ವಿಧಾನಸಭೆಯಲ್ಲಿ ಹೊಸ ಬಿಲ್ : ಅಂತರ್ಜಾತಿ ವಿವಾಹಿತರಿಗೆ ರಕ್ಷಣೆ: ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ
ಬೆಂಗಳೂರು: ಅಂತರ್ಜಾತಿ ವಿವಾಹಗಳ ಸಂದರ್ಭ ಎದುರಾಗುತ್ತಿರುವ ಕುಟುಂಬ ವಿರೋಧ, ಸಾಮಾಜಿಕ ಬಹಿಷ್ಕಾರ ಹಾಗೂ ಮರ್ಯಾದಾ ಹತ್ಯೆ ಪ್ರಕರಣಗಳನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ಎಂಬ ವಿಧೇಯಕವನ್ನು ಮಂಡಿಸಲಾಗಿದೆ.
ವಿಧೇಯಕ ಜಾರಿಗೆ ಬಂದಲ್ಲಿ, ಅಂತರ್ಜಾತಿ ದಂಪತಿಗಳ ಮೇಲೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹೇರಿಕೆ ಕಾನೂನುಬಾಹಿರವಾಗಲಿದೆ. ದಂಪತಿಯನ್ನು ವಾಸಸ್ಥಳದಿಂದ ಹೊರಹಾಕುವುದು, ಕುಟುಂಬದ ಮೇಲೆ ಒತ್ತಡ ತರುವುದು ಸೇರಿದಂತೆ ವಿವಿಧ ರೀತಿಯ ಕಿರುಕುಳಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗುತ್ತದೆ.
ಜಾತಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಬಲವಂತದ ನಿಯಮಗಳನ್ನು ಹೇರುವುದು, ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಹಾಗೂ ಉದ್ಯೋಗಾವಕಾಶಗಳಿಗೆ ಅಡ್ಡಿಪಡಿಸುವುದು ಅಪರಾಧವಾಗುತ್ತದೆ. ಅಂತರ್ಜಾತಿ ವಿವಾಹಿತರ ಕುಟುಂಬದ ಆಸ್ತಿ ವಶಪಡಿಸಿಕೊಳ್ಳುವುದು ಅಥವಾ ದಂಡ ವಿಧಿಸುವುದಕ್ಕೂ ಅವಕಾಶ ಇರುವುದಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸಿದೆ.
ಇದಲ್ಲದೆ, ಇಬ್ಬರು ವಯಸ್ಕರ ವಿವಾಹಕ್ಕೆ ಪೋಷಕರ ಅನುಮತಿ ಅಗತ್ಯವಿಲ್ಲ ಎಂದು ಹೇಳಲಾಗಿದೆ. ದಂಪತಿಯನ್ನು ಬಲವಂತವಾಗಿ ಬೇರ್ಪಡಿಸುವುದು, ಅಪಹರಿಸುವುದು ಅಥವಾ ಬೆದರಿಕೆ ಹಾಕುವುದು ಕಾನೂನುಬಾಹಿರ ಕೃತ್ಯಗಳಾಗುತ್ತವೆ.
ಮರ್ಯಾದಾ ಹತ್ಯೆ ಪ್ರಕರಣಗಳಿಗೆ ಕಠಿಣ ಶಿಕ್ಷೆಯನ್ನೂ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ದಂಪತಿಯನ್ನು ಕೊಂದರೆ ಜೈಲು ಶಿಕ್ಷೆ ಹಾಗೂ ದಂಡ, ಗಾಯಗೊಳಿಸಿದರೆ ಜೈಲು ಶಿಕ್ಷೆ ಮತ್ತು ಲಕ್ಷಾಂತರ ರೂ. ದಂಡ ವಿಧಿಸುವ ವ್ಯವಸ್ಥೆ ಒಳಗೊಂಡಿದೆ. ಬೆದರಿಕೆ ಅಥವಾ ಮಾನಸಿಕ ಕಿರುಕುಳ ನೀಡಿದರೆ 5ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಪ್ರಾವಧಾನವೂ ಇದೆ.
ಇದರ ಜೊತೆಗೆ, ಅಂತರ್ಜಾತಿ ದಂಪತಿಗೆ ಸಹಾಯ ಮಾಡಿದವರನ್ನೂ ಬಹಿಷ್ಕಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಅಥವಾ ಉದ್ಯೋಗದ ಮೇಲೆ ಒತ್ತಡ ತರುವುದು ಅಪರಾಧವೆಂದು ಪರಿಗಣಿಸಲಾಗಿದೆ. ಸಾಕ್ಷಿಗಳ ಭದ್ರತೆಗೆ ವಿಶೇಷ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ದಂಪತಿಗಳಿಗೆ ಕಾನೂನುಬದ್ಧ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ವಿಧೇಯಕ ರೂಪಿಸಲಾಗಿದೆ. ಇದು ಜಾರಿಗೆ ಬಂದಲ್ಲಿ ಅಂತರ್ಜಾತಿ ದಂಪತಿಗಳಿಗೆ ಹೆಚ್ಚಿನ ಭದ್ರತೆ ಮತ್ತು ಮಾನ್ಯತೆ ಸಿಗುವ ನಿರೀಕ್ಷೆಯಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮೈಸೂರು ಮೊದಲ ಮಳೆ : ಗಾಳಿ ಮಳೆಯಲ್ಲೇ ಶಾಲಾ ಮೇಲ್ಚಾವಣಿ ಹರಿದಿತು, ಶಿಕ್ಷಕಿಯ ತ್ವರಿತ ಕ್ರಮದಿಂದ ಮಕ್ಕಳು ರಕ್ಷಿತ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷದ ಮೊದಲ ಮಳೆ ಸುರಿ... ಓದನ್ನು ಮುಂದುವರಿಸಿ
ಮಂಗಳೂರು
ಜಾಗತಿಕ ರಾಜಕೀಯದ ನಡುವೆಯೂ ಭಾರತಕ್ಕೆ ರಷ್ಯಾದ ತೈಲ ಸಾಗಣೆ: ಮಂಗಳೂರು ಸುತ್ತಾ ಬೆಳವಣಿಗೆ
ಮಂಗಳೂರು: ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ, ಚೀನಾಕ್ಕೆ ಸಾಗುತ್ತ... ಓದನ್ನು ಮುಂದುವರಿಸಿ
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ: ರಾಜ್ಯಕ್ಕೆ ಜೊತೆಗೆ ಕೇಂದ್ರವೂ ಕಣ್ತೆರೆಯಬೇಕು – ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಕುರಿತಾಗಿ... ಓದನ್ನು ಮುಂದುವರಿಸಿ
ಆಟೋ ಮ್ಯುಟೇಶನ್ ವ್ಯವಸ್ಥೆ: ಖಾತೆಗಳ 98% ಸ್ವಯಂಚಾಲಿತ ಬದಲಾವಣೆ – ಕೃಷ್ಣ ಬೈರೇಗೌಡ
ಬೆಂಗಳೂರು: ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ಪ್ರಕ್ರಿಯೆಯನ್ನ... ಓದನ್ನು ಮುಂದುವರಿಸಿ
ಕಮರ್ಷಿಯಲ್ ಗ್ಯಾಸ ಕೊರತೆ: ಹೋಟೆಲ್‌ಗಳಿಗೆ ಒಂದು ವಾರ ಸಹಕಾರ ಕೇಳಿದ ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಹಿ... ಓದನ್ನು ಮುಂದುವರಿಸಿ
ಸಂತೋಷ್ ಕೋಟ್ಯಾನ್ ಸೇರಿ ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್
ಚಿಕ್ಕಮಗಳೂರು: ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಟಿಕೆಟ್ ಹಂಚಿಕೆಗೆ ಸಿಎಂ ಸಿದ್ದರಾಮಯ್ಯ ಮಧ್ಯಸ್ಥ
ಬೆಂಗಳೂರು/ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲ... ಓದನ್ನು ಮುಂದುವರಿಸಿ
ಉಡುಪಿಯಲ್ಲಿ ‘ಮತಾಂತರ ಪ್ರಚೋದನೆ’ ಆರೋಪ: ಮೋಹನ್ ಲಾಜರಸ್ ಮಹೋತ್ಸವಕ್ಕೆ ಸಂಘಟನೆಗಳ ತೀವ್ರ ವಿರೋಧ
ಉಡುಪಿ: ಉಡುಪಿ ನಗರದಲ್ಲಿ ಮಾರ್ಚ್ 20ರಿಂದ 22ರವರೆಗೆ ನಡೆಯಲಿರುವ... ಓದನ್ನು ಮುಂದುವರಿಸಿ
ವೈಷ್ಣೋದೇವಿ ಯಾತ್ರೆಗೆ ₹5,000 ಸಹಾಯಧನ: ರಾಜ್ಯ ಸರ್ಕಾರದ ಹೊಸ ಯೋಜನೆ ಘೋಷಣೆ
ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾ... ಓದನ್ನು ಮುಂದುವರಿಸಿ
ವೃಷಭಾವತಿ ‘ನಾಲೆ’ ಅಲ್ಲ ‘ನದಿ’: ದಾಖಲೆ ತಿದ್ದುಪಡಿ ಮಾಡಿ ಎಂದು ಶಾಸಕ ಶರವಣ ಒತ್ತಾಯ
ಬೆಂಗಳೂರು: ನಗರದ ಜೀವನಾಡಿಯಾಗಿರುವ ವೃಷಭಾವತಿ ನದಿಯನ್ನು ಕಂದಾಯ ದ... ಓದನ್ನು ಮುಂದುವರಿಸಿ