ಚರಂಡಿ ಸ್ವಚ್ಛತೆ ಇಲ್ಲದೆ ನರಳುತ್ತಿರುವ ಗ್ರಾಮಸ್ಥರು – ಅಂಗನವಾಡಿ, ವಿದ್ಯುತ್ ಸಮಸ್ಯೆಗಳಿಗೂ ಉತ್ತರ ಇಲ್ಲ.

ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕತಿಮ್ಮನಹಳ್ಳಿ, ಕೊಪ್ಪಕಟನಹಳ್ಳಿ, ಪವಜೇನಹಳ್ಳಿ, ಹಾಗೂ ತಳವಾರ ದಿನ್ನೆ, ಇನ್ನು ಹಲವು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳೇ ಕಾಣೆಯಾಗಿದ್ದು, ಪಂಚಾಯಿತಿ ಆಡಳಿತದ ನಿರ್ಲಕ್ಷ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ವರ್ಷಗಳಿಂದ ಚರಂಡಿ ಸ್ವಚ್ಛತೆ ಮಾಡದೆ ಬಿಟ್ಟ ಪರಿಣಾಮ ಗ್ರಾಮಗಳಲ್ಲಿ ದುರ್ವಾಸನೆ, ಕೊಳಚೆ ನೀರು ನಿಲ್ಲುವಿಕೆ ಮತ್ತು ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

 

ಗ್ರಾಮಗಳ ಪ್ರಮುಖ ರಸ್ತೆ ಬದಿಗಳಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಮಳೆ ಬಂದರೆ ಮನೆಗಳೊಳಗೆ ಕೊಳಚೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಈ ದುಸ್ಥಿತಿಯಿಂದ ಹೆಚ್ಚಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಚರಂಡಿಗಳಲ್ಲಿ ಕಸ, ಮಣ್ಣು ಮತ್ತು ಸಸಿಗಳು ತುಂಬಿಕೊಂಡಿರುವುದರಿಂದ ನಿತ್ಯ ಗಬ್ಬು ವಾಸನೆ ದಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ.

 

ಬೀಚಿಕಾನಹಳ್ಳಿ ಗ್ರಾಮ ಪಂಚಾಯಿತಿಯ ಕೇಂದ್ರ ಗ್ರಾಮದಲ್ಲೇ ಚರಂಡಿ ಸ್ವಚ್ಛತೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪಂಚಾಯಿತಿಯ ಗ್ರಾಮದಲ್ಲಿ ಈ ಸ್ಥಿತಿ ಇದ್ದರೆ, ಇನ್ನು ಪಂಚಾಯಿತಿ ವ್ಯಾಪ್ತಿಯ ಇತರ ಗ್ರಾಮಗಳ ಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಸಹಜವಾಗಿ ಉದ್ಭವಿಸಿದೆ. ಇದು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೇರ ಸಾಕ್ಷಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

 

ಕೊಪ್ಪಕಟನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಅಂಗನವಾಡಿ ಶಾಲೆಯ ಆವರಣದಲ್ಲಿ ದೊಡ್ಡ ದೊಡ್ಡ ಗಿಡಗಂಟುಗಳು ಬೆಳೆದು ನಿಂತಿದ್ದು, ಹಾವು-ಹುಳುಗಳ ಭೀತಿ ಹೆಚ್ಚಾಗಿದೆ. ಚಿಕ್ಕ ಮಕ್ಕಳಿಗೆ ಪೌಷ್ಟಿಕ ಆಹಾರ, ಪೂರ್ವ ಶಿಕ್ಷಣ ನೀಡಬೇಕಾದ ಕೇಂದ್ರವೇ ಇಂದು ಅಸ್ವಚ್ಛತೆಯ ಗೂಡಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

ಅಂಗನವಾಡಿ ಕೇಂದ್ರದಲ್ಲಿ ನಿಯಮಿತ ಸ್ವಚ್ಛತೆ ನಡೆಸದೆ, ಅಧಿಕಾರಿಗಳು ಕೇವಲ ದಾಖಲೆಗಳಲ್ಲೇ ಕಾರ್ಯ ತೋರಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ. ಇನ್ನೂ ಆಶ್ಚರ್ಯಕರ ವಿಷಯವೆಂದರೆ, ಕೊಪ್ಪಕಟನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಬೆಳಕು, ಫ್ಯಾನ್ ಇಲ್ಲದ ಪರಿಸ್ಥಿತಿಯಲ್ಲಿ ಚಿಕ್ಕ ಮಕ್ಕಳು ಕುಳಿತುಕೊಳ್ಳಬೇಕಾಗಿರುವುದು ಮಾನವೀಯತೆಯ ಪ್ರಶ್ನೆಯನ್ನು ಎತ್ತಿದೆ. ಬೇಸಿಗೆ, ಮಳೆಗಾಲ ಎರಡೂ ಕಾಲದಲ್ಲೂ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಗ್ರಾಮದಲ್ಲಿ ಕೆಲವು ವಿದ್ಯುತ್ ಕಂಬಗಳಲ್ಲಿ ಹಗಲು-ರಾತ್ರಿ ನಿರಂತರವಾಗಿ ದೀಪಗಳು ಉರಿಯುತ್ತಿದ್ದು, ಇದರಿಂದ ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

 

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಚರಂಡಿ ಸ್ವಚ್ಛತೆ, ಅಂಗನವಾಡಿ ಕೇಂದ್ರದ ಅಭಿವೃದ್ಧಿ, ವಿದ್ಯುತ್ ಸಮಸ್ಯೆಗಳ ಕುರಿತು ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತ ದೂರು ನೀಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುವ ಬದಲು ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

 

ಗ್ರಾಮಸ್ಥರು ತಕ್ಷಣವೇ ಚರಂಡಿ ಸ್ವಚ್ಛತೆ ಕಾರ್ಯ ಆರಂಭಿಸಬೇಕು, ಅಂಗನವಾಡಿ ಕೇಂದ್ರದ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಹಾಗೂ ಅನಗತ್ಯವಾಗಿ ಉರಿಯುತ್ತಿರುವ ಬೀದಿ ದೀಪಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.ನಂತರ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಲೋಕೇಶ್ ಜಿ.ಎನ್. ಅವರು ಮಾತನಾಡಿ, ಗ್ರಾಮಗಳಲ್ಲಿ ಚರಂಡಿಗಳ ಅಶುಚಿತ್ವದ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ಕೇವಲ 15 ದಿನಗಳೊಳಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

 

ವರದಿ  ಮೊಹಮ್ಮದ್ ನಾಸೀರ್


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1
ಶಿವಮೊಗ್ಗ

‘ಟಾರ್ಗೆಟ್ ನಾನು ಅಲ್ಲ, ನನ್ನ ಮಗಳು’ – ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮಹೇಶ್ ಸ್ಫೋಟಕ ಮಾತು

ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣ ಸಂಬಂಧವಾಗಿ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ಗ್ರಾಮಾಂತರ

ಹೊಸಕೋಟೆ

ಹೊಸಕೋಟೆ ಫ್ಲೈಓವರ್ ಬಳಿ ಅಪಾಯಕಾರಿ ಬೈಕ್ ಸ್ಟಂಟ್; ಯುವಕರು ಭಯವಿಲ್ಲದಂತೆ ವ್ಹೀಲಿಂಗ್

ಬೆಂಗಳೂರು : ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಉತ್ತರಕನ್ನಡ

ಕಾರವಾರ

ಸುಚಿತ್ರಾ ಮೊಬೈಲ್ ಕಂಗಾಲು: ಕೋಲಾರ, ಶಿವಮೊಗ್ಗ ಯುವಕರು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿ ಫೋನ್ ಸ್ವಿಚ್ ಆಫ್

ಕಾರವಾರ: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಾಮರಾಜನಗರ

ಹನೂರು

ಚಿರತೆ ದಾಳಿಗೆ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೈಅಲರ್ಟ್, ಪಾದಯಾತ್ರೆಗೆ ಕಟ್ಟುನಿಟ್ಟಿನ ಭದ್ರತೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು  ಮ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಳಗಾವಿ

ಮಹಿಳಾ ಅಧಿಕಾರಿಯ ಬೆಡ್ ರೂಮ್‌ನಲ್ಲಿ ಸೀಕ್ರೆಟ್ ಕ್ಯಾಮೆರಾ: ಖಾಸಗಿ ದೃಶ್ಯದಿಂದ ಬ್ಲ್ಯಾಕ್ ಮೇಲ್, ನಕಲಿ ಪತ್ರಕರ್ತರು ಬಂಧನ

ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಧಾರವಾಡ

ಹುಬ್ಬಳ್ಳಿ

ಮತಾಂತರ ಯತ್ನ ಆರೋಪ: ಆರೋಪಿಗಳ ಬಂಧನಕ್ಕೆ ಶ್ರೀರಾಮಸೇನೆ ಆಗ್ರಹ

ಹುಬ್ಬಳ್ಳಿ: ಮತಾಂತರ ಯತ್ನ, ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ಗ್ರಾಮಾಂತರ

ನೆಲಮಂಗಲ

ನೆಲಮಂಗಲದಲ್ಲಿ ಹೊತ್ತಿ ಉರಿದ ಐಷಾರಾಮಿ ಬಸ್; ಚಾಲಕ-ಸಿಬ್ಬಂದಿಯ ಚುರುಕಿನಿಂದ ತಪ್ಪಿದ ಭಾರೀ ಅನಾಹುತ

ನೆಲಮಂಗಲ: ಹನುಮಂತಪುರ–ಕೆರೆಕತ್ತಿಗನೂರು ಗೇಟ್ ಸಮೀಪ ಮಧ್ಯರಾತ್ರಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಳಗಾವಿ

ಮೈದಾನದ ಕ್ರಿಕೆಟ್ ಡ್ರಾಮಾ ಹೈಲೈಟ್: ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಹೆಬ್ಬಾಳಕರ್..!

ಬೆಳಗಾವಿ : ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಕ್ರಿಕೆ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಮಂಡ್ಯ

ರಾಜ್ಯಕ್ಕೆ ಏನೂ ಇಲ್ಲ, ಖಾಲಿ ಚೊಂಬು ಮೂರು ನಾಮ ಮಾತ್ರ! ಕೇಂದ್ರ ಬಜೆಟ್ ವಿರುದ್ಧ ಶಾಸಕ ಕೆ.ಎಂ.ಉದಯ್ ಕಿಡಿ

ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಕೊಪ್ಪಳ

ಮುಸ್ಲಿಂ ಮಹಿಳೆಯೊಂದಿಗೆ ಇದ್ದೆಂದು ತಪ್ಪಾಗಿ ಭಾವಿಸಿ ಹಿಂದೂ ಯುವಕನ ಮೇಲೆ ಹಲ್ಲೆ

ಕೊಪ್ಪಳ : ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಮಹಿಳೆ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1