‘ಜೋಂಬಿ ಡ್ರಗ್’ ಆರೋಪಕ್ಕೆ ಬ್ರೇಕ್ – ಪೊಲೀಸರಿಂದ ಸ್ಪಷ್ಟನೆ

ಬೆಂಗಳೂರು: ನಗರದಲ್ಲಿ ‘ಜೋಂಬಿ ಡ್ರಗ್’ ನಶೆಯಲ್ಲಿ ವ್ಯಕ್ತಿ ತೇಲಾಡುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿನ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿದ್ದು, ಆತ ಯಾವುದೇ ಡ್ರಗ್ ಸೇವನೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಆ ವ್ಯಕ್ತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಔಷಧಿ ಸೇವಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಡ್ರಗ್ ಪತ್ತೆಯಾಗಿಲ್ಲ ಎಂದು ಆಯುಕ್ತರು ಹೇಳಿದರು. ಮದ್ಯಪಾನ ಜೊತೆಗೆ ಔಷಧಿ ತೆಗೆದುಕೊಂಡ ಪರಿಣಾಮವೇ ಆತನ ವರ್ತನೆ ಅಸಾಮಾನ್ಯವಾಗಿ ಕಂಡುಬಂದಿದೆ ಎಂದು ಅವರು ಸ್ಪಷ್ಟಪಡಿಸಿದರು.

 

ಈ ರೀತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೊದಲು ಯೋಚನೆ ಮಾಡಬೇಕು. ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದರೆ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಅಪಪ್ರಚಾರ ಉದ್ದೇಶದಿಂದ ವಿಡಿಯೋ ವೈರಲ್ ಮಾಡುವುದು ನಗರಕ್ಕೆ ಹಾಗೂ ವ್ಯಕ್ತಿಗೆ ಕೆಟ್ಟ ಹೆಸರು ತರುತ್ತದೆ. ವಿಡಿಯೋ ವೈರಲ್ ಮಾಡಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ವಿಡಿಯೋ ಹಂಚಿದವರಿಗೂ ನೋಟಿಸ್ ನೀಡಲಾಗುತ್ತಿದ್ದು, ತಮ್ಮ ಖಾತೆಗಳಿಂದ ತಕ್ಷಣವೇ ಅಳಿಸುವಂತೆ ಸೂಚಿಸಲಾಗಿದೆ. ನಗರದಲ್ಲಿ ಡ್ರಗ್ ವಿರುದ್ಧ ‘ಝೀರೋ ಟಾಲರೆನ್ಸ್’ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆಯುಕ್ತರು ಭರವಸೆ ನೀಡಿದರು. ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದೂ ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1
ಬೆಂಗಳೂರು ನಗರ

ಡಿಜೆ ಹಳ್ಳಿ ಬೆಂಕಿ ಅವಘಡ: ಆರು ಹಸುಗಳ ಸಜೀವ ದಹನ ಪ್ರಕರಣದಲ್ಲಿ ಆರೋಪಿ ಬಂಧನ

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಭೀಕರ ಬೆಂಕಿ ಅವಘಡಕ್ಕೆ ಸಂಬಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಿಕ್ಕಮಗಳೂರು

ಮಾಣಿಕ್ಯಧಾರಾ ದುರಂತ: 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಮಂಡ್ಯ

ಮದ್ದೂರು

ರೌಡಿಶೀಟರ್ ಯಶ್ವಂತ್ ಹತ್ಯೆ: ಆರೋಪಿಗಳ ಹೆಡೆಮುರಿ ಕಟ್ಟಿದ ಮದ್ದೂರು ಪೊಲೀಸರು

ಮದ್ದೂರು: ಸಿಗರೇಟ್ ಎಂಬ ಸಾಮಾನ್ಯ ವಿಷಯದಿಂದ ಆರಂಭವಾದ ಗಲಾಟೆ ಕೊಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಚಾಮರಾಜನಗರ

ಕಳ್ಳತನಕ್ಕೂ ಮುನ್ನ ದೇವರಿಗೆ ನಮಸ್ಕಾರ: ದೇವಾಲಯದ ಹುಂಡಿ ಕಳವು ಸಿಸಿಟಿವಿಯಲ್ಲಿ ಸೆರೆ

ಚಾಮರಾಜನಗರ: ಕಳ್ಳರಿಗೆ ಭಯವೇ ಇಲ್ಲ ಎಂಬ ಮಾತು ಸಾಮಾನ್ಯ. ಆದರೆ ಗು... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಸರ್ಕಾರಿ ಕಚೇರಿಯಲ್ಲೇ ದಲಿತ ಮಹಿಳೆ ಅವಮಾನ ಆರೋಪ: 3 MSIL ಅಧಿಕಾರಿಗಳ ವಿರುದ್ಧ ಪ್ರಕರಣ

ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

“ಝಾಂಬಿ ಡ್ರಗ್” ಸುಳ್ಳು ವಿಡಿಯೋ ವೈರಲ್: ದುನಿಯಾ ವಿಜಯ್ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್

ಬೆಂಗಳೂರು: “ಝಾಂಬಿ ಡ್ರಗ್” ಹೆಸರಿನಲ್ಲಿ ವೈರಲ್ ಆದ ವಿಡಿಯೋಗೆ ಸಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

6 ವರ್ಷದ ಪ್ರೀತಿ ಅಂತ್ಯ – ಮದುವೆ ನಿರಾಕರಣೆಗೆ ಯುವಕ ಆತ್ಮಹತ್ಯೆ

ಬೆಂಗಳೂರು: ಪ್ರೀತಿಯ ವಿಚಾರದಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಮಂಡ್ಯ

ಅಪ್ರಾಪ್ತೆಯ ಮೇಲಿನ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಮಂಡ್ಯ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ಜಾತ್ರೆಯಲ್ಲಿ ಅಪಘಾತ : ಪಲ್ಲಕ್ಕಿ ಟ್ರ್ಯಾಕ್ಟರ್ ಹರಿದು ಯುವಕ ಸಾವು

ಆನೇಕಲ್: ತಾಲೂಕಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಧಾರವಾಡ

ಹುಬ್ಬಳ್ಳಿ

“ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ” – 450ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪುಡಿ ರೌಡಿಗಳ ಚಟುವಟಿ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1