗಳಿಗೆ ಸಮಾಜದಿಂದ ದೊರೆಯುವ ಪ್ರೋತ್ಸಾಹವು ಅವರ ಸಾಧನೆಗೆ ಹುರಿದುಂಬವಾಗುತ್ತದೆ ಎಂಬ ಸಂದೇಶವನ್ನು ಕಾರ್ಯಕ್ರಮವು ಮೂಡಿಸಿತು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇಂಧನ ಕೊರತೆಯ ವದಂತಿಗಳು ಜನರಲ್ಲಿ ಆತಂಕ – ಬಂಕ್‌ಗಳಲ್ಲಿ ಉದ್ದ ಸಾಲುಗಳು
ಕೊಪ್ಪಳ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಗ್ಗೆ... ಓದನ್ನು ಮುಂದುವರಿಸಿ
“ಶ್ರೀರಾಮನವರ “ಹಬ್ಬದ ಸಂತೋಷವೇ ಭೀಕರ ಅನುಭವ : ಅನ್ನಪ್ರಸಾದ ಸೇವನೆಯಿಂದ 200ಕ್ಕೂ ಹೆಚ್ಚು ಅಸ್ವಸ್ಥರು”
ಬೆಂಗಳೂರು ಗ್ರಾಮಾಂತರ: ಶ್ರೀರಾಮನವಮಿ ಹಬ್ಬದ ಅಂಗವಾಗಿ ವಿತರಿಸಲಾದ... ಓದನ್ನು ಮುಂದುವರಿಸಿ
ಪೊಲೀಸ್ ಮೇಲೆ ದಾಳಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಐವರ ಬಂಧನ
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ಪೊ... ಓದನ್ನು ಮುಂದುವರಿಸಿ
ನಾಗ ಸಾಧುಗಳ ದೈವಿಕ ಶಕ್ತಿ ಕಾಣಲು ಕೋಲಾರದಲ್ಲಿ ಭಕ್ತಿಭಾವದ ಮಹಾಯಜ್ಞ ಶೋಭಾಯಾತ್ರೆ ಉದ್ಘಾಟನೆ
ಕೋಲಾರ: ಇಂದು ಕೋಲಾರದ ಮುಳಬಾಗಿಲು ತಾಲ್ಲೂಕಿನ ಪ್ರಸಿದ್ಧ ವಿರೂಪಾಕ... ಓದನ್ನು ಮುಂದುವರಿಸಿ
ಶಾಲಾ ರಜೆ ದಿನ ದುಃಖಕರ ಘಟನೆ : ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು– ಗ್ರಾಮದಲ್ಲಿ ಆಘಾತ
ಯಾದಗಿರಿ: ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಗುರುವಾರ ಬೆಳಿಗ್ಗೆ... ಓದನ್ನು ಮುಂದುವರಿಸಿ
ಫೇಸ್‌ಬುಕ್ ಮೋಸ : ಫೇಸ್‌ಬುಕ್ ಜಾಹೀರಾತು ನಂಬಿ 1.28 ಕೋಟಿ ಕಳೆದುಕೊಂಡ ವ್ಯಕ್ತಿ
ಚಿಕ್ಕಮಗಳೂರು: “ಮೋಸ ಹೋಗುವವರು ಇರುವವರೆಗೆ ಮೋಸಗಾರರು ಕಡಿಮೆಯಾಗು... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪ ಚುನಾವಣೆಗೆ ಸಿದ್ದರಾಮಯ್ಯ ಹಾಟ್ ಎಂಟ್ರಿ: ಉಮೇಶ್ ಮೇಟಿ ಪರ ಪ್ರಚಾರ ಆರಂಭ
ಬಾಗಲಕೋಟೆ, ಮಾರ್ಚ್ 29: ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ ವ... ಓದನ್ನು ಮುಂದುವರಿಸಿ
ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ ವಿಡಿಯೋ ಮಾಡಿದ್ದ ಅನಿರುದ್ಧ್ -ಅಧಿಕಾರಿಗಳ ಕ್ರಮ
ಬೆಂಗಳೂರು, ಮಾ. 29: ನಟ ಅನಿರುದ್ಧ ಜಟ್ಕರ್ ಕಳೆದ ಐದು ವರ್ಷಗಳಿಂದ... ಓದನ್ನು ಮುಂದುವರಿಸಿ
ನಮ್ಮ ಮೆಟ್ರೋ ಸ್ಟೇಷನ್‌ಗೆ ಖಾಸಗಿ ಕಂಪನಿ ಹೆಸರು: ಆದಾಯ ಹೆಚ್ಚಿಸುವತ್ತ ಹೆಜ್ಜೆ
ಬೆಂಗಳೂರು, ಮಾ. 29: ನಗರದ ಔಟರ್ ರಿಂಗ್ ರೋಡ್‌ನ ಡಿಆರ್‌ಡಿಒ ಸ್ಪೋ... ಓದನ್ನು ಮುಂದುವರಿಸಿ
ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಕೆಗೆ ಸಚಿವ ಮುನಿಯಪ್ಪ ಕರೆ
ಬೆಂಗಳೂರು, ಮಾ. 29: ಗಲ್ಫ್ ಯುದ್ಧವು 30ನೇ ದಿನಕ್ಕೆ ತಲುಪಿರುವ ಹ... ಓದನ್ನು ಮುಂದುವರಿಸಿ