ಉಡುಪಿಯಲ್ಲಿ ‘ಮತಾಂತರ ಪ್ರಚೋದನೆ’ ಆರೋಪ: ಮೋಹನ್ ಲಾಜರಸ್ ಮಹೋತ್ಸವಕ್ಕೆ ಸಂಘಟನೆಗಳ ತೀವ್ರ ವಿರೋಧ
ಉಡುಪಿ: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ನಡೆಯಲಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮದ ಕುರಿತು ವಿವಾದ ಭುಗಿಲೆದ್ದಿದೆ. ತಮಿಳುನಾಡಿನ ಮಿಷನರಿ ಮೋಹನ್ ಸಿ. ಲಾಜರಸ್ ನೇತೃತ್ವದಲ್ಲಿ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಕಾರ್ಯಕ್ರಮವು ಮತಾಂತರ ಪ್ರಚೋದಿತವಾಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಸಂಘಟನೆಗಳು, ಜಿಲ್ಲಾಡಳಿತ ತಕ್ಷಣವೇ ಅನುಮತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿವೆ.
ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಮಾತನಾಡಿ, “ವಿವಾದಾತ್ಮಕ ವ್ಯಕ್ತಿಗಳಿಗೆ ಅವಕಾಶ ನೀಡಬಾರದು. ಈ ಕಾರ್ಯಕ್ರಮದಿಂದ ಸಾಮಾಜಿಕ ಶಾಂತಿ ಭಂಗವಾಗುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಮೋಹನ್ ಸಿ. ಲಾಜರಸ್ ವಿರುದ್ಧ ದ್ವೇಷಪೂರಿತ ಭಾಷಣ, ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಮತಾಂತರ ಆರೋಪಗಳ ಕುರಿತು ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಸಂಘಟನೆಗಳು ಆರೋಪಿಸಿವೆ.
ಜೀಸಸ್ ರಿಡೀಮ್ಸ್ ಸಂಸ್ಥೆಯ ಮೇಲೂ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಕೇಂದ್ರ ಗೃಹ ಸಚಿವಾಲಯವು ಸಂಸ್ಥೆಯ ಲೈಸೆನ್ಸ್ ಅಮಾನತುಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ಮೊದಲ ಮಳೆ : ಗಾಳಿ ಮಳೆಯಲ್ಲೇ ಶಾಲಾ ಮೇಲ್ಚಾವಣಿ ಹರಿದಿತು, ಶಿಕ್ಷಕಿಯ ತ್ವರಿತ ಕ್ರಮದಿಂದ ಮಕ್ಕಳು ರಕ್ಷಿತ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿ... ಓದನ್ನು ಮುಂದುವರಿಸಿ
ಮಂಗಳೂರು
ಜಾಗತಿಕ ರಾಜಕೀಯದ ನಡುವೆಯೂ ಭಾರತಕ್ಕೆ ರಷ್ಯಾದ ತೈಲ ಸಾಗಣೆ: ಮಂಗಳೂರು ಸುತ್ತಾ ಬೆಳವಣಿಗೆ
ಮಂಗಳೂರು: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ, ಚೀನಾಕ್ಕೆ ಸಾಗುತ್ತ... ಓದನ್ನು ಮುಂದುವರಿಸಿ
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ: ರಾಜ್ಯಕ್ಕೆ ಜೊತೆಗೆ ಕೇಂದ್ರವೂ ಕಣ್ತೆರೆಯಬೇಕು – ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತಾಗಿ... ಓದನ್ನು ಮುಂದುವರಿಸಿ
ಆಟೋ ಮ್ಯುಟೇಶನ್ ವ್ಯವಸ್ಥೆ: ಖಾತೆಗಳ 98% ಸ್ವಯಂಚಾಲಿತ ಬದಲಾವಣೆ – ಕೃಷ್ಣ ಬೈರೇಗೌಡ
ಬೆಂಗಳೂರು: ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ಪ್ರಕ್ರಿಯೆಯನ್ನ... ಓದನ್ನು ಮುಂದುವರಿಸಿ
ಕಮರ್ಷಿಯಲ್ ಗ್ಯಾಸ ಕೊರತೆ: ಹೋಟೆಲ್‌ಗಳಿಗೆ ಒಂದು ವಾರ ಸಹಕಾರ ಕೇಳಿದ ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿ... ಓದನ್ನು ಮುಂದುವರಿಸಿ
ಸಂತೋಷ್ ಕೋಟ್ಯಾನ್ ಸೇರಿ ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್
ಚಿಕ್ಕಮಗಳೂರು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಟಿಕೆಟ್ ಹಂಚಿಕೆಗೆ ಸಿಎಂ ಸಿದ್ದರಾಮಯ್ಯ ಮಧ್ಯಸ್ಥ
ಬೆಂಗಳೂರು/ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲ... ಓದನ್ನು ಮುಂದುವರಿಸಿ
ವೈಷ್ಣೋದೇವಿ ಯಾತ್ರೆಗೆ ₹5,000 ಸಹಾಯಧನ: ರಾಜ್ಯ ಸರ್ಕಾರದ ಹೊಸ ಯೋಜನೆ ಘೋಷಣೆ
ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾ... ಓದನ್ನು ಮುಂದುವರಿಸಿ
ವಿಧಾನಸಭೆಯಲ್ಲಿ ಹೊಸ ಬಿಲ್ : ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ: ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ
ಬೆಂಗಳೂರು: ಅಂತರ್ಜಾತಿ ವಿವಾಹಗಳ ಸಂದರ್ಭ ಎದುರಾಗುತ್ತಿರುವ ಕುಟುಂ... ಓದನ್ನು ಮುಂದುವರಿಸಿ
ವೃಷಭಾವತಿ ‘ನಾಲೆ’ ಅಲ್ಲ ‘ನದಿ’: ದಾಖಲೆ ತಿದ್ದುಪಡಿ ಮಾಡಿ ಎಂದು ಶಾಸಕ ಶರವಣ ಒತ್ತಾಯ
ಬೆಂಗಳೂರು: ನಗರದ ಜೀವನಾಡಿಯಾಗಿರುವ ವೃಷಭಾವತಿ ನದಿಯನ್ನು ಕಂದಾಯ ದ... ಓದನ್ನು ಮುಂದುವರಿಸಿ