ವೃಷಭಾವತಿ ‘ನಾಲೆ’ ಅಲ್ಲ ‘ನದಿ’: ದಾಖಲೆ ತಿದ್ದುಪಡಿ ಮಾಡಿ ಎಂದು ಶಾಸಕ ಶರವಣ ಒತ್ತಾಯ
ಬೆಂಗಳೂರು: ನಗರದ ಜೀವನಾಡಿಯಾಗಿರುವ ವೃಷಭಾವತಿ ನದಿಯನ್ನು ಕಂದಾಯ ದಾಖಲೆಗಳಲ್ಲಿ ಹಲವೆಡೆ ‘ನಾಲೆ’ ಎಂದು ದಾಖಲಿಸಿರುವುದನ್ನು ತಿದ್ದುಪಡಿ ಮಾಡಿ, ನದಿಗೆ ತಕ್ಕ ಗೌರವ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಒತ್ತಾಯಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ವೃಷಭಾವತಿಯ ದುಸ್ಥಿತಿಯನ್ನು ವಿವರಿಸಿ ಸರ್ಕಾರದ ಗಮನ ಸೆಳೆದರು.
ಒಂದಾನೊಂದು ಕಾಲದಲ್ಲಿ ಶುದ್ಧ ಜಲಧಾರೆಯಾಗಿದ್ದ ವೃಷಭಾವತಿ ನದಿ, ಇಂದು ನಗರ ಕೊಳಚೆ ನೀರು ಸೇರುವುದರಿಂದ ಮಲಿನಗೊಂಡು ಕಾಲುವೆಯಾಗಿ ಮಾರ್ಪಟ್ಟಿದೆ. ತಜ್ಞರು ಮತ್ತು ನಾಗರಿಕ ಸಂಘಟನೆಗಳು ನದಿಯ ಪರಿಸ್ಥಿತಿ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 2020ರಿಂದ 2024ರವರೆಗಿನ ಅಂಕಿಅಂಶಗಳ ಪ್ರಕಾರ, ನದಿಯ ನೀರಿನ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಬಯೋಲಾಜಿಕಲ್ ಆಕ್ಸಿಜನ್ ಡಿಮಾಂಡ್ (BOD) ಮಟ್ಟ ಸಾಮಾನ್ಯ ಮಿತಿಯನ್ನು ಮೀರಿದೆ. ಜೊತೆಗೆ ಪಾದರಸದ ಪ್ರಮಾಣವು ಅನುಮತಿಸಿದ ಮಿತಿಗಿಂತ ಹಲವು ಪಟ್ಟು ಹೆಚ್ಚಿರುವುದು ಆತಂಕಕಾರಿ ಸಂಗತಿಯಾಗಿದೆ.
ಈ ಮಾಲಿನ್ಯದಿಂದ ಸುತ್ತಮುತ್ತಲಿನ ಕೃಷಿ, ಅಂತರ್ಜಲ ಹಾಗೂ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನದಿಯ ನೀರಿನಲ್ಲಿ ಬೆಳೆದ ತರಕಾರಿಗಳಲ್ಲಿ ವಿಷಕಾರಿ ಲೋಹಗಳ ಅಂಶ ಹೆಚ್ಚಾಗುವ ಅಪಾಯವಿದ್ದು, ಇದು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಜೊತೆಗೆ ನದಿಯ ಜೀವವೈವಿಧ್ಯವೂ ಹಾನಿಗೊಳಗಾಗುತ್ತಿದೆ ಎಂದು ಶರವಣ ತಿಳಿಸಿದ್ದಾರೆ.
ನಗರದಿಂದ ಪ್ರತಿದಿನ ಸುಮಾರು 576 ಮಿಲಿಯನ್ ಲೀಟರ್ ಕೊಳಚೆ ನೀರು ನದಿಗೆ ಸೇರುತ್ತಿದ್ದು, ಪೀಣ್ಯ, ಯಶವಂತಪುರ, ಕುಂಬಳಗೋಡು ಕೈಗಾರಿಕಾ ಪ್ರದೇಶಗಳಿಂದ ರಾಸಾಯನಿಕ ತ್ಯಾಜ್ಯಗಳು ಕೂಡ ಸೇರಿಕೊಳ್ಳುತ್ತಿವೆ. ಪ್ಲಾಸ್ಟಿಕ್, ನಿರ್ಮಾಣ ಅವಶೇಷಗಳು ಮತ್ತು ಗೃಹ ತ್ಯಾಜ್ಯಗಳಿಂದ ನದಿ ಮತ್ತಷ್ಟು ಹಾಳಾಗುತ್ತಿದೆ. ಅಕ್ರಮ ಕಟ್ಟಡಗಳು ಮತ್ತು ರಸ್ತೆ ನಿರ್ಮಾಣದಿಂದ ನದಿಯ ಸ್ವಾಭಾವಿಕ ಹರಿವು ಕೂಡ ಅಡ್ಡಿಯಾಗುತ್ತಿದೆ.
ವೃಷಭಾವತಿಯನ್ನು ಕಂದಾಯ ದಾಖಲೆಗಳಲ್ಲಿ ‘ನಾಲೆ’ ಎಂದು ಗುರುತಿಸಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದ್ದು, ನದಿ ಮತ್ತು ನಾಲೆಗೆ ಇರುವ ಕಾನೂನುಬದ್ಧ ವ್ಯತ್ಯಾಸದಿಂದ ಸಂರಕ್ಷಣೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ವೃಷಭಾವತಿಯನ್ನು ಅಧಿಕೃತವಾಗಿ ‘ನದಿ’ಯಾಗಿ ಮರುನಾಮಕರಣ ಮಾಡಿ, ಅದರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶರವಣ ಸರ್ಕಾರವನ್ನು ಆಗ್ರಹಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ಮೊದಲ ಮಳೆ : ಗಾಳಿ ಮಳೆಯಲ್ಲೇ ಶಾಲಾ ಮೇಲ್ಚಾವಣಿ ಹರಿದಿತು, ಶಿಕ್ಷಕಿಯ ತ್ವರಿತ ಕ್ರಮದಿಂದ ಮಕ್ಕಳು ರಕ್ಷಿತ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿ... ಓದನ್ನು ಮುಂದುವರಿಸಿ
ಮಂಗಳೂರು
ಜಾಗತಿಕ ರಾಜಕೀಯದ ನಡುವೆಯೂ ಭಾರತಕ್ಕೆ ರಷ್ಯಾದ ತೈಲ ಸಾಗಣೆ: ಮಂಗಳೂರು ಸುತ್ತಾ ಬೆಳವಣಿಗೆ
ಮಂಗಳೂರು: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ, ಚೀನಾಕ್ಕೆ ಸಾಗುತ್ತ... ಓದನ್ನು ಮುಂದುವರಿಸಿ
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ: ರಾಜ್ಯಕ್ಕೆ ಜೊತೆಗೆ ಕೇಂದ್ರವೂ ಕಣ್ತೆರೆಯಬೇಕು – ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತಾಗಿ... ಓದನ್ನು ಮುಂದುವರಿಸಿ
ಆಟೋ ಮ್ಯುಟೇಶನ್ ವ್ಯವಸ್ಥೆ: ಖಾತೆಗಳ 98% ಸ್ವಯಂಚಾಲಿತ ಬದಲಾವಣೆ – ಕೃಷ್ಣ ಬೈರೇಗೌಡ
ಬೆಂಗಳೂರು: ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ಪ್ರಕ್ರಿಯೆಯನ್ನ... ಓದನ್ನು ಮುಂದುವರಿಸಿ
ಕಮರ್ಷಿಯಲ್ ಗ್ಯಾಸ ಕೊರತೆ: ಹೋಟೆಲ್‌ಗಳಿಗೆ ಒಂದು ವಾರ ಸಹಕಾರ ಕೇಳಿದ ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿ... ಓದನ್ನು ಮುಂದುವರಿಸಿ
ಸಂತೋಷ್ ಕೋಟ್ಯಾನ್ ಸೇರಿ ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್
ಚಿಕ್ಕಮಗಳೂರು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಟಿಕೆಟ್ ಹಂಚಿಕೆಗೆ ಸಿಎಂ ಸಿದ್ದರಾಮಯ್ಯ ಮಧ್ಯಸ್ಥ
ಬೆಂಗಳೂರು/ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲ... ಓದನ್ನು ಮುಂದುವರಿಸಿ
ಉಡುಪಿಯಲ್ಲಿ ‘ಮತಾಂತರ ಪ್ರಚೋದನೆ’ ಆರೋಪ: ಮೋಹನ್ ಲಾಜರಸ್ ಮಹೋತ್ಸವಕ್ಕೆ ಸಂಘಟನೆಗಳ ತೀವ್ರ ವಿರೋಧ
ಉಡುಪಿ: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ನಡೆಯಲಿರುವ... ಓದನ್ನು ಮುಂದುವರಿಸಿ
ವೈಷ್ಣೋದೇವಿ ಯಾತ್ರೆಗೆ ₹5,000 ಸಹಾಯಧನ: ರಾಜ್ಯ ಸರ್ಕಾರದ ಹೊಸ ಯೋಜನೆ ಘೋಷಣೆ
ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾ... ಓದನ್ನು ಮುಂದುವರಿಸಿ
ವಿಧಾನಸಭೆಯಲ್ಲಿ ಹೊಸ ಬಿಲ್ : ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ: ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ
ಬೆಂಗಳೂರು: ಅಂತರ್ಜಾತಿ ವಿವಾಹಗಳ ಸಂದರ್ಭ ಎದುರಾಗುತ್ತಿರುವ ಕುಟುಂ... ಓದನ್ನು ಮುಂದುವರಿಸಿ