ಇನ್ನೂ 2 ವರ್ಷ ನಮ್ಮದೇ ಸರ್ಕಾರ – ಸಿದ್ದರಾಮಯ್ಯ ವಿಶ್ವಾಸ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿ.ಎಂ ಕರೆ

ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ವೇಳೆ ಅವರು ಐಹೊಳೆ ಮತ್ತು ಅಮೀನಘಡ ಗ್ರಾಮಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಎಚ್.ವೈ. ಮೇಟಿ ಆರಂಭಿಸಿದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗಲು ಉಮೇಶ್ ಮೇಟಿಯವರನ್ನು ಗೆಲ್ಲಿಸಬೇಕೆಂದು ಅವರು ಮತದಾರರಿಗೆ ಮನವಿ ಮಾಡಿದರು.

 

“ನೀವು ಉತ್ತಮ ಜನಪ್ರತಿನಿಧಿಯನ್ನು ಆರಿಸಬೇಕು. ನಿಮ್ಮ ಪ್ರತಿನಿಧಿ ಹೇಗಿರಬೇಕು ಎಂಬುದನ್ನು ಸೂಕ್ತವಾಗಿ ನಿರ್ಧರಿಸಿ,” ಎಂದು ಸಿಎಂ ಕರೆ ನೀಡಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳ ಕುರಿತು ಪ್ರಶ್ನಿಸಿದರು. “ಅಚ್ಚೇ ದಿನ್, ಪ್ರತಿ ಕುಟುಂಬಕ್ಕೆ ₹15 ಲಕ್ಷ, ವರ್ಷಕ್ಕೆ 2 ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ—ಇವೆಲ್ಲವೂ ಮಾತಿನಲ್ಲೇ ಉಳಿದಿವೆ,” ಎಂದು ಟೀಕಿಸಿದರು.

 

ಕೇಂದ್ರ ಸರ್ಕಾರ ಕೃಷ್ಣ ಮೇಲ್ದಂಡೆ ಮತ್ತು ಆಲಮಟ್ಟಿ ಯೋಜನೆಗಳಲ್ಲಿ ಜನವಿರೋಧಿ ನಿಲುವು ತಾಳಿದ ಕಾರಣ, ಹಲವು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಹೊರಬಂದಿಲ್ಲ ಎಂದು ಆರೋಪಿಸಿದರು. ಭೂ ಪರಿಹಾರ ವಿಷಯದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ನೀರಾವರಿ ಭೂಮಿಗೆ ₹40 ಲಕ್ಷ ಮತ್ತು ಒಣಭೂಮಿಗೆ ₹30 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದು, ಮೂರು ವರ್ಷಗಳಲ್ಲಿ ಪರಿಹಾರ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

 

ಇನ್ನೂ, ಬಾಗಲಕೋಟೆಗೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಐಹೊಳೆ ಪ್ರದೇಶವನ್ನು ಐತಿಹಾಸಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು ಎಂದೂ ಭರವಸೆ ನೀಡಿದರು. ಉಮೇಶ್ ಮೇಟಿಯವರು ಗೆದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಬಲ ಸಿಗುತ್ತದೆ ಎಂದು ಹೇಳಿದ ಸಿಎಂ, ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವಂತೆ ಮತದಾರರಿಗೆ ಮನವಿ ಮಾಡಿದರು. ಸಭೆಗೆ ಮುನ್ನ ಅಮೀನಘಡದ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

18 hours ago

   
Image 1
Image 1
ದಾವಣಗೆರೆ

ಚುನಾವಣಾ ಕಣದಲ್ಲೇ ಸಿಎಂ ಕೌಂಟರ್ - “ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ” – ಬಿಜೆಪಿಗೆ ಸಿಎಂ ತಿರುಗೇಟು

ದಾವಣಗೆರೆ ದಕ್ಷಿಣ, ಮಾ.31: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಗೆಲುವು – ಡಿ.ಕೆ. ಶಿವಕುಮಾರ್ ವಿಶ್ವಾಸ

ಬಾಗಲಕೋಟೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಹಾವೇರಿ

ಎದೆ ಝಲ್ ಎನ್ನುವ ದೃಶ್ಯ : ನಿಯಂತ್ರಣ ತಪ್ಪಿದ KSRTC ಬಸ್ ಪ್ಲಾಟ್‌ಫಾರ್ಮ್‌ಗೆ ನುಗ್ಗಿ 2 ವರ್ಷದ ಮಗು ಸಾವು

ಹಾವೇರಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಹೊಸ ಸಿಲಿಂಡರ್ ಜೋಡಿಸುವಾಗಲೇ ಸ್ಫೋಟ-ಮನೆ ಸುಟ್ಟು ಕರಕಲು

ಬೆಂಗಳೂರು: ನಗರದ ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ದೂರು – ಚುನಾವಣಾ ಆಯೋಗಕ್ಕೆ ಮನವಿ

ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಅವಹೇಳನಕಾರಿ ಭಾ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

‘ಪಬ್ಲಿಕ್ ಪ್ರೆಸ್ ಆರ್ಮಿ’ ಟ್ರಸ್ಟ್ ಪ್ರಕರಣ: ಹೈಕೋರ್ಟ್ ಅರ್ಜಿ ವಜಾ

ಬೆಂಗಳೂರು: ‘ಪಬ್ಲಿಕ್ ಪ್ರೆಸ್ ಆರ್ಮಿ’ ಹೆಸರಿನಲ್ಲಿ ಟ್ರಸ್ಟ್ ಸ್ಥ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಕೃಷಿ ಸಚಿವರ ಕಚೇರಿಗೆ ಮತ್ತೆ 100% ಕಡತ ವಿಲೇವಾರಿ ಸಾಧನೆ

ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಕಚೇರಿ ಸಾರ್ವಜ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಜನತೆಗೆ ನೀರಿನ ಬಿಲ್ ಶಾಕ್ – BWSSB ದರ ಏರಿಕೆ

ಬೆಂಗಳೂರು: ನಗರ ನಿವಾಸಿಗಳಿಗೆ ಮತ್ತೆ ನೀರಿನ ಬಿಲ್ ಶಾಕ್ ಎದುರಾಗಿ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ರಾಯಚೂರು

ಮಂತ್ರಾಲಯ ಅತಿಥಿ ಗೃಹದಲ್ಲಿ ಗಂಭೀರ ಅವ್ಯವಸ್ಥೆ – ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು

ರಾಯಚೂರು: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

ಬಿಸಿಲಿನ ನಡುವೆಯೇ ರಾಜ್ಯದಲ್ಲಿ ಮಳೆ ಎಂಟ್ರಿ – 12 ಜಿಲ್ಲೆಗಳಲ್ಲಿ ವರುಣನ ಅಬ್ಬರ : ಹವಾಮಾನ ಇಲಾಖೆ ಅಲರ್ಟ್

ಬೆಂಗಳೂರು: ತೀವ್ರ ಬಿಸಿಲಿನ ನಡುವೆಯೇ ರಾಜ್ಯದ ಹಲವೆಡೆ ಇಂದು ಮಳೆಯ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1