ಕಳ್ಳತನಕ್ಕೆ ನಿದ್ದೆಯಲ್ಲಿ ಸಿಕ್ಕಿ ಬಂದ ಖದೀಮರು, ಪೊಲೀಸ್ ಬಂಧನ
ಚಿಕ್ಕಬಳ್ಳಾಪುರ: ಸಾಮಾನ್ಯವಾಗಿ ಕಳ್ಳರು ಮನೆ ಖಾಲಿಯ ಸಮಯ ಅಥವಾ ಸೂಕ್ತ ಸಮಯವನ್ನು ಲೆಕ್ಕ ಹಾಕಿ ಕೃತ್ಯ ಮಾಡುತ್ತಾರೆ. ಆದರೆ ಗೌರಿಬಿದನೂರಿನಲ್ಲಿ ನಡೆದ ಘಟನೆ ಎಲ್ಲರನ್ನೂ ಅಚ್ಚರಿ ಮೂಡಿಸಿದೆ. ಹಳೇ RTO ಕಚೇರಿ ಬಳಿಯ ಪ್ರೇಮನಾಥ ಅವರ ಮನೆಯಲ್ಲಿ ಕಳ್ಳತನ ಮಾಡಲು ಇಬ್ಬರು ಖದೀಮರು ರಾತ್ರಿ ನುಗ್ಗಿದ್ದಾರೆ. ಮನೆಯ ಮೇಲಿನ ರೇಕ್ ಕತ್ತರಿಸಿ ಒಳಗೆ ಪ್ರವೇಶಿಸಿದ ಖದೀಮರು ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದು ದೋಚಿದ್ದಾರೆ.
ಆದರೆ ವಿಚಿತ್ರ ಪರಿಸ್ಥಿತಿ ಕಂಡುಬಂದಿದೆ: ಒಬ್ಬ ಖದೀಮ ಪರಾರಿಯಾಗಿದ್ದರೆ, ಇನ್ನೊಬ್ಬ ಎಣ್ಣೆ ನಶೆಯಲ್ಲಿ ನಿದ್ದೆಗೆ ಜಾರಿದ್ದು, ಮನೆ ಒಳಗೆಲೇ ಮಲಗಿ ಸಿಕ್ಕಿಬಿದ್ದಿದ್ದಾನೆ. ನೆರೆಹೊರೆಯವರು ಅನುಮಾನಾಸ್ಪದ ಚಲನವಲನ ಕಂಡು ಮನೆ ಮಾಲೀಕ ಪ್ರೇಮನಾಥ ಅವರಿಗೆ ತಕ್ಷಣ ಮಾಹಿತಿ ನೀಡಿದರು. ಹೈದರಾಬಾದ್ ಪ್ರವಾಸದಿಂದ ರಾತ್ರಿ ಮನೆಗೆ ಹಿಂದಿರುಗಿದ ಪ್ರೇಮನಾಥ, ಕಳ್ಳನೊಬ್ಬ ನಿದ್ದೆಯಲ್ಲಿ ಮಲಗಿರುವ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಬಂದ್ ಮಾಡಿದ ಆರೋಪಿಯು ಗೌರಿಬಿದನೂರಿನ ನದಿದಡ ವಾರ್ಡ್ ನಿವಾಸಿ ದೇವರಾಜು ಎಂದು ಗುರುತಿಸಲ್ಪಟ್ಟಿದ್ದು, ಪ್ರಕರಣ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ತನಿಖೆ ಮುಂದುವರಿಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಳವಳ್ಳಿ
ಮನೆ ಜಗಲಿ ಮೇಲೆ ಹರಿದ ನೆತ್ತರು – ವ್ಯಕ್ತಿ ಅನುಮಾನಾಸ್ಪದ ಸಾವು, ಪೊಲೀಸರು ತನಿಖೆ
ಮಂಡ್ಯ:- ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಕ್ಕಮನಕೊಪ್ಪಲು ಗ್ರಾಮದಲ... ಓದನ್ನು ಮುಂದುವರಿಸಿ
ಎನ್‌ಎಚ್–44ರಲ್ಲಿ ಭೀಕರ ಅಪಘಾತ – ಕಂಟೇನರ್ ಲಾರಿ ಡಿಕ್ಕಿಗೆ ಬೊಲೇರೊ ನಜ್ಜುಗುಜ್ಜು, ಒಬ್ಬರ ಸಾವು
ಚಿಕ್ಕಬಳ್ಳಾಪುರ: ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44... ಓದನ್ನು ಮುಂದುವರಿಸಿ
ಭಾರೀ ಆನ್‌ಲೈನ್ ವಂಚನೆ ಜಾಲ ಭೇದಿಸಿದ ಸೈಬರ್ ಪೊಲೀಸ್; ಆರೋಪಿಗೆ ನ್ಯಾಯಾಂಗ ಬಂಧನ
ಶಿವಮೊಗ್ಗ: ಶಿವಮೊಗ್ಗ ಸೈಬರ್ ಅಪರಾಧ ಪೊಲೀಸ್ ಠಾಣೆ ಭಾರೀ ಆನ್‌ಲೈನ... ಓದನ್ನು ಮುಂದುವರಿಸಿ
ನೆಲಮಂಗಲ
ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ದರೋಡೆ : ಐವರನ್ನು ಮಾದನಾಯಕನಹಳ್ಳಿ ಪೊಲೀಸರ ಯಶಸ್ವಿ ಬಂಧನ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲದಲ್ಲಿ ಜನವರಿ 27ರಂದು ನ... ಓದನ್ನು ಮುಂದುವರಿಸಿ
ದೇವನಹಳ್ಳಿ
ಗಾಂಜಾ ಹಾವಳಿ ಮಿತಿ ಮೀರಿ: ನಡುರಸ್ತೆಯಲ್ಲಿ ಮೂವರು ಯುವಕರು ಅಸ್ವಸ್ಥ
ದೇವನಹಳ್ಳಿ: ದೇವನಹಳ್ಳಿ ಪಟ್ಟಣದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲ ಮೂಲ ಕನ್ನಡಿಗನಿಗೆ ಕೆನಡಾದಲ್ಲಿ ಬರ್ಬರ ಹತ್ಯೆ; ಕುಟುಂಬ ನೊಂದು ಕಂಗಾಲು
ನೆಲಮಂಗಲ : (ಬೆಂಗಳೂರು ಗ್ರಾಮಾಂತರ) ನಿವಾಸಿ ಚಂದನ್ ಕುಮಾರ್ (37)... ಓದನ್ನು ಮುಂದುವರಿಸಿ
ಕೊರೋನಾ ನಷ್ಟದ ಕಾರಣ ಕಳ್ಳತನ; ರಾಜಾ ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ
ಬೆಂಗಳೂರು: ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಟ್ರಾವೆಲ್ಸ್... ಓದನ್ನು ಮುಂದುವರಿಸಿ
ಮಳವಳ್ಳಿ
ಪಕ್ಕದ ಮನೆಯವನ ಕಿರುಕುಳಕ್ಕೆ ತಾಯಿ–ಮಗಳು ಆತ್ಮಹತ್ಯೆ! ಹೃದಯವಿದ್ರಾವಕ ಘಟನೆ
ಮಂಡ್ಯ: ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಪಕ್ಕದ ವ್... ಓದನ್ನು ಮುಂದುವರಿಸಿ
ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದ ಕಳ್ಳರು ಪರಾರಿ: ಮಹಿಳೆ ಸ್ಥಳದಲ್ಲೇ ಸಾವು
ಬೆಂಗಳೂರು: ನೆಲಮಂಗಲ ಸಮೀಪದ ಹುಸ್ಕೂರು ಗ್ರಾಮದಲ್ಲಿ ಸ್ಪ್ರೇ ಸಿಂಪ... ಓದನ್ನು ಮುಂದುವರಿಸಿ
ತಾಯಿ–ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದಳೇ ಮಗಳು? ಠಾಣೆ ಮೆಟ್ಟಿಲೇರಿದ ತಾಯಿ
ಬೆಂಗಳೂರು: ತಾಯಿ ಹಾಗೂ ಸಂಬಂಧಿಕರ ಖಾಸಗಿ ಫೋಟೋಗಳನ್ನು ತನ್... ಓದನ್ನು ಮುಂದುವರಿಸಿ