ತೋಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಭಸ್ಮ
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ 1500ಕ್ಕೂ ಹೆಚ್ಚು ಅಡಿಕೆ ಗಿಡಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಅಡಿಕೆ ಗಿಡಗಳ ಜೊತೆಗೆ ಎರಡು ಲೋಡ್ ಮೆಕ್ಕೆಜೋಳದ ತೆನೆ ಕೂಡ ಬೆಂಕಿಗೆ ಆಹುತಿಯಾಗಿವೆ. ಈ ತೋಟ ಓಬಳೇಶ್ ಎಂಬ ರೈತನಿಗೆ ಸೇರಿದ್ದು, ಕಿಡಿಗೇಡಿಗಳ ಕೃತ್ಯದಿಂದ ಅವರಿಗೆ ಭಾರೀ ನಷ್ಟ ಉಂಟಾಗಿದೆ.
ಸಾಲ ಮಾಡಿ ಅಡಿಕೆ ಗಿಡಗಳನ್ನು ನೆಟ್ಟಿದ್ದ ರೈತನಿಗೆ ಈ ಘಟನೆ ಬರ ಸಿಡಿಲು ಬಡಿದಂತಾಗಿದೆ. ಹಲವು ವರ್ಷಗಳ ಪರಿಶ್ರಮದಿಂದ ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾಗಿರುವುದು ರೈತನನ್ನು ಸಂಕಷ್ಟಕ್ಕೆ ತಳ್ಳಿದೆ.
ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಗಳೂರು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹೈದರಾಬಾದ್ ಉತ್ತಮ, ಬೆಂಗಳೂರು ಟ್ರಾಫಿಕ್ ಜಾಮ್ ಹಾಸ್ಯ – CM ರೇವಂತ್ ರೆಡ್ಡಿ
ಬೆಂಗಳೂರು: ಐಟಿ ಸಿಟಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಈಗ ರಾಜ... ಓದನ್ನು ಮುಂದುವರಿಸಿ
ಕರ್ನಾಟಕ ಪರ್ವತಾರೋಹಣ ತಂಡ ಮುಂಟ್ ಎವೆರೆಸ್ಟ್ ಏರಲು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ
ಬೆಂಗಳೂರು: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ Mount Everest ಏರುವ... ಓದನ್ನು ಮುಂದುವರಿಸಿ
ಮಡಿಕೇರಿ
ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಲಜಾಕ್ಷಿ ಸಾವು
ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ವಾಲ್ನೂರಿನಲ್ಲಿ... ಓದನ್ನು ಮುಂದುವರಿಸಿ
ದೇವಾಲಯ ತಲುಪಿದ ಕಾಪು ರಾಜಕೀಯ ಕಿಚ್ಚು: ಸೊರಕೆ ಆರೋಪಗಳ ಹಿಂದೆ ಗುರ್ಮೆ ಸುರೇಶ್ ಶೆಟ್ಟಿ ದೇವರ ಮೊರೆ
ಉಡುಪಿ: ಕಂಬಳ ವಿಚಾರದಿಂದ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ... ಓದನ್ನು ಮುಂದುವರಿಸಿ
ಬೀದರ್‌ನಲ್ಲಿ ಟ್ರ್ಯಾಕ್ಟರ್ ಪಲ್ಟಿ: 13 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಬೀದರ್: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಕ್ರಾಸ್ ಬಳಿ... ಓದನ್ನು ಮುಂದುವರಿಸಿ
ಕುಮಟಾ
ಗೋಕರ್ಣ ಸಮೀಪ 44 ಅನಧಿಕೃತ ರೆಸಾರ್ಟ್‌ಗಳಿಗೆ ತೆರವು ಆದೇಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ... ಓದನ್ನು ಮುಂದುವರಿಸಿ
DCM ಪರಾಗಿ ನಾವು ಇದ್ದೇವೆ, ರಾಜ್ಯದ ಕಾರ್ಯ ಮುಂದುವರಿಯಲಿದೆ – ಸತೀಶ್ ಜಾರಕಿಹೊಳಿ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭಾನುವಾರ ಖಾಸಗ... ಓದನ್ನು ಮುಂದುವರಿಸಿ
ಆಂಬುಲೆನ್ಸ್‌ನಲ್ಲಿ ಸಾರ್ವಜನಿಕರ ಸಾಗಾಟ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋ
ಗದಗ: ರೋಗಿಗಳ ತುರ್ತು ಚಿಕಿತ್ಸೆಗೆ ಬಳಸಬೇಕಾದ ಆಂಬುಲೆನ್ಸ್ ವಾಹನವ... ಓದನ್ನು ಮುಂದುವರಿಸಿ
ರಥೋತ್ಸವದಲ್ಲಿ ಭೀಕರ ದುರ್ಘಟನೆ: ರಥದ ಚಕ್ರಕ್ಕೆ ಸಿಲುಕಿ ಮಹಿಳೆಯ ಎರಡು ಕಾಲುಗಳು ಕಟ್
ಕಲಬುರಗಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾ... ಓದನ್ನು ಮುಂದುವರಿಸಿ
ಭಕ್ತರ ಭವ್ಯ ಸಮ್ಮೇಳನ: ಕಲಬುರಗಿಯಲ್ಲಿ 204ನೇ ರಥೋತ್ಸವ ಸಂಭ್ರಮ
ಕಲಬುರಗಿ: ಕಲಬುರಗಿಯಲ್ಲಿ ಇಂದು ಶರಣಬಸವೇಶ್ವರರ 204ನೇ ರಥೋತ್ಸವ ಭ... ಓದನ್ನು ಮುಂದುವರಿಸಿ