ಅಪ್ರಾಪ್ತೆಯ ಮೇಲಿನ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಮಂಡ್ಯ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಮಂಡ್ಯದ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯವು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 7 ಲಕ್ಷ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ವಿಶೇಷ ನ್ಯಾಯಾಧೀಶ ಬಿ. ದಿಲೀಪ್ ಕುಮಾರ್ ಅವರು ಈ ತೀರ್ಪು ಪ್ರಕಟಿಸಿದ್ದಾರೆ.

 

ಮಂಡ್ಯ ನಗರದ ತಾವರಗೆರೆ ಬಡಾವಣೆ ನಿವಾಸಿ ಅಖೀಬ್ ಆಲಂ ಉ. ಶೇಖ್ ಅಖೀಬ್ ಆಲಂ ಶಿಕ್ಷೆಗೆ ಒಳಗಾದ ಆರೋಪಿ. ಬಾಲಕಿ ಶಾಲೆಗೆ ತೆರಳುವ ವೇಳೆ ಪರಿಚಯ ಬೆಳೆಸಿಕೊಂಡಿದ್ದ ಆರೋಪಿ, ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿ ಹಾಗೂ ಬೆದರಿಕೆ ಹಾಕಿ 2023ರ ಜನವರಿ 27ರಂದು ಕಾರಿನಲ್ಲಿ ಕೂರಿಸಿಕೊಂಡು ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಬೆಟ್ಟದ ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

 

ಘಟನೆಯ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಮನನೊಂದ ಬಾಲಕಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿಯಾಗಿದ್ದ ಸಂಗತಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

 

ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 days ago

   
Image 1
Image 1
ಬೆಂಗಳೂರು ನಗರ

ಡಿಜೆ ಹಳ್ಳಿ ಬೆಂಕಿ ಅವಘಡ: ಆರು ಹಸುಗಳ ಸಜೀವ ದಹನ ಪ್ರಕರಣದಲ್ಲಿ ಆರೋಪಿ ಬಂಧನ

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಭೀಕರ ಬೆಂಕಿ ಅವಘಡಕ್ಕೆ ಸಂಬಂ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಚಿಕ್ಕಮಗಳೂರು

ಮಾಣಿಕ್ಯಧಾರಾ ದುರಂತ: 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಮಂಡ್ಯ

ಮದ್ದೂರು

ರೌಡಿಶೀಟರ್ ಯಶ್ವಂತ್ ಹತ್ಯೆ: ಆರೋಪಿಗಳ ಹೆಡೆಮುರಿ ಕಟ್ಟಿದ ಮದ್ದೂರು ಪೊಲೀಸರು

ಮದ್ದೂರು: ಸಿಗರೇಟ್ ಎಂಬ ಸಾಮಾನ್ಯ ವಿಷಯದಿಂದ ಆರಂಭವಾದ ಗಲಾಟೆ ಕೊಲ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಚಾಮರಾಜನಗರ

ಕಳ್ಳತನಕ್ಕೂ ಮುನ್ನ ದೇವರಿಗೆ ನಮಸ್ಕಾರ: ದೇವಾಲಯದ ಹುಂಡಿ ಕಳವು ಸಿಸಿಟಿವಿಯಲ್ಲಿ ಸೆರೆ

ಚಾಮರಾಜನಗರ: ಕಳ್ಳರಿಗೆ ಭಯವೇ ಇಲ್ಲ ಎಂಬ ಮಾತು ಸಾಮಾನ್ಯ. ಆದರೆ ಗು... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಸರ್ಕಾರಿ ಕಚೇರಿಯಲ್ಲೇ ದಲಿತ ಮಹಿಳೆ ಅವಮಾನ ಆರೋಪ: 3 MSIL ಅಧಿಕಾರಿಗಳ ವಿರುದ್ಧ ಪ್ರಕರಣ

ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

“ಝಾಂಬಿ ಡ್ರಗ್” ಸುಳ್ಳು ವಿಡಿಯೋ ವೈರಲ್: ದುನಿಯಾ ವಿಜಯ್ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್

ಬೆಂಗಳೂರು: “ಝಾಂಬಿ ಡ್ರಗ್” ಹೆಸರಿನಲ್ಲಿ ವೈರಲ್ ಆದ ವಿಡಿಯೋಗೆ ಸಂ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

6 ವರ್ಷದ ಪ್ರೀತಿ ಅಂತ್ಯ – ಮದುವೆ ನಿರಾಕರಣೆಗೆ ಯುವಕ ಆತ್ಮಹತ್ಯೆ

ಬೆಂಗಳೂರು: ಪ್ರೀತಿಯ ವಿಚಾರದಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

‘ಜೋಂಬಿ ಡ್ರಗ್’ ಆರೋಪಕ್ಕೆ ಬ್ರೇಕ್ – ಪೊಲೀಸರಿಂದ ಸ್ಪಷ್ಟನೆ

ಬೆಂಗಳೂರು: ನಗರದಲ್ಲಿ ‘ಜೋಂಬಿ ಡ್ರಗ್’ ನಶೆಯಲ್ಲಿ ವ್ಯಕ್ತಿ ತೇಲಾಡ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ಜಾತ್ರೆಯಲ್ಲಿ ಅಪಘಾತ : ಪಲ್ಲಕ್ಕಿ ಟ್ರ್ಯಾಕ್ಟರ್ ಹರಿದು ಯುವಕ ಸಾವು

ಆನೇಕಲ್: ತಾಲೂಕಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಧಾರವಾಡ

ಹುಬ್ಬಳ್ಳಿ

“ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ” – 450ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪುಡಿ ರೌಡಿಗಳ ಚಟುವಟಿ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1