ಭಾನುವಾರದ ರಾಶಿ ಭವಿಷ್ಯ – 29 ಮಾರ್ಚ್ 2026
ಮೇಷ ರಾಶಿ
ಮೇಷ ರಾಶಿಯವರೇ, ಇಂದಿನ ದಿನ ಮಿಶ್ರ ಫಲ ನೀಡುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ಪರರ ಸಂಪರ್ಕದಿಂದ ಕುಟುಂಬದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇರುವುದರಿಂದ ಮಾತುಗಳಲ್ಲಿ ಎಚ್ಚರಿಕೆ ವಹಿಸುವುದು ಒಳಿತು. ಜೂಜಾಟ ಅಥವಾ ಅಪಾಯಕಾರಿ ಹೂಡಿಕೆಗಳಿಂದ ದೂರವಿರುವುದು ಉತ್ತಮ. ಪ್ರೇಮಿಗಳ ನಡುವೆ ಅನಾವಶ್ಯಕ ಮಾತುಕತೆಯಿಂದ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ರಾಜಕಾರಣಿಗಳಿಗೆ ಸ್ವಲ್ಪ ಅವಮಾನ ಎದುರಾಗುವ ಸೂಚನೆಗಳಿದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಿಹಿ ಸುದ್ದಿಗಳು ದೊರೆಯುವ ಸಾಧ್ಯತೆ ಇದೆ. ಶಿಕ್ಷಕರ ಮಕ್ಕಳಿಗೆ ಮದುವೆ ಯೋಗ ಕೂಡಿ ಬರಬಹುದು. ವಿಚ್ಛೇದನ ಪಡೆದವರಿಗೆ ಮರು ಮದುವೆ ಚರ್ಚೆಗಳು ಮುಂದುವರಿಯುವ ಸೂಚನೆಗಳಿವೆ. ಮಕ್ಕಳ ಮದುವೆ ಕುರಿತಾಗಿ ಹೊಸ ಮಾತುಕತೆಗಳು ಕೂಡ ನಡೆಯಬಹುದು. ವಿದೇಶ ಪ್ರವಾಸದ ಕನಸು ನನಸಾಗುವ ಸಾಧ್ಯತೆ ಇದೆ. ಸ್ನೇಹಿತರ ಸಹಕಾರದಿಂದ ಉದ್ಯೋಗಾವಕಾಶಗಳು ಲಭ್ಯವಾಗಬಹುದು. ಕಠಿಣ ಪರಿಶ್ರಮದಿಂದ ಸರಕಾರಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಭೂಮಿ ಸಂಬಂಧಿತ ವಿಚಾರಗಳಲ್ಲಿ ವಾಗ್ವಾದ ಉಂಟಾಗಬಹುದು. ಆದ್ದರಿಂದ ರಾಜೀ ಮಾರ್ಗವೇ ಉತ್ತಮ. ಸಂಗಾತಿಯಿಂದ ಒಲವಿನ ಉಡುಗೊರೆ ಸಿಗುವ ಸಾಧ್ಯತೆ ಇದೆ. ಕೃಷಿಕರಿಗೆ ಸರ್ಕಾರದ ಸಹಾಯ ದೊರೆಯುವ ಸಾಧ್ಯತೆ ಇದೆ. ಕಳೆದುಹೋದ ವಸ್ತುಗಳು ಮರಳಿ ಸಿಗುವ ಸಾಧ್ಯತೆ ಇದೆ. ಹೊಸ ಉದ್ಯಮ ಪ್ರಾರಂಭಿಸುವ ಯೋಚನೆಗಳು ಮೂಡಬಹುದು. ಹೊಸ ಮನೆ ನಿರ್ಮಾಣದ ಬಗ್ಗೆ ಚರ್ಚೆಗಳು ಕೂಡ ನಡೆಯುವ ಸಾಧ್ಯತೆ ಇದೆ.
ವೃಷಭ ರಾಶಿ
ವೃಷಭ ರಾಶಿಯವರೇ, ಇಂದಿನ ದಿನ ಲಾಭ ಮತ್ತು ಸವಾಲುಗಳ ಮಿಶ್ರ ಫಲ ನೀಡುವ ಸಾಧ್ಯತೆ ಇದೆ. ಲಾಟರಿ ಅಥವಾ ಅನಿರೀಕ್ಷಿತ ಮೂಲಗಳಿಂದ ಧನ ಲಾಭದ ಯೋಗ ಕಂಡುಬರುತ್ತಿದೆ. ಜೂಜಾಟದಲ್ಲಿಯೂ ಲಾಭದ ಸೂಚನೆಗಳಿದ್ದರೂ, ಎಚ್ಚರಿಕೆ ಅಗತ್ಯ. ಆಸ್ತಿ ಖರೀದಿಯಲ್ಲಿ ಮೋಸ ಸಂಭವಿಸುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸಬೇಕು. ಸಹೋದರ-ಸಹೋದರಿಯರೊಂದಿಗೆ ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಪ್ರೇಮಿಗಳ ನಡುವೆ ಪ್ರೇಮಾಭಿವೃದ್ಧಿ ಕಾಣಿಸಿಕೊಳ್ಳಲಿದೆ. ಆದರೆ ಮಕ್ಕಳಲ್ಲಿ ಪ್ರೇಮ ಸಂಬಂಧಿತ ವಿಚಾರಗಳು ಗಮನ ಸೆಳೆಯುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ವಾರದೊಳಗೆ ಸಿಹಿ ಸುದ್ದಿ ದೊರೆಯುವ ಸೂಚನೆಗಳಿವೆ. ಅಧಿಕಾರಿಗಳ ಮೇಲೆ ಪ್ರಭಾವಿ ವ್ಯಕ್ತಿಗಳ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಯುವ ರಾಜಕಾರಣಿಗಳು ಸಾಮಾಜಿಕ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರಿಗೆ ಧನಲಾಭ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರು ಹೊಸ ಅವಕಾಶಗಳ ಬಗ್ಗೆ ಚಿಂತನೆ ಮಾಡಬಹುದು. ಮನೆ ನಿರ್ಮಾಣದ ಕಾರ್ಯಗಳು ಹಣಕಾಸಿನ ಸಮಸ್ಯೆಯಿಂದ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ. ಪತಿ-ಪತ್ನಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆಸ್ತಿ ಪಾಲುದಾರಿಕೆಯಲ್ಲಿ ಹಿರಿಯರ ವಿರೋಧ ಎದುರಾಗಬಹುದು. ಮಾತಾ-ಪಿತೃ ಮತ್ತು ಮಕ್ಕಳ ಆರೋಗ್ಯದ ಕಡೆ ವಿಶೇಷ ಗಮನ ನೀಡಬೇಕು. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕೆಲವು ಸಮಸ್ಯೆಗಳು ಎದುರಾಗಬಹುದು. ಆಧ್ಯಾತ್ಮಿಕ ಚಿಂತನೆ ಮತ್ತು ದೇವದರ್ಶನದಿಂದ ಮನಶಾಂತಿ ದೊರೆಯುತ್ತದೆ. ಅನಾಥ ಮಕ್ಕಳಿಗೆ ಅನ್ನದಾನ ಮಾಡುವ ಅವಕಾಶವೂ ಸಿಗಬಹುದು.
ಮಿಥುನ ರಾಶಿ
ಮಿಥುನ ರಾಶಿಯವರೇ, ಇಂದಿನ ದಿನ ನಿಮಗೆ ಪ್ರಗತಿ ಮತ್ತು ಕೆಲವು ಸಣ್ಣ ಸವಾಲುಗಳ ಮಿಶ್ರ ಫಲ ನೀಡಲಿದೆ. ವಾಹನ ಸಂಬಂಧಿತ ತೊಂದರೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ವಹಿಸುವುದು ಉತ್ತಮ. ಇದುವರೆಗೆ ನಿಂತಿದ್ದ ಕೆಲಸಗಳು ಪುನರಾರಂಭವಾಗುವ ಸೂಚನೆಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಕೆಲವರಿಗೆ ಬಡ್ತಿ ಯೋಗ ಕಂಡುಬರುತ್ತದೆ. ವ್ಯಾಪಾರಿಗಳಾದ ಕಿರಾಣಿ, ಸ್ಟೇಷನರಿ, ಖಾನಾವಳಿ ಹಾಗೂ ಹೋಟೆಲ್ ಉದ್ಯಮಿಗಳಿಗೆ ಆರ್ಥಿಕ ಪ್ರಗತಿ ಸಾಧ್ಯತೆ ಇದೆ. ಪತ್ನಿಯೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ಪ್ರೇಮಿಗಳಿಗೆ ಕಿರು ಪ್ರವಾಸದ ಅವಕಾಶ ದೊರೆಯಬಹುದು. ವಿದೇಶ ಪ್ರವಾಸದ ಯೋಗವೂ ಶೀಘ್ರದಲ್ಲೇ ಸಾಕಾರವಾಗುವ ಸಾಧ್ಯತೆ ಇದೆ. ಉದ್ಯೋಗಿಗಳು ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ನಿಮ್ಮ ಸ್ವಂತ ಶ್ರಮ ಮತ್ತು ಪ್ರಯತ್ನಗಳು ಯಶಸ್ಸು ತರುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸಂಗಾತಿಯೊಂದಿಗೆ ಸಂತೋಷಕರ ಕ್ಷಣಗಳನ್ನು ಕಳೆಯುವಿರಿ. ಆಕಸ್ಮಿಕ ಧನಲಾಭವೂ ಸಂಭವಿಸಬಹುದು. ಸ್ನೇಹಿತರ ಮಾರ್ಗದರ್ಶನದಿಂದ ದೊಡ್ಡ ಯೋಜನೆಗಳಿಗೆ ಬೆಂಬಲ ದೊರೆಯಲಿದೆ. ಹೈನುಗಾರಿಕೆ ಪ್ರಾರಂಭಿಸುವ ಬಗ್ಗೆ ಚಿಂತನೆ ಮೂಡಬಹುದು. ಆದರೆ ಪತಿ-ಪತ್ನಿಯ ನಡುವೆ ಸಣ್ಣ ಮುನಿಸು ಮನಸ್ಸಿಗೆ ಬೇಸರ ತರಬಹುದು. ಮನೆ ವಾಸ್ತು ಪ್ರಕಾರ ಬದಲಾವಣೆ ಮಾಡುವ ಯೋಚನೆ ಕೂಡ ಇರಬಹುದು. ಪ್ರೇಮಿಗಳ ಮದುವೆ ವಿಚಾರದಲ್ಲಿ ಸ್ವಲ್ಪ ಅನಿಶ್ಚಿತತೆ ಮುಂದುವರಿಯುವ ಸಾಧ್ಯತೆ ಇದೆ.
ಕಟಕ ರಾಶಿ
ಕಟಕ ರಾಶಿಯವರೇ, ಇಂದಿನ ದಿನ ನಿಮಗೆ ಮಿಶ್ರ ಫಲ ನೀಡುವ ಸಾಧ್ಯತೆ ಇದೆ. ಸೋದರ ಮಾವನಿಂದ ಧನ ಸಹಾಯ ದೊರೆಯಬಹುದು. ಹಳೆಯ ಸಾಲಗಳನ್ನು ಮರುಪಾವತಿ ಮಾಡುವ ಅವಕಾಶ ಸಿಗಲಿದೆ. ಪತ್ನಿಯೊಂದಿಗೆ ಸಾಮರಸ್ಯ ಉತ್ತಮವಾಗಿರಲಿದೆ. ಸ್ಟೇಷನರಿ, ಪುಸ್ತಕ ಹಾಗೂ ಕಂಪ್ಯೂಟರ್ ವ್ಯಾಪಾರಿಗಳಿಗೆ ಅನುಕೂಲಕರ ಸಮಯ. ಪ್ರೇಮಿಗಳಿಗೆ ಅದೃಷ್ಟದ ದಿನಗಳು ಪ್ರಾರಂಭವಾಗುವ ಸೂಚನೆಗಳಿವೆ. ಜನಪ್ರತಿನಿಧಿಗಳಿಗೆ ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಗಂಡ-ಹೆಂಡತಿಯ ಜೀವನದಲ್ಲೂ ಶುಭ ಸಮಯ ಆರಂಭವಾಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಶೀಘ್ರದಲ್ಲೇ ಸಂದರ್ಶನದ ಅವಕಾಶ ಸಿಗಬಹುದು. ವಜಾ ಅಥವಾ ಅಮಾನತುಗೊಂಡಿರುವ ಉದ್ಯೋಗಿಗಳಿಗೆ ಮರು ಸೇರ್ಪಡೆಯ ಯೋಗ ಇದೆ. ಆದರೆ ಸಾಲಗಾರರಿಂದ ಕಿರಿಕಿರಿ ಎದುರಾಗಬಹುದು. ದೂರ ಪ್ರಯಾಣವನ್ನು ತಪ್ಪಿಸುವುದು ಒಳಿತು. ಅನಾವಶ್ಯಕ ಸಂಬಂಧಗಳಿಂದ ದೂರವಿರುವುದು ಉತ್ತಮ. ಬೆಂಕಿ ಮತ್ತು ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗ್ರತೆ ಅಗತ್ಯ. ಆರೋಗ್ಯದ ದೃಷ್ಟಿಯಿಂದ ಎದೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಬೇಕು. ಆಧ್ಯಾತ್ಮಿಕ ಚಿಂತನೆಯಿಂದ ಮನಶಾಂತಿ ದೊರೆಯುತ್ತದೆ. ಬಂಧು-ಬಳಗದೊಂದಿಗೆ ಸಂಬಂಧಗಳು ಗಟ್ಟಿಯಾಗುತ್ತವೆ. ಹೊಸ ನಿವೇಶನ ಖರೀದಿ ಮಾಡುವ ಯೋಚನೆ ಸಾಧ್ಯ. ವಿದೇಶ ಪ್ರಯಾಣದ ಯೋಗವೂ ಕಾಣಿಸಿಕೊಳ್ಳುತ್ತಿದೆ. ಪುಣ್ಯಕ್ಷೇತ್ರ ದರ್ಶನ ಭಾಗ್ಯ ಲಭಿಸಬಹುದು. ಮಕ್ಕಳ ಭವಿಷ್ಯಕ್ಕಾಗಿ ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮೂಡಬಹುದು. ಕೃಷಿಕರಿಗೆ ಸರ್ಕಾರದಿಂದ ಧನ ಸಹಾಯ ದೊರೆಯುವ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯವರೇ, ಇಂದಿನ ದಿನ ನಿಮಗೆ ಲಾಭದಾಯಕವಾಗಿದ್ದರೂ ಖರ್ಚಿನ ಮೇಲೆ ನಿಯಂತ್ರಣ ಅಗತ್ಯ. ಲಾಟರಿ ಅಥವಾ ಅನಿರೀಕ್ಷಿತ ಮೂಲಗಳಿಂದ ಧನಲಾಭದ ಯೋಗ ಇದೆ. ಜೂಜಾಟದಲ್ಲಿಯೂ ಲಾಭದ ಸೂಚನೆಗಳಿದ್ದರೂ, ಎಚ್ಚರಿಕೆ ಅವಶ್ಯಕ. ದಂಪತಿಗಳಿಗೆ ಅದೃಷ್ಟದ ದಿನಗಳು ಪ್ರಾರಂಭವಾಗಲಿವೆ. ಹಳೆಯ ಸಂಗಾತಿಯೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ನಂಬಿದ ವ್ಯಕ್ತಿಯಿಂದ ಪ್ರಗತಿ ಸಾಧಿಸುವ ಅವಕಾಶ ದೊರೆಯಬಹುದು. ಎಣ್ಣೆ ಪದಾರ್ಥ ಸಂಬಂಧಿತ ವ್ಯಾಪಾರಿಗಳಿಗೆ ನಿರಂತರ ಆದಾಯ ಲಭಿಸುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಕಂಡುಬರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸರಕಾರಿ ನೌಕರರಿಗೆ ಬಡ್ತಿ ಹಾಗೂ ಬಯಸಿದ ಸ್ಥಳಕ್ಕೆ ವರ್ಗಾವಣೆಯ ಯೋಗ ಇದೆ. ಮಹಿಳೆಯರು ಕುಟುಂಬದಲ್ಲಿ ಗೌರವಕ್ಕೆ ಪಾತ್ರರಾಗುವಿರಿ. ವೃತ್ತಿ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಬಂಧು-ಬಳಗದೊಂದಿಗೆ ಆತ್ಮೀಯ ಸಂಬಂಧಗಳು ವೃದ್ಧಿಯಾಗಲಿವೆ. ಶೀಘ್ರದಲ್ಲೇ ಮನೆ ನಿರ್ಮಾಣ ಪ್ರಾರಂಭಿಸುವ ಯೋಚನೆ ಸಾಧ್ಯ. ಮನಸ್ಸಿನಿಂದ ಮಾಡಿದ ಕೆಲಸಗಳು ಯಶಸ್ಸು ತಂದು ಸಂತೋಷ ನೀಡಲಿವೆ. ಆದರೆ ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರ್ಥಿಕ ನಿಯಂತ್ರಣ ಮುಖ್ಯ. ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಣ್ಣ ಕಲಹಗಳು ಉಂಟಾಗಬಹುದು. ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ಸೌಲಭ್ಯಗಳು ದೊರೆಯುವ ಸೂಚನೆಗಳಿವೆ.ಮನೆ ಕಟ್ಟುವ ಕಾರ್ಯಕ್ಕೆ ಅಡಿಪಾಯ ಹಾಕುವ ಸಂದರ್ಭ ಬರಬಹುದು. ಆದರೆ ಮಗಳ ಕುಟುಂಬದಲ್ಲಿ ಸಣ್ಣ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರೇ, ಇಂದಿನ ದಿನ ಉದ್ಯೋಗ, ಹಣಕಾಸು ಮತ್ತು ಕುಟುಂಬ ವಿಚಾರಗಳಲ್ಲಿ ಮಿಶ್ರ ಫಲ ನೀಡಲಿದೆ. ಉದ್ಯೋಗ ಹುಡುಕಾಟದವರಿಗೆ ಉತ್ತಮ ಅವಕಾಶ ಸಿಗಬಹುದು. ಉದ್ಯೋಗದಲ್ಲಿರುವ ಕೆಲವರಿಗೆ ಬಡ್ತಿ ಲಭ್ಯವಾಗುವ ಸಾಧ್ಯತೆ ಇದೆ. ಕೆಲವರು ಹೊಸ ಕೆಲಸ ಅಥವಾ ವರ್ಗಾವಣೆಯ ಕುರಿತು ಯೋಚನೆ ಮಾಡಬಹುದು; ಇದು ಶುಭದಾಯಕ ಯೋಗ. ಆದರೆ ಶತ್ರುಗಳಿಂದ ಕಿರಿಕಿರಿ ಮುಂದುವರಿಯುವ ಸಾಧ್ಯತೆ ಇದೆ. ಇದಕ್ಕೆ ನಿಮ್ಮ ಕಡಿವಾಣ ಮುಖ್ಯ. ಪ್ರೇಮಿಗಳಲ್ಲಿ ಸ್ವಲ್ಪ ವಿರಸ ಉಂಟಾಗಬಹುದು. ಬ್ಯಾಂಕ್ ಉದ್ಯೋಗಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಸಿಹಿ ಸುದ್ದಿ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಗಳಿಂದ ಮುಕ್ತಿ ದೊರೆತು ಉತ್ತಮ ಪ್ರಗತಿ ಸಾಧಿಸಲು ಅವಕಾಶ ಸಿಗುತ್ತದೆ. ಕುಟುಂಬದಲ್ಲಿ ಶುಭ ಸಮಾರಂಭಗಳು ನಡೆಯುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಿಂದ ಲಾಭ ದೊರೆಯಲಿದೆ. ಆದರೆ ಮನೆಯಲ್ಲಿನ ಹೊಂದಾಣಿಕೆ ಕಡಿಮೆ, ಮನಸ್ಸಿಗೆ ನೆಮ್ಮದಿ ಕಡಿಮೆ. ಬಂಧು-ಮಿತ್ರರಿಂದ ಸಂಪೂರ್ಣ ಸಂತೋಷ ಸಿಗದು. ಕೈಗೊಂಡ ಕೆಲವು ಕೆಲಸಗಳು ವಿಫಲವಾಗಬಹುದು. ಭೂಸಂಪತ್ತು ಖರೀದಿಯ ಬಗ್ಗೆ ಆಸಕ್ತಿ ಹೆಚ್ಚಾಗಬಹುದು. ಧನಲಾಭ ದೊರೆಯುವ ಸೂಚನೆ ಇದೆ. ಸ್ತ್ರೀಯರಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿಸುವ ಆಸೆ ಹೆಚ್ಚಾಗಬಹುದು. ದಿನದ ಮೊದಲ ಭಾಗದಲ್ಲಿ ಕಠಿಣ ಪರಿಶ್ರಮ ಅಗತ್ಯ. ಸಂಜೆ ವೇಳೆಗೆ ಲಾಭಕ್ಕಾಗಿ ಹಲವು ಅವಕಾಶಗಳು ಸಿಗಬಹುದು.
ತುಲಾ ರಾಶಿ
ತುಲಾ ರಾಶಿಯವರೇ, ಇಂದಿನ ದಿನ ಲಾಭ, ಸಂಬಂಧ ಮತ್ತು ಉದ್ಯೋಗದಲ್ಲಿ ಮಿಶ್ರ ಫಲ ನೀಡುತ್ತದೆ. ಲಾಟರಿ ಅಥವಾ ಅನಿರೀಕ್ಷಿತ ಮೂಲಗಳಿಂದ ಧನ ಲಾಭದ ಯೋಗ ಇದೆ. ಜೂಜಾಟದಲ್ಲಿಯೂ ಲಾಭದ ಸಾಧ್ಯತೆ ಇದೆ. ವಿವಾಹ ಯೋಗವೂ ಕಂಡುಬರುತ್ತಿದೆ. ಉದ್ಯೋಗಸ್ಥ ಅವಿವಾಹಿತರಿಗೆ ಮದುವೆ ಸಾಧ್ಯತೆ ಇದೆ. ಕೆಲವರಿಗೆ ವರೋಪಚಾರದಿಂದ ಅತಂತ್ರ ಸಂದರ್ಭಗಳು ಉಂಟಾಗಬಹುದು. ಕೆಲವರಿಗೆ ಉದ್ಯೋಗದಲ್ಲಿ ಶತ್ರುಗಳಿಂದ ತೊಂದರೆ ಎದುರಾಗಬಹುದು. ಆಸ್ತಿ ಕಲಹಗಳಲ್ಲಿ ಸೋಲು ಸಂಭವಿಸಬಹುದು. ಆದರೆ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಮತ್ತು ಪ್ರಗತಿ ಕಾಣುವ ಸೂಚನೆಗಳಿವೆ. ಕೆಟ್ಟ ಜನದೃಷ್ಟಿಯಿಂದ ಪತಿ-ಪತ್ನಿ ನಡುವೆ ಸ್ವಲ್ಪ ವಿರಸ ಕಾಣಿಸಬಹುದು. ವಕೀಲ ವೃತ್ತಿಗಾರರಿಗೆ ಪ್ರತಿಷ್ಠೆ ಮತ್ತು ಕೀರ್ತಿ ಸಿಗಲಿದೆ. ಹೊಸ ವ್ಯಕ್ತಿಗಳಿಂದ ಸಹಕಾರ ದೊರೆಯುತ್ತದೆ. ಕಲಾವಿದರಿಗೆ ಗೌರವ ದೊರೆಯುವ ಸಾಧ್ಯತೆ ಇದೆ. ಅನಿರೀಕ್ಷಿತ ಮೂಲಗಳಿಂದ ಧನಾಗಮನ ಕಾಣಿಸಬಹುದು. ಸ್ಥಳ ಬದಲಾವಣೆ ಸಾಧ್ಯ. ಕೂಲಿಕಾರ್ಮಿಕರಿಗೆ ವಲಸೆ ಹೋಗುವ ಅವಕಾಶವೂ ಇದೆ. ದೇವತಾ ಕಾರ್ಯಗಳಿಗೆ ಖರ್ಚು ಸಂಭವಿಸಬಹುದು. ವೃತ್ತಿ ಜೀವನದಲ್ಲಿ ತಾಳ್ಮೆ, ಸಮಾಧಾನ ಮತ್ತು ಶಾಂತ ಮನೋಭಾವದಿಂದ ಮುನ್ನಡೆಯಿರಿ. ಇಲ್ಲದಿದ್ದರೆ ಸಹೋದ್ಯೋಗಿಗಳಿಂದ ಅಸಹಜ ಅಸಮಾಧಾನ ಉಂಟಾಗಬಹುದು. ನಿಮ್ಮ ಕೆಲಸದ ಪರಿಸ್ಥಿತಿಗಳು ಸುಧಾರಿಸುತ್ತವೆ. ವ್ಯವಹಾರಗಳಲ್ಲಿ ಲಾಭದ ಭರವಸೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರೇ, ಇಂದಿನ ದಿನ ಮಕ್ಕಳಿಂದ ಸ್ವಲ್ಪ ತೊಂದರೆ, ಉದ್ಯೋಗ ಮತ್ತು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ಅಗತ್ಯವಿದೆ. ಮಕ್ಕಳಿಂದ ನೀಚ ಕಾರ್ಯಗಳಲ್ಲಿ ಆಸಕ್ತಿ ಕಾಣಬಹುದು. ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳಿಂದ ತೊಂದರೆ ಎದುರಾಗಬಹುದು. ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಮತ್ತು ಧನವ್ಯಯ ಸಂಭವಿಸುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಸಾಧ್ಯತೆ ಇದೆ. ಮನೋಕಾಮನೆಗಳು ಈಡೇರಲು ಯೋಗ ಸೃಷ್ಟವಾಗಿದೆ. ಶಿಕ್ಷಕ ವೃಂದದವರಿಗೆ ಆಕಸ್ಮಿಕ ಲಾಭ ಸಿಗಬಹುದು. ಮದ್ಯಪಾನ ಉದ್ಯಮದಾರರಿಗೆ ಕಾನೂನು ಸಂಬಂಧಿತ ದಿನ ಎದುರಾಗಬಹುದು. ಆದರೆ ಮಿತ್ರರಿಂದ ಧನಲಾಭದ ಅವಕಾಶ ಲಭ್ಯ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು ಸಾಧಿಸಬಹುದು. ಮಹಿಳೆಯರ ಅಪೇಕ್ಷೆಗಳು ಈಡೇರಬಹುದು. ಶುಭಕಾರ್ಯಗಳು ನಿಶ್ಚಿತವಾಗಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಅಲ್ಪ ಲಾಭ ಸಾಧ್ಯತೆ. ದೇಹದ ಆರೋಗ್ಯ ಹಂತ ಹಂತವಾಗಿ ಸುಧಾರಿಸುತ್ತವೆ. ಮಕ್ಕಳಲ್ಲಿ ಸ್ವಲ್ಪ ಅನಾರೋಗ್ಯ ಕಾಣಿಸಬಹುದು. ಬಂಧು-ಮಿತ್ರರಿಂದ ಹಣಕಾಸಿನ ಸಹಾಯ ಸಿಗಲಿದೆ. ದೂರದ ಸಂಬಂಧಿಗಳ ಆಗಮನ ಸಂಭವಿಸಬಹುದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಮನ್ವಯವಾಗಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ಲಭ್ಯ. ಸಂವಹನದಿಂದ ಹೊಸ ಪ್ರಯೋಜನಗಳ ಕಲ್ಪನೆ ಮೂಡಬಹುದು. ಆರೋಗ್ಯದಲ್ಲಿ ಕೆಲ ವ್ಯತ್ಯಾಸಗಳಾಗಬಹುದು; ಆದ್ದರಿಂದ ಎಚ್ಚರಿಕೆ ವಹಿಸುವುದು ಮುಖ್ಯ.
ಧನು ರಾಶಿ
ಧನು ರಾಶಿಯವರೇ, ಇಂದಿನ ದಿನವು ಉದ್ಯೋಗ, ಹಣಕಾಸು ಮತ್ತು ಸಂಬಂಧಗಳಲ್ಲಿ ಮಿಶ್ರ ಫಲ ನೀಡುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬಡ್ತಿ ಸಂಭವಿಸುವ ಸಾಧ್ಯತೆ ಇದೆ. ಭೂಮಿ ವ್ಯಾಜ್ಯದ ವಿಚಾರದಲ್ಲಿ ಜಯ ಪಡೆಯಬಹುದು. ಬಾಕಿ ಹಣ ವಸೂಲಾತಿಗೆ ಸೂಕ್ತ ಸಮಯವಾಗಿದೆ. ಕೆಲವರಿಗೆ ವಾಹನ ಅಥವಾ ಉಡುಗೊರೆ ಯೋಗವೂ ಇದೆ. ಅವಿವಾಹಿತರಿಗೆ ಮದುವೆ ಯೋಗ ಸೃಷ್ಟವಾಗಿದೆ. ಸರ್ಕಾರಿ ಉದ್ಯೋಗ ಕಾರ್ಯಗಳಲ್ಲಿ ಸಣ್ಣ ವಿಘ್ನಗಳು ಎದುರಾಗಬಹುದು. ಅಧಿಕಾರಿಗಳಿಂದ ಕೆಲವೊಂದು ಕಿರಿಕಿರಿ ಸಂಭವಿಸಬಹುದು. ವಾಣಿಜ್ಯ ಮಳಿಗೆಗಳ ಖರೀದಿ ಹಾಗೂ ಗ್ರಾನೈಟ್ಸ್ ಉದ್ಯಮದಾರರಿಗೆ ಅಧಿಕ ಲಾಭ ಸಾಧ್ಯ. ಬಂಧು-ಮಿತ್ರರೊಂದಿಗೆ ಪ್ರೀತಿ ಮತ್ತು ಆತ್ಮೀಯತೆಯ ಅನುಭವವಾಗುತ್ತದೆ. ವಿಶ್ವಾಸದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ. ಆದರೆ ಅನಿರೀಕ್ಷಿತ ಖರ್ಚು ಹೆಚ್ಚಾಗಬಹುದು. ಭೂಸಂಪತ್ತಿ ಖರೀದಿಗೆ ಬಂಧು-ಮಿತ್ರರಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ವ್ಯಾಪಾರಸ್ಥರಿಗೆ ಅಲ್ಪ ಲಾಭ ಲಭಿಸಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸಬಹುದು. ಇಂದು ಕೆಲವು ಕೆಲಸಗಳು ನಿಧಾನವಾಗಿ ನಡೆಯುವ ಸಾಧ್ಯತೆ ಇದೆ. ಲಾಟರಿ ಯೋಗ ಮತ್ತು ಜೂಜಾಟದ ಮೂಲಕ ಧನ ಲಾಭದ ಸೂಚನೆಗಳಿವೆ. ಹೊರಗೆ ಖರ್ಚು ಮಾಡುವ ಬದಲು, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಉತ್ತಮ. ಬಂಧುಗಳ ಗೌರವಕ್ಕೆ ಪಾತ್ರರಾಗಬಹುದು. ಮನರಂಜನೆಗಾಗಿ ಕೆಲವು ಹಣಕಾಸು ಖರ್ಚು ಮಾಡಬಹುದು. ಸ್ವಂತ ಉದ್ಯೋಗಿಗಳು ಯಶಸ್ಸು ಸಾಧಿಸಲಿದ್ದಾರೆ. ಕೃಷಿ ಉತ್ಪನ್ನಗಳಲ್ಲಿ ತೊಡಗಿಕೊಂಡವರಿಗೆ ಧನಲಾಭ ಸಾಧ್ಯ. ಅಧಿಕಾರಿಗಳಿಂದ ಸಹಕಾರವೂ ಲಭ್ಯ.ಯವರೇ, ಇಂದಿನ ದಿನವು ಉದ್ಯೋಗ, ಹಣಕಾಸು ಮತ್ತು ಸಂಬಂಧಗಳಲ್ಲಿ ಮಿಶ್ರ ಫಲ ನೀಡುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬಡ್ತಿ ಸಂಭವಿಸುವ ಸಾಧ್ಯತೆ ಇದೆ. ಭೂಮಿ ವ್ಯಾಜ್ಯದ ವಿಚಾರದಲ್ಲಿ ಜಯ ಪಡೆಯಬಹುದು. ಬಾಕಿ ಹಣ ವಸೂಲಾತಿಗೆ ಸೂಕ್ತ ಸಮಯವಾಗಿದೆ. ಕೆಲವರಿಗೆ ವಾಹನ ಅಥವಾ ಉಡುಗೊರೆ ಯೋಗವೂ ಇದೆ. ಅವಿವಾಹಿತರಿಗೆ ಮದುವೆ ಯೋಗ ಸೃಷ್ಟವಾಗಿದೆ. ಸರ್ಕಾರಿ ಉದ್ಯೋಗ ಕಾರ್ಯಗಳಲ್ಲಿ ಸಣ್ಣ ವಿಘ್ನಗಳು ಎದುರಾಗಬಹುದು. ಅಧಿಕಾರಿಗಳಿಂದ ಕೆಲವೊಂದು ಕಿರಿಕಿರಿ ಸಂಭವಿಸಬಹುದು. ವಾಣಿಜ್ಯ ಮಳಿಗೆಗಳ ಖರೀದಿ ಹಾಗೂ ಗ್ರಾನೈಟ್ಸ್ ಉದ್ಯಮದಾರರಿಗೆ ಅಧಿಕ ಲಾಭ ಸಾಧ್ಯ. ಬಂಧು-ಮಿತ್ರರೊಂದಿಗೆ ಪ್ರೀತಿ ಮತ್ತು ಆತ್ಮೀಯತೆಯ ಅನುಭವವಾಗುತ್ತದೆ. ವಿಶ್ವಾಸದಿಂದ ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ. ಆದರೆ ಅನಿರೀಕ್ಷಿತ ಖರ್ಚು ಹೆಚ್ಚಾಗಬಹುದು. ಭೂಸಂಪತ್ತಿ ಖರೀದಿಗೆ ಬಂಧು-ಮಿತ್ರರಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ವ್ಯಾಪಾರಸ್ಥರಿಗೆ ಅಲ್ಪ ಲಾಭ ಲಭಿಸಲಿದೆ. ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸಬಹುದು. ಇಂದು ಕೆಲವು ಕೆಲಸಗಳು ನಿಧಾನವಾಗಿ ನಡೆಯುವ ಸಾಧ್ಯತೆ ಇದೆ. ಲಾಟರಿ ಯೋಗ ಮತ್ತು ಜೂಜಾಟದ ಮೂಲಕ ಧನ ಲಾಭದ ಸೂಚನೆಗಳಿವೆ. ಹೊರಗೆ ಖರ್ಚು ಮಾಡುವ ಬದಲು, ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಉತ್ತಮ. ಬಂಧುಗಳ ಗೌರವಕ್ಕೆ ಪಾತ್ರರಾಗಬಹುದು. ಮನರಂಜನೆಗಾಗಿ ಕೆಲವು ಹಣಕಾಸು ಖರ್ಚು ಮಾಡಬಹುದು. ಸ್ವಂತ ಉದ್ಯೋಗಿಗಳು ಯಶಸ್ಸು ಸಾಧಿಸಲಿದ್ದಾರೆ. ಕೃಷಿ ಉತ್ಪನ್ನಗಳಲ್ಲಿ ತೊಡಗಿಕೊಂಡವರಿಗೆ ಧನಲಾಭ ಸಾಧ್ಯ. ಅಧಿಕಾರಿಗಳಿಂದ ಸಹಕಾರವೂ ಲಭ್ಯ.
ಮಕರ ರಾಶಿ
ಮಕರ ರಾಶಿಯವರೇ, ಇಂದಿನ ದಿನ ಉದ್ಯೋಗ, ಹಣಕಾಸು ಮತ್ತು ಸಂಬಂಧಗಳಲ್ಲಿ ಯಶಸ್ಸಿನ ಸೂಚನೆ ನೀಡುತ್ತದೆ. ಉದ್ಯೋಗದ ಸಂದರ್ಭಗಳಲ್ಲಿ ಕೊಟ್ಟಿರುವ ಹಣ ಮರಳಿ ಪಡೆಯಲು ಸಾಧ್ಯತೆ ಇದೆ. ಹೊಸ ಒಪ್ಪಂದಗಳಿಗೆ ಅಂಗೀಕಾರ ಸಿಗಬಹುದು. ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ಪರಿಹಾರ ಕಾಣುತ್ತವೆ. ಆಕಸ್ಮಿಕ ಪ್ರೇಮದಲ್ಲಿ ಭಾಗಿಯಾಗುವ ಅವಕಾಶ ಇದೆ. ಕಂಕಣ ಭಾಗ್ಯದ ಸುದ್ದಿ ಕೇಳಿ ಸಂತೋಷ ಅನುಭವಿಸಬಹುದು. ದಂಪತಿಗಳಿಗೆ ಸಂತಾನವು ದೊರೆಯುವ ಸಾಧ್ಯತೆ ಇದೆ. ನಗರ ಪ್ರದೇಶದಲ್ಲಿ ಆಸ್ತಿ ಖರೀದಿ ಸಾಧ್ಯ. ಗಣಿಗಾರಿಕೆ ಉದ್ಯಮದಾರರಿಗೆ ಆರ್ಥಿಕ ಅಭಿವೃದ್ಧಿ ಕಂಡುಬರುತ್ತದೆ. ಸ್ವಂತ ಕೆಲಸ-ಕಾರ್ಯಗಳಲ್ಲಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಕಾರ್ಮಿಕರಿಗೆ ಸರಕಾರಿ ಕೆಲಸಗಳು ಮತ್ತು ಸೌಲಭ್ಯಗಳು ದೊರೆಯಲಿವೆ. ಅನಿರೀಕ್ಷಿತ ಕಾರ್ಯ ಸಾಧನೆಯಿಂದ ಮನಸ್ಸಿಗೆ ಸಮಾಧಾನ ದೊರೆಯುತ್ತದೆ. ಮನೆಯವರೊಂದಿಗೆ ಸಣ್ಣ ವಿಷಯಗಳಲ್ಲಿಯೂ ಮನಸ್ತಾಪ ವ್ಯಕ್ತವಾಗಬಹುದು. ಮಕ್ಕಳ ಆರೋಗ್ಯದ ಕಡೆ ಎಚ್ಚರಿಕೆ ವಹಿಸುವುದು ಅಗತ್ಯ. ಮನಸ್ಸಿನಲ್ಲಿ ಹೊಸ ಆಲೋಚನೆ ಇದ್ದರೆ, ತಕ್ಷಣ ಕಾರ್ಯಾಚರಣೆ ಮಾಡುವುದು ಫಲಪ್ರದ. ಮಹಿಳೆಯರಿಗೆ ಉದ್ಯೋಗದಲ್ಲಿ ಯಶಸ್ಸು. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಲ್ಲಿ ಸುಧಾರಣೆ ಕಾಣಬಹುದು. ಅಧ್ಯಯನದಿಂದ ಸಂತೃಪ್ತಿ ಲಭಿಸುತ್ತದೆ. ಲಾಟರಿ ಯೋಗ ಮತ್ತು ಜೂಜಾಟದಿಂದ ಧನ ಲಾಭದ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿಯವರೇ, ಇಂದಿನ ದಿನವು ಸಂತೋಷ, ಸಹಕಾರ ಮತ್ತು ಹಣಕಾಸಿನ ಲಾಭದ ಸೂಚನೆ ನೀಡುತ್ತದೆ. ಕಂಕಣ ಭಾಗ್ಯದ ಸುದ್ದಿ ಕೇಳಿ ಸಂತೋಷ ಅನುಭವಿಸುತ್ತೀರಿ. ಮಕ್ಕಳಲ್ಲಿ ಸ್ವಲ್ಪ ದುಶ್ಚಟಗಳ ತೊಂದರೆ ಕಾಣಬಹುದು. ಆದರೆ ನೀವು ಪ್ರಯತ್ನಿಸಿದ ಯೋಜನೆಗಳು ಪೂರ್ಣಗೊಳ್ಳುವವು. ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಸ್ಟೇಷನರಿ ಮತ್ತು ಪ್ರಿಂಟಿಂಗ್ ಉದ್ಯೋಗಿಗಳಿಗೆ ಶುಭದಾಯಕ ದಿನ. ಅರ್ಧದಲ್ಲಿ ನಿಂತ ಮನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯ. ನಿಮ್ಮ ಮನೆಯ ಪಕ್ಕದಲ್ಲಿರುವ ಆಸ್ತಿ ಖರೀದಿ ಸಾಧ್ಯತೆ ಇದೆ. ಕೃಷಿ ಉದ್ಯಮದಾರರಿಗೆ ಹೊಸ ಭರವಸೆಯ ಬೆಳಕು ಪ್ರಾರಂಭವಾಗುತ್ತಿದೆ. ರಾಜಕೀಯದಲ್ಲಿ ಮುನ್ನಡೆ ಕಾಣುವ ಸಾಧ್ಯತೆ, ವ್ಯವಹಾರಗಳಲ್ಲಿ ಯಶಸ್ಸು ಲಭಿಸುತ್ತದೆ. ಲಾಟರಿ ಯೋಗ ಮತ್ತು ಜೂಜಾಟದಲ್ಲಿ ಧನ ಲಾಭದ ಅವಕಾಶ ಇದೆ. ಮಹಿಳೆಯರಿಗೆ ಎಲ್ಲ ದಿಕ್ಕಿನಿಂದ ಸಹಕಾರ ದೊರೆಯುವ ಸಾಧ್ಯತೆ ಇದೆ. ಆದರೆ ಅನಾವಶ್ಯಕವಾಗಿ ಬಂಧು-ಮಿತ್ರರಿಂದ ಮನಸ್ತಾಪಗಳಿಗೆ ಒಳಗಾಗಬೇಡಿ. ಕಾರ್ಯ ಒತ್ತಡದಿಂದ ಕೆಲವು ಕೆಲಸಗಳು ವಿಳಂಬವಾಗಬಹುದು. ಸಂಚಾರದಲ್ಲಿ ಜಾಗ್ರತೆ ವಹಿಸಿ. ವಾಹನ ಖರೀದಿಯ ವಿಚಾರವನ್ನು ಇಂದೇ ಮುಂದಿಟ್ಟುಕೊಳ್ಳಿ. ಸರಕಾರಿ ನೌಕರರಿಗೆ ಒಳ್ಳೆಯ ಧನಲಾಭ ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಭಾಗಿಯಾಗಿ ಗೌರವ ಮತ್ತು ಪ್ರಾಪ್ತಿಗಳು ಲಭಿಸಬಹುದು. ಅಮೂಲ್ಯ ವಸ್ತು ಖರೀದಿಗೆ ಯೋಗ ಸೃಷ್ಟವಾಗಿದೆ.
ಮೀನು ರಾಶಿ
ಮೀನು ರಾಶಿಯವರೇ, ಇಂದಿನ ದಿನವು ಧನ, ಸಂಬಂಧ ಮತ್ತು ಉದ್ಯೋಗದಲ್ಲಿ ಯಶಸ್ಸಿನ ಸೂಚನೆ ನೀಡುತ್ತದೆ. ಲಾಟರಿ ಯೋಗ ಮತ್ತು ಜೂಜಾಟದಿಂದ ಧನ ಲಾಭದ ಅವಕಾಶ ಇದೆ. ಅರ್ಧಕ್ಕೆ ನಿಂತ ಮನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯ. ನಂಬಿದ ಮೂಲಗಳಿಂದ ಧನ ಲಾಭ ದೊರೆಯಲಿದೆ. ಭೂಮಿ ಕಟ್ಟಡದ ವ್ಯವಹಾರದಲ್ಲಿ ಶುಭದಾಯಕ ಸಮಯ. ದಂಪತಿಗಳಿಗೆ ಸಂತಾನ ವಿಷಯದಲ್ಲಿ ಸ್ವಲ್ಪ ಮಾನಸಿಕ ಕಿರಿಕಿರಿ ಸಂಭವಿಸಬಹುದು. ನಿಮ್ಮ ಜಮೀನಿಗೆ ಸಂಬಂಧಿಸಿದ ಕೃಷಿಭೂಮಿ ಖರೀದಿಸಲು ಯೋಗ ಸೃಷ್ಟವಾಗಿದೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಹೊಸ ಭರವಸೆಯ ಬೆಳಕು. ಬಂಧುಗಳಲ್ಲಿನ ಭಿನ್ನಾಭಿಪ್ರಾಯವನ್ನು ದೂರ ಮಾಡುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬಹುದು. ಮಹಿಳೆಯರ ಮನೋಭಿಲಾಷೆಗಳು ಈಡೇರಲಿವೆ. ದೂರದ ಪ್ರಯಾಣದಲ್ಲಿ ಕಾರ್ಯಸಾಧನೆ ಸಾಧ್ಯ. ವಿವಿಧ ಮೂಲಗಳಿಂದ ಧನಾಗಮನವಿದೆ. ಕಾರ್ಯಸಾಧನೆ ಉತ್ತಮವಾಗಲಿದೆ. ವೃತ್ತಿರಂಗದಲ್ಲಿ ಅಧಿಕಾರಿಗಳಿಗೆ ಮುಂಬಡ್ತಿ ಲಾಭ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಕೃಷಿ ಕ್ಷೇತ್ರದಲ್ಲಿ ರೈತರಿಗೆ ಉತ್ತಮ ಫಲ. ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಗೃಹಿಣಿಯರಿಗೆ ಸ್ವಲ್ಪ ಪ್ರಯೋಜನ ದೊರೆಯಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಶನಿವಾರದ ರಾಶಿ ಭವಿಷ್ಯ – 28 ಮಾರ್ಚ್ 2026
ಮೇಷ ರಾಶಿ ದಿನ ಭವಿಷ್ಯ
ಮೇಷ ರಾಶಿಯವರಿಗೆ ಇಂದಿನ ದಿ... ಓದನ್ನು ಮುಂದುವರಿಸಿ
ಶುಕ್ರವಾರದ ರಾಶಿ ಭವಿಷ್ಯ – 27 ಮಾರ್ಚ್ 2026
ಮೇಷ ರಾಶಿ: ಆರ್ಥಿಕ ಚೇತರಿಕೆಯಿಂದ ಉತ್ಸಾಹ, ಕುಟುಂಬದಲ್ಲಿ ಮಿಶ್ರ ಫಲಗಳುಓದನ್ನು ಮುಂದುವರಿಸಿ
ಗುರುವಾರದ ರಾಶಿ ಭವಿಷ್ಯ – 26 ಮಾರ್ಚ್ 2026
ಮೇಷ ರಾಶಿ ಭವಿಷ್ಯ: ಗುರುಸ್ವಾಮಿ ಅನುಗ್ರಹದಿಂದ ಶುಭ ಫಲಗಳು
ಮಂಗಳವಾರದ ರಾಶಿ ಭವಿಷ್ಯ – 24 ಮಾರ್ಚ್ 2026
ಮೇಷ ರಾಶಿ – ದಿನಭವಿಷ್ಯ
ಇಂದು ಮೇಷ ರಾಶಿಯವರ ದಿನವು... ಓದನ್ನು ಮುಂದುವರಿಸಿ
ಸೋಮವಾರದ ರಾಶಿ ಭವಿಷ್ಯ 23 ಮಾರ್ಚ್ 2026
ಮೇಷ ರಾಶಿ: ಪ್ರೀತಿ, ವ್ಯವಹಾರ ಮತ್ತು ಕುಟುಂಬದಲ್ಲಿ ಶುಭಸೂಚನೆಗಳು... ಓದನ್ನು ಮುಂದುವರಿಸಿ
ಭಾನುವಾರದ ರಾಶಿ ಭವಿಷ್ಯ 22 ಮಾರ್ಚ್ 2026
ಮೇಷ ರಾಶಿ : ಜನರಿಗೆ ಇಂದು ಉದ್ಯೋಗ, ಹಣಕಾಸು ಮತ್ತು ಸಂಬಂಧಗಳಲ್ಲಿ... ಓದನ್ನು ಮುಂದುವರಿಸಿ
ಶನಿವಾರ, 21 ಮಾರ್ಚ್ 2026 ರಾಶಿ ಭವಿಷ್ಯ
ಮೇಷ ರಾಶಿ – ದಿನಭವಿಷ್ಯ
ಮೇಷ ರಾಶಿಯವರಿಗೆ ಇಂದು ಮಿಶ್ರ ಫಲ... ಓದನ್ನು ಮುಂದುವರಿಸಿ
ಶುಕ್ರವಾರದ ರಾಶಿ ಭವಿಷ್ಯ – 20 ಮಾರ್ಚ್ 2026
ಮೇಷ ರಾಶಿ: ಮೇಷ ರಾಶಿಯವರಿಗೆ ಮಿಶ್ರ ಫಲಗಳು ಕಂಡುಬರುತ್ತಿವೆ. ಲಾಭ... ಓದನ್ನು ಮುಂದುವರಿಸಿ