ಫೇಸ್‌ಬುಕ್ ಮೋಸ : ಫೇಸ್‌ಬುಕ್ ಜಾಹೀರಾತು ನಂಬಿ 1.28 ಕೋಟಿ ಕಳೆದುಕೊಂಡ ವ್ಯಕ್ತಿ
ಚಿಕ್ಕಮಗಳೂರು: “ಮೋಸ ಹೋಗುವವರು ಇರುವವರೆಗೆ ಮೋಸಗಾರರು ಕಡಿಮೆಯಾಗುವುದಿಲ್ಲ” ಎಂಬ ಪ್ರಖ್ಯಾತ ಮಾತಿಗೆ ಮತ್ತೊಮ್ಮೆ ದೃಢಾಂಶ ಸಿಕ್ಕಿದೆ. ಚಿಕ್ಕಮಗಳೂರಿನ ಕಡೂರು ತಾಲೂಕು ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಫೇಸ್ಬುಕ್ ಜಾಹೀರಾತಿನ ಮೇಲೆ ನಂಬಿಕೆ ಇಟ್ಟು ₹1.28 ಕೋಟಿ ಕಳೆದುಕೊಂಡಿರುವ ದುರಂತ ಘಟನೆ ಬೆಳಕಿಗೆ ಬಂದಿದೆ.
ಕಲ್ಲೇಗೌಡ ಅವರು ಆನ್‌ಲೈನ್ ಟ್ರೇಡಿಂಗ್ ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಖದೀಮರ ಬಲೆಗೆ ಸಿಲುಕಿದ್ದಾರೆ. ಫೇಸ್ಬುಕ್‌ನಲ್ಲಿ ಕಂಡ ‘FYERS’ ಟ್ರೇಡಿಂಗ್ ಜಾಹೀರಾತಿಗೆ ಆಕರ್ಷಿತರಾಗಿ, ಬಳಿಕ ‘F8-FYERS ಸೆಕ್ಯೂರಿಟೀಸ್’ ಎಂಬ ವಾಟ್ಸಾಪ್ ಗುಂಪಿಗೆ ಸೇರಿಕೊಂಡರು. ಗುಂಪಿನ ವಂಚಕರು ಹೆಚ್ಚಿನ ಲಾಭದ ಆಮಿಷ ತೋರಿಸಿ ಹಂತ ಹಂತವಾಗಿ ₹1 ಕೋಟಿ 28 ಲಕ್ಷ 10 ಸಾವಿರ ಹಣ ಕಸಾಯಿಸಿದ್ದಾರೆ. ಆದರೆ ಯಾವುದೇ ಲಾಭಾಂಶ ನೀಡದೇ, ಕೊನೆಗೆ ಹಣ ವಿತ್‌ಡ್ರಾ ಮಾಡುವ ಯತ್ನ ವೇಳೆ ವಂಚನೆ ಬಹಿರಂಗವಾಗಿದೆ. ಕಲ್ಲೇಗೌಡ ಈ ಸಂಬಂಧ ಚಿಕ್ಕಮಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಘಟನೆ ಆನ್‌ಲೈನ್ ಹೂಡಿಕೆಗಳಲ್ಲಿ ಜಾಗ್ರತೆ ಎಚ್ಚರಿಕೆ ಅಗತ್ಯವಿರುವುದಕ್ಕೆ ಹೊಸ ಉದಾಹರಣೆ ನೀಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇಂಧನ ಕೊರತೆಯ ವದಂತಿಗಳು ಜನರಲ್ಲಿ ಆತಂಕ – ಬಂಕ್‌ಗಳಲ್ಲಿ ಉದ್ದ ಸಾಲುಗಳು
ಕೊಪ್ಪಳ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಗ್ಗೆ... ಓದನ್ನು ಮುಂದುವರಿಸಿ
“ಶ್ರೀರಾಮನವರ “ಹಬ್ಬದ ಸಂತೋಷವೇ ಭೀಕರ ಅನುಭವ : ಅನ್ನಪ್ರಸಾದ ಸೇವನೆಯಿಂದ 200ಕ್ಕೂ ಹೆಚ್ಚು ಅಸ್ವಸ್ಥರು”
ಬೆಂಗಳೂರು ಗ್ರಾಮಾಂತರ: ಶ್ರೀರಾಮನವಮಿ ಹಬ್ಬದ ಅಂಗವಾಗಿ ವಿತರಿಸಲಾದ... ಓದನ್ನು ಮುಂದುವರಿಸಿ
1ರೊಳಗೆ ಲೇಖಕಿ: ಬಾಲಕಿ ಪರಿಣಿತಾಳ ಸಾಧನೆಗೆ TA ಶರವಣ ಪ್ರಶಂಸೆ”
ಬೆಂಗಳೂರು: ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ... ಓದನ್ನು ಮುಂದುವರಿಸಿ
ಪೊಲೀಸ್ ಮೇಲೆ ದಾಳಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಐವರ ಬಂಧನ
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ಪೊ... ಓದನ್ನು ಮುಂದುವರಿಸಿ
ನಾಗ ಸಾಧುಗಳ ದೈವಿಕ ಶಕ್ತಿ ಕಾಣಲು ಕೋಲಾರದಲ್ಲಿ ಭಕ್ತಿಭಾವದ ಮಹಾಯಜ್ಞ ಶೋಭಾಯಾತ್ರೆ ಉದ್ಘಾಟನೆ
ಕೋಲಾರ: ಇಂದು ಕೋಲಾರದ ಮುಳಬಾಗಿಲು ತಾಲ್ಲೂಕಿನ ಪ್ರಸಿದ್ಧ ವಿರೂಪಾಕ... ಓದನ್ನು ಮುಂದುವರಿಸಿ
ಶಾಲಾ ರಜೆ ದಿನ ದುಃಖಕರ ಘಟನೆ : ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು– ಗ್ರಾಮದಲ್ಲಿ ಆಘಾತ
ಯಾದಗಿರಿ: ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಗುರುವಾರ ಬೆಳಿಗ್ಗೆ... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪ ಚುನಾವಣೆಗೆ ಸಿದ್ದರಾಮಯ್ಯ ಹಾಟ್ ಎಂಟ್ರಿ: ಉಮೇಶ್ ಮೇಟಿ ಪರ ಪ್ರಚಾರ ಆರಂಭ
ಬಾಗಲಕೋಟೆ, ಮಾರ್ಚ್ 29: ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ ವ... ಓದನ್ನು ಮುಂದುವರಿಸಿ
ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ ವಿಡಿಯೋ ಮಾಡಿದ್ದ ಅನಿರುದ್ಧ್ -ಅಧಿಕಾರಿಗಳ ಕ್ರಮ
ಬೆಂಗಳೂರು, ಮಾ. 29: ನಟ ಅನಿರುದ್ಧ ಜಟ್ಕರ್ ಕಳೆದ ಐದು ವರ್ಷಗಳಿಂದ... ಓದನ್ನು ಮುಂದುವರಿಸಿ
ನಮ್ಮ ಮೆಟ್ರೋ ಸ್ಟೇಷನ್‌ಗೆ ಖಾಸಗಿ ಕಂಪನಿ ಹೆಸರು: ಆದಾಯ ಹೆಚ್ಚಿಸುವತ್ತ ಹೆಜ್ಜೆ
ಬೆಂಗಳೂರು, ಮಾ. 29: ನಗರದ ಔಟರ್ ರಿಂಗ್ ರೋಡ್‌ನ ಡಿಆರ್‌ಡಿಒ ಸ್ಪೋ... ಓದನ್ನು ಮುಂದುವರಿಸಿ
ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಕೆಗೆ ಸಚಿವ ಮುನಿಯಪ್ಪ ಕರೆ
ಬೆಂಗಳೂರು, ಮಾ. 29: ಗಲ್ಫ್ ಯುದ್ಧವು 30ನೇ ದಿನಕ್ಕೆ ತಲುಪಿರುವ ಹ... ಓದನ್ನು ಮುಂದುವರಿಸಿ