“ಹಣವಿಲ್ಲ… ಮೂಲಂಗಿಯೇ ಲಂಚ!” – ತುಮಕೂರಿನಲ್ಲಿ ಕಂದಾಯ ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ
ತುಮಕೂರು: ತುಮಕೂರಿನಲ್ಲಿ ಕೆಲ ಕಂದಾಯ (Revenue) ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಆರೋಪದ ವಿರುದ್ಧ ರೈತನು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಲೋಕಾಯುಕ್ತರೇ ರಸ್ತೆ ನಿರ್ಮಿಸಲು ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿದ ಕಂದಾಯ ಅಧಿಕಾರಿಗಳ ಲಂಚದಾಟದ ವಿರುದ್ಧ, ರೈತನೊಬ್ಬರು ವಿನೂತನ ಆದರೆ ತೀಕ್ಷ್ಣ ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಲಂಚಕ್ಕೆ ಹಣವಿಲ್ಲದ ರೈತ, ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾಗಿದ್ದು ಸಾರ್ವಜನಿಕರ ಗಮನ ಸೆಳೆದಿದೆ.
ತುಮಕೂರು ಜಿಲ್ಲೆಯ ಮಧುಗುರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿ ಗ್ರಾಮದ ರೈತ ಪ್ರಸನ್ನಕುಮಾರ್ ಅವರು ತಾಲೂಕು ಕಚೇರಿ ಎದುರು ಮೈಕ್ ಹಿಡಿದು, “ನನಗೆ ಅಧಿಕಾರಿಗಳಿಗೆ ಲಂಚ ಕೊಡಲು ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡ್ತೀನಿ… ಬನ್ನಿ ಬನ್ನಿ” ಎಂದು ಘೋಷಣೆ ಕೂಗಿದರು. ಪ್ರಸನ್ನಕುಮಾರ್ ತಮ್ಮ ಜಮೀನಿನಲ್ಲಿ ತರಕಾರಿ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಆದರೆ ಜಮೀನಿಗೆ ರಸ್ತೆ ಇಲ್ಲದ ಕಾರಣ ಕಳೆದ ಎರಡು ವರ್ಷಗಳ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿದ್ದರು.
ರೈತನ ದೂರಿನ ಮೇರೆಗೆ ಲೋಕಾಯುಕ್ತರು ಒಂದು ತಿಂಗಳೊಳಗೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆದರೂ ಸ್ಥಳ ಮಹಜರು, ಪರಿಶೀಲನೆಗೆ ಬರಬೇಕಾದ ಕೆಲ ಕಂದಾಯ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರೈತ ಆರೋಪಿಸಿದ್ದಾರೆ. ಹಣವಿಲ್ಲದ ಕಾರಣ ಪ್ರಸನ್ನಕುಮಾರ್ ತಹಶೀಲ್ದಾರ್ ಬಳಿ ಮತ್ತೆ ಮನವಿ ಸಲ್ಲಿಸಿದ್ದು, ತಹಶೀಲ್ದಾರ್ ರಸ್ತೆ ಮಾಡಿಕೊಡಲು ಸೂಚಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕಂದಾಯ ಅಧಿಕಾರಿ ಅಥವಾ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ನಿರ್ಲಕ್ಷ್ಯದಿಂದ ಬೇಸತ್ತು, ರೈತ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾಗಿ ಆಡಳಿತ ವ್ಯವಸ್ಥೆಗೆ ಧಿಕ್ಕಾರ ಸಾರಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕಚೇರಿ ಮುಂಭಾಗದಲ್ಲಿ ರೈತರೊಬ್ಬರು ಭ್ರಷ್ಟಾಚಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಕೈಗೊಂಡ ಈ ವಿಭಿನ್ನ ಪ್ರತಿಭಟನೆ ರಾಜ್ಯದ ಗಮನ ಸೆಳೆದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾಡು ಪ್ರಾಣಿಗಳ ಹಾವಳಿ ಹಸುಗಳಿಗೆ ಹಾನಿ – 2 ದಿನಗಳಲ್ಲಿ 11 ಗೋವುಗಳು ಮೃತ
ಚಾಮರಾಜನಗರ: ಕಾಡು ಪ್ರಾಣಿಗಳ ದಾಳಿಯಿಂದ ರೈತರಿಗೆ ಮತ್ತೊಂದು ಆಘಾತ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳು ಪತ್ತೆ?
ಹುಬ್ಬಳ್ಳಿ: ಕಾಶ್ಮೀರದಿಂದ ಬಂದಿರುವುದಾಗಿ ಹೇಳಿಕೊಂಡ ಇಬ್ಬರು ವ್ಯ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಅಪರಾಧ ಅಂಕಿಅಂಶಗಳೊಂದಿಗೆ ಬಿಜೆಪಿ ಆರೋಪ ತಳ್ಳಿಹಾಕಿದ ಸಚಿವ ಪರಮೇಶ್ವರ್
ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಆಡಳಿತ ಪಕ್ಷ ಮತ್ತ... ಓದನ್ನು ಮುಂದುವರಿಸಿ
ಕೆ.ಆರ್.ನಗರ ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ.ರೇವಣ್ಣ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು : ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ, ಮಾಜಿ ಸಚ... ಓದನ್ನು ಮುಂದುವರಿಸಿ
ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನ... ಓದನ್ನು ಮುಂದುವರಿಸಿ
ಭವಿಷ್ಯ ಹೇಳ್ತೀನಿ ಅಂತ ನಂಬಿಸಿ ಬೇಟೆನಾ? ರೀಲ್ಸ್ ರಾಣಿಯ ಆರೋಪ, ಕಮಲಾಕರ್ ಭಟ್ ವಿರುದ್ಧ ಆಡಿಯೋ ವೈರಲ್
ಶಿವಮೊಗ್ಗ: ನಿತ್ಯ ಬೆಳಗ್ಗೆ ಜನರಿಗೆ ಭವಿಷ್ಯ ಹೇಳುತ್ತಿದ್ದ ವ್ಯಕ್... ಓದನ್ನು ಮುಂದುವರಿಸಿ
ರಬಕವಿ ಬನಹಟ್ಟಿ
ನ್ಯಾಯಾಲಯವೇ ಸಾಕ್ಷಿ: ಜಡ್ಜ್ ಎದುರೇ ವಿಷ ಸೇವಿಸಿದ ವ್ಯಕ್ತಿ
ಬಾಗಲಕೋಟೆ: ಕೋರ್ಟ್ ಆವರಣದಲ್ಲಿ, ನ್ಯಾಯಾಧೀಶರ ಎದುರಲ್ಲೇ ಒಬ್ಬ ವ... ಓದನ್ನು ಮುಂದುವರಿಸಿ
ಗಂಡನ ಅಕ್ರಮ ಸಂಬಂಧ ಪ್ರಕರಣ – ಪತ್ನಿ ಗೃಹ ಬಂಧನದಲ್ಲಿದ್ದು ಪತಿ ಎಸ್ಕೇಪ್
ಹಾಸನ : ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿ ಗಂಡ–ಹೆಂಡತಿಯ ನಡುವೆ... ಓದನ್ನು ಮುಂದುವರಿಸಿ
"ಮೈಸೂರಿನಲ್ಲಿ ಅಂತರ್ಜಾತಿ ಮದುವೆ ವಿರೋಧದ ಸಂಚಲನ : ಕುಟುಂಬ ಬಾಹಿಷ್ಕಾರ, ಎಲೆಕ್ಟ್ರಿಷಿಯನ್ ಮೇಲೆ ಕೇಸ್"
ಮೈಸೂರು : ಇಡೀ ಜಗತ್ತು ಆಧುನಿಕತೆಯತ್ತ ಸಾಗುತ್ತಿದ್ದರೂ, ಭಾರತದಲ್... ಓದನ್ನು ಮುಂದುವರಿಸಿ
"ಮಕ್ಕಳ ಮೊಟ್ಟೆ ಅನುದಾನ ಬಿಡುಗಡೆಗೆ ಲಂಚ: ಅಂಗನವಾಡಿ ಶಿಕ್ಷಕಿ-ಸಿಬ್ಬಂದಿ ಲೋಕಾಯುಕ್ತ ಬಲೆಗೆ"
ಕಲಬುರಗಿ : ಬಡ ಮಕ್ಕಳ ಪೌಷ್ಟಿಕಾಹಾರದ ಮೊಟ್ಟೆಗೆ ಅನುದಾನ ಬಿಡುಗಡೆ... ಓದನ್ನು ಮುಂದುವರಿಸಿ