ಗಂಡನ ಅಕ್ರಮ ಸಂಬಂಧ ಪ್ರಕರಣ – ಪತ್ನಿ ಗೃಹ ಬಂಧನದಲ್ಲಿದ್ದು ಪತಿ ಎಸ್ಕೇಪ್

ಹಾಸನ : ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿ ಗಂಡ–ಹೆಂಡತಿಯ ನಡುವೆ ನಡೆದ ಗೃಹ ಕಲಹ ಸ್ಥಳೀಯರಿಗೆ ಭಾರೀ ಚರ್ಚೆಗೆ ಕಾರಣವಾಗಿದೆ. ಹತ್ತು ವರ್ಷಗಳ ದಾಂಪತ್ಯ ಜೀವನ, ಕೋಟ್ಯಂತರ ಆಸ್ತಿ ಹಾಗೂ ಮುದ್ದಾದ ಮಗುವಿದ್ದರೂ ಸಹ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿದೆ ಎಂಬ ಆರೋಪ ಸಾರ್ವಜನಿಕರ ಗಮನ ಸೆಳೆದಿದೆ. ನಿಧಾ ಮತ್ತು ಮೊಹಮ್ಮದ್ ಉಮೇರ್ ದಂಪತಿಗೆ ಮದುವೆಯಾಗಿ ಹತ್ತು ವರ್ಷಗಳಾಗಿದ್ದು, ಅವರಿಗೆ ಒಂದು ಗಂಡು ಮಗು ಇದೆ. ಪತಿ ಮೊಹಮ್ಮದ್ ಉಮೇರ್ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತ್ನಿ ನಿಧಾ ಆರೋಪಿಸಿದ್ದು, ಇದೇ ಕಾರಣಕ್ಕಾಗಿ ತಲಾಖ್ ನೀಡುವಂತೆ ಒತ್ತಾಯಿಸುತ್ತಿದ್ದಾನೆ ಎಂದು ದೂರಿದ್ದಾರೆ. ಮೂರು ದಿನಗಳಿಂದ ತನ್ನನ್ನು ಮನೆಯೊಳಗೆ ಬಂಧನದಲ್ಲಿಟ್ಟಿದ್ದಾರೆ ಎಂಬ ಆರೋಪವನ್ನೂ ನಿಧಾ ಮಾಡಿದ್ದಾರೆ.

 

ಘಟನೆಯ ದಿನ, ಕೆ.ಆರ್.ಪುರಂ ಬಡಾವಣೆಯಲ್ಲಿರುವ ಸ್ವಂತ ಬಿಲ್ಡಿಂಗ್‌ನ ಬಾಲ್ಕನಿಯಿಂದ ನಿಧಾ ತಮ್ಮ ಮೇಲೆ ನಡೆಯುತ್ತಿರುವ ಅನ್ಯಾಯದ ಕುರಿತು ಸಾರ್ವಜನಿಕವಾಗಿ ಕೂಗಿ ಗಮನ ಸೆಳೆದಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೆ.ಆರ್.ಪುರಂ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ನಪೊಲೀಸರು ಮನೆ ಒಳಗೆ ಪ್ರವೇಶಿಸಲು ಸಾಧ್ಯವಾಗದೇ, ಬಾಲ್ಕನಿಯಿಂದಲೇ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಧಾ, ತನ್ನ ಗಂಡ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಿದರೆ, ಆಕೆಯ ಕುಟುಂಬ ಸದಸ್ಯರು ಕೂಡ ಮೊಹಮ್ಮದ್ ಉಮೇರ್ ವಿರುದ್ಧ ಆರೋಪ ಮಾಡಿದ್ದಾರೆ. 

 

ಇದಕ್ಕೆ ಪ್ರತಿಯಾಗಿ ಮೊಹಮ್ಮದ್ ಉಮೇರ್ ಕುಟುಂಬದವರು, ನಿಧಾ ಅವರೇ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಎರಡೂ ಕುಟುಂಬದ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ ಪರಿಣಾಮ ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ. ಈ ಪ್ರಕರಣವು ಪೊಲೀಸರಿಗೆ ತಲೆನೋವಾಗಿದ್ದು, ಮುಂದಿನ ಕ್ರಮಕ್ಕಾಗಿ ವಿಚಾರಣೆ ಮುಂದುವರಿದಿದೆ. ಸಾಮಾಜಿಕ ಮತ್ತು ಕಾನೂನು ಆಯಾಮದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ,


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1
ಚಾಮರಾಜನಗರ

ಕಾಡು ಪ್ರಾಣಿಗಳ ಹಾವಳಿ ಹಸುಗಳಿಗೆ ಹಾನಿ – 2 ದಿನಗಳಲ್ಲಿ 11 ಗೋವುಗಳು ಮೃತ

ಚಾಮರಾಜನಗರ: ಕಾಡು ಪ್ರಾಣಿಗಳ ದಾಳಿಯಿಂದ ರೈತರಿಗೆ ಮತ್ತೊಂದು ಆಘಾತ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಧಾರವಾಡ

ಹುಬ್ಬಳ್ಳಿ

ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳು ಪತ್ತೆ?

ಹುಬ್ಬಳ್ಳಿ: ಕಾಶ್ಮೀರದಿಂದ ಬಂದಿರುವುದಾಗಿ ಹೇಳಿಕೊಂಡ ಇಬ್ಬರು ವ್ಯ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಅಪರಾಧ ಅಂಕಿಅಂಶಗಳೊಂದಿಗೆ ಬಿಜೆಪಿ ಆರೋಪ ತಳ್ಳಿಹಾಕಿದ ಸಚಿವ ಪರಮೇಶ್ವರ್

ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಆಡಳಿತ ಪಕ್ಷ ಮತ್ತ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

ಕೆ.ಆರ್.ನಗರ ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ.ರೇವಣ್ಣ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು : ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ, ಮಾಜಿ ಸಚ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ನಗರ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಶಿವಮೊಗ್ಗ

ಭವಿಷ್ಯ ಹೇಳ್ತೀನಿ ಅಂತ ನಂಬಿಸಿ ಬೇಟೆನಾ? ರೀಲ್ಸ್ ರಾಣಿಯ ಆರೋಪ, ಕಮಲಾಕರ್‌ ಭಟ್ ವಿರುದ್ಧ ಆಡಿಯೋ ವೈರಲ್

ಶಿವಮೊಗ್ಗ: ನಿತ್ಯ ಬೆಳಗ್ಗೆ ಜನರಿಗೆ ಭವಿಷ್ಯ ಹೇಳುತ್ತಿದ್ದ ವ್ಯಕ್... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬಾಗಲಕೋಟೆ

ರಬಕವಿ ಬನಹಟ್ಟಿ

ನ್ಯಾಯಾಲಯವೇ ಸಾಕ್ಷಿ: ಜಡ್ಜ್ ಎದುರೇ ವಿಷ ಸೇವಿಸಿದ ವ್ಯಕ್ತಿ

ಬಾಗಲಕೋಟೆ: ಕೋರ್ಟ್‌ ಆವರಣದಲ್ಲಿ, ನ್ಯಾಯಾಧೀಶರ ಎದುರಲ್ಲೇ ಒಬ್ಬ ವ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ತುಮಕೂರು

ಮಧುಗಿರಿ

“ಹಣವಿಲ್ಲ… ಮೂಲಂಗಿಯೇ ಲಂಚ!” – ತುಮಕೂರಿನಲ್ಲಿ ಕಂದಾಯ ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ

ತುಮಕೂರು: ತುಮಕೂರಿನಲ್ಲಿ ಕೆಲ ಕಂದಾಯ (Revenue) ಅಧಿಕಾರಿಗಳು ಲಂ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಮೈಸೂರು

"ಮೈಸೂರಿನಲ್ಲಿ ಅಂತರ್ಜಾತಿ ಮದುವೆ ವಿರೋಧದ ಸಂಚಲನ : ಕುಟುಂಬ ಬಾಹಿಷ್ಕಾರ, ಎಲೆಕ್ಟ್ರಿಷಿಯನ್‌ ಮೇಲೆ ಕೇಸ್"

ಮೈಸೂರು : ಇಡೀ ಜಗತ್ತು ಆಧುನಿಕತೆಯತ್ತ ಸಾಗುತ್ತಿದ್ದರೂ, ಭಾರತದಲ್... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಕಲ್ಬುರ್ಗಿ

"ಮಕ್ಕಳ ಮೊಟ್ಟೆ ಅನುದಾನ ಬಿಡುಗಡೆಗೆ ಲಂಚ: ಅಂಗನವಾಡಿ ಶಿಕ್ಷಕಿ-ಸಿಬ್ಬಂದಿ ಲೋಕಾಯುಕ್ತ ಬಲೆಗೆ"

ಕಲಬುರಗಿ : ಬಡ ಮಕ್ಕಳ ಪೌಷ್ಟಿಕಾಹಾರದ ಮೊಟ್ಟೆಗೆ ಅನುದಾನ ಬಿಡುಗಡೆ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1