7 ವರ್ಷಗಳ ಬಳಿಕ ತೀರ್ಪು: ದರೋಡೆ-ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ 2017ರಲ್ಲಿ ನಡೆದಿದ್ದ ಭೀಕರ ದರೋಡೆ ಮತ್ತು ಕೊಲೆ ಪ್ರಕರಣಕ್ಕೆ ಅಂತಿಮವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಈ ಪ್ರಕರಣದ ಮುಖ್ಯ ಆರೋಪಿ ಹಶ್ಯಾ ಅಲಿಯಾಸ್ ರಮೇಶ್‌ಗೆ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಕದ್ದ ಚಿನ್ನಾಭರಣ ಖರೀದಿಸಿದ್ದ ಮೌನೇಶ್‌ಗೆ 2 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ರಾಯಚೂರಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಘಟನೆ ವೇಳೆ ಮನೆ ಮಾಲೀಕ ಡಾಕ್ಯಾನಾಯಕ್ ದರೋಡೆಯನ್ನು ತಡೆಯಲು ಮುಂದಾದಾಗ, ಆರೋಪಿಗಳು ಅವರ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿದ್ದ ಪಾರ್ದಿ ಗ್ಯಾಂಗ್ ಕೈವಾಡವಿದ್ದು, 50 ಸಾವಿರ ರೂಪಾಯಿ ನಗದು ಮತ್ತು ಸುಮಾರು 30,400 ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿತ್ತು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಇದೇ ವೇಳೆ, ಮಹಿಳಾ ಆರೋಪಿಗಳಾದ ಗೌರಿತಾಯಿ ಮತ್ತು ಶಿಶಬಾಯಿ ಜಾಮೀನು ಪಡೆದು ನಾಪತ್ತೆಯಾಗಿರುವುದರಿಂದ, ನ್ಯಾಯಾಲಯಕ್ಕೆ ಹಾಜರಾದ ಇಬ್ಬರು ಆರೋಪಿಗಳಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಬಹುಕಾಲದ ಬಳಿಕ ನ್ಯಾಯ ದೊರೆತಿರುವುದರಿಂದ ಪ್ರಕರಣಕ್ಕೆ ಅಂತಿಮ ಮುದ್ದು ಬಿದ್ದಂತಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ರಸ್ತೆಯಲ್ಲಿ ಭೀಕರ ಲಾರಿ ಅಪಘಾತ – ಚಾಲಕ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಮೈಸೂರು ರಸ್ತೆಯ ಸಾಟ್ಲೈಟ್ ಬಸ್ ನಿಲ್ದಾಣದ ಸಿಗ್... ಓದನ್ನು ಮುಂದುವರಿಸಿ
ಲವ್-ಕಮ್-ಅರೆಂಜ್ ಮದುವೆ ದುರಂತ ಅಂತ್ಯ – ಪತಿ ಚಾಕು ಇರಿತಕ್ಕೆ ಬಲಿ
ಬೆಂಗಳೂರು: ಕೌಟುಂಬಿಕ ಕಲಹ ದುರಂತಕ್ಕೆ ತಿರುಗಿ, ಪತಿ ಚಾಕು ಇರಿತದ... ಓದನ್ನು ಮುಂದುವರಿಸಿ
ಹುಸಿ ಬಾಂಬ್ ಬೆದರಿಕೆ ಜಾಲ ಭೇದ – ಪಾಕಿಸ್ತಾನಕ್ಕೂ ವಿಸ್ತರಿಸಿದ್ದ ಆರೋಪಿಯ ಕೃತ್ಯ!
ಮೈಸೂರು: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇ... ಓದನ್ನು ಮುಂದುವರಿಸಿ
ಡೆಲಿವರಿ ಬಾಯ್, ಆಟೋ ಚಾಲಕರಿಂದ ಗಾಂಜಾ ಪೆಡ್ಲಿಂಗ್ – ಇಬ್ಬರು ಬಂಧನ
ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜ... ಓದನ್ನು ಮುಂದುವರಿಸಿ
ಸ್ನ್ಯಾಪ್‌ಚಾಟ್ ಸ್ನೇಹದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ – ಮಹಿಳೆಯಿಂದ ಲಕ್ಷಾಂತರ ವಂಚನೆ, ಇಬ್ಬರು ಬಂಧನ
ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಬೆಳೆಸಿ ಖಾಸಗಿ ಫೋಟೋ ಮ... ಓದನ್ನು ಮುಂದುವರಿಸಿ
ಬಳಗೆರೆ ರಸ್ತೆ ಕೊಲೆ ಪ್ರಕರಣ ಭೇದ – ನಾಲ್ವರು ಆರೋಪಿಗಳು ಬಂಧನ
ಬೆಂಗಳೂರು: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ರಸ್ತೆಯಲ್... ಓದನ್ನು ಮುಂದುವರಿಸಿ
ಪತ್ನಿ ಮೇಲೆ ಪತಿ ಕ್ರೂರ ಹತ್ಯೆ – ಆಸ್ತಿ ವಿವಾದವೇ ಕಾರಣವೇ?
ಬೆಂಗಳೂರು: ನಗರದಲ್ಲಿ ಮತ್ತೊಂದು ಶಾಕ್ ನೀಡುವಂತಿರುವ ಗೃಹ ಕಲಹದ ಪ... ಓದನ್ನು ಮುಂದುವರಿಸಿ
ಶಿಕ್ಷಕಿಯ ಹತ್ಯೆ ಮಾಡಿ ಶವ ಸುಟ್ಟ ದುಷ್ಕರ್ಮಿಗಳು!
ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಸರ್ಕ... ಓದನ್ನು ಮುಂದುವರಿಸಿ
ನರಸಿಂಹರಾಜಪುರ
ಭದ್ರಾ ನದಿಯಲ್ಲಿ ದುರಂತ: ಈಜಲು ತೆರಳಿದ ಐಟಿ ಉದ್ಯೋಗಿ ಮುಳುಗಿ ಸಾವು
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬನ್ನೂರು ಗ್ರಾಮ... ಓದನ್ನು ಮುಂದುವರಿಸಿ
ದಲಿತ ಸ್ವಾಮೀಜಿಗೆ ದೌರ್ಜನ್ಯ ಆರೋಪ: ದೇವಸ್ಥಾನದಲ್ಲೇ ಎಳೆದಾಡಿ ಹಲ್ಲೆ!
ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ದಲ... ಓದನ್ನು ಮುಂದುವರಿಸಿ