ವೈರಲ್ ವಿಡಿಯೋ ಪ್ರಕರಣ: ಕೆ. ರಾಮಚಂದ್ರ ರಾವ್ ನಿಜಾಸತ್ಯೆ ದೃಢಪಟ್ಟ 100 ಪುಟಗಳ ವರದಿ

ಬೆಂಗಳೂರು: ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪದಲ್ಲಿ ವೈರಲ್ ಆಗಿದ್ದ ಕೆ. ರಾಮಚಂದ್ರ ರಾವ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡು ಬಂದಿದೆ. ಅಧಿಕಾರಿಗಳ ತನಿಖೆ ಫಲಿತಾಂಶ, ವಿಡಿಯೋಗಳು ನಕಲಿ ಅಲ್ಲ, ಸಂಪೂರ್ಣವಾಗಿ ನಿಜವೆಂದು ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರ ನೇಮಿಸಿದ್ದ ಹಿರಿಯ ಐಪಿಎಸ್ ಅಧಿಕಾರಿಗಳ ತಂಡವು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಸುಮಾರು 100 ಪುಟಗಳ ವರದಿ ಸಲ್ಲಿಸಲಾಗಿದೆ.

 

ತನಿಖೆಯ ಮುಖ್ಯಾಂಶಗಳು

ವೀಡಿಯೋಗಳು ಯಾವುದೇ ಎಡಿಟಿಂಗ್ ಅಥವಾ ಮಾರ್ಪಾಡು ಇಲ್ಲದೆ ನಿಜವಾಗಿವೆ.

ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (FSL) ಕೂಡ ದೃಢೀಕರಣ ನೀಡಿದೆ.

ಬೆಳಗಾವಿ ವಲಯದಲ್ಲಿ ಕೆಲಸ ಮಾಡಿದ ಸಿಬ್ಬಂದಿ ವಿಡಿಯೋದಲ್ಲಿನ ಮಹಿಳೆಯರನ್ನು ಗುರುತಿಸಿದ್ದಾರೆ.

ಮಹಿಳೆಯರು ರಾವ್ ಅವರ ಖಾಸಗಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದರ ದಾಖಲೆಗಳಿವೆ.

 

ಮೂಲಗಳ ಪ್ರಕಾರ, ವಿಡಿಯೋದಲ್ಲಿ ಒಬ್ಬ ಮಹಿಳೆ ದೃಶ್ಯಗಳನ್ನು ಉದ್ದೇಶಪೂರ್ವಕವಾಗಿ ಚಿತ್ರೀಕರಿಸಿದ್ದಾರಾ ಎಂಬ ಮಾಹಿತಿ ಬಂದಿದೆ. ಆದರೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇಬ್ಬರು ಮಹಿಳೆಯರು ಸಂಪರ್ಕಕ್ಕೆ ಸಿಗುತ್ತಿಲ್ಲ.

 

ಇನ್ನೊಂದೆಡೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರಾವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅಧಿಕೃತ ಇಲಾಖಾ ತನಿಖೆ ಪ್ರಾರಂಭವಾಗಿದೆ. ಮೇ 31ರಂದು ನಿವೃತ್ತಿಯಾಗಲಿರುವ ರಾವ್ ವಿರುದ್ಧ ತನಿಖೆ ಮುಂದುವರಿದರೆ, ಅವರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು.

 

ವರದಿ ತಿಳಿಸುವಂತೆ, ಘಟನೆ 2016-17 ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿ ಕಚೇರಿಯಲ್ಲಿ ನಡೆದಿದೆ. ಆರಂಭದಲ್ಲಿ ರಾವ್ ವಿಡಿಯೋಗಳು AI ಮೂಲಕ ಸೃಷ್ಟಿಸಲ್ಪಟ್ಟಿವೆ, ಅಥವಾ ಮಾರ್ಪಡ್ ಮಾಡಲ್ಪಟ್ಟಿವೆ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದರು. ಆದರೆ ಈಗ ವರದಿ ದೃಢಪಡಿಸಿರುವ ನಿಜಾಸತ್ಯತೆ ಅವರ ಪರಿಗಣನೆಯಲ್ಲಿ ಸಂಕಷ್ಟ ಉಂಟುಮಾಡಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1
ಧಾರವಾಡ

ಯುಗಾದಿ ದಿನವೇ ರಕ್ತಪಾತ :ಅಣ್ಣನಿಂದ ತಂಗಿ ಮೇಲೆ ಬರ್ಬರ ಹಲ್ಲೆ

ಧಾರವಾಡ: ಯುಗಾದಿ ಹಬ್ಬದ ಸಂಭ್ರಮದ ನಡುವೆ, ಜಿಲ್ಲೆಯ ಅಮ್ಮಿನಭಾವಿ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಚಿತ್ರದುರ್ಗ

ಚಿತ್ರದುರ್ಗದಲ್ಲಿ ಆ್ಯಸಿಡ್ ದಾಳಿ: ಪತಿಯ ಕ್ರೂರ ಕೃತ್ಯ, ನಾಲ್ವರಿಗೆ ಗಾಯ!

ಚಿತ್ರದುರ್ಗ: ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಮಹಿಳೆಯ ಮೇಲೆ ಮಚ್ಚಿ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

ಲವ್ ಹೆಸರಿನಲ್ಲಿ ನಡೆದ ಕೊಲೆ, ಮಹಿಳೆಗೆ ಚಾಕು ಇರಿದು ಆರೋಪಿ ಪರಾರಿ

ಬೆಂಗಳೂರು: ಗಂಗೊಂಡನಹಳ್ಳಿ ಪ್ರದೇಶದಲ್ಲಿ ವಿವಾಹಿತೆಯೊಬ್ಬಳನ್ನು ಹ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಧಾರವಾಡ

ಧಾರವಾಡ ಪೊಲೀಸ್ ಸಾಧನೆ: 7 ವರ್ಷ ತಲೆಮರೆಸಿದ್ದ ಮಾಜಿ ಪಾಲಿಕೆ ಸದಸ್ಯ ಶ್ರೀಕಾಂತ ಜಮನಾಳ ಬಂಧನ

ಧಾರವಾಡ: ಸುಮಾರು ಏಳು ವರ್ಷಗಳ ಕಾಲ ಕಾನೂನಿಗೆ ತಲೆಮರೆಸಿಕೊಂಡು ಪರ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಹಿಂದೂ ವಿದ್ಯಾರ್ಥಿನಿಯೊಂದಿಗೆ ಜಾತ್ರೆಗೆ ಬಂದ ಮುಸ್ಲಿಂ ವಿದ್ಯಾರ್ಥಿ ಮೇಲೆ ಹಲ್ಲೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಮೈಸೂರು

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೊಂದಿಗೆ ರಾಜಕೀಯ ತಲ್ಲಣ

ಮೈಸೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್‌ಐ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಬೆಳ್ತಂಗಡಿ ಜಾತ್ರೆಯಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲೆ: ನೈತಿಕ ಪೊಲೀಸ್ ಗಿರಿ ಆರೋಪ, ಪ್ರಕರಣ ದಾಖಲು

ಮಂಗಳೂರು: ಬೆಳ್ತಂಗಡಿ ಜಾತ್ರೆಯಲ್ಲಿ 17 ವರ್ಷದ ಬಾಲಕನ ಮೇಲೆ ಹಲ್ಲ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಧಾರವಾಡ

ಹುಬ್ಬಳ್ಳಿ

ಹುಬ್ಬಳ್ಳಿ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ ದುರಂತ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ನಾಲ್ವರಲ್ಲಿ ಓರ್ವ ಸಾವು

ಹುಬ್ಬಳ್ಳಿ: ದೇಶಪಾಂಡೆ ನಗರದ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ ದುರಂ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಜೈಲು ಅಧಿಕಾರಿಗಳಿಗೆ ತಲೆನೋವು: ಮಹಿಳಾ ಖೈದಿಗಳ ಡ್ರಗ್ಸ್ ವರದಿ ಪಾಸಿಟಿವ್

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

Bigg Boss ಕನ್ನಡ ಸ್ಪರ್ಧಿ Dog Satish ಮೇಲೆ ಪೊಲೀಸ್ ಬುಲಾವ್: ವಿಚಾರಣೆ ಅಗತ್ಯ

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸ್ಪರ್ಧಿಯಾಗಿದ್ದ Do... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1