ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆಂದು ನಂಬಿಸಿ 15 ಲಕ್ಷ ದೋಚಿದ ಗ್ಯಾಂಗ್: ಐವರು ಅರೆಸ್ಟ್
ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಗಣೇಶ್ (25), ಸಾಗರ (28), ಮಂಜಪ್ಪ (40), ಷಣ್ಮುಘ (24) ಮತ್ತು ಷಣ್ಮುಖ (31) ಎಂದು ಗುರುತಿಸಲಾಗಿದೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಸಮೀಪ ಗುರುವಾರ ಸಿನಿಮೀಯ ಶೈಲಿಯಲ್ಲಿ ಈ ದರೋಡೆ ನಡೆದಿತ್ತು.
ಕಡಿಮೆ ಬೆಲೆಗೆ ಚಿನ್ನ ನೀಡುತ್ತೇವೆ ಎಂದು ನಂಬಿಸಿ ದುಷ್ಕರ್ಮಿಗಳು ಬಲೆಗೆ ಬೀಳಿಸಿದ ಬಳಿಕ 15 ಲಕ್ಷ ರೂಪಾಯಿ ಹಣ ಕಸಿದು ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 15 ಲಕ್ಷ ರೂಪಾಯಿ ನಗದು, ನಾಲ್ಕು ಚಿನ್ನದ ನಾಣ್ಯಗಳು, ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಕ್ರೇಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಮನವಿ ಮಾಡಲಾಗಿದೆ. ಪ್ರಕರಣವನ್ನು ಶೀಘ್ರದಲ್ಲಿ ಭೇದಿಸಿದ ವಿಜಯಪುರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಲಿಂಗಸುಗೂರು ಮಹಿಳೆ ಕೊಲೆ: ದೇವರಾಜಿಗೆ ಜೀವಾವಧಿ ಶಿಕ್ಷೆ
ರಾಯಚೂರು: ಮೃತ ಮಹಿಳೆ ವಿಜಯಲಕ್ಷ್ಮಿ, ಪತಿಯ ಮರಣದ ನಂತರ ಯರಡೋಣದಲ್... ಓದನ್ನು ಮುಂದುವರಿಸಿ
ಲೋಕಾಯುಕ್ತ ದಾಳಿ : ರೊಟ್ಟಿ ಅಂಗಡಿ ಲೈಸೆನ್ಸ್‌ಗೆ ಲಂಚ ಬೇಡಿಕೆ: ಅಧಿಕಾರಿ ಬಂಧನ
ಧಾರವಾಡ: ರೊಟ್ಟಿ ಅಂಗಡಿ ಆರಂಭಿಸಲು ಲೈಸೆನ್ಸ್ ನೀಡುವ ವಿಚಾರದಲ್ಲಿ... ಓದನ್ನು ಮುಂದುವರಿಸಿ
ಹೃದಯಾಘಾತ ಸಾವುಗೆ ಭೀಕರ ಟ್ವಿಸ್ಟ್.. 3ನೇ ಮದುವೆ ಆಸೆಗೆ 2ನೇ ಗಂಡನ ಹತ್ಯೆ! ಪತ್ನಿಯ ಖತರ್ನಾಕ್ ಪ್ಲಾನ್
ತುಮಕೂರು: ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದ ವ್ಯಕ್ತಿಯ ಸಾವಿಗೆ ಇದೀ... ಓದನ್ನು ಮುಂದುವರಿಸಿ
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR: ಮಾನಹಾನಿ ಆರೋಪ
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ರಜತ್... ಓದನ್ನು ಮುಂದುವರಿಸಿ
ಸ್ವಂತ 5 ವರ್ಷದ ಮಗಳ ಮೇಲೆ ಅತ್ಯಾಚಾರ: ತಂದೆಗೆ 20 ವರ್ಷ ಜೈಲು ಶಿಕ್ಷೆ
ವಿಜಯಪುರ: ಐದು ವರ್ಷದ ಅಪ್ರಾಪ್ತ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗ... ಓದನ್ನು ಮುಂದುವರಿಸಿ
25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ ಸುರಕ್ಷಿತ, ಹೊಯ್ಸಳ ಪೊಲೀಸ್ ತಂಡದ ಸಾಹಸ
ಬೆಂಗಳೂರು: ನಗರದಲ್ಲಿ ಸುಮಾರು 25 ಅಡಿ ಆಳ ಗುಂಡಿಗೆ ಬಿದ್ದ ಮಹಿಳೆ... ಓದನ್ನು ಮುಂದುವರಿಸಿ
ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR – ಬೆದರಿಕೆ ಮತ್ತು ನಿಂದನೆ ಆರೋಪ
ಬೆಂಗಳೂರು: ನಗರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ... ಓದನ್ನು ಮುಂದುವರಿಸಿ
ಅಕ್ರಮ ವಿದೇಶಿಗರ ವಿರುದ್ಧ ಪೊಲೀಸ್ ದಾಳಿ: 200 ಮಂದಿ ಪತ್ತೆ
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆ... ಓದನ್ನು ಮುಂದುವರಿಸಿ
ಆಳಂದ್
ಹೋಳಿ ಹಬ್ಬದಲ್ಲಿ ಬುರ್ಖಾ ಧರಿಸಿ ಬಣ್ಣದಾಟ – ಐವರು ಯುವಕರು ಬಂಧನ
ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಹೋಳ... ಓದನ್ನು ಮುಂದುವರಿಸಿ
ಕಾಲೇಜಿಗೆ ಹೋಗು ಎಂದ ತಂದೆಯ ಮಾತಿಗೆ ಮನನೊಂದು: 14 ದಿನಗಳ ಹೋರಾಟದ ಬಳಿಕ ಡಿಪ್ಲೋಮಾ ವಿದ್ಯಾರ್ಥಿ ಸಾವು
ಉಡುಪಿ: ಜಿಲ್ಲೆಯ ಕೊಲ್ಲೂರು ಸಮೀಪದ ಕೆರಾಡಿ ಗ್ರಾಮದ ಹಯ್ಯಂಗಾರುದಲ... ಓದನ್ನು ಮುಂದುವರಿಸಿ