₹163 ಕೋಟಿಗೆ ರವಿವರ್ಮ ಚಿತ್ರ ಮಾರಾಟ: ಭಾರತೀಯ ಕಲಾ ಲೋಕದಲ್ಲಿ ದಾಖಲೆ
ನವದೆಹಲಿ: ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ಸಾಧನೆ ಒಂದು ದಾಖಲಾಗಿದೆ. ಖ್ಯಾತ ಚಿತ್ರಕಾರ ರಾಜಾ ರವಿವರ್ಮ ಅವರ ಪ್ರಸಿದ್ಧ ‘ಯಶೋದಾ ಮತ್ತು ಕೃಷ್ಣ’ ಚಿತ್ರಕಲೆ ಭಾರೀ ₹163 ಕೋಟಿ ರೂ.ಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಈ ಅಪರೂಪದ ಚಿತ್ರವನ್ನು ಖ್ಯಾತ ಉದ್ಯಮಿ ಸೈರಸ್ ಪೂನಾವಾಲಾ ಖರೀದಿಸಿದ್ದು, ಆನ್‌ಲೈನ್‌ನಲ್ಲಿ ನಡೆದ Saffronart ಹರಾಜಿನಲ್ಲಿ ಈ ವ್ಯವಹಾರ ನಡೆದಿದೆ. ಭಾರತೀಯ ಕಲಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದಕ್ಕೂ ಮೊದಲು, ಎಂ.ಎಫ್. ಹುಸೇನ್ ಅವರ ‘Untitled’ ಚಿತ್ರವನ್ನು ಕಿರಣ್ ನಾಡರ್ ₹118 ಕೋಟಿಗೆ ಖರೀದಿಸಿದ್ದರು. ಇದೀಗ ಆ ದಾಖಲೆಯನ್ನು ರವಿವರ್ಮ ಅವರ ಚಿತ್ರ ಮೀರಿಸಿದೆ. ಚಿತ್ರವನ್ನು ಖರೀದಿಸಿದ ಬಳಿಕ ಸೈರಸ್ ಪೂನಾವಾಲಾ ಪ್ರತಿಕ್ರಿಯಿಸಿ, “ಇದು ಕೇವಲ ಚಿತ್ರವಲ್ಲ, ರಾಷ್ಟ್ರೀಯ ಸಂಪತ್ತು. ಇದನ್ನು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುವೆ” ಎಂದು ತಿಳಿಸಿದ್ದಾರೆ.
‘ಯಶೋದಾ ಮತ್ತು ಕೃಷ್ಣ’ ಚಿತ್ರವನ್ನು 1890ರ ದಶಕದಲ್ಲಿ ರಚಿಸಲಾಗಿದ್ದು, ಬಾಲ ಕೃಷ್ಣ ಮತ್ತು ತಾಯಿ ಯಶೋದಾಳ ನಡುವಿನ ಮಮತೆಯನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸುತ್ತದೆ. ಈ ಚಿತ್ರಕ್ಕೆ ಆರಂಭದಲ್ಲಿ ₹80ರಿಂದ ₹120 ಕೋಟಿ ಮೌಲ್ಯ ನಿರೀಕ್ಷಿಸಲಾಗಿತ್ತು. 1848ರಲ್ಲಿ ಜನಿಸಿದ ರಾಜಾ ರವಿವರ್ಮ, ಯುರೋಪಿಯನ್ ತೈಲಚಿತ್ರ ಶೈಲಿಯನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸಂಯೋಜಿಸಿ, ಕಲೆಗೆ ಹೊಸ ಆಯಾಮ ನೀಡಿದ ಮಹಾನ್ ಕಲಾವಿದರಾಗಿದ್ದಾರೆ. ಈ ಹರಾಜು ಭಾರತೀಯ ಕಲೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗುರುತು ತಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚಿತ್ರರಂಗಕ್ಕೆ ಶಾಕ್? ಸಿಂಗಲ್ ಸ್ಕ್ರೀನ್‌ಗಳಲ್ಲಿ ಲಾಭ ಹಂಚಿಕೆ ನಿಯಮ ಜಾರಿ
ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆಯೊಂ... ಓದನ್ನು ಮುಂದುವರಿಸಿ
ಅಶ್ಲೀಲ ಹಾಡಿಗೆ ಕೋರ್ಟ್ ಕಟ್ಟುನಿಟ್ಟಿನ ಕ್ರಮ – ‘ವಾಲ್ಯೂಮ್ 1’ ತಕ್ಷಣ ತೆಗೆದುಹಾಕಲು ಆದೇಶ
ದೆಹಲಿ: ಖ್ಯಾತ ಗಾಯಕರು ಹನಿ ಸಿಂಗ್ ಮತ್ತು ಬಾದ್‌ಶಾ ಅವರು ಹಾಡಿದ... ಓದನ್ನು ಮುಂದುವರಿಸಿ
ಏಪ್ರಿಲ್ 10ಕ್ಕೆ ‘ಪೀಟರ್’ ರಿಲೀಸ್: ಕೆವಿಎನ್ ಪ್ರೊಡಕ್ಷನ್ಸ್‌ನ ಮತ್ತೊಂದು ಭರವಸೆಯ ಸಿನಿಮಾ!
ಬೆಂಗಳೂರು: ‘ಲವ್ ಮಾಕ್ಟೇಲ್ 3’ ಯಶಸ್ಸಿನ ಬಳಿಕ ಕೆವಿಎನ್ ಪ್ರೊಡಕ್... ಓದನ್ನು ಮುಂದುವರಿಸಿ
ನಾಮಪತ್ರ ಸಲ್ಲಿಸಿದ ವಿಜಯ್: ‘ಜನ ನಾಯಕನ್’ ವಿಳಂಬದ ಹಿಂದೆ ರಾಜಕೀಯ ಷಡ್ಯಂತ್ರ’ ಆರೋಪ!
ತಿರುಚಿ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ... ಓದನ್ನು ಮುಂದುವರಿಸಿ
ನಟಿಯರಿಗೆ ಒಳ ಉಡುಪು ಗಿಫ್ಟ್ ಕೊಟ್ಟು ರೂಮ್ ಬಗ್ಗೆ ಮಾತು! ಖ್ಯಾತ ನಟನ ಮುಖವಾಡ ಬಯಲು!
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಮತ... ಓದನ್ನು ಮುಂದುವರಿಸಿ
ತಾಯಿಯ ಅಂತಿಮ ಇಚ್ಛೆಗೆ ಗೌರವ: ಟೀಕೆಗೆ ಪ್ರಕಾಶ್ ರಾಜ್ ಖಡಕ್ ಉತ್ತರ!
ಬೆಂಗಳೂರು: ಕನ್ನಡ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್... ಓದನ್ನು ಮುಂದುವರಿಸಿ
9 ಲಕ್ಷದ ಚಿನ್ನದ ಸರ ವಿವಾದ: ಭಾನುಕ ರಾಜಪಕ್ಷ–ಹರ್ಷಿ ರಸಂಗ ಪ್ರಕರಣಕ್ಕೆ ಟ್ವಿಸ್ಟ್!
ಕೊಲಂಬೊ: ಶ್ರೀಲಂಕಾದ ಕ್ರಿಕೆಟ್ ಮತ್ತು ಚಿತ್ರರಂಗವನ್ನು ಕದಡಿದ ಚಿ... ಓದನ್ನು ಮುಂದುವರಿಸಿ
ಸ್ಟಾರ್ ನಟರಿಗೆ ಡ್ರಗ್ ಟೆಸ್ಟ್ ವಿವಾದ: ರಾಜಕಾರಣಿಗಳಿಗೆ ಕೂಡ ಅನ್ವಯಿಸಲಿ ಎಂದ ಸಿನಿರಂಗ!
ಹೈದರಾಬಾದ್: ಚಿತ್ರರಂಗ ಮತ್ತು ಡ್ರಗ್ಸ್ ನಡುವಿನ ಸಂಬಂಧದ ಕುರಿತ ಚ... ಓದನ್ನು ಮುಂದುವರಿಸಿ
ಹನುಮ ಜಯಂತಿಗೆ ‘ರಾಮಾಯಣ’ ಟೀಸರ್ ರಿಲೀಸ್: ದೃಶ್ಯ ವೈಭವಕ್ಕೆ ಸಿನಿಪ್ರಿಯರು ಫಿದಾ!
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಮಹಾ ಬಜೆಟ್ ಸಿನಿಮಾ ‘ರಾಮಾಯಣ’ ಟೀಸರ್ ಇಂದ... ಓದನ್ನು ಮುಂದುವರಿಸಿ
ಅಶ್ಲೀಲ ಪ್ರಶ್ನೆಗೆ ಅದಾ ಶರ್ಮಾ ಖಡಕ್ ಉತ್ತರ: “ಸೈಜ್ 9… ಚಪ್ಪಲಿ!”
ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಅಶ್ಲೀಲ ಪ್ರಶ್ನೆಗೆ ಖಡಕ್ ಉತ್ತರ ನೀಡ... ಓದನ್ನು ಮುಂದುವರಿಸಿ