ಐಟಿ ವಲಯಕ್ಕೆ ಶಾಕ್: ಒರಾಕಲ್ ಉದ್ಯೋಗ ಕಡಿತ - ಸಾವಿರಾರು ಉದ್ಯೋಗಿಗಳಿಗೆ ಹೊಡೆತ
ನವದೆಹಲಿ : ಅಮೆರಿಕದ ದೈತ್ಯ ಐಟಿ ಕಂಪನಿಯಾದ Oracle Corporation ಭಾರತದಲ್ಲಿ ಭಾರೀ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದೆ. ಲಭ್ಯ ಮಾಹಿತಿಯ ಪ್ರಕಾರ, ಕಂಪನಿಯು ಭಾರತದಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಈಗಾಗಲೇ ವಜಾಗೊಳಿಸಿದ್ದು, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಸುತ್ತಿನ ಲೇಆಫ್ ನಡೆಯುವ ಸಾಧ್ಯತೆಯೂ ಇದೆ ಎಂದು ಮೂಲಗಳು ಸೂಚಿಸಿವೆ.
ಜಾಗತಿಕ ಮಟ್ಟದಲ್ಲಿಯೂ ಕಂಪನಿ ಪುನರ್‌ವ್ಯವಸ್ಥೆ ಪ್ರಕ್ರಿಯೆ ಕೈಗೊಂಡಿದ್ದು, ಒಟ್ಟು 30,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ. ಉದ್ಯೋಗ ಕಡಿತಕ್ಕೂ ಮುನ್ನ ಯಾವುದೇ ಮುನ್ನೆಚ್ಚರಿಕೆ ನೀಡದೇ, ಇಂದು ಬೆಳಿಗ್ಗೆ ಇ-ಮೇಲ್ ಮೂಲಕವೇ ವಜಾ ಮಾಹಿತಿ ನೀಡಿರುವುದು ಗಮನಾರ್ಹವಾಗಿದೆ.
ಕಂಪನಿ ಕಳುಹಿಸಿದ ಇ-ಮೇಲ್‌ನಲ್ಲಿ, “ಸಂಸ್ಥೆಯ ಬದಲಾವಣೆಗಳ ಭಾಗವಾಗಿ ನಿಮ್ಮ ಹುದ್ದೆಯನ್ನು ರದ್ದುಪಡಿಸಲಾಗಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇಂದೇ ನಿಮ್ಮ ಕೆಲಸದ ಕೊನೆಯ ದಿನ” ಎಂದು ತಿಳಿಸಲಾಗಿದೆ. ಈ ಅಚಾನಕ್ ನಿರ್ಧಾರದಿಂದ ಸಾವಿರಾರು ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಇನ್ನಷ್ಟು ಲೇಆಫ್ ಸಾಧ್ಯತೆಗಳ ಸುದ್ದಿ ಐಟಿ ವಲಯದಲ್ಲಿ ಆತಂಕ ಮೂಡಿಸಿದೆ. ಇದರ ನಡುವೆ, ಈ ಬೆಳವಣಿಗೆ ಕುರಿತು ಒರಾಕಲ್ ಕಾರ್ಪೊರೇಷನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿರುಗಾಳಿ ಸಹಿತ ಭಾರೀ ಮಳೆ: ಜೈಪುರದಲ್ಲಿ ಜನಜೀವನ ಅಸ್ತವ್ಯಸ್ತ! : ಹಠಾತ್ ಹವಾಮಾನ ವೈಪರೀತ್ಯ
ಜೈಪುರ: ರಾಜಸ್ಥಾನದ ಜೈಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ... ಓದನ್ನು ಮುಂದುವರಿಸಿ
ಗಲ್ಫ್ ಸಂಕಷ್ಟದ ಮಧ್ಯೆ ರಷ್ಯಾ ನೆರವು: ಭಾರತಕ್ಕೆ ತೈಲ ಪೂರೈಕೆ ಹೆಚ್ಚಳ
ನವದೆಹಲಿ: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಗಲ್ಫ್ ರಾಷ್... ಓದನ್ನು ಮುಂದುವರಿಸಿ
ಅಯೋಧ್ಯೆಯಲ್ಲಿ ಚಿನ್ನದ ದೋಚಾಟ: ಬುರ್ಖಾ ಧರಿಸಿದ ಮಹಿಳೆಯ ಚಾಲಾಕಿ ಕಳ್ಳತನ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಿನಿಮಾಗಳನ್ನು ನೆನಪಿಸ... ಓದನ್ನು ಮುಂದುವರಿಸಿ
ಮದುವೆಗಾಗಿ ತೂಕ ಇಳಿಸುವ ಇಂಜೆಕ್ಷನ್: ಮೌಂಜಾರೊ’–‘ವೆಗೋವಿ’ ಕ್ರೇಜ್: ವಧು-ವರರು ಔಷಧಿಗಳತ್ತ ಓಟ
ನವದೆಹಲಿ: ಮದುವೆ ಮುನ್ನ ತೂಕ ಇಳಿಸಲು ವಧು-ವರರು ಹೊಸ ಟ್ರೆಂಡ್‌ಗೆ... ಓದನ್ನು ಮುಂದುವರಿಸಿ
ಸುಪ್ರೀಂ ಕೋರ್ಟ್ ಸೂಚನೆ: ನ್ಯಾಯಾಧೀಶರ ಘೇರಾವ್ ಕೇಸ್ ಎನ್‌ಐಎಗೆ
ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಏಪ್ರಿಲ್ 1ರಂದು... ಓದನ್ನು ಮುಂದುವರಿಸಿ
ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್: 277 ಎಕರೆ ಅರಣ್ಯ ಭೂಮಿ ಬಳಕೆಗೆ ಅನುಮತಿ
ನವದೆಹಲಿ: ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾ... ಓದನ್ನು ಮುಂದುವರಿಸಿ
ಮಗಳನ್ನು ಕೊಂದು ‘ನರಬಲಿ’ ನೀಡಿದ ತಾಯಿ, ಮೂವರು ಅರೆಸ್ಟ್
ಜಾರ್ಖಂಡ್: ಕುರುಡು ನಂಬಿಕೆಯ ಹೆಸರಿನಲ್ಲಿ ನಡೆದ ಭೀಕರ ಘಟನೆ ಒಂದು... ಓದನ್ನು ಮುಂದುವರಿಸಿ
ಮತ್ತೆ ಬಿಜೆಪಿ ಸರ್ಕಾರ: ಅಸ್ಸಾಂ ಜನರ ಬೆಂಬಲ ನಮ್ಮೊಂದಿಗೇ – ಮೋದಿ
ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಗಮನಾರ್ಹ ಅ... ಓದನ್ನು ಮುಂದುವರಿಸಿ
ಮಕ್ಕಳಿಲ್ಲದ ಮಹಿಳೆಯ ಆಸ್ತಿ ಪತಿಗೆ ಅಲ್ಲ: ಹೈಕೋರ್ಟ್ ಸ್ಪಷ್ಟನೆ
ಅಮರಾವತಿ: ಮಹಿಳೆಯರ ಉತ್ತರಾಧಿಕಾರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್
ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್... ಓದನ್ನು ಮುಂದುವರಿಸಿ