ಮಹಿಳಾ ಅಧಿಕಾರಿಯ ಬೆಡ್ ರೂಮ್‌ನಲ್ಲಿ ಸೀಕ್ರೆಟ್ ಕ್ಯಾಮೆರಾ: ಖಾಸಗಿ ದೃಶ್ಯದಿಂದ ಬ್ಲ್ಯಾಕ್ ಮೇಲ್, ನಕಲಿ ಪತ್ರಕರ್ತರು ಬಂಧನ
ಬೆಳಗಾವಿ : ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ರಹಸ್ಯ ಕ್ಯಾಮರಾಗಳಲ್ಲಿ ಸೆರೆಹಿಡಿದು, 50 ಲಕ್ಷ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮಾಲಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವು ಸಂಚಲನ ಮೂಡಿಸಿದೆ. ಬಂಧಿತರು: ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಮತ್ತು ಮೊಹಮ್ಮದ್ ಬಾಳೇಕುಂದ್ರಿ. ಆರೋಪಿಗಳು ಅಧಿಕಾರಿಯ ಮನೆ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ, ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ನಂತರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 50 ಲಕ್ಷ ರೂ. ಬ್ಲ್ಯಾಕ್‌ಮೇಲ್ ಮಾಡಿದ್ದುದಾಗಿ ವರದಿ. ಮಹಿಳಾ ಅಧಿಕಾರಿ ಈ ಘಟನೆ ಬಗ್ಗೆ ಪೋಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.
ಪೊಲೀಸರು ಕಾರ್ಯಾಚರಣೆ ನಡೆಸಿ ಹಲವಾರು ಮೊಬೈಲ್‌ಗಳು, ರಹಸ್ಯ ಕ್ಯಾಮರಾಗಳು, ಪೆನ್‌ಡ್ರೈವ್, ಮೆಮೊರಿ ಕಾರ್ಡ್‌ಗಳು ಮತ್ತು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ತನಿಖೆಯಲ್ಲಿ ಮಹಿಳಾ ಅಧಿಕಾರಿ ಮನೆಯ ಕೆಲಸಗಾರ ಸಹ ಆರೋಪಿಗಳ ಸಹಾಯದಿಂದ ಮನೆಗೆ ಪ್ರವೇಶ ಮಾಡಿ ಬೆಡ್‌ರೂಮ್ ಮತ್ತು ಹಾಲ್‌ನಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದನು ಎಂದು ತಿಳಿದು ಬಂದಿದೆ. ಮಾಲಮಾರುತಿ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಬಂಧಿತ ಮೂವರ ಮೇಲಿನ ಕ್ರಮ ಮುಂದುವರಿಯುತ್ತಿದೆ. ಮನೆ ಕೆಲಸಗಾರನನ್ನು ಪತ್ತೆ ಮಾಡಲು ಶೋಧ ಕಾರ್ಯವೂ ಸಾಗುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗುಡಿಬಂಡಾ
ಚರಂಡಿ ಸ್ವಚ್ಛತೆ ಇಲ್ಲದೆ ನರಳುತ್ತಿರುವ ಗ್ರಾಮಸ್ಥರು – ಅಂಗನವಾಡಿ, ವಿದ್ಯುತ್ ಸಮಸ್ಯೆಗಳಿಗೂ ಉತ್ತರ ಇಲ್ಲ.
ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ... ಓದನ್ನು ಮುಂದುವರಿಸಿ
‘ಟಾರ್ಗೆಟ್ ನಾನು ಅಲ್ಲ, ನನ್ನ ಮಗಳು’ – ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮಹೇಶ್ ಸ್ಫೋಟಕ ಮಾತು
ಶಿವಮೊಗ್ಗ: ಸಿದ್ದಾಪುರ ವಸಂತ್ ನಾಯ್ಕ್ ಹತ್ಯೆ ಪ್ರಕರಣ ಸಂಬಂಧವಾಗಿ... ಓದನ್ನು ಮುಂದುವರಿಸಿ
ಹೊಸಕೋಟೆ
ಹೊಸಕೋಟೆ ಫ್ಲೈಓವರ್ ಬಳಿ ಅಪಾಯಕಾರಿ ಬೈಕ್ ಸ್ಟಂಟ್; ಯುವಕರು ಭಯವಿಲ್ಲದಂತೆ ವ್ಹೀಲಿಂಗ್
ಬೆಂಗಳೂರು : ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದ... ಓದನ್ನು ಮುಂದುವರಿಸಿ
ಕಾರವಾರ
ಸುಚಿತ್ರಾ ಮೊಬೈಲ್ ಕಂಗಾಲು: ಕೋಲಾರ, ಶಿವಮೊಗ್ಗ ಯುವಕರು ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿ ಫೋನ್ ಸ್ವಿಚ್ ಆಫ್
ಕಾರವಾರ: ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್... ಓದನ್ನು ಮುಂದುವರಿಸಿ
ಹನೂರು
ಚಿರತೆ ದಾಳಿಗೆ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೈಅಲರ್ಟ್, ಪಾದಯಾತ್ರೆಗೆ ಕಟ್ಟುನಿಟ್ಟಿನ ಭದ್ರತೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು ಮ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಮತಾಂತರ ಯತ್ನ ಆರೋಪ: ಆರೋಪಿಗಳ ಬಂಧನಕ್ಕೆ ಶ್ರೀರಾಮಸೇನೆ ಆಗ್ರಹ
ಹುಬ್ಬಳ್ಳಿ: ಮತಾಂತರ ಯತ್ನ, ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಆ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಹೊತ್ತಿ ಉರಿದ ಐಷಾರಾಮಿ ಬಸ್; ಚಾಲಕ-ಸಿಬ್ಬಂದಿಯ ಚುರುಕಿನಿಂದ ತಪ್ಪಿದ ಭಾರೀ ಅನಾಹುತ
ನೆಲಮಂಗಲ: ಹನುಮಂತಪುರ–ಕೆರೆಕತ್ತಿಗನೂರು ಗೇಟ್ ಸಮೀಪ ಮಧ್ಯರಾತ್ರಿ... ಓದನ್ನು ಮುಂದುವರಿಸಿ
ಮೈದಾನದ ಕ್ರಿಕೆಟ್ ಡ್ರಾಮಾ ಹೈಲೈಟ್: ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಹೆಬ್ಬಾಳಕರ್..!
ಬೆಳಗಾವಿ : ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಕ್ರಿಕೆ... ಓದನ್ನು ಮುಂದುವರಿಸಿ
ರಾಜ್ಯಕ್ಕೆ ಏನೂ ಇಲ್ಲ, ಖಾಲಿ ಚೊಂಬು ಮೂರು ನಾಮ ಮಾತ್ರ! ಕೇಂದ್ರ ಬಜೆಟ್ ವಿರುದ್ಧ ಶಾಸಕ ಕೆ.ಎಂ.ಉದಯ್ ಕಿಡಿ
ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಓದನ್ನು ಮುಂದುವರಿಸಿ
ಮುಸ್ಲಿಂ ಮಹಿಳೆಯೊಂದಿಗೆ ಇದ್ದೆಂದು ತಪ್ಪಾಗಿ ಭಾವಿಸಿ ಹಿಂದೂ ಯುವಕನ ಮೇಲೆ ಹಲ್ಲೆ
ಕೊಪ್ಪಳ : ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿ ಮುಸ್ಲಿಂ ಮಹಿಳೆ... ಓದನ್ನು ಮುಂದುವರಿಸಿ