ಬಾಗಲಕೋಟೆ ಉಪ ಚುನಾವಣೆಗೆ ಸಿದ್ದರಾಮಯ್ಯ ಹಾಟ್ ಎಂಟ್ರಿ: ಉಮೇಶ್ ಮೇಟಿ ಪರ ಪ್ರಚಾರ ಆರಂಭ
ಬಾಗಲಕೋಟೆ, ಮಾರ್ಚ್ 29: ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕನಕಣ ಮುಟ್ಟಿದಂತೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಖಾಡಕ್ಕೆ ಪ್ರವೇಶ ಮಾಡಿ, ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ ಪ್ರಾರಂಭಿಸಿದ್ದಾರೆ. ನಾಳೆಯಿಂದ ಸಿದ್ದರಾಮಯ್ಯ ನೇರವಾಗಿ ಕ್ಷೇತ್ರದಲ್ಲಿ ಮತಯಾಚನೆ ಮಾಡಲು ಇಳಿಯಲಿದ್ದಾರೆ. ಹತ್ತುಮೂರು ಪ್ರಚಾರ ದಿನಗಳಲ್ಲಿ ಮೊದಲ 5 ದಿನ ಅವರು ಹಗಲು-ರಾತ್ರಿ ಮತಯಾಚನೆ ನಡೆಸಲಿದ್ದಾರೆ.
ಹೆಚ್.ವೈ. ಮೇಟಿ ನಿಧನದ ನಂತರ ತೆರವಾದ ಈ ಕ್ಷೇತ್ರದಲ್ಲಿ ಟಿಕೆಟ್ ಸಂಬಂಧಿತ ಕುಟುಂಬ ಮಧ್ಯೆ ಮೊದಲಗೊಂದಲ ಉಂಟಾಗಿತ್ತು. ಬಳಿಕ ಉಮೇಶ್ ಮೇಟಿ ಅವರನ್ನು ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯಾಗಿ ಘೋಷಿಸಿತು. ಸಿಎಂ ಸಿದ್ದರಾಮಯ್ಯ ಅವರ ಗೆಲುವಿಗಾಗಿ ವಿಶೇಷ 5 ದಿನದ ಪ್ರಚಾರ ನಡೆಸುತ್ತಿದ್ದಾರೆ. ಈ ಬಾರಿ ಸಮುದಾಯ ಗೌರವ, ಸರ್ಕಾರದ ವರ್ಚಸ್ಸು ಮತ್ತು ಕ್ಷೇತ್ರದ ಪ್ರತಿಷ್ಠೆಯನ್ನು ಕಾಪಾಡುವ ಉದ್ದೇಶವಿದೆ ಎಂದು ವರದಿಯಾಗಿದೆ.
ಮಾರ್ಚ್ 30 ರಂದು ಸಿದ್ದರಾಮಯ್ಯ ಬೆಂಗಳೂರು ನಿಂದ ವಿಶೇಷ ವಿಮಾನದಲ್ಲಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಏರ್ಸ್ಟ್ರಿಪ್ಗೆ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಆಲಮಟ್ಟಿ ಡ್ಯಾಮ್ ನತ್ತ ಪ್ರಯಾಣಿಸಿ, ಡ್ಯಾಮ್ ಹೆಲಿಪ್ಯಾಡ್‌ನಲ್ಲಿ ಕಾರಿನಲ್ಲಿ ಸುತಗುಂಡಾರ ಗ್ರಾಮಕ್ಕೆ ತಲುಪಿದ ನಂತರ ಮಧ್ಯಾಹ್ನ 1 ಗಂಟೆಗೆ ಉಮೇಶ್ ಮೇಟಿ ಪರ ಮತಯಾಚನೆ ನಡೆಸಲಿದ್ದಾರೆ. ನಂತರ ನಾಯನೇಗಲಿ, ರಾಂಪುರ, ಬೇವೂರು ಗ್ರಾಮಗಳಲ್ಲಿ ಮತಯಾಚನೆ ನಡೆಸಿ ರಾತ್ರಿ ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮಾರ್ಚ್ 31ರಂದು ಬೆಳಗ್ಗೆ 11ಕ್ಕೆ ಮುಗಳೊಳ್ಳಿ, ಮಧ್ಯಾಹ್ನ 1 ಗಂಟೆಗೆ ನೀಲಾನಗರ, 4 ಗಂಟೆಗೆ ಐಹೊಳೆ ಮತ್ತು 6 ಗಂಟೆಗೆ ಅಮೀನಗಢ ಗ್ರಾಮಗಳಲ್ಲಿ ಸಿಎಂ ಮತಯಾಚನೆ ನಡೆಸಲಿದ್ದಾರೆ. ಎರಡನೇ ಹಂತದ ಪ್ರಚಾರ ಏಪ್ರಿಲ್ 3, 4 ಮತ್ತು 6ರಂದು ಮುಂದುವರಿಯಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಇಂಧನ ಕೊರತೆಯ ವದಂತಿಗಳು ಜನರಲ್ಲಿ ಆತಂಕ – ಬಂಕ್‌ಗಳಲ್ಲಿ ಉದ್ದ ಸಾಲುಗಳು
ಕೊಪ್ಪಳ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಬಗ್ಗೆ... ಓದನ್ನು ಮುಂದುವರಿಸಿ
“ಶ್ರೀರಾಮನವರ “ಹಬ್ಬದ ಸಂತೋಷವೇ ಭೀಕರ ಅನುಭವ : ಅನ್ನಪ್ರಸಾದ ಸೇವನೆಯಿಂದ 200ಕ್ಕೂ ಹೆಚ್ಚು ಅಸ್ವಸ್ಥರು”
ಬೆಂಗಳೂರು ಗ್ರಾಮಾಂತರ: ಶ್ರೀರಾಮನವಮಿ ಹಬ್ಬದ ಅಂಗವಾಗಿ ವಿತರಿಸಲಾದ... ಓದನ್ನು ಮುಂದುವರಿಸಿ
1ರೊಳಗೆ ಲೇಖಕಿ: ಬಾಲಕಿ ಪರಿಣಿತಾಳ ಸಾಧನೆಗೆ TA ಶರವಣ ಪ್ರಶಂಸೆ”
ಬೆಂಗಳೂರು: ಕಿರಿಯ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ... ಓದನ್ನು ಮುಂದುವರಿಸಿ
ಪೊಲೀಸ್ ಮೇಲೆ ದಾಳಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಐವರ ಬಂಧನ
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ಪೊ... ಓದನ್ನು ಮುಂದುವರಿಸಿ
ನಾಗ ಸಾಧುಗಳ ದೈವಿಕ ಶಕ್ತಿ ಕಾಣಲು ಕೋಲಾರದಲ್ಲಿ ಭಕ್ತಿಭಾವದ ಮಹಾಯಜ್ಞ ಶೋಭಾಯಾತ್ರೆ ಉದ್ಘಾಟನೆ
ಕೋಲಾರ: ಇಂದು ಕೋಲಾರದ ಮುಳಬಾಗಿಲು ತಾಲ್ಲೂಕಿನ ಪ್ರಸಿದ್ಧ ವಿರೂಪಾಕ... ಓದನ್ನು ಮುಂದುವರಿಸಿ
ಶಾಲಾ ರಜೆ ದಿನ ದುಃಖಕರ ಘಟನೆ : ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು– ಗ್ರಾಮದಲ್ಲಿ ಆಘಾತ
ಯಾದಗಿರಿ: ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಗುರುವಾರ ಬೆಳಿಗ್ಗೆ... ಓದನ್ನು ಮುಂದುವರಿಸಿ
ಫೇಸ್‌ಬುಕ್ ಮೋಸ : ಫೇಸ್‌ಬುಕ್ ಜಾಹೀರಾತು ನಂಬಿ 1.28 ಕೋಟಿ ಕಳೆದುಕೊಂಡ ವ್ಯಕ್ತಿ
ಚಿಕ್ಕಮಗಳೂರು: “ಮೋಸ ಹೋಗುವವರು ಇರುವವರೆಗೆ ಮೋಸಗಾರರು ಕಡಿಮೆಯಾಗು... ಓದನ್ನು ಮುಂದುವರಿಸಿ
ಡಾ. ವಿಷ್ಣುವರ್ಧನ್ ರಸ್ತೆಯಲ್ಲಿ ಕಸದ ರಾಶಿ ವಿಡಿಯೋ ಮಾಡಿದ್ದ ಅನಿರುದ್ಧ್ -ಅಧಿಕಾರಿಗಳ ಕ್ರಮ
ಬೆಂಗಳೂರು, ಮಾ. 29: ನಟ ಅನಿರುದ್ಧ ಜಟ್ಕರ್ ಕಳೆದ ಐದು ವರ್ಷಗಳಿಂದ... ಓದನ್ನು ಮುಂದುವರಿಸಿ
ನಮ್ಮ ಮೆಟ್ರೋ ಸ್ಟೇಷನ್‌ಗೆ ಖಾಸಗಿ ಕಂಪನಿ ಹೆಸರು: ಆದಾಯ ಹೆಚ್ಚಿಸುವತ್ತ ಹೆಜ್ಜೆ
ಬೆಂಗಳೂರು, ಮಾ. 29: ನಗರದ ಔಟರ್ ರಿಂಗ್ ರೋಡ್‌ನ ಡಿಆರ್‌ಡಿಒ ಸ್ಪೋ... ಓದನ್ನು ಮುಂದುವರಿಸಿ
ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಕೆಗೆ ಸಚಿವ ಮುನಿಯಪ್ಪ ಕರೆ
ಬೆಂಗಳೂರು, ಮಾ. 29: ಗಲ್ಫ್ ಯುದ್ಧವು 30ನೇ ದಿನಕ್ಕೆ ತಲುಪಿರುವ ಹ... ಓದನ್ನು ಮುಂದುವರಿಸಿ