ರೌಡಿಶೀಟರ್ ಯಶ್ವಂತ್ ಹತ್ಯೆ: ಆರೋಪಿಗಳ ಹೆಡೆಮುರಿ ಕಟ್ಟಿದ ಮದ್ದೂರು ಪೊಲೀಸರು
ಮದ್ದೂರು: ಸಿಗರೇಟ್ ಎಂಬ ಸಾಮಾನ್ಯ ವಿಷಯದಿಂದ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಏಪ್ರಿಲ್ 5ರಂದು ಮದ್ದೂರಿನ ಪಟೇಲ್ ಸಾಮಿಲ್ ಬಳಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಸಿಗರೇಟ್ ವಿಚಾರವಾಗಿ ಉಂಟಾದ ಈ ಗಲಾಟೆ ಕ್ಷಣಾರ್ಧದಲ್ಲಿ ಹಿಂಸಾತ್ಮಕವಾಗಿ ತಿರುಗಿ, ರೌಡಿಶೀಟರ್ ಯಶ್ವಂತ್ @ ಕಚ್ಚಿ ಅಭಿ ಹತ್ಯೆಗೆ ಕಾರಣವಾಗಿದೆ. ಇದೇ ವೇಳೆ ದರ್ಶನ್ ಹಾಗೂ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮರಳಿಗ ಗ್ರಾಮದ ನಿವಾಸಿಯಾಗಿದ್ದ ಯಶ್ವಂತ್, ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದು, ಅವರ ವಿರುದ್ಧ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿದ್ದವು. ರೌಡಿಶೀಟರ್ ಪಟ್ಟಿಯಲ್ಲಿದ್ದ ಇವರನ್ನು ಗಡಿಪಾರಿಗೆ ಶಿಫಾರಸ್ಸು ಮಾಡಲಾಗಿತ್ತು.
ಘಟನೆಯ ಬಳಿಕ ತಕ್ಷಣವೇ ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲೀಸರು, ಕೊಲೆ ಪ್ರಕರಣದಲ್ಲಿ ದರ್ಶನ್, ಸಚಿನ್, ಧನುಷ್, ಸಿದ್ದರಾಜು, ಲೋಹಿತ್, ಮಹೇಶ್, ಸಚಿನ್ @ ಕಟ್ಟೆ, ಲಂಕೇಶ್, ಸಂಜಯ್ ಗೌಡ ಮತ್ತು ವಿಜಿ ಸೇರಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಕೊಲೆ ಯತ್ನ ಪ್ರಕರಣದಡಿ ಮಾದೇಶ್, ಮನೋಜ್, ಮನ್ವಿತ್, ದರ್ಶನ್, ಹೇಮಂತ್, ಸಚಿನ್ ಮತ್ತು ಜಯಸೂರ್ಯರನ್ನು ಕೂಡ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಂಡ್ಯ ಜಿಲ್ಲಾ ಎಸ್‌ಪಿ ಡಾ. ವಿಜಯ ಶೋಭಾರಾಣಿ ಅವರು, “ಸಣ್ಣ ವಿಚಾರದಿಂದ ಆರಂಭವಾದ ಗಲಾಟೆ ದುರ್ಘಟನೆಯಲ್ಲಿ ಅಂತ್ಯವಾಗಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಾಣಿಕ್ಯಧಾರಾ ದುರಂತ: 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತ... ಓದನ್ನು ಮುಂದುವರಿಸಿ
ಕಳ್ಳತನಕ್ಕೂ ಮುನ್ನ ದೇವರಿಗೆ ನಮಸ್ಕಾರ: ದೇವಾಲಯದ ಹುಂಡಿ ಕಳವು ಸಿಸಿಟಿವಿಯಲ್ಲಿ ಸೆರೆ
ಚಾಮರಾಜನಗರ: ಕಳ್ಳರಿಗೆ ಭಯವೇ ಇಲ್ಲ ಎಂಬ ಮಾತು ಸಾಮಾನ್ಯ. ಆದರೆ ಗು... ಓದನ್ನು ಮುಂದುವರಿಸಿ
ಸರ್ಕಾರಿ ಕಚೇರಿಯಲ್ಲೇ ದಲಿತ ಮಹಿಳೆ ಅವಮಾನ ಆರೋಪ: 3 MSIL ಅಧಿಕಾರಿಗಳ ವಿರುದ್ಧ ಪ್ರಕರಣ
ಬೆಂಗಳೂರು: MSIL ಚಿಟ್ ಫಂಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ದ... ಓದನ್ನು ಮುಂದುವರಿಸಿ
“ಝಾಂಬಿ ಡ್ರಗ್” ಸುಳ್ಳು ವಿಡಿಯೋ ವೈರಲ್: ದುನಿಯಾ ವಿಜಯ್ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್
ಬೆಂಗಳೂರು: “ಝಾಂಬಿ ಡ್ರಗ್” ಹೆಸರಿನಲ್ಲಿ ವೈರಲ್ ಆದ ವಿಡಿಯೋಗೆ ಸಂ... ಓದನ್ನು ಮುಂದುವರಿಸಿ
6 ವರ್ಷದ ಪ್ರೀತಿ ಅಂತ್ಯ – ಮದುವೆ ನಿರಾಕರಣೆಗೆ ಯುವಕ ಆತ್ಮಹತ್ಯೆ
ಬೆಂಗಳೂರು: ಪ್ರೀತಿಯ ವಿಚಾರದಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡ... ಓದನ್ನು ಮುಂದುವರಿಸಿ
‘ಜೋಂಬಿ ಡ್ರಗ್’ ಆರೋಪಕ್ಕೆ ಬ್ರೇಕ್ – ಪೊಲೀಸರಿಂದ ಸ್ಪಷ್ಟನೆ
ಬೆಂಗಳೂರು: ನಗರದಲ್ಲಿ ‘ಜೋಂಬಿ ಡ್ರಗ್’ ನಶೆಯಲ್ಲಿ ವ್ಯಕ್ತಿ ತೇಲಾಡ... ಓದನ್ನು ಮುಂದುವರಿಸಿ
ಅಪ್ರಾಪ್ತೆಯ ಮೇಲಿನ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮಂಡ್ಯ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲ... ಓದನ್ನು ಮುಂದುವರಿಸಿ
ಆನೇಕಲ್ ಜಾತ್ರೆಯಲ್ಲಿ ಅಪಘಾತ : ಪಲ್ಲಕ್ಕಿ ಟ್ರ್ಯಾಕ್ಟರ್ ಹರಿದು ಯುವಕ ಸಾವು
ಆನೇಕಲ್: ತಾಲೂಕಿನ ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
“ಬಾಲ ಬಿಚ್ಚಿದರೆ ಗುಂಡಾ ಕಾಯ್ದೆ” – 450ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಶಶಿಕುಮಾರ್ ಖಡಕ್ ವಾರ್ನಿಂಗ್
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪುಡಿ ರೌಡಿಗಳ ಚಟುವಟಿ... ಓದನ್ನು ಮುಂದುವರಿಸಿ
ಪ್ರೇಯಸಿ ಸಾವಿನ ಸುದ್ದಿ ಕೇಳಿ ಪ್ರಿಯಕರ ಆತ್ಮಹತ್ಯೆ
ಬಾಗಲಕೋಟೆ: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿ... ಓದನ್ನು ಮುಂದುವರಿಸಿ