9 ಲಕ್ಷದ ಚಿನ್ನದ ಸರ ವಿವಾದ: ಭಾನುಕ ರಾಜಪಕ್ಷ–ಹರ್ಷಿ ರಸಂಗ ಪ್ರಕರಣಕ್ಕೆ ಟ್ವಿಸ್ಟ್!

ಕೊಲಂಬೊ: ಶ್ರೀಲಂಕಾದ ಕ್ರಿಕೆಟ್ ಮತ್ತು ಚಿತ್ರರಂಗವನ್ನು ಕದಡಿದ ಚಿನ್ನದ ಸರ ವಿವಾದ ಇದೀಗ ಪೊಲೀಸ್ ತನಿಖೆಗೆ ತಲುಪಿದ್ದು, ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಶ್ರೀಲಂಕಾ ಕ್ರಿಕೆಟಿಗ ಭಾನುಕ ರಾಜಪಕ್ಷ ನೀಡಿದ ದೂರಿನ ಮೇರೆಗೆ, ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಪ್ರಕರಣದಲ್ಲಿ ನಟಿ ಹರ್ಷಿ ರಸಂಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 

ಭಾನುಕ ರಾಜಪಕ್ಷ ಅವರ ಪ್ರಕಾರ, ತಮ್ಮ ಚಿನ್ನದ ಸರವನ್ನು ತಾತ್ಕಾಲಿಕವಾಗಿ ಬಳಸಲು ನೀಡಿದ್ದರೂ, ಅನುಮತಿ ಪಡೆಯದೆ ಅದನ್ನು ಅಡವಿಟ್ಟಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಈ ದೂರಿನ ಆಧಾರದ ಮೇಲೆ ಥಲಂಗಗಮ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಕಡುವೆಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ, ಹರ್ಷಿ ರಸಂಗ ಸರವನ್ನು ತಿಳಿಸದೆ ಅಡವಿಟ್ಟಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ, ವಕೀಲರ ಮೂಲಕ ಸರವನ್ನು ಮರಳಿ ನೀಡುವುದಾಗಿ ಭರವಸೆ ನೀಡಿದ್ದು, ನ್ಯಾಯಾಲಯವು 5 ಲಕ್ಷ ರೂಪಾಯಿಗಳ ಎರಡು ಶ್ಯೂರಿಟಿಗಳ ಮೇಲೆ ಜಾಮೀನು ಮಂಜೂರು ಮಾಡಿದೆ.

 

ಆದರೆ, ಜಾಮೀನಿನ ಬಳಿಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಹರ್ಷಿ ರಸಂಗ “ನಾನು ಮತ್ತು ಭಾನುಕ ರಾಜಪಕ್ಷ ಪ್ರೀತಿಸುತ್ತಿದ್ದೆವು. ಆ ಸಂಬಂಧದ ನೆನಪಿಗಾಗಿ ಈ ಚಿನ್ನದ ಸರವನ್ನು ಆತನೇ ಉಡುಗೊರೆಯಾಗಿ ನೀಡಿದ್ದ” ಎಂದು ಹೇಳಿದ್ದಾರೆ. ಈ ಹೇಳಿಕೆ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸಾರ್ವಜನಿಕರ ಕುತೂಹಲವನ್ನು ಉಂಟುಮಾಡಿದೆ. ಈ ಕುರಿತು ಭಾನುಕ ರಾಜಪಕ್ಷ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

 

ಏಪ್ರಿಲ್ 22ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಚಿನ್ನದ ಸರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಕ್ರಿಕೆಟ್ ಮೈದಾನದಲ್ಲಿ ಸ್ಫೋಟಕ ಬ್ಯಾಟರ್‌ ಆಗಿ ಗುರುತಿಸಿಕೊಂಡಿರುವ ಭಾನುಕ ರಾಜಪಕ್ಷ, ಐಪಿಎಲ್‌ನಲ್ಲಿ Punjab Kings ಪರ ಆಡಿರುವ ಅನುಭವ ಹೊಂದಿದ್ದಾರೆ. ಇದೀಗ ಮೈದಾನದ ಹೊರಗಿನ ಈ ವಿವಾದದಿಂದ ಮತ್ತೆ ಸುದ್ದಿಯಾಗಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

₹163 ಕೋಟಿಗೆ ರವಿವರ್ಮ ಚಿತ್ರ ಮಾರಾಟ: ಭಾರತೀಯ ಕಲಾ ಲೋಕದಲ್ಲಿ ದಾಖಲೆ

ನವದೆಹಲಿ: ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ಸಾಧನೆ ಒಂದು ದಾಖಲಾಗ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಚಿತ್ರರಂಗಕ್ಕೆ ಶಾಕ್? ಸಿಂಗಲ್ ಸ್ಕ್ರೀನ್‌ಗಳಲ್ಲಿ ಲಾಭ ಹಂಚಿಕೆ ನಿಯಮ ಜಾರಿ

ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆಯೊಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಅಶ್ಲೀಲ ಹಾಡಿಗೆ ಕೋರ್ಟ್ ಕಟ್ಟುನಿಟ್ಟಿನ ಕ್ರಮ – ‘ವಾಲ್ಯೂಮ್ 1’ ತಕ್ಷಣ ತೆಗೆದುಹಾಕಲು ಆದೇಶ

ದೆಹಲಿ: ಖ್ಯಾತ ಗಾಯಕರು ಹನಿ ಸಿಂಗ್ ಮತ್ತು ಬಾದ್‌ಶಾ ಅವರು ಹಾಡಿದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಏಪ್ರಿಲ್ 10ಕ್ಕೆ ‘ಪೀಟರ್’ ರಿಲೀಸ್: ಕೆವಿಎನ್ ಪ್ರೊಡಕ್ಷನ್ಸ್‌ನ ಮತ್ತೊಂದು ಭರವಸೆಯ ಸಿನಿಮಾ!

ಬೆಂಗಳೂರು: ‘ಲವ್ ಮಾಕ್ಟೇಲ್ 3’ ಯಶಸ್ಸಿನ ಬಳಿಕ ಕೆವಿಎನ್ ಪ್ರೊಡಕ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ನಾಮಪತ್ರ ಸಲ್ಲಿಸಿದ ವಿಜಯ್: ‘ಜನ ನಾಯಕನ್’ ವಿಳಂಬದ ಹಿಂದೆ ರಾಜಕೀಯ ಷಡ್ಯಂತ್ರ’ ಆರೋಪ!

ತಿರುಚಿ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ನಟಿಯರಿಗೆ ಒಳ ಉಡುಪು ಗಿಫ್ಟ್ ಕೊಟ್ಟು ರೂಮ್ ಬಗ್ಗೆ ಮಾತು! ಖ್ಯಾತ ನಟನ ಮುಖವಾಡ ಬಯಲು!

ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಮತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ತಾಯಿಯ ಅಂತಿಮ ಇಚ್ಛೆಗೆ ಗೌರವ: ಟೀಕೆಗೆ ಪ್ರಕಾಶ್ ರಾಜ್ ಖಡಕ್ ಉತ್ತರ!

ಬೆಂಗಳೂರು: ಕನ್ನಡ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಸ್ಟಾರ್ ನಟರಿಗೆ ಡ್ರಗ್ ಟೆಸ್ಟ್ ವಿವಾದ: ರಾಜಕಾರಣಿಗಳಿಗೆ ಕೂಡ ಅನ್ವಯಿಸಲಿ ಎಂದ ಸಿನಿರಂಗ!

ಹೈದರಾಬಾದ್: ಚಿತ್ರರಂಗ ಮತ್ತು ಡ್ರಗ್ಸ್ ನಡುವಿನ ಸಂಬಂಧದ ಕುರಿತ ಚ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಹನುಮ ಜಯಂತಿಗೆ ‘ರಾಮಾಯಣ’ ಟೀಸರ್ ರಿಲೀಸ್: ದೃಶ್ಯ ವೈಭವಕ್ಕೆ ಸಿನಿಪ್ರಿಯರು ಫಿದಾ!

 ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಮಹಾ ಬಜೆಟ್ ಸಿನಿಮಾ ‘ರಾಮಾಯಣ’ ಟೀಸರ್ ಇಂದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಅಶ್ಲೀಲ ಪ್ರಶ್ನೆಗೆ ಅದಾ ಶರ್ಮಾ ಖಡಕ್ ಉತ್ತರ: “ಸೈಜ್ 9… ಚಪ್ಪಲಿ!”

ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಅಶ್ಲೀಲ ಪ್ರಶ್ನೆಗೆ ಖಡಕ್ ಉತ್ತರ ನೀಡ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1