ಗೋಕರ್ಣ ಸಮೀಪ 44 ಅನಧಿಕೃತ ರೆಸಾರ್ಟ್‌ಗಳಿಗೆ ತೆರವು ಆದೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಂಡಿದೆ.
ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಅವರು ಒಟ್ಟು 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಈ ರೆಸಾರ್ಟ್‌ಗಳು ದುಬ್ಬನಸಶಿ, ನಡುಮಸ್ಕೇರಿ ಸೇರಿದಂತೆ ಅರಬ್ಬಿ ಸಮುದ್ರ ತೀರದ ವಿವಿಧ ಭಾಗಗಳಲ್ಲಿ ನಿರ್ಮಾಣಗೊಂಡಿರುವುದಾಗಿ ತಿಳಿದುಬಂದಿದೆ.
ಆದರೆ 44 ರೆಸಾರ್ಟ್‌ಗಳ ಪೈಕಿ 16 ರೆಸಾರ್ಟ್ ಮಾಲೀಕರು ಕರ್ನಾಟಕ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿರುವ ಹಿನ್ನೆಲೆಯಲ್ಲಿ, ಆ ರೆಸಾರ್ಟ್‌ಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುವುದಿಲ್ಲ. ಉಳಿದ 28 ರೆಸಾರ್ಟ್‌ಗಳ ಪೈಕಿ 7 ರೆಸಾರ್ಟ್‌ಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸುತ್ತಿದ್ದು, ಉಳಿದ 21 ರೆಸಾರ್ಟ್‌ಗಳನ್ನು ತಾಲೂಕು ಆಡಳಿತ ಸೀಜ್ ಮಾಡಿ, ನಿಯಮಾನುಸಾರ ತೆರವುಗೊಳಿಸುವ ಕ್ರಮ ಕೈಗೊಳ್ಳಲಿದೆ ಎಂದು ತಹಶೀಲ್ದಾರ್ ಶ್ರೀಕೃಷ್ಣ ತಿಳಿಸಿದ್ದಾರೆ.
ರೆಸಾರ್ಟ್ ತೆರವು ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ BNS 163ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದುಬ್ಬನಸಶಿ, ಗಂಗೆಕೊಳ್ಳ ಮತ್ತು ಭಾವಿಕೊಡ್ಲ ಗ್ರಾಮಗಳಲ್ಲಿ ಮಾರ್ಚ್ 9ರ ಬೆಳಗ್ಗೆ 10 ಗಂಟೆಯಿಂದ ಮಾರ್ಚ್ 10ರ ಬೆಳಗ್ಗೆ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಆದೇಶವನ್ನು ಕುಮಟಾ ಸಹಾಯಕ ಆಯುಕ್ತ ಶ್ರವಣಕುಮಾರ ಹೊರಡಿಸಿದ್ದಾರೆ.
ಇದರ ನಡುವೆ ರೆಸಾರ್ಟ್ ತೆರವು ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ದುಬ್ಬನಸಶಿಯಲ್ಲಿ ರೆಸಾರ್ಟ್ ಮಾಲೀಕರು ಹಾಗೂ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ರೆಸಾರ್ಟ್ ಮಾಲೀಕರಿಗೆ ಬೆಂಬಲ ವ್ಯಕ್ತಪಡಿಸಿದರು.
“ರೆಸಾರ್ಟ್ ತೆರವು ಮಾಡಲು ಬಿಡುವುದಿಲ್ಲ, ನಿಮ್ಮ ಜೊತೆ ನಾನು ಇದ್ದೇನೆ. ನ್ಯಾಯ ಸಿಗಬೇಕು” ಎಂದು ಘೋಷಣೆ ಕೂಗಿ ಅವರು ಪ್ರತಿಭಟನಾಕಾರರಿಗೆ ಧೈರ್ಯ ತುಂಬಿದರು. ಈ ಬೆಳವಣಿಗೆಯಿಂದಾಗಿ ಗೋಕರ್ಣ ಸಮೀಪದ ಕರಾವಳಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ತಾಲೂಕು ಆಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ಬಾಶೆಟ್ಟಹಳ್ಳಿ ಕೇಬಲ್ ಫ್ಯಾಕ್ಟರಿ ಸುಟ್ಟು ಕರಕಲು ಕೋಟ್ಯಂತರ ರೂ. ನಷ್ಟ
ದೇವನಹಳ್ಳಿ: ಸಣ್ಣ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ದೊಡ್ಡಬಳ್ಳಾಪುರ... ಓದನ್ನು ಮುಂದುವರಿಸಿ
ಬೀದಿ ನಾಯಿಗಳ ಹೊರೆ ಶಿಕ್ಷಕರಿಗೆ? ಬಸವರಾಜ ಹೊರಟ್ಟಿ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಶಾಲಾ ಶಿ... ಓದನ್ನು ಮುಂದುವರಿಸಿ
ರಸ್ತೆ ಕಾಮಗಾರಿಯಲ್ಲಿ ಕಡಿಯುವ ಪ್ರತಿ ಮರಕ್ಕೆ 10 ಸಸಿ ಕಡ್ಡಾಯ - ಈಶ್ವರ ಖಂಡ್ರೆ
ಬೆಂಗಳೂರು: ಮರ ಕಟಿಂಗ್ ಸಂಬಂಧಿತ ರಸ್ತೆ ಯೋಜನೆಗಳಲ್ಲಿ, ಕಡಿಯುವ ಪ... ಓದನ್ನು ಮುಂದುವರಿಸಿ
ನಿರ್ಮಲಾ ಸೀತಾರಾಮನ್ ಬಜೆಟ್ ಖಾಲಿ ಡ್ರಮ್ಮು- ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ
ಬೆಂಗಳೂರು : ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸಭೆಯ ಚರ್... ಓದನ್ನು ಮುಂದುವರಿಸಿ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪಾವತಿ ಜಾರಿ ಮೆನು ಪ್ರಕಾರ ಆಹಾರ ನೀಡಲಾಗುತ್ತಿದೆಯೇ? – ಕಾಂಗ್ರೆಸ್ ಆರೋಪ
ಬೆಂಗಳೂರು: ರಾಜ್ಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪಾವತಿ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಬೆಲೆ ಏರಿಕೆ ಸ್ಮೃತಿ ಇರಾನಿ ಕಾಣೆಯಾಗಿದ್ದಾರೆ? – ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
ಬೆಂಗಳೂರು: ಕೇಂದ್ರ ಸರ್ಕಾರದ ಅಡುಗೆ ಅನಿಲ ಬೆಲೆ ಏರಿಕೆ ಹಿನ್ನೆಲೆ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 17 ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಾದ ಅಬುಧಾಬಿ, ರಿಯಾದ್, ಜೆದ್ದಾ,... ಓದನ್ನು ಮುಂದುವರಿಸಿ
ಕಾಂಗ್ರೆಸ್ ಕಚೇರಿ ಭೂ ಮಂಜೂರು ಕುರಿತು ವಿಧಾನ ಪರಿಷತ್‌ನಲ್ಲಿ ತೀವ್ರ ವಾಗ್ವಾದ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ... ಓದನ್ನು ಮುಂದುವರಿಸಿ
ವಾಣಿಜ್ಯ ಎಲ್‌ಪಿಜಿ ಕೊರತೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ತೀವ್ರ ಸಂಕಷ್ಟ- ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ
ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ನಗರದ... ಓದನ್ನು ಮುಂದುವರಿಸಿ
ಡ್ರೋನ್ ಸರ್ವೇ ಮೂಲಕ 46,000 ಮನೆಗಳಿಗೆ ಹೆಚ್ಚುವರಿ ಆಸ್ತಿ ತೆರಿಗೆ ನೋಟಿಸ್
ಬೆಂಗಳೂರು: ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು... ಓದನ್ನು ಮುಂದುವರಿಸಿ