ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ದೂರು – ಚುನಾವಣಾ ಆಯೋಗಕ್ಕೆ ಮನವಿ
ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ಅವಹೇಳನಕಾರಿ ಭಾಷಣದ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ ಅವರ ನೇತೃತ್ವದಲ್ಲಿ, ಪಕ್ಷದ ನಾಯಕರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಈ ವೇಳೆ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಹಾಗೂ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಉಪಸ್ಥಿತರಿದ್ದರು.
ಸಿ.ಕೆ. ರಾಮಮೂರ್ತಿ ಮಾತನಾಡಿ, ಪ್ರದೀಪ್ ಈಶ್ವರ್ ಅವರು ಬಿಜೆಪಿ ನಾಯಕರನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ್ದು, “ಕೋತಿಗಳು, ಅಯೋಗ್ಯರು” ಎಂದು ಸಂಬೋಧಿಸಿರುವುದು ನೀತಿಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು. ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಇನ್ನೊಂದೆಡೆ, ಎಸ್. ಹರೀಶ್ ಮಾತನಾಡಿ, ಬಾಗಲಕೋಟೆ ಉಪ ಚುನಾವಣೆಯ ವೇಳೆ ಸರ್ಕಾರಿ ನೌಕರರು ಪ್ರಚಾರದಲ್ಲಿ ತೊಡಗಿರುವುದಾಗಿ ಆರೋಪಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು ನುಗ್ಲಿ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದರಿಂದ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು. ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಚುನಾವಣೆ ನಡೆಸುತ್ತಿದೆ ಎಂಬ ಆರೋಪವನ್ನೂ ಬಿಜೆಪಿ ನಾಯಕರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರದೀಪ್ ಈಶ್ವರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಚುನಾವಣಾ ಕಣದಲ್ಲೇ ಸಿಎಂ ಕೌಂಟರ್ - “ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ” – ಬಿಜೆಪಿಗೆ ಸಿಎಂ ತಿರುಗೇಟು
ದಾವಣಗೆರೆ ದಕ್ಷಿಣ, ಮಾ.31: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ... ಓದನ್ನು ಮುಂದುವರಿಸಿ
ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಗೆಲುವು – ಡಿ.ಕೆ. ಶಿವಕುಮಾರ್ ವಿಶ್ವಾಸ
ಬಾಗಲಕೋಟೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ... ಓದನ್ನು ಮುಂದುವರಿಸಿ
ಎದೆ ಝಲ್ ಎನ್ನುವ ದೃಶ್ಯ : ನಿಯಂತ್ರಣ ತಪ್ಪಿದ KSRTC ಬಸ್ ಪ್ಲಾಟ್‌ಫಾರ್ಮ್‌ಗೆ ನುಗ್ಗಿ 2 ವರ್ಷದ ಮಗು ಸಾವು
ಹಾವೇರಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ... ಓದನ್ನು ಮುಂದುವರಿಸಿ
ಹೊಸ ಸಿಲಿಂಡರ್ ಜೋಡಿಸುವಾಗಲೇ ಸ್ಫೋಟ-ಮನೆ ಸುಟ್ಟು ಕರಕಲು
ಬೆಂಗಳೂರು: ನಗರದ ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ... ಓದನ್ನು ಮುಂದುವರಿಸಿ
‘ಪಬ್ಲಿಕ್ ಪ್ರೆಸ್ ಆರ್ಮಿ’ ಟ್ರಸ್ಟ್ ಪ್ರಕರಣ: ಹೈಕೋರ್ಟ್ ಅರ್ಜಿ ವಜಾ
ಬೆಂಗಳೂರು: ‘ಪಬ್ಲಿಕ್ ಪ್ರೆಸ್ ಆರ್ಮಿ’ ಹೆಸರಿನಲ್ಲಿ ಟ್ರಸ್ಟ್ ಸ್ಥ... ಓದನ್ನು ಮುಂದುವರಿಸಿ
ಕೃಷಿ ಸಚಿವರ ಕಚೇರಿಗೆ ಮತ್ತೆ 100% ಕಡತ ವಿಲೇವಾರಿ ಸಾಧನೆ
ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಕಚೇರಿ ಸಾರ್ವಜ... ಓದನ್ನು ಮುಂದುವರಿಸಿ
ಇನ್ನೂ 2 ವರ್ಷ ನಮ್ಮದೇ ಸರ್ಕಾರ – ಸಿದ್ದರಾಮಯ್ಯ ವಿಶ್ವಾಸ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿ.ಎಂ ಕರೆ
ಬಾಗಲಕೋಟೆ: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಮುಂದ... ಓದನ್ನು ಮುಂದುವರಿಸಿ
ಬೆಂಗಳೂರು ಜನತೆಗೆ ನೀರಿನ ಬಿಲ್ ಶಾಕ್ – BWSSB ದರ ಏರಿಕೆ
ಬೆಂಗಳೂರು: ನಗರ ನಿವಾಸಿಗಳಿಗೆ ಮತ್ತೆ ನೀರಿನ ಬಿಲ್ ಶಾಕ್ ಎದುರಾಗಿ... ಓದನ್ನು ಮುಂದುವರಿಸಿ
ಮಂತ್ರಾಲಯ ಅತಿಥಿ ಗೃಹದಲ್ಲಿ ಗಂಭೀರ ಅವ್ಯವಸ್ಥೆ – ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು
ರಾಯಚೂರು: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲ... ಓದನ್ನು ಮುಂದುವರಿಸಿ
ಬಿಸಿಲಿನ ನಡುವೆಯೇ ರಾಜ್ಯದಲ್ಲಿ ಮಳೆ ಎಂಟ್ರಿ – 12 ಜಿಲ್ಲೆಗಳಲ್ಲಿ ವರುಣನ ಅಬ್ಬರ : ಹವಾಮಾನ ಇಲಾಖೆ ಅಲರ್ಟ್
ಬೆಂಗಳೂರು: ತೀವ್ರ ಬಿಸಿಲಿನ ನಡುವೆಯೇ ರಾಜ್ಯದ ಹಲವೆಡೆ ಇಂದು ಮಳೆಯ... ಓದನ್ನು ಮುಂದುವರಿಸಿ