‘ಕೆಡಿ: ದಿ ಡೆವಿಲ್’ ಹಾಡು ವಿವಾದ: ನೋರಾ ಫತೇಹಿ–ಸಂಜಯ್ ದತ್ ಹಾಡಿಗೆ ದೇಶಾದ್ಯಂತ ಟೀಕೆ, ಕಂಗನಾ ರಣಾವತ್ ಆಗ್ರಹ

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಜೋಗಿ ಪ್ರೇಮ್ ಅವರ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ: ದಿ ಡೆವಿಲ್’ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ದೇಶಾದ್ಯಂತ ಟೀಕೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.

 

ಹಾಡಿನಲ್ಲಿ ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಕಾಣಿಸಿಕೊಂಡಿದ್ದು, ಸಾಹಿತ್ಯ ಮತ್ತು ನೃತ್ಯ ಸಂಯೋಜನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 

ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಹೇಳಿಕೆಯಲ್ಲಿ ಕಂಗನಾ, “ಬಾಲಿವುಡ್ ಅಶ್ಲೀಲತೆ ಮತ್ತು ಗಿಮಿಕ್ ಮೂಲಕ ಅಟೆನ್ಷನ್ ಪಡೆಯುವಲ್ಲಿ ಎಲ್ಲ ಮಿತಿಗಳನ್ನು ಮೀರುತ್ತಿದೆ. ಇಂತಹ ಅಸಭ್ಯ ಪ್ರದರ್ಶನಗಳ ವಿರುದ್ಧ ಸರ್ಕಾರ ಮತ್ತು ಸೆನ್ಸಾರ್ ಮಂಡಳಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

 

ಇದಕ್ಕೂ ಮುನ್ನ, ಗಾಯಕ ಅರ್ಮಾನ್ ಮಲಿಕ್ ಕೂಡ ಹಾಡಿನ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, “ಕಮರ್ಷಿಯಲ್ ಹಾಡುಗಳ ಗುಣಮಟ್ಟ ಇಷ್ಟು ಕುಸಿದಿರುವುದು ಬೇಸರದ ಸಂಗತಿ” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಹಾಡಿನ ಆರಂಭಿಕ ಸಾಲುಗಳು ದ್ವಂದ್ವಾರ್ಥ ಹಾಗೂ ಲೈಂಗಿಕ ಅರ್ಥವನ್ನು ಸೂಚಿಸುತ್ತವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಹಿಂದಿ ಆವೃತ್ತಿ ‘ಸರ್ಕೆ ಚುನಾವಣ ತೇರಿ ಸರ್ಕೆ’ ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ.

 

ಆನಂದ್ ಆಡಿಯೋ ಸಂಸ್ಥೆ ಈ ಹಾಡನ್ನು ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದರೂ, ದಕ್ಷಿಣ ಭಾರತೀಯ ಭಾಷೆಗಳ ಆವೃತ್ತಿಗಳು ಇನ್ನೂ ಲಭ್ಯವಿವೆ. ಅವುಗಳ ವಿರುದ್ಧವೂ ದೂರುಗಳು ದಾಖಲಾಗುತ್ತಿದ್ದು, ಚಿತ್ರತಂಡದ ಪ್ರತಿಕ್ರಿಯೆ ಇನ್ನಷ್ಟೇ ಬಾಕಿಯಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

13 hours ago

   
Image 1
Image 1
ಬೆಂಗಳೂರು ನಗರ

ಕಾರಾಗೃಹದ ಕಠಿಣ ನಿಯಮಾವಳಿ: ದರ್ಶನ್ ಪತ್ನಿ-ಮಗನೊಂದಿಗೆ ಪ್ರತ್ಯೇಕ ಭೇಟಿ ನಿರ್ಬಂಧಿತ

ಬೆಂಗಳೂರು: ನ್ಯಾಯಾಲಯದ ಆದೇಶ ಇದ್ದರೂ, ನಟ ದರ್ಶನ್ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ವಿವಾದ : ‘ಕೆಡಿ – ದ ಡೆವಿಲ್’ ಹಾಡಿನ ಮುಂದಿನ ಕ್ರಮಗಳಿಗೆ ಕಾದುನೋಡು

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಕೆಡಿ – ದ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1

ಧುರಂಧರ್ 2 ಬಿಡುಗಡೆಗೆ ಕ್ಷಣಗಣನೆ: ರಣವೀರ್ ಸಿಂಗ್ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಶುರು

ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಧುರಂಧರ್ 2 ಸಿನಿಮಾದ ಬಿಡ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1

ಎಲ್‌ಪಿಜಿ ಕೊರತೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಅಕ್ಷಯ್ – ಟ್ವಿಂಕಲ್ ಮನೆಯ ವ್ಯವಸ್ಥೆ ‘ವೈರಲ್’

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1

ರಶ್ಮಿಕಾ ಮಂದಣ್ಣ ಮದುವೆಯ ಬಳಿಕ ‘ಮೈಸಾ’ ಚಿತ್ರೀಕರಣ ಆರಂಭ

ಬೆಂಗಳೂರು: ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1

‘ಸರ್ಸೆ ನಿನ್ನ ಸೆರಗ’ ಹಾಡು ವಿವಾದ: ಹಿಂದಿ ಆವೃತ್ತಿ ಯೂಟ್ಯೂಬ್‌ನಿಂದ ತೆಗೆದುಹಾಕಿ, ಚಿತ್ರತಂಡಕ್ಕೆ ನೋಟಿಸ್

ಬೆಂಗಳೂರು: ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಅಭಿನಯದ ‘ಸರ್ಸ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1

ಸಿ.ವಿ. ಷಣ್ಮುಗಂ ನಯನತಾರಾ ಕುರಿತು ವಿವಾದಾತ್ಮಕ ಹೇಳಿಕೆ: ದಕ್ಷಿಣ ಭಾರತದ ಕಲಾವಿದರು ತೀವ್ರ ಆಕ್ರೋಶ

ಬೆಂಗಳೂರು: ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಕುರಿತು ನೀಡಿದ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

“‘ಸರ್ಸೆ ಸೆರಗ ಸರ್ಸೆ’ “‘ಕೆಡಿ’ ಹಾಡು ವಿವಾದ : ನಿರ್ದೇಶಕ ಪ್ರೇಮ್‌ಗೆ ಪತ್ನಿ ರಕ್ಷಿತಾ ಬೆಂಬಲ, Trolls ವಿರುದ್ಧ ಸ್ಪಷ್ಟನೆ”

ಬೆಂಗಳೂರು: ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1

ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1