ಎನ್‌ಎಚ್–44ರಲ್ಲಿ ಭೀಕರ ಅಪಘಾತ – ಕಂಟೇನರ್ ಲಾರಿ ಡಿಕ್ಕಿಗೆ ಬೊಲೇರೊ ನಜ್ಜುಗುಜ್ಜು, ಒಬ್ಬರ ಸಾವು
ಚಿಕ್ಕಬಳ್ಳಾಪುರ: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚಿಕ್ಕಬಳ್ಳಾಪುರದ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂದೆ ಸಾಗುತ್ತಿದ್ದ ಬೊಲೇರೊ ಜೀಪ್‌ಗೆ ಹಿಂಬದಿಯಿಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಡಿಕ್ಕಿಯ ತೀವ್ರತೆಗೆ ಬೊಲೇರೊ ವಾಹನವನ್ನು ಸುಮಾರು ಅರ್ಧ ಕಿಲೋ ಮೀಟರ್ ದೂರ ತಳ್ಳಿಕೊಂಡು ಹೋಗಿರುವ ಲಾರಿ, ಬಳಿಕ ವಾಹನದ ಮೇಲೆಯೇ ಉರುಳಿ ಬಿದ್ದಿದೆ.
ಅಪಘಾತದಲ್ಲಿ ಬೊಲೇರೊ ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯದಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬರಬೇಕಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಳವಳ್ಳಿ
ಮನೆ ಜಗಲಿ ಮೇಲೆ ಹರಿದ ನೆತ್ತರು – ವ್ಯಕ್ತಿ ಅನುಮಾನಾಸ್ಪದ ಸಾವು, ಪೊಲೀಸರು ತನಿಖೆ
ಮಂಡ್ಯ:- ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಕ್ಕಮನಕೊಪ್ಪಲು ಗ್ರಾಮದಲ... ಓದನ್ನು ಮುಂದುವರಿಸಿ
ಕಳ್ಳತನಕ್ಕೆ ನಿದ್ದೆಯಲ್ಲಿ ಸಿಕ್ಕಿ ಬಂದ ಖದೀಮರು, ಪೊಲೀಸ್ ಬಂಧನ
ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಕಳ್ಳರು ಮನೆ ಖಾಲಿಯ ಸಮಯ ಅಥವಾ ಸೂ... ಓದನ್ನು ಮುಂದುವರಿಸಿ
ಭಾರೀ ಆನ್‌ಲೈನ್ ವಂಚನೆ ಜಾಲ ಭೇದಿಸಿದ ಸೈಬರ್ ಪೊಲೀಸ್; ಆರೋಪಿಗೆ ನ್ಯಾಯಾಂಗ ಬಂಧನ
ಶಿವಮೊಗ್ಗ: ಶಿವಮೊಗ್ಗ ಸೈಬರ್ ಅಪರಾಧ ಪೊಲೀಸ್ ಠಾಣೆ ಭಾರೀ ಆನ್‌ಲೈನ... ಓದನ್ನು ಮುಂದುವರಿಸಿ
ನೆಲಮಂಗಲ
ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ದರೋಡೆ : ಐವರನ್ನು ಮಾದನಾಯಕನಹಳ್ಳಿ ಪೊಲೀಸರ ಯಶಸ್ವಿ ಬಂಧನ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲದಲ್ಲಿ ಜನವರಿ 27ರಂದು ನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಗಾಂಜಾ ಹಾವಳಿ ಮಿತಿ ಮೀರಿ: ನಡುರಸ್ತೆಯಲ್ಲಿ ಮೂವರು ಯುವಕರು ಅಸ್ವಸ್ಥ
ದೇವನಹಳ್ಳಿ: ದೇವನಹಳ್ಳಿ ಪಟ್ಟಣದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲ ಮೂಲ ಕನ್ನಡಿಗನಿಗೆ ಕೆನಡಾದಲ್ಲಿ ಬರ್ಬರ ಹತ್ಯೆ; ಕುಟುಂಬ ನೊಂದು ಕಂಗಾಲು
ನೆಲಮಂಗಲ : (ಬೆಂಗಳೂರು ಗ್ರಾಮಾಂತರ) ನಿವಾಸಿ ಚಂದನ್ ಕುಮಾರ್ (37)... ಓದನ್ನು ಮುಂದುವರಿಸಿ
ಕೊರೋನಾ ನಷ್ಟದ ಕಾರಣ ಕಳ್ಳತನ; ರಾಜಾ ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ
ಬೆಂಗಳೂರು: ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಟ್ರಾವೆಲ್ಸ್... ಓದನ್ನು ಮುಂದುವರಿಸಿ
ಮಳವಳ್ಳಿ
ಪಕ್ಕದ ಮನೆಯವನ ಕಿರುಕುಳಕ್ಕೆ ತಾಯಿ–ಮಗಳು ಆತ್ಮಹತ್ಯೆ! ಹೃದಯವಿದ್ರಾವಕ ಘಟನೆ
ಮಂಡ್ಯ: ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಪಕ್ಕದ ವ್... ಓದನ್ನು ಮುಂದುವರಿಸಿ
ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದ ಕಳ್ಳರು ಪರಾರಿ: ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರು: ನೆಲಮಂಗಲ ಸಮೀಪದ ಹುಸ್ಕೂರು ಗ್ರಾಮದಲ್ಲಿ ಸ್ಪ್ರೇ ಸಿಂಪ... ಓದನ್ನು ಮುಂದುವರಿಸಿ
ತಾಯಿ–ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದಳೇ ಮಗಳು? ಠಾಣೆ ಮೆಟ್ಟಿಲೇರಿದ ತಾಯಿ
ಬೆಂಗಳೂರು: ತಾಯಿ ಹಾಗೂ ಸಂಬಂಧಿಕರ ಖಾಸಗಿ ಫೋಟೋಗಳನ್ನು ತನ್... ಓದನ್ನು ಮುಂದುವರಿಸಿ