ಆಂಬುಲೆನ್ಸ್‌ನಲ್ಲಿ ಸಾರ್ವಜನಿಕರ ಸಾಗಾಟ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ

ಗದಗ: ರೋಗಿಗಳ ತುರ್ತು ಚಿಕಿತ್ಸೆಗೆ ಬಳಸಬೇಕಾದ ಆಂಬುಲೆನ್ಸ್ ವಾಹನವನ್ನು ಸಾಮಾನ್ಯ ಜನರ ಸಾಗಾಟಕ್ಕೆ ಬಳಸಲಾಗಿದೆ ಎಂಬ ಆರೋಪ ಗದಗದಲ್ಲಿ ಕೇಳಿಬಂದಿದೆ. ಗದಗದ ಜಿಮ್ಸ್ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಸಾಗಾಟ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 

ಹರಿದಾಡುತ್ತಿರುವ ವಿಡಿಯೋದಲ್ಲಿ ಆಂಬುಲೆನ್ಸ್ ಬಂದು ನಿಲ್ಲುತ್ತಿದ್ದಂತೆಯೇ ಹಲವರು ಮುಗಿಬಿದ್ದು ವಾಹನಕ್ಕೆ ಹತ್ತುತ್ತಿರುವ ದೃಶ್ಯಗಳು ಕಂಡುಬರುತ್ತವೆ. ರೋಗಿಗಳ ಸೇವೆಗೆ ಮೀಸಲಾದ ಆಂಬುಲೆನ್ಸ್‌ನಲ್ಲಿ ಸಾಮಾನ್ಯ ಜನರನ್ನು ಸಾಗಾಟ ಮಾಡುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

 

ಸ್ಥಳೀಯರ ಪ್ರಕಾರ, ಜಿಮ್ಸ್ ಆಸ್ಪತ್ರೆಯಿಂದ ಗದಗ ನಗರಕ್ಕೆ ಬಸ್ ಸೌಲಭ್ಯ ಕೊರತೆಯಿರುವ ಹಿನ್ನೆಲೆಯಲ್ಲಿ ಕೆಲವರು ಆಂಬುಲೆನ್ಸ್ ಅನ್ನು ಪ್ರಯಾಣಕ್ಕಾಗಿ ಬಳಸುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ರೋಗಿಗಳ ಹೊರತುಪಡಿಸಿ ಇತರರನ್ನು ಆಂಬುಲೆನ್ಸ್‌ನಲ್ಲಿ ಸಾಗಾಟ ಮಾಡುವುದು ನಿಯಮ ಉಲ್ಲಂಘನೆಯಾಗಿದೆ.

 

ಇನ್ನೊಂದೆಡೆ, ಚಾಲಕ ಅಥವಾ ಸಿಬ್ಬಂದಿಯಿಂದ ಆಂಬುಲೆನ್ಸ್ ದುರುಪಯೋಗವಾಗಿರಬಹುದೆಂಬ ಆರೋಪವೂ ಕೇಳಿಬಂದಿದೆ. ಈ ರೀತಿಯ ಘಟನೆಗಳಿಂದ ರೋಗಿಗಳಿಗೆ ಸೋಂಕಿನ ಭಯ ಮಾತ್ರವಲ್ಲದೆ ಸಾರ್ವಜನಿಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1
ಬೆಂಗಳೂರು ನಗರ

ಹೈದರಾಬಾದ್‌ ಉತ್ತಮ, ಬೆಂಗಳೂರು ಟ್ರಾಫಿಕ್ ಜಾಮ್ ಹಾಸ್ಯ – CM ರೇವಂತ್ ರೆಡ್ಡಿ

ಬೆಂಗಳೂರು: ಐಟಿ ಸಿಟಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಈಗ ರಾಜ... ಓದನ್ನು ಮುಂದುವರಿಸಿ


Edited by: ಬಾನು

40 minutes ago

   
Image 1
ಬೆಂಗಳೂರು ನಗರ

ಕರ್ನಾಟಕ ಪರ್ವತಾರೋಹಣ ತಂಡ ಮುಂಟ್ ಎವೆರೆಸ್ಟ್ ಏರಲು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ

ಬೆಂಗಳೂರು: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ Mount Everest ಏರುವ... ಓದನ್ನು ಮುಂದುವರಿಸಿ


Edited by: ಬಾನು

43 minutes ago

   
Image 1
ಕೊಡಗು

ಮಡಿಕೇರಿ

ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಲಜಾಕ್ಷಿ ಸಾವು

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ವಾಲ್ನೂರಿನಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

53 minutes ago

   
Image 1
ದಕ್ಷಿಣಕನ್ನಡ

ದೇವಾಲಯ ತಲುಪಿದ ಕಾಪು ರಾಜಕೀಯ ಕಿಚ್ಚು: ಸೊರಕೆ ಆರೋಪಗಳ ಹಿಂದೆ ಗುರ್ಮೆ ಸುರೇಶ್ ಶೆಟ್ಟಿ ದೇವರ ಮೊರೆ

ಉಡುಪಿ: ಕಂಬಳ ವಿಚಾರದಿಂದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ... ಓದನ್ನು ಮುಂದುವರಿಸಿ


Edited by: ಬಾನು

56 minutes ago

   
Image 1
ಬೀದರ್

ಬೀದರ್‌ನಲ್ಲಿ ಟ್ರ್ಯಾಕ್ಟರ್ ಪಲ್ಟಿ: 13 ವರ್ಷದ ಬಾಲಕ ಸ್ಥಳದಲ್ಲೇ ಸಾವು

ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಕ್ರಾಸ್ ಬಳಿ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಉತ್ತರಕನ್ನಡ

ಕುಮಟಾ

ಗೋಕರ್ಣ ಸಮೀಪ 44 ಅನಧಿಕೃತ ರೆಸಾರ್ಟ್‌ಗಳಿಗೆ ತೆರವು ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ನಗರ

DCM ಪರಾಗಿ ನಾವು ಇದ್ದೇವೆ, ರಾಜ್ಯದ ಕಾರ್ಯ ಮುಂದುವರಿಯಲಿದೆ – ಸತೀಶ್ ಜಾರಕಿಹೊಳಿ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭಾನುವಾರ ಖಾಸಗ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಕಲ್ಬುರ್ಗಿ

ರಥೋತ್ಸವದಲ್ಲಿ ಭೀಕರ ದುರ್ಘಟನೆ: ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಎರಡು ಕಾಲುಗಳು ಕಟ್

ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಕಲ್ಬುರ್ಗಿ

ಭಕ್ತರ ಭವ್ಯ ಸಮ್ಮೇಳನ: ಕಲಬುರಗಿಯಲ್ಲಿ 204ನೇ ರಥೋತ್ಸವ ಸಂಭ್ರಮ

ಕಲಬುರಗಿ: ಕಲಬುರಗಿಯಲ್ಲಿ ಇಂದು ಶರಣಬಸವೇಶ್ವರರ 204ನೇ ರಥೋತ್ಸವ ಭ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಕಲ್ಬುರ್ಗಿ

ಮೋದಿ–ಟ್ರಂಪ್ ಸ್ನೇಹದಿಂದ ಭಾರತ ಸ್ವಾಭಿಮಾನ ಹಾಳು: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1