ಚುನಾವಣಾ ಕಣದಲ್ಲೇ ಸಿಎಂ ಕೌಂಟರ್ - “ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ” – ಬಿಜೆಪಿಗೆ ಸಿಎಂ ತಿರುಗೇಟು
ದಾವಣಗೆರೆ ದಕ್ಷಿಣ, ಮಾ.31: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ ಸರ್ಕಾರಕ್ಕೆ ಇನ್ನಷ್ಟು ಶಕ್ತಿ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ನಾಗನೂರು, ಶರಮಗೊಂಡನಳ್ಳಿ, ತುರ್ಚಘಟ್ಟ ಹಾಗೂ ಹದಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ ಸಿಎಂ, ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೇರ ಲಾಭ ತಲುಪುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಕುಟುಂಬ ರಾಜಕಾರಣದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇತರ ಪಕ್ಷಗಳಲ್ಲಿಯೂ ನಾಯಕರ ಕುಟುಂಬದವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ ಎಂದು ಪ್ರಶ್ನಿಸಿದರು. ಸಮರ್ಥ್ ಶಾಮನೂರು ವಿದ್ಯಾವಂತ ಹಾಗೂ ಜನಪರ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆಗೆ ಗ್ಯಾರಂಟಿ ಯೋಜನೆಗಳಡಿ 538 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದು, ಮಧ್ಯವರ್ತಿಗಳಿಲ್ಲದೆ ಹಣ ನೇರವಾಗಿ ಜನರ ಖಾತೆಗಳಿಗೆ ಜಮೆಯಾಗುತ್ತಿದೆ ಎಂದರು. ಬಿಜೆಪಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಟೀಕಿಸಿದ ಸಿಎಂ, ಕಾಂಗ್ರೆಸ್ ಮಾತ್ರ ನುಡಿದಂತೆ ನಡೆದುಕೊಂಡಿದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ” ಎಂದು ಹೇಳಿ ಜನರಿಂದ ಬೆಂಬಲ ಕೋರಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಗೆಲುವು – ಡಿ.ಕೆ. ಶಿವಕುಮಾರ್ ವಿಶ್ವಾಸ
ಬಾಗಲಕೋಟೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ... ಓದನ್ನು ಮುಂದುವರಿಸಿ
ಎದೆ ಝಲ್ ಎನ್ನುವ ದೃಶ್ಯ : ನಿಯಂತ್ರಣ ತಪ್ಪಿದ KSRTC ಬಸ್ ಪ್ಲಾಟ್‌ಫಾರ್ಮ್‌ಗೆ ನುಗ್ಗಿ 2 ವರ್ಷದ ಮಗು ಸಾವು
ಹಾವೇರಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ... ಓದನ್ನು ಮುಂದುವರಿಸಿ
ಹೊಸ ಸಿಲಿಂಡರ್ ಜೋಡಿಸುವಾಗಲೇ ಸ್ಫೋಟ-ಮನೆ ಸುಟ್ಟು ಕರಕಲು
ಬೆಂಗಳೂರು: ನಗರದ ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ... ಓದನ್ನು ಮುಂದುವರಿಸಿ
ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ದೂರು – ಚುನಾವಣಾ ಆಯೋಗಕ್ಕೆ ಮನವಿ
ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಅವಹೇಳನಕಾರಿ ಭಾ... ಓದನ್ನು ಮುಂದುವರಿಸಿ
‘ಪಬ್ಲಿಕ್ ಪ್ರೆಸ್ ಆರ್ಮಿ’ ಟ್ರಸ್ಟ್ ಪ್ರಕರಣ: ಹೈಕೋರ್ಟ್ ಅರ್ಜಿ ವಜಾ
ಬೆಂಗಳೂರು: ‘ಪಬ್ಲಿಕ್ ಪ್ರೆಸ್ ಆರ್ಮಿ’ ಹೆಸರಿನಲ್ಲಿ ಟ್ರಸ್ಟ್ ಸ್ಥ... ಓದನ್ನು ಮುಂದುವರಿಸಿ
ಕೃಷಿ ಸಚಿವರ ಕಚೇರಿಗೆ ಮತ್ತೆ 100% ಕಡತ ವಿಲೇವಾರಿ ಸಾಧನೆ
ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಕಚೇರಿ ಸಾರ್ವಜ... ಓದನ್ನು ಮುಂದುವರಿಸಿ
ಇನ್ನೂ 2 ವರ್ಷ ನಮ್ಮದೇ ಸರ್ಕಾರ – ಸಿದ್ದರಾಮಯ್ಯ ವಿಶ್ವಾಸ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿ.ಎಂ ಕರೆ
ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಮುಂದ... ಓದನ್ನು ಮುಂದುವರಿಸಿ
ಬೆಂಗಳೂರು ಜನತೆಗೆ ನೀರಿನ ಬಿಲ್ ಶಾಕ್ – BWSSB ದರ ಏರಿಕೆ
ಬೆಂಗಳೂರು: ನಗರ ನಿವಾಸಿಗಳಿಗೆ ಮತ್ತೆ ನೀರಿನ ಬಿಲ್ ಶಾಕ್ ಎದುರಾಗಿ... ಓದನ್ನು ಮುಂದುವರಿಸಿ
ಮಂತ್ರಾಲಯ ಅತಿಥಿ ಗೃಹದಲ್ಲಿ ಗಂಭೀರ ಅವ್ಯವಸ್ಥೆ – ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು
ರಾಯಚೂರು: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲ... ಓದನ್ನು ಮುಂದುವರಿಸಿ
ಬಿಸಿಲಿನ ನಡುವೆಯೇ ರಾಜ್ಯದಲ್ಲಿ ಮಳೆ ಎಂಟ್ರಿ – 12 ಜಿಲ್ಲೆಗಳಲ್ಲಿ ವರುಣನ ಅಬ್ಬರ : ಹವಾಮಾನ ಇಲಾಖೆ ಅಲರ್ಟ್
ಬೆಂಗಳೂರು: ತೀವ್ರ ಬಿಸಿಲಿನ ನಡುವೆಯೇ ರಾಜ್ಯದ ಹಲವೆಡೆ ಇಂದು ಮಳೆಯ... ಓದನ್ನು ಮುಂದುವರಿಸಿ