“ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ” – 450ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪುಡಿ ರೌಡಿಗಳ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ N. Shashikumar ಅವರು 450ಕ್ಕೂ ಹೆಚ್ಚು ರೌಡಿ ಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಹಳೆಯ ಸಿಎಆರ್ ಮೈದಾನದಲ್ಲಿ ನಡೆದ ಬೃಹತ್ ರೌಡಿ ಪರೇಡ್‌ನಲ್ಲಿ ಪ್ರತಿಯೊಬ್ಬ ರೌಡಿ ಶೀಟರ್‌ಗಳ ಹಳೆಯ ಅಪರಾಧ ದಾಖಲೆಗಳನ್ನು ಪರಿಶೀಲಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ಬಾಲ ಬಿಚ್ಚಿದರೆ ಗುಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ ಅವರು, ಈ ವರ್ಷ ಈಗಾಗಲೇ 30ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಅಪರಾಧ ಲೋಕವನ್ನು ತೊರೆದು ಸನ್ನಡತೆಯಿಂದ ಬದುಕುತ್ತಿರುವವರಿಗೆ ಪೊಲೀಸ್ ಇಲಾಖೆ ಪ್ರೋತ್ಸಾಹ ನೀಡಿದೆ. 2026ರ ಆರಂಭದಲ್ಲಿ 1,320 ರೌಡಿ ಶೀಟರ್‌ಗಳಿದ್ದರೆ, ಈಗ 816 ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಸ್ತುತ ನಗರದಲ್ಲಿ 510 ಸಕ್ರಿಯ ರೌಡಿಗಳು ಉಳಿದಿದ್ದು, ಹೊಸದಾಗಿ 100ಕ್ಕೂ ಹೆಚ್ಚು ಮಂದಿಯ ಮೇಲೆ ನಿಗಾ ಇರಿಸಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಮುಂದುವರಿದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಅಪರಾಧಿಗಳಿಗೆ “ಜೈಲೇ ಗತಿ” ಎಂಬ ಸ್ಪಷ್ಟ ಸಂದೇಶ ರವಾನಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಡಿಜೆ ಹಳ್ಳಿ ಬೆಂಕಿ ಅವಘಡ: ಆರು ಹಸುಗಳ ಸಜೀವ ದಹನ ಪ್ರಕರಣದಲ್ಲಿ ಆರೋಪಿ ಬಂಧನ
ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಭೀಕರ ಬೆಂಕಿ ಅವಘಡಕ್ಕೆ ಸಂಬಂ... ಓದನ್ನು ಮುಂದುವರಿಸಿ
ಮಾಣಿಕ್ಯಧಾರಾ ದುರಂತ: 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತ... ಓದನ್ನು ಮುಂದುವರಿಸಿ
ಮದ್ದೂರು
ರೌಡಿಶೀಟರ್ ಯಶ್ವಂತ್ ಹತ್ಯೆ: ಆರೋಪಿಗಳ ಹೆಡೆಮುರಿ ಕಟ್ಟಿದ ಮದ್ದೂರು ಪೊಲೀಸರು
ಮದ್ದೂರು: ಸಿಗರೇಟ್ ಎಂಬ ಸಾಮಾನ್ಯ ವಿಷಯದಿಂದ ಆರಂಭವಾದ ಗಲಾಟೆ ಕೊಲ... ಓದನ್ನು ಮುಂದುವರಿಸಿ
ಕಳ್ಳತನಕ್ಕೂ ಮುನ್ನ ದೇವರಿಗೆ ನಮಸ್ಕಾರ: ದೇವಾಲಯದ ಹುಂಡಿ ಕಳವು ಸಿಸಿಟಿವಿಯಲ್ಲಿ ಸೆರೆ
ಚಾಮರಾಜನಗರ: ಕಳ್ಳರಿಗೆ ಭಯವೇ ಇಲ್ಲ ಎಂಬ ಮಾತು ಸಾಮಾನ್ಯ. ಆದರೆ ಗು... ಓದನ್ನು ಮುಂದುವರಿಸಿ
ಸರ್ಕಾರಿ ಕಚೇರಿಯಲ್ಲೇ ದಲಿತ ಮಹಿಳೆ ಅವಮಾನ ಆರೋಪ: 3 MSIL ಅಧಿಕಾರಿಗಳ ವಿರುದ್ಧ ಪ್ರಕರಣ
ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದ... ಓದನ್ನು ಮುಂದುವರಿಸಿ
“ಝಾಂಬಿ ಡ್ರಗ್” ಸುಳ್ಳು ವಿಡಿಯೋ ವೈರಲ್: ದುನಿಯಾ ವಿಜಯ್ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್
ಬೆಂಗಳೂರು: “ಝಾಂಬಿ ಡ್ರಗ್” ಹೆಸರಿನಲ್ಲಿ ವೈರಲ್ ಆದ ವಿಡಿಯೋಗೆ ಸಂ... ಓದನ್ನು ಮುಂದುವರಿಸಿ
6 ವರ್ಷದ ಪ್ರೀತಿ ಅಂತ್ಯ – ಮದುವೆ ನಿರಾಕರಣೆಗೆ ಯುವಕ ಆತ್ಮಹತ್ಯೆ
ಬೆಂಗಳೂರು: ಪ್ರೀತಿಯ ವಿಚಾರದಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡ... ಓದನ್ನು ಮುಂದುವರಿಸಿ
‘ಜೋಂಬಿ ಡ್ರಗ್’ ಆರೋಪಕ್ಕೆ ಬ್ರೇಕ್ – ಪೊಲೀಸರಿಂದ ಸ್ಪಷ್ಟನೆ
ಬೆಂಗಳೂರು: ನಗರದಲ್ಲಿ ‘ಜೋಂಬಿ ಡ್ರಗ್’ ನಶೆಯಲ್ಲಿ ವ್ಯಕ್ತಿ ತೇಲಾಡ... ಓದನ್ನು ಮುಂದುವರಿಸಿ
ಅಪ್ರಾಪ್ತೆಯ ಮೇಲಿನ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮಂಡ್ಯ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲ... ಓದನ್ನು ಮುಂದುವರಿಸಿ
ಆನೇಕಲ್ ಜಾತ್ರೆಯಲ್ಲಿ ಅಪಘಾತ : ಪಲ್ಲಕ್ಕಿ ಟ್ರ್ಯಾಕ್ಟರ್ ಹರಿದು ಯುವಕ ಸಾವು
ಆನೇಕಲ್: ತಾಲೂಕಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇ... ಓದನ್ನು ಮುಂದುವರಿಸಿ