ಚಿತ್ರರಂಗಕ್ಕೆ ಶಾಕ್? ಸಿಂಗಲ್ ಸ್ಕ್ರೀನ್‌ಗಳಲ್ಲಿ ಲಾಭ ಹಂಚಿಕೆ ನಿಯಮ ಜಾರಿ
ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆಯೊಂದು ನಡೆಯಲಿರುವ ಸೂಚನೆ ಸಿಕ್ಕಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಹಲವು ವರ್ಷಗಳಿಂದ ಬಾಡಿಗೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿತ್ರಮಂದಿರಗಳು ಇದೀಗ ಲಾಭ ಹಂಚಿಕೆ (Revenue Sharing) ಮಾದರಿಯತ್ತ ತಿರುಗುತ್ತಿವೆ.
ಇದುವರೆಗೆ ನಿರ್ಮಾಪಕರು ಅಥವಾ ವಿತರಕರು ನಿಗದಿತ ಬಾಡಿಗೆ ನೀಡಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದರು. ಸಿನಿಮಾ ಹಿಟ್ ಆಗಲಿ, ಫ್ಲಾಪ್ ಆಗಲಿ—ಚಿತ್ರಮಂದಿರಗಳಿಗೆ ಆದಾಯ ಖಚಿತವಾಗಿತ್ತು. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಜಾರಿಯಲ್ಲಿರುವ ಲಾಭ ಹಂಚಿಕೆ ಮಾದರಿಯನ್ನು ಸಿಂಗಲ್ ಸ್ಕ್ರೀನ್ ಮಾಲೀಕರು ಕೂಡ ಜಾರಿಗೆ ತರಬೇಕು ಎಂಬ ಬೇಡಿಕೆ ಇತ್ತು.
ಈ ಹಿನ್ನೆಲೆಯಲ್ಲಿ ತೆಲಂಗಾಣದ ಪ್ರದರ್ಶಕರು ಏಪ್ರಿಲ್ 3ರಿಂದ ಹೊಸ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದ್ದಾರೆ. ಹೊಸ ಮಾದರಿಯ ಪ್ರಕಾರ, ಮೊದಲ ವಾರದಲ್ಲಿ ವಿತರಕರಿಗೆ 60% ಆದಾಯ, ಎರಡನೇ ವಾರ 50% ಹಾಗೂ ಮೂರನೇ ವಾರ 40% ಪಾಲು ಸಿಗಲಿದೆ. ಇದಲ್ಲದೆ, ದೊಡ್ಡ ಸಿನಿಮಾಗಳಿಗೆ ಹೆಚ್ಚುವರಿ 2.5% ಪಾಲು ನೀಡಲಾಗುತ್ತದೆ. ಆದರೆ ಇದಕ್ಕಾಗಿ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಸೂಚಿಸಲಾಗಿದೆ.
ಈ ಬದಲಾವಣೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿಶೇಷವಾಗಿ ಸ್ಟಾರ್ ನಟರ ದೊಡ್ಡ ಬಜೆಟ್ ಸಿನಿಮಾಗಳಿಗೆ ಇದರಿಂದ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದಲೇ ಹೆಚ್ಚಿನ ಆದಾಯ ಗಳಿಸುತ್ತಿದ್ದ ಸಿನಿಮಾಗಳಿಗೆ 40ರಿಂದ 50 ಶೇಕಡಾ ವರೆಗೆ ಆದಾಯ ಕುಸಿತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೀಗ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ರಾಮ್ ಚರಣ್ ಅಭಿನಯದ ‘ಪೆದ್ದಿ’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ಮೇಲೆ ಈ ಹೊಸ ನಿಯಮದ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆ, ತೆಲಂಗಾಣದಲ್ಲಿ ಜಾರಿಯಾಗುತ್ತಿರುವ ಈ ಹೊಸ ಮಾದರಿ ದಕ್ಷಿಣ ಭಾರತದ ಚಿತ್ರೋದ್ಯಮದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
₹163 ಕೋಟಿಗೆ ರವಿವರ್ಮ ಚಿತ್ರ ಮಾರಾಟ: ಭಾರತೀಯ ಕಲಾ ಲೋಕದಲ್ಲಿ ದಾಖಲೆ
ನವದೆಹಲಿ: ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ಸಾಧನೆ ಒಂದು ದಾಖಲಾಗ... ಓದನ್ನು ಮುಂದುವರಿಸಿ
ಅಶ್ಲೀಲ ಹಾಡಿಗೆ ಕೋರ್ಟ್ ಕಟ್ಟುನಿಟ್ಟಿನ ಕ್ರಮ – ‘ವಾಲ್ಯೂಮ್ 1’ ತಕ್ಷಣ ತೆಗೆದುಹಾಕಲು ಆದೇಶ
ದೆಹಲಿ: ಖ್ಯಾತ ಗಾಯಕರು ಹನಿ ಸಿಂಗ್ ಮತ್ತು ಬಾದ್‌ಶಾ ಅವರು ಹಾಡಿದ... ಓದನ್ನು ಮುಂದುವರಿಸಿ
ಏಪ್ರಿಲ್ 10ಕ್ಕೆ ‘ಪೀಟರ್’ ರಿಲೀಸ್: ಕೆವಿಎನ್ ಪ್ರೊಡಕ್ಷನ್ಸ್‌ನ ಮತ್ತೊಂದು ಭರವಸೆಯ ಸಿನಿಮಾ!
ಬೆಂಗಳೂರು: ‘ಲವ್ ಮಾಕ್ಟೇಲ್ 3’ ಯಶಸ್ಸಿನ ಬಳಿಕ ಕೆವಿಎನ್ ಪ್ರೊಡಕ್... ಓದನ್ನು ಮುಂದುವರಿಸಿ
ನಾಮಪತ್ರ ಸಲ್ಲಿಸಿದ ವಿಜಯ್: ‘ಜನ ನಾಯಕನ್’ ವಿಳಂಬದ ಹಿಂದೆ ರಾಜಕೀಯ ಷಡ್ಯಂತ್ರ’ ಆರೋಪ!
ತಿರುಚಿ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ... ಓದನ್ನು ಮುಂದುವರಿಸಿ
ನಟಿಯರಿಗೆ ಒಳ ಉಡುಪು ಗಿಫ್ಟ್ ಕೊಟ್ಟು ರೂಮ್ ಬಗ್ಗೆ ಮಾತು! ಖ್ಯಾತ ನಟನ ಮುಖವಾಡ ಬಯಲು!
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಮತ... ಓದನ್ನು ಮುಂದುವರಿಸಿ
ತಾಯಿಯ ಅಂತಿಮ ಇಚ್ಛೆಗೆ ಗೌರವ: ಟೀಕೆಗೆ ಪ್ರಕಾಶ್ ರಾಜ್ ಖಡಕ್ ಉತ್ತರ!
ಬೆಂಗಳೂರು: ಕನ್ನಡ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್... ಓದನ್ನು ಮುಂದುವರಿಸಿ
9 ಲಕ್ಷದ ಚಿನ್ನದ ಸರ ವಿವಾದ: ಭಾನುಕ ರಾಜಪಕ್ಷ–ಹರ್ಷಿ ರಸಂಗ ಪ್ರಕರಣಕ್ಕೆ ಟ್ವಿಸ್ಟ್!
ಕೊಲಂಬೊ: ಶ್ರೀಲಂಕಾದ ಕ್ರಿಕೆಟ್ ಮತ್ತು ಚಿತ್ರರಂಗವನ್ನು ಕದಡಿದ ಚಿ... ಓದನ್ನು ಮುಂದುವರಿಸಿ
ಸ್ಟಾರ್ ನಟರಿಗೆ ಡ್ರಗ್ ಟೆಸ್ಟ್ ವಿವಾದ: ರಾಜಕಾರಣಿಗಳಿಗೆ ಕೂಡ ಅನ್ವಯಿಸಲಿ ಎಂದ ಸಿನಿರಂಗ!
ಹೈದರಾಬಾದ್: ಚಿತ್ರರಂಗ ಮತ್ತು ಡ್ರಗ್ಸ್ ನಡುವಿನ ಸಂಬಂಧದ ಕುರಿತ ಚ... ಓದನ್ನು ಮುಂದುವರಿಸಿ
ಹನುಮ ಜಯಂತಿಗೆ ‘ರಾಮಾಯಣ’ ಟೀಸರ್ ರಿಲೀಸ್: ದೃಶ್ಯ ವೈಭವಕ್ಕೆ ಸಿನಿಪ್ರಿಯರು ಫಿದಾ!
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಮಹಾ ಬಜೆಟ್ ಸಿನಿಮಾ ‘ರಾಮಾಯಣ’ ಟೀಸರ್ ಇಂದ... ಓದನ್ನು ಮುಂದುವರಿಸಿ
ಅಶ್ಲೀಲ ಪ್ರಶ್ನೆಗೆ ಅದಾ ಶರ್ಮಾ ಖಡಕ್ ಉತ್ತರ: “ಸೈಜ್ 9… ಚಪ್ಪಲಿ!”
ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಅಶ್ಲೀಲ ಪ್ರಶ್ನೆಗೆ ಖಡಕ್ ಉತ್ತರ ನೀಡ... ಓದನ್ನು ಮುಂದುವರಿಸಿ