ಆಟೋ ಮ್ಯುಟೇಶನ್ ವ್ಯವಸ್ಥೆ: ಖಾತೆಗಳ 98% ಸ್ವಯಂಚಾಲಿತ ಬದಲಾವಣೆ – ಕೃಷ್ಣ ಬೈರೇಗೌಡ
ಬೆಂಗಳೂರು: ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ವೇಗಗೊಳಿಸಲು ಜಾರಿಗೆ ಬಂದ ಆಟೋ ಮ್ಯುಟೇಶನ್ ವ್ಯವಸ್ಥೆಯಿಂದ ಈಗ ಶೇ.98 ರಷ್ಟು ಖಾತೆಗಳು ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತಿವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಒಂದು ವರ್ಷದಲ್ಲಿ ಎರಡು ಹಂತಗಳಲ್ಲಿ ಸುಧಾರಣೆಗಳನ್ನು ತರಲಾಗಿದ್ದು, ಪ್ರಥಮ ಹಂತದಲ್ಲಿ ಶೇ.66 ರಷ್ಟು ಖಾತೆ ಬದಲಾವಣೆಯನ್ನು ಆಟೋ ಮ್ಯುಟೇಶನ್ ಮೂಲಕ ಸ್ವಯಂಚಾಲಿತಗೊಳಿಸಲಾಗಿತ್ತು. ನಂತರ ಜಾರಿಗೆ ತಂದ ಹೆಚ್ಚುವರಿ ಸುಧಾರಣೆಗಳಿಂದ ಈಗ ಶೇ.98 ರಷ್ಟು ಖಾತೆಗಳು ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತಿದೆ.
ಪ್ರಸ್ತುತ ಕೆಲ ಪ್ರಕರಣಗಳು ಅರ್ಜಿ ಸಲ್ಲಿಸಿದ ಮೂರು ಗಂಟೆಯೊಳಗೆ, ಕೆಲವು 8 ದಿನಗಳಲ್ಲಿ, ಇನ್ನೂ ಕೆಲವು 16 ದಿನಗಳಲ್ಲಿ ಕಾನೂನು ಪ್ರಕಾರ ಬದಲಾವಣೆಯಾಗುತ್ತಿದ್ದು, ತಕರಾರು ದಾಖಲಾಗಿರುವ ಪ್ರಕರಣಗಳಲ್ಲಿ ಮಾತ್ರ ಪ್ರಕ್ರಿಯೆ ವಿಳಂಬವಾಗುತ್ತದೆ. ಮುಂದೆ ಯಾವುದೇ ಮಧ್ಯವರ್ತಿಯ ಅವಶ್ಯಕತೆ ಇಲ್ಲದೆ, ನೇರವಾಗಿ ಸೇವೆ ಪಡೆಯಲು ಸಾಧ್ಯವಾಗಿದ್ದು, ಇದು ದೇಶದಲ್ಲೇ ಪ್ರಗತಿಪರ ಹೆಜ್ಜೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಖಾತೆ ಬದಲಾವಣೆಯಲ್ಲಿ ಕಂದಾಯ ನಿರೀಕ್ಷಕರ (ಆರ್‌ಐ) ಪಾತ್ರ ಕುರಿತು ಬಂದ ದೂರಿಗೆ ಸ್ಪಷ್ಟನೆ ನೀಡಿದ ಅವರು, ಸರ್ಕಾರದ ಹಿತಾಸಕ್ತಿ ಇರುವ ಸಂದರ್ಭದಲ್ಲಷ್ಟೇ ಆರ್‌ಐ ತಕರಾರು ಸಲ್ಲಿಸಬಹುದು ಎಂದು ಹೇಳಿದರು. ಖಾಸಗಿ ಸ್ವತ್ತಿನ ವಿಚಾರದಲ್ಲಿ ಸಂಬಂಧಪಟ್ಟವರೇ ತಕರಾರು ನೀಡಬೇಕಾಗಿದ್ದು, ಹಳೆಯ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ. ತಕರಾರು ದುರುಪಯೋಗ ತಪ್ಪಿಸಲು ಆಧಾರ್ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಒಂದೇ ವ್ಯಕ್ತಿ ಅನೇಕ ತಕರಾರು ಸಲ್ಲಿಸಿದರೆ ಅವರನ್ನು ಪ್ರಶ್ನಿಸಲು ಕ್ರಮವಿರುತ್ತದೆ. ಈ ಸುಧಾರಣೆಗಳ ಮೂಲಕ ಇಲಾಖೆಯಲ್ಲಿ ಪಾರದರ್ಶಕತೆ ಹೆಚ್ಚಾಗಿದ್ದು, ಅನಗತ್ಯ ತಕರಾರುಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ಮೊದಲ ಮಳೆ : ಗಾಳಿ ಮಳೆಯಲ್ಲೇ ಶಾಲಾ ಮೇಲ್ಚಾವಣಿ ಹರಿದಿತು, ಶಿಕ್ಷಕಿಯ ತ್ವರಿತ ಕ್ರಮದಿಂದ ಮಕ್ಕಳು ರಕ್ಷಿತ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿ... ಓದನ್ನು ಮುಂದುವರಿಸಿ
ಮಂಗಳೂರು
ಜಾಗತಿಕ ರಾಜಕೀಯದ ನಡುವೆಯೂ ಭಾರತಕ್ಕೆ ರಷ್ಯಾದ ತೈಲ ಸಾಗಣೆ: ಮಂಗಳೂರು ಸುತ್ತಾ ಬೆಳವಣಿಗೆ
ಮಂಗಳೂರು: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ, ಚೀನಾಕ್ಕೆ ಸಾಗುತ್ತ... ಓದನ್ನು ಮುಂದುವರಿಸಿ
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ: ರಾಜ್ಯಕ್ಕೆ ಜೊತೆಗೆ ಕೇಂದ್ರವೂ ಕಣ್ತೆರೆಯಬೇಕು – ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತಾಗಿ... ಓದನ್ನು ಮುಂದುವರಿಸಿ
ಕಮರ್ಷಿಯಲ್ ಗ್ಯಾಸ ಕೊರತೆ: ಹೋಟೆಲ್‌ಗಳಿಗೆ ಒಂದು ವಾರ ಸಹಕಾರ ಕೇಳಿದ ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿ... ಓದನ್ನು ಮುಂದುವರಿಸಿ
ಸಂತೋಷ್ ಕೋಟ್ಯಾನ್ ಸೇರಿ ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್
ಚಿಕ್ಕಮಗಳೂರು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಟಿಕೆಟ್ ಹಂಚಿಕೆಗೆ ಸಿಎಂ ಸಿದ್ದರಾಮಯ್ಯ ಮಧ್ಯಸ್ಥ
ಬೆಂಗಳೂರು/ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲ... ಓದನ್ನು ಮುಂದುವರಿಸಿ
ಉಡುಪಿಯಲ್ಲಿ ‘ಮತಾಂತರ ಪ್ರಚೋದನೆ’ ಆರೋಪ: ಮೋಹನ್ ಲಾಜರಸ್ ಮಹೋತ್ಸವಕ್ಕೆ ಸಂಘಟನೆಗಳ ತೀವ್ರ ವಿರೋಧ
ಉಡುಪಿ: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ನಡೆಯಲಿರುವ... ಓದನ್ನು ಮುಂದುವರಿಸಿ
ವೈಷ್ಣೋದೇವಿ ಯಾತ್ರೆಗೆ ₹5,000 ಸಹಾಯಧನ: ರಾಜ್ಯ ಸರ್ಕಾರದ ಹೊಸ ಯೋಜನೆ ಘೋಷಣೆ
ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾ... ಓದನ್ನು ಮುಂದುವರಿಸಿ
ವಿಧಾನಸಭೆಯಲ್ಲಿ ಹೊಸ ಬಿಲ್ : ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ: ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ
ಬೆಂಗಳೂರು: ಅಂತರ್ಜಾತಿ ವಿವಾಹಗಳ ಸಂದರ್ಭ ಎದುರಾಗುತ್ತಿರುವ ಕುಟುಂ... ಓದನ್ನು ಮುಂದುವರಿಸಿ
ವೃಷಭಾವತಿ ‘ನಾಲೆ’ ಅಲ್ಲ ‘ನದಿ’: ದಾಖಲೆ ತಿದ್ದುಪಡಿ ಮಾಡಿ ಎಂದು ಶಾಸಕ ಶರವಣ ಒತ್ತಾಯ
ಬೆಂಗಳೂರು: ನಗರದ ಜೀವನಾಡಿಯಾಗಿರುವ ವೃಷಭಾವತಿ ನದಿಯನ್ನು ಕಂದಾಯ ದ... ಓದನ್ನು ಮುಂದುವರಿಸಿ