ಭದ್ರಾ ನದಿಯಲ್ಲಿ ದುರಂತ: ಈಜಲು ತೆರಳಿದ ಐಟಿ ಉದ್ಯೋಗಿ ಮುಳುಗಿ ಸಾವು
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೃತರನ್ನು ಗದಗ ಮೂಲದ, ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಸ್ನೇಹಿತನ ಮದುವೆಯಲ್ಲಿ ಭಾಗವಹಿಸಲು ಸ್ನೇಹಿತರೊಂದಿಗೆ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದ ಅಭಿಷೇಕ್, ಸ್ಥಳೀಯ ಹೋಂಸ್ಟೇನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ಭದ್ರಾ ನದಿಗೆ ಈಜಲು ತೆರಳಿದ ವೇಳೆ ಭಾರೀ ನೀರಿನ ಸೆಳೆತಕ್ಕೆ ಸಿಲುಕಿ ಕಾಣೆಯಾಗಿದ್ದರು.
ತಕ್ಷಣವೇ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆ ಆರಂಭಿಸಿದರು. ಗಂಟೆಗಳ ಹುಡುಕಾಟದ ಬಳಿಕ, ಬನ್ನೂರು ಸಮೀಪದಲ್ಲೇ ನದಿಯಲ್ಲಿ ಅಭಿಷೇಕ್ ಅವರ ಮೃತದೇಹ ಪತ್ತೆಯಾಯಿತು. ಈ ಘಟನೆ ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ತೀವ್ರ ಶೋಕ ಮೂಡಿಸಿದ್ದು, ಸಂತಸದ ವಾತಾವರಣ ಕ್ಷಣಾರ್ಧದಲ್ಲಿ ದುಃಖಕ್ಕೆ ತಿರುಗಿದೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಜಾಗರೂಕತೆ ಮತ್ತು ನದಿಯ ಭಾರೀ ಸೆಳೆತ ಮತ್ತೊಂದು ಜೀವ ಬಲಿ ಪಡೆದಿರುವುದು ದುರಂತಕರವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ರಸ್ತೆಯಲ್ಲಿ ಭೀಕರ ಲಾರಿ ಅಪಘಾತ – ಚಾಲಕ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಮೈಸೂರು ರಸ್ತೆಯ ಸಾಟ್ಲೈಟ್ ಬಸ್ ನಿಲ್ದಾಣದ ಸಿಗ್... ಓದನ್ನು ಮುಂದುವರಿಸಿ
ಲವ್-ಕಮ್-ಅರೆಂಜ್ ಮದುವೆ ದುರಂತ ಅಂತ್ಯ – ಪತಿ ಚಾಕು ಇರಿತಕ್ಕೆ ಬಲಿ
ಬೆಂಗಳೂರು: ಕೌಟುಂಬಿಕ ಕಲಹ ದುರಂತಕ್ಕೆ ತಿರುಗಿ, ಪತಿ ಚಾಕು ಇರಿತದ... ಓದನ್ನು ಮುಂದುವರಿಸಿ
ಹುಸಿ ಬಾಂಬ್ ಬೆದರಿಕೆ ಜಾಲ ಭೇದ – ಪಾಕಿಸ್ತಾನಕ್ಕೂ ವಿಸ್ತರಿಸಿದ್ದ ಆರೋಪಿಯ ಕೃತ್ಯ!
ಮೈಸೂರು: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇ... ಓದನ್ನು ಮುಂದುವರಿಸಿ
ಡೆಲಿವರಿ ಬಾಯ್, ಆಟೋ ಚಾಲಕರಿಂದ ಗಾಂಜಾ ಪೆಡ್ಲಿಂಗ್ – ಇಬ್ಬರು ಬಂಧನ
ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜ... ಓದನ್ನು ಮುಂದುವರಿಸಿ
ಸ್ನ್ಯಾಪ್‌ಚಾಟ್ ಸ್ನೇಹದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ – ಮಹಿಳೆಯಿಂದ ಲಕ್ಷಾಂತರ ವಂಚನೆ, ಇಬ್ಬರು ಬಂಧನ
ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಬೆಳೆಸಿ ಖಾಸಗಿ ಫೋಟೋ ಮ... ಓದನ್ನು ಮುಂದುವರಿಸಿ
ಬಳಗೆರೆ ರಸ್ತೆ ಕೊಲೆ ಪ್ರಕರಣ ಭೇದ – ನಾಲ್ವರು ಆರೋಪಿಗಳು ಬಂಧನ
ಬೆಂಗಳೂರು: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ರಸ್ತೆಯಲ್... ಓದನ್ನು ಮುಂದುವರಿಸಿ
ಪತ್ನಿ ಮೇಲೆ ಪತಿ ಕ್ರೂರ ಹತ್ಯೆ – ಆಸ್ತಿ ವಿವಾದವೇ ಕಾರಣವೇ?
ಬೆಂಗಳೂರು: ನಗರದಲ್ಲಿ ಮತ್ತೊಂದು ಶಾಕ್ ನೀಡುವಂತಿರುವ ಗೃಹ ಕಲಹದ ಪ... ಓದನ್ನು ಮುಂದುವರಿಸಿ
7 ವರ್ಷಗಳ ಬಳಿಕ ತೀರ್ಪು: ದರೋಡೆ-ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ 201... ಓದನ್ನು ಮುಂದುವರಿಸಿ
ಶಿಕ್ಷಕಿಯ ಹತ್ಯೆ ಮಾಡಿ ಶವ ಸುಟ್ಟ ದುಷ್ಕರ್ಮಿಗಳು!
ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಸರ್ಕ... ಓದನ್ನು ಮುಂದುವರಿಸಿ
ದಲಿತ ಸ್ವಾಮೀಜಿಗೆ ದೌರ್ಜನ್ಯ ಆರೋಪ: ದೇವಸ್ಥಾನದಲ್ಲೇ ಎಳೆದಾಡಿ ಹಲ್ಲೆ!
ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ದಲ... ಓದನ್ನು ಮುಂದುವರಿಸಿ