ಪತ್ನಿ ಮೇಲೆ ಪತಿ ಕ್ರೂರ ಹತ್ಯೆ – ಆಸ್ತಿ ವಿವಾದವೇ ಕಾರಣವೇ?
ಬೆಂಗಳೂರು: ನಗರದಲ್ಲಿ ಮತ್ತೊಂದು ಶಾಕ್ ನೀಡುವಂತಿರುವ ಗೃಹ ಕಲಹದ ಪ್ರಕರಣ ಬೆಳಕಿಗೆ ಬಂದಿದೆ. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ಪತಿ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ದನಿಯಪ್ಪ ಎಂಬ ವ್ಯಕ್ತಿ ತನ್ನ ಪತ್ನಿ ಕಾವ್ಯಳನ್ನು ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಿದ್ದಿವೆ. ಕುಟುಂಬದ ಆಸ್ತಿ ವಿಚಾರ ಮತ್ತು ರಾಜಕೀಯ ಪ್ರವೇಶದ ಆಸೆಯೇ ಈ ದುರಂತಕ್ಕೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿ ದನಿಯಪ್ಪ ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾನೆ. ಪೀಣ್ಯಾದಲ್ಲಿರುವ ಮನೆ ಸೇರಿದಂತೆ ಹಲವು ಆಸ್ತಿಗಳು ಪತ್ನಿ ಕಾವ್ಯ ಮತ್ತು ತಾಯಿಯ ಹೆಸರಿನಲ್ಲಿ ಇವೆ ಎಂದು ತಿಳಿದುಬಂದಿದೆ.
ಈ ಆಸ್ತಿಯನ್ನು ಮಾರಾಟ ಮಾಡಿ ಸ್ವಗ್ರಾಮಕ್ಕೆ ತೆರಳಿ ರಾಜಕೀಯ ಪ್ರವೇಶ ಮಾಡುವ ಉದ್ದೇಶ ದನಿಯಪ್ಪನಿಗಿತ್ತು ಎನ್ನಲಾಗಿದೆ. ಆದರೆ, ಬೆಂಗಳೂರನ್ನು ಬಿಟ್ಟು ಹೋಗುವುದಕ್ಕೂ ಹಾಗೂ ಆಸ್ತಿ ಮಾರಾಟಕ್ಕೂ ಪತ್ನಿ ಕಾವ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ನಿರಂತರ ಜಗಳಗಳು ನಡೆಯುತ್ತಿದವು. ಇನ್ನೂ, ಕೊಲೆಗೆ ಎರಡು ದಿನಗಳ ಮುನ್ನ ದನಿಯಪ್ಪ ತನ್ನ ಊರಾದ ಅಥಣಿಯಲ್ಲಿ ಬಾಡೂಟ ಏರ್ಪಡಿಸಿ, ಸ್ಥಳೀಯರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದನು. ಇದು ರಾಜಕೀಯ ಪ್ರವೇಶದ ಸಿದ್ಧತೆಯ ಭಾಗವೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಘಟನೆ ದಿನ, ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಪತ್ನಿಯೊಂದಿಗೆ ಜಗಳವಾಡಿದ ದನಿಯಪ್ಪ, ಆಕ್ರೋಶದಲ್ಲಿ ಕಾವ್ಯಳನ್ನು ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಹತ್ಯೆ ಮಾಡಿದನೆಂದು ಪೊಲೀಸರು ತಿಳಿಸಿದ್ದಾರೆ. ಕಾವ್ಯ ಪ್ರಾಣ ಬಿಡುವವರೆಗೂ ಹಿಂಸೆ ಮುಂದುವರಿದಿರುವುದು ಪ್ರಕರಣದ ಕ್ರೂರತೆಯನ್ನು ತೋರಿಸುತ್ತದೆ. ಈ ಸಂಬಂಧ ಪೀಣ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ವಿರುದ್ಧ ತನಿಖೆಯನ್ನು ಮುಂದುವರೆಸಿದ್ದಾರೆ. ಇನ್ನಷ್ಟು ಮಾಹಿತಿ ಪಡೆಯಲು ವಿಚಾರಣೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ರಸ್ತೆಯಲ್ಲಿ ಭೀಕರ ಲಾರಿ ಅಪಘಾತ – ಚಾಲಕ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಮೈಸೂರು ರಸ್ತೆಯ ಸಾಟ್ಲೈಟ್ ಬಸ್ ನಿಲ್ದಾಣದ ಸಿಗ್... ಓದನ್ನು ಮುಂದುವರಿಸಿ
ಲವ್-ಕಮ್-ಅರೆಂಜ್ ಮದುವೆ ದುರಂತ ಅಂತ್ಯ – ಪತಿ ಚಾಕು ಇರಿತಕ್ಕೆ ಬಲಿ
ಬೆಂಗಳೂರು: ಕೌಟುಂಬಿಕ ಕಲಹ ದುರಂತಕ್ಕೆ ತಿರುಗಿ, ಪತಿ ಚಾಕು ಇರಿತದ... ಓದನ್ನು ಮುಂದುವರಿಸಿ
ಹುಸಿ ಬಾಂಬ್ ಬೆದರಿಕೆ ಜಾಲ ಭೇದ – ಪಾಕಿಸ್ತಾನಕ್ಕೂ ವಿಸ್ತರಿಸಿದ್ದ ಆರೋಪಿಯ ಕೃತ್ಯ!
ಮೈಸೂರು: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಹಾಗೂ ಸರ್ಕಾರಿ ಕಚೇ... ಓದನ್ನು ಮುಂದುವರಿಸಿ
ಡೆಲಿವರಿ ಬಾಯ್, ಆಟೋ ಚಾಲಕರಿಂದ ಗಾಂಜಾ ಪೆಡ್ಲಿಂಗ್ – ಇಬ್ಬರು ಬಂಧನ
ಬೆಂಗಳೂರು: ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜ... ಓದನ್ನು ಮುಂದುವರಿಸಿ
ಸ್ನ್ಯಾಪ್‌ಚಾಟ್ ಸ್ನೇಹದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ – ಮಹಿಳೆಯಿಂದ ಲಕ್ಷಾಂತರ ವಂಚನೆ, ಇಬ್ಬರು ಬಂಧನ
ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಬೆಳೆಸಿ ಖಾಸಗಿ ಫೋಟೋ ಮ... ಓದನ್ನು ಮುಂದುವರಿಸಿ
ಬಳಗೆರೆ ರಸ್ತೆ ಕೊಲೆ ಪ್ರಕರಣ ಭೇದ – ನಾಲ್ವರು ಆರೋಪಿಗಳು ಬಂಧನ
ಬೆಂಗಳೂರು: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ರಸ್ತೆಯಲ್... ಓದನ್ನು ಮುಂದುವರಿಸಿ
7 ವರ್ಷಗಳ ಬಳಿಕ ತೀರ್ಪು: ದರೋಡೆ-ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ 201... ಓದನ್ನು ಮುಂದುವರಿಸಿ
ಶಿಕ್ಷಕಿಯ ಹತ್ಯೆ ಮಾಡಿ ಶವ ಸುಟ್ಟ ದುಷ್ಕರ್ಮಿಗಳು!
ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಸರ್ಕ... ಓದನ್ನು ಮುಂದುವರಿಸಿ
ನರಸಿಂಹರಾಜಪುರ
ಭದ್ರಾ ನದಿಯಲ್ಲಿ ದುರಂತ: ಈಜಲು ತೆರಳಿದ ಐಟಿ ಉದ್ಯೋಗಿ ಮುಳುಗಿ ಸಾವು
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬನ್ನೂರು ಗ್ರಾಮ... ಓದನ್ನು ಮುಂದುವರಿಸಿ
ದಲಿತ ಸ್ವಾಮೀಜಿಗೆ ದೌರ್ಜನ್ಯ ಆರೋಪ: ದೇವಸ್ಥಾನದಲ್ಲೇ ಎಳೆದಾಡಿ ಹಲ್ಲೆ!
ಕಲಬುರಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ದಲ... ಓದನ್ನು ಮುಂದುವರಿಸಿ