ಅಕ್ರಮ ವಿದೇಶಿಗರ ವಿರುದ್ಧ ಪೊಲೀಸ್ ದಾಳಿ: 200 ಮಂದಿ ಪತ್ತೆ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ಬೃಹತ್ ಕಾರ್ಯಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು 200 ಮಂದಿ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.

 

ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ನೀಡಿದ ಮಾಹಿತಿಯಂತೆ, ಕಳೆದ ಒಂದು ವಾರದಿಂದ ಸಿಸಿಬಿ ಹಾಗೂ ನಗರದ 11 ಡಿಸಿಪಿ ವ್ಯಾಪ್ತಿಯ ಪೊಲೀಸರು ಸಂಯುಕ್ತವಾಗಿ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಕಾರ್ಯಾಚರಣೆಗೆ ನಿನ್ನೆ ರಾತ್ರಿ ಪ್ರಮುಖ ತಿರುವು ದೊರೆತಿದೆ.

 

ಪರಿಶೀಲನೆ ವೇಳೆ ಅಕ್ರಮವಾಗಿ ವಾಸಿಸುತ್ತಿದ್ದ ಸುಮಾರು 200 ಮಂದಿಯನ್ನು ಗುರುತಿಸಿ, ಅವರನ್ನು ವಿದೇಶಿಗರ ನೋಂದಣಿ ಪ್ರಾಧಿಕಾರ (FRRO) ಮೂಲಕ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಹುತೇಕರು ಆಫ್ರಿಕಾ ಹಾಗೂ ಬಾಂಗ್ಲಾದೇಶ ಮೂಲದವರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

 

ಈ ಕಾರ್ಯಾಚರಣೆಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ FRRO ಸಹಕಾರ ನೀಡಿವೆ. ತಪಾಸಣೆ ವೇಳೆ ಕೆಲವು ಮಂದಿಯಿಂದ ಆಧಾರ್ ಕಾರ್ಡ್ ಸೇರಿದಂತೆ ಸ್ಥಳೀಯ ದಾಖಲೆಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಪರಿಶೀಲನೆಯ ವೇಳೆ ಅನೇಕ ವಿದೇಶಿ ಪ್ರಜೆಗಳು ಸ್ಥಳೀಯ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ಕೂಡ ಹೊರಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಪತ್ತೆಯಾಗಿರುವ ವಿದೇಶಿ ಪ್ರಜೆಗಳ ದಾಖಲೆಗಳನ್ನು ಸಂಬಂಧಿತ ದೇಶಗಳ ಅಧಿಕಾರಿಗಳಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಲಿಂಗಸುಗೂರು ಮಹಿಳೆ ಕೊಲೆ: ದೇವರಾಜಿಗೆ ಜೀವಾವಧಿ ಶಿಕ್ಷೆ

ರಾಯಚೂರು: ಮೃತ ಮಹಿಳೆ ವಿಜಯಲಕ್ಷ್ಮಿ, ಪತಿಯ ಮರಣದ ನಂತರ ಯರಡೋಣದಲ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಧಾರವಾಡ

ಲೋಕಾಯುಕ್ತ ದಾಳಿ : ರೊಟ್ಟಿ ಅಂಗಡಿ ಲೈಸೆನ್ಸ್‌ಗೆ ಲಂಚ ಬೇಡಿಕೆ: ಅಧಿಕಾರಿ ಬಂಧನ

ಧಾರವಾಡ: ರೊಟ್ಟಿ ಅಂಗಡಿ ಆರಂಭಿಸಲು ಲೈಸೆನ್ಸ್ ನೀಡುವ ವಿಚಾರದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ತುಮಕೂರು

ಹೃದಯಾಘಾತ ಸಾವುಗೆ ಭೀಕರ ಟ್ವಿಸ್ಟ್.. 3ನೇ ಮದುವೆ ಆಸೆಗೆ 2ನೇ ಗಂಡನ ಹತ್ಯೆ! ಪತ್ನಿಯ ಖತರ್ನಾಕ್ ಪ್ಲಾನ್

ತುಮಕೂರು: ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದ ವ್ಯಕ್ತಿಯ ಸಾವಿಗೆ ಇದೀ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR: ಮಾನಹಾನಿ ಆರೋಪ

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ರಜತ್... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1

ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ನಂಬಿಸಿ 15 ಲಕ್ಷ ದೋಚಿದ ಗ್ಯಾಂಗ್: ಐವರು ಅರೆಸ್ಟ್

ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ 15 ಲಕ್ಷ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ವಿಜಯಪುರ

ಸ್ವಂತ 5 ವರ್ಷದ ಮಗಳ ಮೇಲೆ ಅತ್ಯಾಚಾರ: ತಂದೆಗೆ 20 ವರ್ಷ ಜೈಲು ಶಿಕ್ಷೆ

ವಿಜಯಪುರ: ಐದು ವರ್ಷದ ಅಪ್ರಾಪ್ತ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗ... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ಬೆಂಗಳೂರು ನಗರ

25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ ಸುರಕ್ಷಿತ, ಹೊಯ್ಸಳ ಪೊಲೀಸ್ ತಂಡದ ಸಾಹಸ

ಬೆಂಗಳೂರು: ನಗರದಲ್ಲಿ ಸುಮಾರು 25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR – ಬೆದರಿಕೆ ಮತ್ತು ನಿಂದನೆ ಆರೋಪ

ಬೆಂಗಳೂರು: ನಗರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಕಲ್ಬುರ್ಗಿ

ಆಳಂದ್

ಹೋಳಿ ಹಬ್ಬದಲ್ಲಿ ಬುರ್ಖಾ ಧರಿಸಿ ಬಣ್ಣದಾಟ – ಐವರು ಯುವಕರು ಬಂಧನ

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಉಡುಪಿ

ಕಾಲೇಜಿಗೆ ಹೋಗು ಎಂದ ತಂದೆಯ ಮಾತಿಗೆ ಮನನೊಂದು: 14 ದಿನಗಳ ಹೋರಾಟದ ಬಳಿಕ ಡಿಪ್ಲೋಮಾ ವಿದ್ಯಾರ್ಥಿ ಸಾವು

ಉಡುಪಿ: ಜಿಲ್ಲೆಯ ಕೊಲ್ಲೂರು ಸಮೀಪದ ಕೆರಾಡಿ ಗ್ರಾಮದ ಹಯ್ಯಂಗಾರುದಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1