ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ: ಅಪರಾಧ ಅಂಕಿಅಂಶಗಳೊಂದಿಗೆ ಬಿಜೆಪಿ ಆರೋಪ ತಳ್ಳಿಹಾಕಿದ ಸಚಿವ ಪರಮೇಶ್ವರ್
ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಗದ್ದಲಗಳು ನಡೆದವು. ರಾಜ್ಯಪಾಲರ ಭಾಷಣದ ನಂತರ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಮತ್ತು ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, .
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪವನ್ನು ತಿರಸ್ಕರಿಸಿದರು.ಸದರಿಯಲ್ಲಿ ಮಾತನಾಡಿದ ಅವರು, ಇಬ್ಬರೂ ಮಾಜಿ ಗೃಹ ಸಚಿವರು ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿದ್ದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಮರೆತಂತೆ ಕಾಣುತ್ತದೆ ಎಂದು ವ್ಯಂಗ್ಯವಾಡಿದರು. ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿದ ಪರಮೇಶ್ವರ್, ಆರ್. ಅಶೋಕ ಗೃಹ ಸಚಿವರಾಗಿದ್ದ 2011 ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ 4,121 ಕೊಲೆ ಪ್ರಕರಣಗಳು, 582 ಎನ್‌ಡಿಪಿಎಸ್ ಪ್ರಕರಣಗಳು ಹಾಗೂ 995 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು ಎಂದರು.
ಬಸವರಾಜ ಬೊಮ್ಮಾಯಿ (2019–20) ಅವರ ಅವಧಿಯಲ್ಲಿ 2,554 ಕೊಲೆ ಪ್ರಕರಣಗಳು, 8,317 ಎನ್‌ಡಿಪಿಎಸ್ ಪ್ರಕರಣಗಳು ಹಾಗೂ 19,157 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದ ಅವಧಿಯಲ್ಲಿ 2,417 ಕೊಲೆಗಳು ಹಾಗೂ 24,486 ಸೈಬರ್ ಅಪರಾಧ ಪ್ರಕರಣಗಳು ನಡೆದಿವೆ ಎಂದು ವಿವರಿಸಿದರು.ಇದಕ್ಕೆ ವ್ಯತಿರಿಕ್ತವಾಗಿ, ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕೊಲೆ ಪ್ರಕರಣಗಳು 1,322ಕ್ಕೆ ಇಳಿದಿವೆ.
ನಂತರದ ವರ್ಷಗಳಲ್ಲಿ ಅವು 1,308 ಮತ್ತು 1,131ಕ್ಕೆ ಇಳಿದಿವೆ. ಕಳೆದ ಎರಡು ವರ್ಷಗಳಲ್ಲಿ ಅಪರಾಧಗಳು ಹೆಚ್ಚಾಗಿಲ್ಲ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ ಎಂದು ಪರಮೇಶ್ವರ್ ಹೇಳಿದರು.ರಾಜ್ಯ ಸರ್ಕಾರ ಮಾದಕ ವಸ್ತುಗಳ ಪಿಡುಗಿನ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳದೆ ಕಠಿಣ ಕ್ರಮ ಕೈಗೊಂಡಿದೆ ಎಂದು ತಿಳಿಸಿದ ಅವರು, 2023ರಲ್ಲಿ 133 ಕೋಟಿ ರೂ. ಮೌಲ್ಯದ 10,630 ಕೆಜಿ ಗಾಂಜಾ, 2024ರಲ್ಲಿ 264 ಕೋಟಿ ರೂ. ಮೌಲ್ಯದ 6,136 ಕೆಜಿ ಹಾಗೂ 2025ರಲ್ಲಿ 308 ಕೋಟಿ ರೂ. ಮೌಲ್ಯದ 6,219 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.ಅಕ್ರಮ ಬಾಂಗ್ಲಾದೇಶಿ ವಲಸಿಗರ ಕುರಿತಾಗಿಯೂ ಗೃಹ ಸಚಿವರು ಕಳವಳ ವ್ಯಕ್ತಪಡಿಸಿದರು.
ಈ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಪೂರ್ವ ಗಡಿಯ ಮೂಲಕ, ವಿಶೇಷವಾಗಿ ಕೋಲ್ಕತ್ತಾ ಮಾರ್ಗವಾಗಿ ವಲಸಿಗರು ದೇಶ ಪ್ರವೇಶಿಸುತ್ತಾರೆ. ಗಡಿಗಳನ್ನು ಕಾಪಾಡುವ ಜವಾಬ್ದಾರಿ ಯಾರದ್ದು ಎಂದು ಪ್ರಶ್ನಿಸಿದರು.ಈಗಾಗಲೇ ರಾಜ್ಯ ಸರ್ಕಾರ ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಿದೆ. 2021ರಲ್ಲಿ 15, 2022ರಲ್ಲಿ 21, 2024ರಲ್ಲಿ 68 ಹಾಗೂ 2025ರಲ್ಲಿ 85 ಜನರನ್ನು ಗಡೀಪಾರು ಮಾಡಲಾಗಿದ್ದು, ಒಟ್ಟು 196 ಜನರನ್ನು ದೇಶದಿಂದ ಹೊರಹಾಕಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ 370 ಜನರನ್ನು ಗಡೀಪಾರು ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಆರಂಭಿಸಲಾಗುವುದು ಎಂದೂ ಪರಮೇಶ್ವರ್ ಸ್ಪಷ್ಟಪಡಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾಡು ಪ್ರಾಣಿಗಳ ಹಾವಳಿ ಹಸುಗಳಿಗೆ ಹಾನಿ – 2 ದಿನಗಳಲ್ಲಿ 11 ಗೋವುಗಳು ಮೃತ
ಚಾಮರಾಜನಗರ: ಕಾಡು ಪ್ರಾಣಿಗಳ ದಾಳಿಯಿಂದ ರೈತರಿಗೆ ಮತ್ತೊಂದು ಆಘಾತ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳು ಪತ್ತೆ?
ಹುಬ್ಬಳ್ಳಿ: ಕಾಶ್ಮೀರದಿಂದ ಬಂದಿರುವುದಾಗಿ ಹೇಳಿಕೊಂಡ ಇಬ್ಬರು ವ್ಯ... ಓದನ್ನು ಮುಂದುವರಿಸಿ
ಕೆ.ಆರ್.ನಗರ ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ.ರೇವಣ್ಣ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು : ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ, ಮಾಜಿ ಸಚ... ಓದನ್ನು ಮುಂದುವರಿಸಿ
ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನ... ಓದನ್ನು ಮುಂದುವರಿಸಿ
ಭವಿಷ್ಯ ಹೇಳ್ತೀನಿ ಅಂತ ನಂಬಿಸಿ ಬೇಟೆನಾ? ರೀಲ್ಸ್ ರಾಣಿಯ ಆರೋಪ, ಕಮಲಾಕರ್ ಭಟ್ ವಿರುದ್ಧ ಆಡಿಯೋ ವೈರಲ್
ಶಿವಮೊಗ್ಗ: ನಿತ್ಯ ಬೆಳಗ್ಗೆ ಜನರಿಗೆ ಭವಿಷ್ಯ ಹೇಳುತ್ತಿದ್ದ ವ್ಯಕ್... ಓದನ್ನು ಮುಂದುವರಿಸಿ
ರಬಕವಿ ಬನಹಟ್ಟಿ
ನ್ಯಾಯಾಲಯವೇ ಸಾಕ್ಷಿ: ಜಡ್ಜ್ ಎದುರೇ ವಿಷ ಸೇವಿಸಿದ ವ್ಯಕ್ತಿ
ಬಾಗಲಕೋಟೆ: ಕೋರ್ಟ್ ಆವರಣದಲ್ಲಿ, ನ್ಯಾಯಾಧೀಶರ ಎದುರಲ್ಲೇ ಒಬ್ಬ ವ... ಓದನ್ನು ಮುಂದುವರಿಸಿ
ಮಧುಗಿರಿ
“ಹಣವಿಲ್ಲ… ಮೂಲಂಗಿಯೇ ಲಂಚ!” – ತುಮಕೂರಿನಲ್ಲಿ ಕಂದಾಯ ಅಧಿಕಾರಿಗಳ ವಿರುದ್ಧ ರೈತನ ಆಕ್ರೋಶ
ತುಮಕೂರು: ತುಮಕೂರಿನಲ್ಲಿ ಕೆಲ ಕಂದಾಯ (Revenue) ಅಧಿಕಾರಿಗಳು ಲಂ... ಓದನ್ನು ಮುಂದುವರಿಸಿ
ಗಂಡನ ಅಕ್ರಮ ಸಂಬಂಧ ಪ್ರಕರಣ – ಪತ್ನಿ ಗೃಹ ಬಂಧನದಲ್ಲಿದ್ದು ಪತಿ ಎಸ್ಕೇಪ್
ಹಾಸನ : ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿ ಗಂಡ–ಹೆಂಡತಿಯ ನಡುವೆ... ಓದನ್ನು ಮುಂದುವರಿಸಿ
"ಮೈಸೂರಿನಲ್ಲಿ ಅಂತರ್ಜಾತಿ ಮದುವೆ ವಿರೋಧದ ಸಂಚಲನ : ಕುಟುಂಬ ಬಾಹಿಷ್ಕಾರ, ಎಲೆಕ್ಟ್ರಿಷಿಯನ್ ಮೇಲೆ ಕೇಸ್"
ಮೈಸೂರು : ಇಡೀ ಜಗತ್ತು ಆಧುನಿಕತೆಯತ್ತ ಸಾಗುತ್ತಿದ್ದರೂ, ಭಾರತದಲ್... ಓದನ್ನು ಮುಂದುವರಿಸಿ
"ಮಕ್ಕಳ ಮೊಟ್ಟೆ ಅನುದಾನ ಬಿಡುಗಡೆಗೆ ಲಂಚ: ಅಂಗನವಾಡಿ ಶಿಕ್ಷಕಿ-ಸಿಬ್ಬಂದಿ ಲೋಕಾಯುಕ್ತ ಬಲೆಗೆ"
ಕಲಬುರಗಿ : ಬಡ ಮಕ್ಕಳ ಪೌಷ್ಟಿಕಾಹಾರದ ಮೊಟ್ಟೆಗೆ ಅನುದಾನ ಬಿಡುಗಡೆ... ಓದನ್ನು ಮುಂದುವರಿಸಿ