Bigg Boss ಕನ್ನಡ ಸ್ಪರ್ಧಿ Dog Satish ಮೇಲೆ ಪೊಲೀಸ್ ಬುಲಾವ್: ವಿಚಾರಣೆ ಅಗತ್ಯ
ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸ್ಪರ್ಧಿಯಾಗಿದ್ದ Dog ಸತೀಶ್ ಗೆ ಸಂಕಷ್ಟ ಎದುರಾಗಿದೆ. ಶೀಘ್ರದಲ್ಲೇ ಜ್ಞಾನಭಾರತಿ ಪೊಲೀಸ್ ಠಾಣೆಯಿಂದ ಬುಲಾವ್ ಬರಲಿದ್ದು, ವಿಚಾರಣೆಗೆ ಹಾಜರಾಗಬೇಕಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊ ಒಂದು ಈ ಪ್ರಕರಣಕ್ಕೆ ಕಾರಣವಾಗಿದೆ. ವೀಡಿಯೊದಲ್ಲಿ ಸತೀಶ್ ರೌಡಿಶೀಟರ್ ಪಿ. ಮೂರ್ತಿ ಜೊತೆಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ. ಈ ದೃಶ್ಯಗಳನ್ನು “ಬಿಲ್ಡಪ್” ಶೈಲಿಯಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿರುವುದು ಗಮನ ಸೆಳೆದಿದೆ.
ವೀಡಿಯೊ ಸಿಸಿಬಿ ಕಣ್ಣಿಗೆ ಬಿದ್ದ ತಕ್ಷಣ ಅದನ್ನು ಫೇಸ್‌ಬುಕ್‌ನಿಂದ ಅಳಿಸಲಾಗಿದೆ. ಆದರೆ, ಪ್ರಕರಣ ದಾಖಲಿಸದೇ ತಪ್ಪಿಸಿಕೊಳ್ಳಲು ಸಾಧ್ಯವಾಗದೆ, ಪಿ. ಮೂರ್ತಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non-Cognizable Report) ದಾಖಲಿಸಲಾಗಿದೆ. ಸಿಸಿಬಿ ಇನ್ಸ್‌ಪೆಕ್ಟರ್ ಮಹದೇವಯ್ಯ ದೂರು ನೀಡಿದ್ದಾರೆ. ವೀಡಿಯೊದಲ್ಲಿ ಭಾಗವಹಿಸಿದವರನ್ನು ಹಾಗೂ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ವಿಚಾರಣೆಗೆ ಕರೆಸುವಂತೆ ಸೂಚಿಸಲಾಗಿದೆ.
ಈ ಘಟನೆ ಮಾರ್ಚ್ 13ರಂದು ಆರ್.ಟಿ.ನಗರದ ಪಟೇಲ್ಸ್ ಇನ್ ಪಾರ್ಟಿ ಹಾಲ್‌ನಲ್ಲಿ ನಡೆದ ಜನ್ಮದಿನ ಸಮಾರಂಭದಲ್ಲಿ ಸಂಭವಿಸಿದೆ. ರೌಡಿಶೀಟರ್ ಜೊತೆಗೆ ಸತೀಶ್ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಸಿಸಿಬಿ ಈ ಪ್ರಕರಣವನ್ನು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ವೀಡಿಯೊ ಅಪ್ಲೋಡ್ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೀವ್ರವಾಗಿ ತೆಗೆದುಕೊಂಡಿದ್ದು, ಡಾಗ್ ಸತೀಶ್ ಪೊಲೀಸ್ ಮುಂದೆ ಹಾಜರಾಗಿ ಪಾರ್ಟಿಯಲ್ಲಿ ಭಾಗವಹಿಸಿರುವ ಉದ್ದೇಶ ಮತ್ತು ರೌಡಿಗಳ ಜೊತೆಗಿನ ನಂಟಿನ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ. ಜ್ಞಾನಭಾರತಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಯುಗಾದಿ ದಿನವೇ ರಕ್ತಪಾತ :ಅಣ್ಣನಿಂದ ತಂಗಿ ಮೇಲೆ ಬರ್ಬರ ಹಲ್ಲೆ
ಧಾರವಾಡ: ಯುಗಾದಿ ಹಬ್ಬದ ಸಂಭ್ರಮದ ನಡುವೆ, ಜಿಲ್ಲೆಯ ಅಮ್ಮಿನಭಾವಿ... ಓದನ್ನು ಮುಂದುವರಿಸಿ
ಚಿತ್ರದುರ್ಗದಲ್ಲಿ ಆ್ಯಸಿಡ್ ದಾಳಿ: ಪತಿಯ ಕ್ರೂರ ಕೃತ್ಯ, ನಾಲ್ವರಿಗೆ ಗಾಯ!
ಚಿತ್ರದುರ್ಗ: ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಮಹಿಳೆಯ ಮೇಲೆ ಮಚ್ಚಿ... ಓದನ್ನು ಮುಂದುವರಿಸಿ
ಲವ್ ಹೆಸರಿನಲ್ಲಿ ನಡೆದ ಕೊಲೆ, ಮಹಿಳೆಗೆ ಚಾಕು ಇರಿದು ಆರೋಪಿ ಪರಾರಿ
ಬೆಂಗಳೂರು: ಗಂಗೊಂಡನಹಳ್ಳಿ ಪ್ರದೇಶದಲ್ಲಿ ವಿವಾಹಿತೆಯೊಬ್ಬಳನ್ನು ಹ... ಓದನ್ನು ಮುಂದುವರಿಸಿ
ವೈರಲ್ ವಿಡಿಯೋ ಪ್ರಕರಣ: ಕೆ. ರಾಮಚಂದ್ರ ರಾವ್ ನಿಜಾಸತ್ಯೆ ದೃಢಪಟ್ಟ 100 ಪುಟಗಳ ವರದಿ
ಬೆಂಗಳೂರು: ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತ... ಓದನ್ನು ಮುಂದುವರಿಸಿ
ಧಾರವಾಡ ಪೊಲೀಸ್ ಸಾಧನೆ: 7 ವರ್ಷ ತಲೆಮರೆಸಿದ್ದ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಬಂಧನ
ಧಾರವಾಡ: ಸುಮಾರು ಏಳು ವರ್ಷಗಳ ಕಾಲ ಕಾನೂನಿಗೆ ತಲೆಮರೆಸಿಕೊಂಡು ಪರ... ಓದನ್ನು ಮುಂದುವರಿಸಿ
ಮಂಗಳೂರು
ಹಿಂದೂ ವಿದ್ಯಾರ್ಥಿನಿಯೊಂದಿಗೆ ಜಾತ್ರೆಗೆ ಬಂದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆ... ಓದನ್ನು ಮುಂದುವರಿಸಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೊಂದಿಗೆ ರಾಜಕೀಯ ತಲ್ಲಣ
ಮೈಸೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್‌ಐ... ಓದನ್ನು ಮುಂದುವರಿಸಿ
ಮಂಗಳೂರು
ಬೆಳ್ತಂಗಡಿ ಜಾತ್ರೆಯಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲೆ: ನೈತಿಕ ಪೊಲೀಸ್ ಗಿರಿ ಆರೋಪ, ಪ್ರಕರಣ ದಾಖಲು
ಮಂಗಳೂರು: ಬೆಳ್ತಂಗಡಿ ಜಾತ್ರೆಯಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಹುಬ್ಬಳ್ಳಿ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ ದುರಂತ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರಲ್ಲಿ ಓರ್ವ ಸಾವು
ಹುಬ್ಬಳ್ಳಿ: ದೇಶಪಾಂಡೆ ನಗರದ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ ದುರಂ... ಓದನ್ನು ಮುಂದುವರಿಸಿ
ಜೈಲು ಅಧಿಕಾರಿಗಳಿಗೆ ತಲೆನೋವು: ಮಹಿಳಾ ಖೈದಿಗಳ ಡ್ರಗ್ಸ್ ವರದಿ ಪಾಸಿಟಿವ್
ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ... ಓದನ್ನು ಮುಂದುವರಿಸಿ