ಮಂಡ್ಯ ಕೆಮಿಕಲ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: 2 ಕಾರ್ಮಿಕರು ಸ್ಥಳದಲ್ಲೇ ಸಾವು
ಮಂಡ್ಯ: ಬಸರಾಳು ಸಮೀಪ ಕಾರೆಕಟ್ಟೆ ಭಾಗದಲ್ಲಿರುವ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಹಾರ ಮೂಲದ ಕಾರ್ಮಿಕರು ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರಿಸುವ ವೇಳೆ ರಾಸಾಯನಿಕ ಟ್ಯಾಂಕ್ ತೆರವು ಮಾಡುವಾಗ ಈ ದುರ್ಘಟನೆ ನಡೆದಿದೆ. ಸ್ಥಳೀಯರಿಂದ ತಿಳಿದುಬಂದಿರುವಂತೆ, ಕಳೆದ ಒಂದು ತಿಂಗಳಿಂದ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಟ್ಯಾಂಕ್ ತೆರವು ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಗೆ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಗೊಂಡಿದ್ದಾರೆ.
ಈ ಕಾರ್ಖಾನೆಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ರಾಸಾಯನಿಕ ಸೋರಿಕೆ ವೇಳೆ ನೂರಾರು ಎಕರೆ ಬೆಳೆ ಹಾನಿಯಾಗಿದ್ದು, ಎರಡು ಪ್ರಾಣಿಗಳ ಸಾವಿನಲ್ಲೂ ಪ್ರಕರಣ ದಾಖಲಾಗಿತ್ತು. ಸ್ಥಳೀಯರು ನಿರ್ಲಕ್ಷ್ಯದಿಂದಲೇ ಮತ್ತೆ ದುರಂತ ಸಂಭವಿಸಿತೆಂದು ಆರೋಪಿಸಿದ್ದಾರೆ. ಈ ಘಟನೆ ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೇ ಸಮಯದಲ್ಲಿ, ಬೆಂಗಳೂರು ನಗರದಲ್ಲಿಯೂ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಯಲಹಂಕದ ಚೌಡೇಶ್ವರಿ ಲೇಔಟ್‌ನಲ್ಲಿ ಮನೆ ಸ್ಫೋಟ ಸಂಭವಿಸಿದೆ. ನವ ದಂಪತಿ ಬಾಗೇಪಳ್ಳಿ ಮೂಲದ ಕೃಷ್ಣಮ್ಮ ಮತ್ತು ರಾಜು ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ಬಾಲಕನ ಮೇಲೆ ಕ್ರೂರ ಹಲ್ಲೆ
ಮೈಸೂರು : ಮೈಸೂರಿನ ಎನ್ ಆರ್ ಮೊಹಲ್ಲಾದ ಮಸೀದಿಯಲ್ಲಿ ಫೆಬ್ರವರಿ 1... ಓದನ್ನು ಮುಂದುವರಿಸಿ
ಹೊಳಲ್ಕೆರೆ
ಹೊಳಲ್ಕೆರೆ ದುರಂತ: ಬಟ್ಟೆ ತೊಳೆಯಲು ತೆರಳಿ ಜೀವ ಕಳೆದುಕೊಂಡ ಇಬ್ಬರು ಬಾಲಕರು
ಹೊಳಲ್ಕೆರೆ : ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಾಲ್ಕ... ಓದನ್ನು ಮುಂದುವರಿಸಿ
400 ಕೋಟಿ ದರೋಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರುದಾರ ಎಸ್‌ಐಟಿ ವಿರುದ್ಧದ ದೂರು ಸಲ್ಲಿಸಿದ ನಂತರ ಬೆಳಗಾವಿ ಎಸ್‌ಪಿಗೆ ಪತ್ರ
ಬೆಳಗಾವಿ: ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ 400 ಕ... ಓದನ್ನು ಮುಂದುವರಿಸಿ
ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗ ವಿದ್ಯಾರ್ಥಿ ಮೃತದೇಹವಾಗಿ ಪತ್ತೆ; ಪೋಷಕರ ತುರ್ತು ವೀಸಾ ಅರ್ಜಿ
ಕ್ಯಾಲಿಫೋರ್ನಿಯಾ / ಬೆಂಗಳೂರು, ಫೆಬ್ರವರಿ 15: ಉನ್ನತ ಶಿಕ್ಷಣಕ್ಕ... ಓದನ್ನು ಮುಂದುವರಿಸಿ
ಯಲಹಂಕ
ಯಲಹಂಕದಲ್ಲಿ ಗ್ಯಾಸ್ ದುರಂತ: ಸಿಲಿಂಡರ್ ಸ್ಫೋಟಿಸಿ ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರು, ಫೆಬ್ರವರಿ 15: ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊ... ಓದನ್ನು ಮುಂದುವರಿಸಿ
ವೇಗದ ಅಬ್ಬರಕ್ಕೆ ಐವರ ಬಲಿ: ನೆಲಮಂಗಲ ಸಮೀಪ ಕಾರು–ಬಸ್ ಭೀಕರ ಢಿಕ್ಕಿ
ಬೆಂಗಳೂರು, ಫೆಬ್ರವರಿ 15: ಇತ್ತೀಚಿನ ಸರಣಿ ರಸ್ತೆ ಅಪಘಾತಗಳಿಂದ ಬ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಳ್ಳತನ!
ದೊಡ್ಡಬಳ್ಳಾಪುರ: ಬೆಂಗಳೂರಿನ ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪು... ಓದನ್ನು ಮುಂದುವರಿಸಿ
ಸ್ಪಾ ಅಡ್ಡೆ ಮೇಲೆ ಭರ್ಜರಿ ಪೊಲೀಸ್ ದಾಳಿ; ಐವರು ಯುವತಿಯರ ರಕ್ಷಣೆ!
ಬೀದರ್: ಬೀದರ್ ನಗರದ ಶಿವನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ... ಓದನ್ನು ಮುಂದುವರಿಸಿ
30 ಲಕ್ಷ ಚಿನ್ನಾಭರಣ ಧರಿಸಿದ ಮಿಸ್ ಪ್ರಿಯಾಂಕ, ಕೊಲೆ ಸಂಶಯದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಹಾಸನ: ಚಿನ್ನಾಭರಣ ಧರಿಸಿ ಮದುವೆಗೆ ಬಂದ ಮಹಿಳೆಯ ನಾಪತ್ತೆ ಪ್ರಕರಣ ಭಾರೀ ರಹಸ್ಯ ತಿರುವ... ಓದನ್ನು ಮುಂದುವರಿಸಿ
ನೆಲಮಂಗಲ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಐವರು ಯುವಕರ ದುರ್ಮರಣ
ಬೆಂಗಳೂರು : ಇತ್ತೀಚಿನ ಸರಣಿ ಅಪಘಾತಗಳಿಂದ ಬೆಚ್ಚಿಬಿದ್ದಿರುವ ನಗರ... ಓದನ್ನು ಮುಂದುವರಿಸಿ