ಏಪ್ರಿಲ್ 10ಕ್ಕೆ ‘ಪೀಟರ್’ ರಿಲೀಸ್: ಕೆವಿಎನ್ ಪ್ರೊಡಕ್ಷನ್ಸ್‌ನ ಮತ್ತೊಂದು ಭರವಸೆಯ ಸಿನಿಮಾ!
ಬೆಂಗಳೂರು: ‘ಲವ್ ಮಾಕ್ಟೇಲ್ 3’ ಯಶಸ್ಸಿನ ಬಳಿಕ ಕೆವಿಎನ್ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ಭರವಸೆಯ ಯೋಜನೆ ‘ಪೀಟರ್’ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ. ಚಿತ್ರದ ಕಥಾವಸ್ತು ಮೆಚ್ಚಿ ವಿತರಣೆ ಹಕ್ಕುಗಳನ್ನು ಪಡೆದಿರುವ ಸಂಸ್ಥೆ, ಏಪ್ರಿಲ್ 10ರಂದು ರಾಜ್ಯದಾದ್ಯಂತ ಭರ್ಜರಿಯಾಗಿ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ರಾಜೇಶ್ ಧ್ರುವ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ಜಾನ್ವಿ ಕಾಣಿಸಿಕೊಂಡಿದ್ದಾರೆ. ರವೀಕ್ಷಾ ಶೆಟ್ಟಿ, ರಘು ಪಾಂಡೇಶ್ವರ್, ರಾಮನಾಡಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕರ್ನಾಟಕ-ಕೇರಳ ಗಡಿ ಭಾಗದ ಹಿನ್ನೆಲೆಯಲ್ಲಿನ ಕಥೆಯನ್ನು ಒಳಗೊಂಡಿರುವ ‘ಪೀಟರ್’ ಸಿನಿಮಾ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣ ಹಾಗೂ ನವೀನ್ ಶೆಟ್ಟಿ ಅವರ ಸಂಕಲನ ತಾಂತ್ರಿಕವಾಗಿ ಬಲ ತುಂಬಿವೆ. ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆಯಾದ ಹಾಡುಗಳು ಸಿನಿರಸಿಕರ ಗಮನ ಸೆಳೆದಿವೆ. ‘ವೃದ್ಧಿ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ರವಿ ಹೀರೇಮಠ್ ಮತ್ತು ರಾಕೇಶ್ ಹೆಗಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇತ್ತೀಚೆಗೆ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ, “ಕರ್ನಾಟಕದ ಜೊತೆಗೆ ಕೇರಳ, ತಮಿಳುನಾಡು ಮತ್ತು ಹೈದರಾಬಾದ್‌ನಲ್ಲಿಯೂ ಪ್ರಚಾರ ನಡೆಯುತ್ತಿದೆ. ಮೊದಲಿಗೆ ಏಪ್ರಿಲ್ 10ರಂದು ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಂತರ ಇತರೆ ರಾಜ್ಯಗಳಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಇದು ರಾಜೇಶ್ ಧ್ರುವ ಅವರ ಎರಡನೇ ಸಿನಿಮಾ ಆಗಿದ್ದು, “ಪೀಟರ್ ರಾಕ್ಷಸನೂ ಹೌದು, ರಕ್ಷಕನೂ ಹೌದು” ಎಂಬ ಅವರ ಮಾತು ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
₹163 ಕೋಟಿಗೆ ರವಿವರ್ಮ ಚಿತ್ರ ಮಾರಾಟ: ಭಾರತೀಯ ಕಲಾ ಲೋಕದಲ್ಲಿ ದಾಖಲೆ
ನವದೆಹಲಿ: ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ಸಾಧನೆ ಒಂದು ದಾಖಲಾಗ... ಓದನ್ನು ಮುಂದುವರಿಸಿ
ಚಿತ್ರರಂಗಕ್ಕೆ ಶಾಕ್? ಸಿಂಗಲ್ ಸ್ಕ್ರೀನ್‌ಗಳಲ್ಲಿ ಲಾಭ ಹಂಚಿಕೆ ನಿಯಮ ಜಾರಿ
ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹತ್ವದ ಬದಲಾವಣೆಯೊಂ... ಓದನ್ನು ಮುಂದುವರಿಸಿ
ಅಶ್ಲೀಲ ಹಾಡಿಗೆ ಕೋರ್ಟ್ ಕಟ್ಟುನಿಟ್ಟಿನ ಕ್ರಮ – ‘ವಾಲ್ಯೂಮ್ 1’ ತಕ್ಷಣ ತೆಗೆದುಹಾಕಲು ಆದೇಶ
ದೆಹಲಿ: ಖ್ಯಾತ ಗಾಯಕರು ಹನಿ ಸಿಂಗ್ ಮತ್ತು ಬಾದ್‌ಶಾ ಅವರು ಹಾಡಿದ... ಓದನ್ನು ಮುಂದುವರಿಸಿ
ನಾಮಪತ್ರ ಸಲ್ಲಿಸಿದ ವಿಜಯ್: ‘ಜನ ನಾಯಕನ್’ ವಿಳಂಬದ ಹಿಂದೆ ರಾಜಕೀಯ ಷಡ್ಯಂತ್ರ’ ಆರೋಪ!
ತಿರುಚಿ: ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ... ಓದನ್ನು ಮುಂದುವರಿಸಿ
ನಟಿಯರಿಗೆ ಒಳ ಉಡುಪು ಗಿಫ್ಟ್ ಕೊಟ್ಟು ರೂಮ್ ಬಗ್ಗೆ ಮಾತು! ಖ್ಯಾತ ನಟನ ಮುಖವಾಡ ಬಯಲು!
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಮತ... ಓದನ್ನು ಮುಂದುವರಿಸಿ
ತಾಯಿಯ ಅಂತಿಮ ಇಚ್ಛೆಗೆ ಗೌರವ: ಟೀಕೆಗೆ ಪ್ರಕಾಶ್ ರಾಜ್ ಖಡಕ್ ಉತ್ತರ!
ಬೆಂಗಳೂರು: ಕನ್ನಡ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್... ಓದನ್ನು ಮುಂದುವರಿಸಿ
9 ಲಕ್ಷದ ಚಿನ್ನದ ಸರ ವಿವಾದ: ಭಾನುಕ ರಾಜಪಕ್ಷ–ಹರ್ಷಿ ರಸಂಗ ಪ್ರಕರಣಕ್ಕೆ ಟ್ವಿಸ್ಟ್!
ಕೊಲಂಬೊ: ಶ್ರೀಲಂಕಾದ ಕ್ರಿಕೆಟ್ ಮತ್ತು ಚಿತ್ರರಂಗವನ್ನು ಕದಡಿದ ಚಿ... ಓದನ್ನು ಮುಂದುವರಿಸಿ
ಸ್ಟಾರ್ ನಟರಿಗೆ ಡ್ರಗ್ ಟೆಸ್ಟ್ ವಿವಾದ: ರಾಜಕಾರಣಿಗಳಿಗೆ ಕೂಡ ಅನ್ವಯಿಸಲಿ ಎಂದ ಸಿನಿರಂಗ!
ಹೈದರಾಬಾದ್: ಚಿತ್ರರಂಗ ಮತ್ತು ಡ್ರಗ್ಸ್ ನಡುವಿನ ಸಂಬಂಧದ ಕುರಿತ ಚ... ಓದನ್ನು ಮುಂದುವರಿಸಿ
ಹನುಮ ಜಯಂತಿಗೆ ‘ರಾಮಾಯಣ’ ಟೀಸರ್ ರಿಲೀಸ್: ದೃಶ್ಯ ವೈಭವಕ್ಕೆ ಸಿನಿಪ್ರಿಯರು ಫಿದಾ!
ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಮಹಾ ಬಜೆಟ್ ಸಿನಿಮಾ ‘ರಾಮಾಯಣ’ ಟೀಸರ್ ಇಂದ... ಓದನ್ನು ಮುಂದುವರಿಸಿ
ಅಶ್ಲೀಲ ಪ್ರಶ್ನೆಗೆ ಅದಾ ಶರ್ಮಾ ಖಡಕ್ ಉತ್ತರ: “ಸೈಜ್ 9… ಚಪ್ಪಲಿ!”
ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಅಶ್ಲೀಲ ಪ್ರಶ್ನೆಗೆ ಖಡಕ್ ಉತ್ತರ ನೀಡ... ಓದನ್ನು ಮುಂದುವರಿಸಿ