ಬಿಸಿಲಿನ ನಡುವೆಯೇ ರಾಜ್ಯದಲ್ಲಿ ಮಳೆ ಎಂಟ್ರಿ – 12 ಜಿಲ್ಲೆಗಳಲ್ಲಿ ವರುಣನ ಅಬ್ಬರ : ಹವಾಮಾನ ಇಲಾಖೆ ಅಲರ್ಟ್
ಬೆಂಗಳೂರು: ತೀವ್ರ ಬಿಸಿಲಿನ ನಡುವೆಯೇ ರಾಜ್ಯದ ಹಲವೆಡೆ ಇಂದು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲು ಮತ್ತು ಮಳೆಯ ಮಿಶ್ರ ವಾತಾವರಣ ಮುಂದುವರಿಯಲಿದ್ದು, ಸುಮಾರು 12 ಜಿಲ್ಲೆಗಳಲ್ಲಿ ವರುಣನ ಆಗಮನ ನಿರೀಕ್ಷಿಸಲಾಗಿದೆ. ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಬಹುದು ಎಂದು ಅಂದಾಜಿಸಲಾಗಿದೆ.
ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಒಣ ಹವಾಮಾನ ಮುಂದುವರಿದರೂ, ಬಳ್ಳಾರಿ, ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗವಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಹಗುರ ಮಳೆಯ ನಿರೀಕ್ಷೆ ಇದೆ. ಶಿವಮೊಗ್ಗ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 34ರಿಂದ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21ರಿಂದ 22 ಡಿಗ್ರಿ ಇರಲಿದೆ. ಮುಂದಿನ ಕೆಲ ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚುನಾವಣಾ ಕಣದಲ್ಲೇ ಸಿಎಂ ಕೌಂಟರ್ - “ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ” – ಬಿಜೆಪಿಗೆ ಸಿಎಂ ತಿರುಗೇಟು
ದಾವಣಗೆರೆ ದಕ್ಷಿಣ, ಮಾ.31: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ... ಓದನ್ನು ಮುಂದುವರಿಸಿ
ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಗೆಲುವು – ಡಿ.ಕೆ. ಶಿವಕುಮಾರ್ ವಿಶ್ವಾಸ
ಬಾಗಲಕೋಟೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ... ಓದನ್ನು ಮುಂದುವರಿಸಿ
ಎದೆ ಝಲ್ ಎನ್ನುವ ದೃಶ್ಯ : ನಿಯಂತ್ರಣ ತಪ್ಪಿದ KSRTC ಬಸ್ ಪ್ಲಾಟ್‌ಫಾರ್ಮ್‌ಗೆ ನುಗ್ಗಿ 2 ವರ್ಷದ ಮಗು ಸಾವು
ಹಾವೇರಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ... ಓದನ್ನು ಮುಂದುವರಿಸಿ
ಹೊಸ ಸಿಲಿಂಡರ್ ಜೋಡಿಸುವಾಗಲೇ ಸ್ಫೋಟ-ಮನೆ ಸುಟ್ಟು ಕರಕಲು
ಬೆಂಗಳೂರು: ನಗರದ ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ... ಓದನ್ನು ಮುಂದುವರಿಸಿ
ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ದೂರು – ಚುನಾವಣಾ ಆಯೋಗಕ್ಕೆ ಮನವಿ
ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಅವಹೇಳನಕಾರಿ ಭಾ... ಓದನ್ನು ಮುಂದುವರಿಸಿ
‘ಪಬ್ಲಿಕ್ ಪ್ರೆಸ್ ಆರ್ಮಿ’ ಟ್ರಸ್ಟ್ ಪ್ರಕರಣ: ಹೈಕೋರ್ಟ್ ಅರ್ಜಿ ವಜಾ
ಬೆಂಗಳೂರು: ‘ಪಬ್ಲಿಕ್ ಪ್ರೆಸ್ ಆರ್ಮಿ’ ಹೆಸರಿನಲ್ಲಿ ಟ್ರಸ್ಟ್ ಸ್ಥ... ಓದನ್ನು ಮುಂದುವರಿಸಿ
ಕೃಷಿ ಸಚಿವರ ಕಚೇರಿಗೆ ಮತ್ತೆ 100% ಕಡತ ವಿಲೇವಾರಿ ಸಾಧನೆ
ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಕಚೇರಿ ಸಾರ್ವಜ... ಓದನ್ನು ಮುಂದುವರಿಸಿ
ಇನ್ನೂ 2 ವರ್ಷ ನಮ್ಮದೇ ಸರ್ಕಾರ – ಸಿದ್ದರಾಮಯ್ಯ ವಿಶ್ವಾಸ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿ.ಎಂ ಕರೆ
ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಮುಂದ... ಓದನ್ನು ಮುಂದುವರಿಸಿ
ಬೆಂಗಳೂರು ಜನತೆಗೆ ನೀರಿನ ಬಿಲ್ ಶಾಕ್ – BWSSB ದರ ಏರಿಕೆ
ಬೆಂಗಳೂರು: ನಗರ ನಿವಾಸಿಗಳಿಗೆ ಮತ್ತೆ ನೀರಿನ ಬಿಲ್ ಶಾಕ್ ಎದುರಾಗಿ... ಓದನ್ನು ಮುಂದುವರಿಸಿ
ಮಂತ್ರಾಲಯ ಅತಿಥಿ ಗೃಹದಲ್ಲಿ ಗಂಭೀರ ಅವ್ಯವಸ್ಥೆ – ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು
ರಾಯಚೂರು: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲ... ಓದನ್ನು ಮುಂದುವರಿಸಿ