ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್: 277 ಎಕರೆ ಅರಣ್ಯ ಭೂಮಿ ಬಳಕೆಗೆ ಅನುಮತಿ
ನವದೆಹಲಿ: ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಹಾಸನ ಹಾಗೂ ತುಮಕೂರು ಜಿಲ್ಲೆಗಳ 277 ಎಕರೆ ಅರಣ್ಯ ಭೂಮಿಯನ್ನು ಬಳಸಲು ತಾತ್ವಿಕ ಅನುಮೋದನೆ ನೀಡಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅರಣ್ಯ ಸಲಹಾ ಸಮಿತಿಯ ಷರತ್ತುಬದ್ಧ ಒಪ್ಪಿಗೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆ ಮುಂದುವರಿಸಲು ಒಟ್ಟು 34 ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಮೂಡಿದೆ.
ಇದರೊಂದಿಗೆ, ಪೂರ್ವಾನುಮತಿ ಪಡೆಯದೆ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಜೊತೆಗೆ, ಅಕ್ರಮವಾಗಿ ಬಳಸಿದ ಭೂಮಿಯ ಮೌಲ್ಯದ ಆರು ಪಟ್ಟು ದಂಡವನ್ನು ಪಾವತಿಸುವಂತೆ ನಿರ್ದೇಶಿಸಲಾಗಿದೆ. ಯೋಜನೆಗಾಗಿ ಬಳಸುವ ಅರಣ್ಯ ಭೂಮಿಗೆ ಸಮಾನ ಪ್ರಮಾಣದ ಅರಣ್ಯೇತರ ಭೂಮಿಯಲ್ಲಿ ಪರಿಹಾರ ಅರಣ್ಯೀಕರಣ ಕಡ್ಡಾಯವಾಗಿದ್ದು, ಆ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆಗೆ ವರ್ಗಾಯಿಸಿ ಸಂರಕ್ಷಿತ ಅರಣ್ಯವಾಗಿ ಘೋಷಿಸಬೇಕು ಎಂದು ಸೂಚಿಸಲಾಗಿದೆ.
ಇದಲ್ಲದೆ, ಪರಿಹಾರ ಅರಣ್ಯೀಕರಣ ಹಾಗೂ ಅದರ ನಿರ್ವಹಣೆಗೆ ಅಗತ್ಯ ವೆಚ್ಚವನ್ನು CAMPA ಖಾತೆಗೆ ಜಮಾ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಕಾರ್ಮಿಕ ಶಿಬಿರ ಸ್ಥಾಪನೆ ಮತ್ತು ಹೊಸ ರಸ್ತೆ ನಿರ್ಮಾಣಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಒಟ್ಟು ಅರಣ್ಯ ಬಳಕೆ 111.0277 ಹೆಕ್ಟೇರ್ ಮೀರಬಾರದು ಎಂದು ಕೇಂದ್ರ ಸ್ಪಷ್ಟಪಡಿಸಿದ್ದು, ಸಸ್ಯ ಹಾಗೂ ಪ್ರಾಣಿ ಜೀವಿಗಳಿಗೆ ಯಾವುದೇ ಹಾನಿಯಾಗದಂತೆ ಕಾರ್ಯನಿರ್ವಹಿಸಲು ಸೂಚಿಸಿದೆ. ಷರತ್ತುಗಳ ಅನುಸರಣೆ ಕುರಿತು ರಾಜ್ಯ ಸರ್ಕಾರವು ಪ್ರತಿ ವರ್ಷ ಡಿಸೆಂಬರ್ 31ರೊಳಗೆ ವರದಿ ಸಲ್ಲಿಸಬೇಕಾಗಿದ್ದು, ಯಾವುದೇ ಉಲ್ಲಂಘನೆ ಕಂಡುಬಂದರೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿರುಗಾಳಿ ಸಹಿತ ಭಾರೀ ಮಳೆ: ಜೈಪುರದಲ್ಲಿ ಜನಜೀವನ ಅಸ್ತವ್ಯಸ್ತ! : ಹಠಾತ್ ಹವಾಮಾನ ವೈಪರೀತ್ಯ
ಜೈಪುರ: ರಾಜಸ್ಥಾನದ ಜೈಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ... ಓದನ್ನು ಮುಂದುವರಿಸಿ
ಗಲ್ಫ್ ಸಂಕಷ್ಟದ ಮಧ್ಯೆ ರಷ್ಯಾ ನೆರವು: ಭಾರತಕ್ಕೆ ತೈಲ ಪೂರೈಕೆ ಹೆಚ್ಚಳ
ನವದೆಹಲಿ: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಗಲ್ಫ್ ರಾಷ್... ಓದನ್ನು ಮುಂದುವರಿಸಿ
ಅಯೋಧ್ಯೆಯಲ್ಲಿ ಚಿನ್ನದ ದೋಚಾಟ: ಬುರ್ಖಾ ಧರಿಸಿದ ಮಹಿಳೆಯ ಚಾಲಾಕಿ ಕಳ್ಳತನ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಿನಿಮಾಗಳನ್ನು ನೆನಪಿಸ... ಓದನ್ನು ಮುಂದುವರಿಸಿ
ಮದುವೆಗಾಗಿ ತೂಕ ಇಳಿಸುವ ಇಂಜೆಕ್ಷನ್: ಮೌಂಜಾರೊ’–‘ವೆಗೋವಿ’ ಕ್ರೇಜ್: ವಧು-ವರರು ಔಷಧಿಗಳತ್ತ ಓಟ
ನವದೆಹಲಿ: ಮದುವೆ ಮುನ್ನ ತೂಕ ಇಳಿಸಲು ವಧು-ವರರು ಹೊಸ ಟ್ರೆಂಡ್‌ಗೆ... ಓದನ್ನು ಮುಂದುವರಿಸಿ
ಸುಪ್ರೀಂ ಕೋರ್ಟ್ ಸೂಚನೆ: ನ್ಯಾಯಾಧೀಶರ ಘೇರಾವ್ ಕೇಸ್ ಎನ್‌ಐಎಗೆ
ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಏಪ್ರಿಲ್ 1ರಂದು... ಓದನ್ನು ಮುಂದುವರಿಸಿ
ಮಗಳನ್ನು ಕೊಂದು ‘ನರಬಲಿ’ ನೀಡಿದ ತಾಯಿ, ಮೂವರು ಅರೆಸ್ಟ್
ಜಾರ್ಖಂಡ್: ಕುರುಡು ನಂಬಿಕೆಯ ಹೆಸರಿನಲ್ಲಿ ನಡೆದ ಭೀಕರ ಘಟನೆ ಒಂದು... ಓದನ್ನು ಮುಂದುವರಿಸಿ
ಐಟಿ ವಲಯಕ್ಕೆ ಶಾಕ್: ಒರಾಕಲ್ ಉದ್ಯೋಗ ಕಡಿತ - ಸಾವಿರಾರು ಉದ್ಯೋಗಿಗಳಿಗೆ ಹೊಡೆತ
ನವದೆಹಲಿ : ಅಮೆರಿಕದ ದೈತ್ಯ ಐಟಿ ಕಂಪನಿಯಾದ Oracle Corporation... ಓದನ್ನು ಮುಂದುವರಿಸಿ
ಮತ್ತೆ ಬಿಜೆಪಿ ಸರ್ಕಾರ: ಅಸ್ಸಾಂ ಜನರ ಬೆಂಬಲ ನಮ್ಮೊಂದಿಗೇ – ಮೋದಿ
ಗುವಾಹಟಿ: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂ ರಾಜ್ಯವು ಗಮನಾರ್ಹ ಅ... ಓದನ್ನು ಮುಂದುವರಿಸಿ
ಮಕ್ಕಳಿಲ್ಲದ ಮಹಿಳೆಯ ಆಸ್ತಿ ಪತಿಗೆ ಅಲ್ಲ: ಹೈಕೋರ್ಟ್ ಸ್ಪಷ್ಟನೆ
ಅಮರಾವತಿ: ಮಹಿಳೆಯರ ಉತ್ತರಾಧಿಕಾರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ಇಂಧನ ದರ ಏರಿಕೆ – ವಾಹನ ಮಾಲೀಕರಿಗೆ ಮತ್ತೊಂದು ಶಾಕ್
ನವದೆಹಲಿ: ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಮತ್... ಓದನ್ನು ಮುಂದುವರಿಸಿ