ಮೋದಿ–ಟ್ರಂಪ್ ಸ್ನೇಹದಿಂದ ಭಾರತ ಸ್ವಾಭಿಮಾನ ಹಾಳು: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವಿನ ಸಂಬಂಧವನ್ನು ಗಂಭೀರವಾಗಿ ಟೀಕಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಮೋದಿ ಟ್ರಂಪ್ ಹೇಳಿಕೆಯನ್ನು ಮಾತ್ರ ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಅವರು ಅಮೆರಿಕದ ತೈಲ ಖರೀದಿ ನಿಯಮಗಳು, ಉದ್ದಿಮೆ ತೆರಿಗೆಗಳು ಹಾಗೂ ಇಸ್ರೇಲ್ ಭೇಟಿಯ ನಂತರ ಇರಾನ್ ಮೇಲೆ ನಡೆದ ಘಟನೆಗಳನ್ನು ಉದಾಹರಿಸಿ, “ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರಿವಿಗೆ ಹಾಕುತ್ತಿದ್ದೀರಿ. ಖಮೇನಿ ಹತ್ಯೆ ಮಾಡಿದರೆ ವಿಶ್ವದಲ್ಲಿ ಶಾಂತಿ ಹೇಗಿರುತ್ತದೆ? ಇಂತಹ ಕ್ರಮಗಳು ಭಾರತ ಮತ್ತು ವಿಶ್ವ ಶಾಂತಿಗೆ ಧಕ್ಕೆ ಕೊಡುತ್ತವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಖರ್ಗೆ ರೈತರಿಗೆ ಸಂಬಂಧಿಸಿದಂತೆ, “ಭಾರತದಲ್ಲಿ ರೈತರು 65% ಕೃಷಿ ಅವಲಂಬಿತರಾಗಿದ್ದಾರೆ, ಆದರೆ ಅಮೆರಿಕದಲ್ಲಿ 3% ಕೃಷಿಕರಿಗಿಂತ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಭಾರತದ ಉತ್ಪನ್ನಗಳಿಗೆ ಸರಿಯಾದ ಸಹಾಯ ದೊರಕುತ್ತಿಲ್ಲ” ಎಂದು ಹೇಳಿದರು. ಇತ್ತೀಚಿನ ಎಫ್‌ಸ್ಟೀನ್ ಫೈಲ್ಸ್ ಪ್ರಕರಣ ಮತ್ತು ಮೋದಿ–ಟ್ರಂಪ್ ಸಂಬಂಧವನ್ನು ಕೂಡ ಅವರು ಗಂಭೀರವಾಗಿ ಟೀಕಿಸಿದರು.
ಅಲ್ಲದೇ, ಖರ್ಗೆ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ಬಂದ ಆರ್ಟಿಕಲ್ 371(J) ಮತ್ತು ಹಿಂದಿನ ಎನ್‌ಡಿಎ ಸರ್ಕಾರದ ನಿರಾಸಕ್ತಿಯನ್ನು ನೆನಪಿಸಿಕೊಂಡು, ಪ್ರಧಾನಮಂತ್ರಿ ಮೋದಿ ದೇಶದ ಸ್ವಾಭಿಮಾನ ಮತ್ತು ಹಿತಾಸಕ್ತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹೈದರಾಬಾದ್ ಉತ್ತಮ, ಬೆಂಗಳೂರು ಟ್ರಾಫಿಕ್ ಜಾಮ್ ಹಾಸ್ಯ – CM ರೇವಂತ್ ರೆಡ್ಡಿ
ಬೆಂಗಳೂರು: ಐಟಿ ಸಿಟಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಈಗ ರಾಜ... ಓದನ್ನು ಮುಂದುವರಿಸಿ
ಕರ್ನಾಟಕ ಪರ್ವತಾರೋಹಣ ತಂಡ ಮುಂಟ್ ಎವೆರೆಸ್ಟ್ ಏರಲು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ
ಬೆಂಗಳೂರು: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ Mount Everest ಏರುವ... ಓದನ್ನು ಮುಂದುವರಿಸಿ
ಮಡಿಕೇರಿ
ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಲಜಾಕ್ಷಿ ಸಾವು
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ವಾಲ್ನೂರಿನಲ್ಲಿ... ಓದನ್ನು ಮುಂದುವರಿಸಿ
ದೇವಾಲಯ ತಲುಪಿದ ಕಾಪು ರಾಜಕೀಯ ಕಿಚ್ಚು: ಸೊರಕೆ ಆರೋಪಗಳ ಹಿಂದೆ ಗುರ್ಮೆ ಸುರೇಶ್ ಶೆಟ್ಟಿ ದೇವರ ಮೊರೆ
ಉಡುಪಿ: ಕಂಬಳ ವಿಚಾರದಿಂದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ... ಓದನ್ನು ಮುಂದುವರಿಸಿ
ಬೀದರ್‌ನಲ್ಲಿ ಟ್ರ್ಯಾಕ್ಟರ್ ಪಲ್ಟಿ: 13 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಕ್ರಾಸ್ ಬಳಿ... ಓದನ್ನು ಮುಂದುವರಿಸಿ
ಕುಮಟಾ
ಗೋಕರ್ಣ ಸಮೀಪ 44 ಅನಧಿಕೃತ ರೆಸಾರ್ಟ್‌ಗಳಿಗೆ ತೆರವು ಆದೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ... ಓದನ್ನು ಮುಂದುವರಿಸಿ
DCM ಪರಾಗಿ ನಾವು ಇದ್ದೇವೆ, ರಾಜ್ಯದ ಕಾರ್ಯ ಮುಂದುವರಿಯಲಿದೆ – ಸತೀಶ್ ಜಾರಕಿಹೊಳಿ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭಾನುವಾರ ಖಾಸಗ... ಓದನ್ನು ಮುಂದುವರಿಸಿ
ಆಂಬುಲೆನ್ಸ್‌ನಲ್ಲಿ ಸಾರ್ವಜನಿಕರ ಸಾಗಾಟ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ
ಗದಗ: ರೋಗಿಗಳ ತುರ್ತು ಚಿಕಿತ್ಸೆಗೆ ಬಳಸಬೇಕಾದ ಆಂಬುಲೆನ್ಸ್ ವಾಹನವ... ಓದನ್ನು ಮುಂದುವರಿಸಿ
ರಥೋತ್ಸವದಲ್ಲಿ ಭೀಕರ ದುರ್ಘಟನೆ: ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಎರಡು ಕಾಲುಗಳು ಕಟ್
ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾ... ಓದನ್ನು ಮುಂದುವರಿಸಿ
ಭಕ್ತರ ಭವ್ಯ ಸಮ್ಮೇಳನ: ಕಲಬುರಗಿಯಲ್ಲಿ 204ನೇ ರಥೋತ್ಸವ ಸಂಭ್ರಮ
ಕಲಬುರಗಿ: ಕಲಬುರಗಿಯಲ್ಲಿ ಇಂದು ಶರಣಬಸವೇಶ್ವರರ 204ನೇ ರಥೋತ್ಸವ ಭ... ಓದನ್ನು ಮುಂದುವರಿಸಿ