ಮತಾಂತರ ಯತ್ನ ಆರೋಪ: ಆರೋಪಿಗಳ ಬಂಧನಕ್ಕೆ ಶ್ರೀರಾಮಸೇನೆ ಆಗ್ರಹ
ಹುಬ್ಬಳ್ಳಿ: ಮತಾಂತರ ಯತ್ನ, ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿನಯಾ ಎಡ್ವರ್ಡ್ ಅವರ ತಾಯಿ ಮತ್ತು ಸಹೋದರಿಯನ್ನು ಕೂಡಲೇ ಬಂಧಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ, 2020ರಲ್ಲಿ ಜಗದೀಶ ಕೆ. ಹರಿಜನ ಅವರು ವಿನಯಾ ಎಡ್ವರ್ಡ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಎರಡು ವರ್ಷಗಳ ಬಳಿಕ, ವಿನಯಾ ತಾಯಿ ಮತ್ತು ಸಹೋದರಿಯೊಂದಿಗೆ ಸೇರಿ ಜಗದೀಶ ಅವರಿಗೆ ಜೀವ ಬೆದರಿಕೆ ಹಾಕಿ ಮತಾಂತರಕ್ಕೆ ಒತ್ತಾಯಿಸಿದ್ದಾರೆ ಹಾಗೂ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದರು.
ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾದರೂ, ಇದುವರೆಗೆ ಯಾವುದೇ ಬಂಧನವಾಗಿಲ್ಲ. ಚರ್ಚ್ ಪಾದ್ರಿಗಳು ಆರೋಪಿಗಳಿಗೆ ಬೆಂಬಲ ನೀಡುತ್ತಿರುವುದಾಗಿ ಅವರು ಆರೋಪಿಸಿ, ಕೂಡಲೇ ಬಂಧನ ನಡೆದಿಲ್ಲದಿದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲ ಮತ್ತು ದೊರೆರಾಜ ಮಣಿಕುಂಟರನ್ನು ಎಸ್‌ಸಿ ಮೀಸಲಾತಿ ಅಡಿಯಲ್ಲಿ ಟಿಕೆಟ್ ಪಡೆದು ಆಯ್ಕೆಗೊಂಡಿರುವುದರಿಂದ, ಅವರನ್ನು ಪಾಲಿಕೆಯ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅನೇಕ ಕ್ರಿಶ್ಚಿಯನ್ನರು ಇನ್ನೂ ಎಸ್‌ಸಿ ಮೀಸಲಾತಿಯ ಸೌಲಭ್ಯ ಪಡೆಯುತ್ತಿರುವ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಲಿದೆ ಎಂದು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಕೆ. ಹರಿಜನ, ವಿಶ್ವನಾಥ ಬೂದೂರು, ಲಕ್ಷ್ಮಮ್ಮ ಕೃಷ್ಣಪ್ಪ, ರಂಗನಾಯಕ್ ಮತ್ತು ಅಣ್ಣಪ್ಪ ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗುಡಿಬಂಡಾ
ಚರಂಡಿ ಸ್ವಚ್ಛತೆ ಇಲ್ಲದೆ ನರಳುತ್ತಿರುವ ಗ್ರಾಮಸ್ಥರು – ಅಂಗನವಾಡಿ, ವಿದ್ಯುತ್ ಸಮಸ್ಯೆಗಳಿಗೂ ಉತ್ತರ ಇಲ್ಲ.
ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ... ಓದನ್ನು ಮುಂದುವರಿಸಿ
‘ಟಾರ್ಗೆಟ್ ನಾನು ಅಲ್ಲ, ನನ್ನ ಮಗಳು’ – ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮಹೇಶ್ ಸ್ಫೋಟಕ ಮಾತು
ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣ ಸಂಬಂಧವಾಗಿ... ಓದನ್ನು ಮುಂದುವರಿಸಿ
ಹೊಸಕೋಟೆ
ಹೊಸಕೋಟೆ ಫ್ಲೈಓವರ್ ಬಳಿ ಅಪಾಯಕಾರಿ ಬೈಕ್ ಸ್ಟಂಟ್; ಯುವಕರು ಭಯವಿಲ್ಲದಂತೆ ವ್ಹೀಲಿಂಗ್
ಬೆಂಗಳೂರು : ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದ... ಓದನ್ನು ಮುಂದುವರಿಸಿ
ಕಾರವಾರ
ಸುಚಿತ್ರಾ ಮೊಬೈಲ್ ಕಂಗಾಲು: ಕೋಲಾರ, ಶಿವಮೊಗ್ಗ ಯುವಕರು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿ ಫೋನ್ ಸ್ವಿಚ್ ಆಫ್
ಕಾರವಾರ: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್... ಓದನ್ನು ಮುಂದುವರಿಸಿ
ಹನೂರು
ಚಿರತೆ ದಾಳಿಗೆ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೈಅಲರ್ಟ್, ಪಾದಯಾತ್ರೆಗೆ ಕಟ್ಟುನಿಟ್ಟಿನ ಭದ್ರತೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು ಮ... ಓದನ್ನು ಮುಂದುವರಿಸಿ
ಮಹಿಳಾ ಅಧಿಕಾರಿಯ ಬೆಡ್ ರೂಮ್‌ನಲ್ಲಿ ಸೀಕ್ರೆಟ್ ಕ್ಯಾಮೆರಾ: ಖಾಸಗಿ ದೃಶ್ಯದಿಂದ ಬ್ಲ್ಯಾಕ್ ಮೇಲ್, ನಕಲಿ ಪತ್ರಕರ್ತರು ಬಂಧನ
ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಹೊತ್ತಿ ಉರಿದ ಐಷಾರಾಮಿ ಬಸ್; ಚಾಲಕ-ಸಿಬ್ಬಂದಿಯ ಚುರುಕಿನಿಂದ ತಪ್ಪಿದ ಭಾರೀ ಅನಾಹುತ
ನೆಲಮಂಗಲ: ಹನುಮಂತಪುರ–ಕೆರೆಕತ್ತಿಗನೂರು ಗೇಟ್ ಸಮೀಪ ಮಧ್ಯರಾತ್ರಿ... ಓದನ್ನು ಮುಂದುವರಿಸಿ
ಮೈದಾನದ ಕ್ರಿಕೆಟ್ ಡ್ರಾಮಾ ಹೈಲೈಟ್: ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಹೆಬ್ಬಾಳಕರ್..!
ಬೆಳಗಾವಿ : ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಕ್ರಿಕೆ... ಓದನ್ನು ಮುಂದುವರಿಸಿ
ರಾಜ್ಯಕ್ಕೆ ಏನೂ ಇಲ್ಲ, ಖಾಲಿ ಚೊಂಬು ಮೂರು ನಾಮ ಮಾತ್ರ! ಕೇಂದ್ರ ಬಜೆಟ್ ವಿರುದ್ಧ ಶಾಸಕ ಕೆ.ಎಂ.ಉದಯ್ ಕಿಡಿ
ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಓದನ್ನು ಮುಂದುವರಿಸಿ
ಮುಸ್ಲಿಂ ಮಹಿಳೆಯೊಂದಿಗೆ ಇದ್ದೆಂದು ತಪ್ಪಾಗಿ ಭಾವಿಸಿ ಹಿಂದೂ ಯುವಕನ ಮೇಲೆ ಹಲ್ಲೆ
ಕೊಪ್ಪಳ : ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಮಹಿಳೆ... ಓದನ್ನು ಮುಂದುವರಿಸಿ