ದೈವಪಾತ್ರ ಮಿಮಿಕ್ರಿ ವಿವಾದ: ರಣವೀರ್ ಸಿಂಗ್‌ಗೆ ನ್ಯಾಯಾಲಯದ ಮಧ್ಯಂತರ ರಕ್ಷಣೆ
ಬೆಂಗಳೂರು: ‘ಕಾಂತಾರ ಚಾಪ್ಟರ್–1’ ಚಿತ್ರದ ದೈವಪಾತ್ರದ ಬಗ್ಗೆ ಅವಹೇಳನಕಾರಿ ಸನ್ನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಬಾಲಿವುಡ್ ನಟ Ranveer Singh ವಿರುದ್ಧ ಮುಂದಿನ ವಿಚಾರಣೆಯವರೆಗೆ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಚಾವುಂಡಿ ದೈವಕ್ಕೆ ಅವಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಹಾಗೂ ಅದರ ಮುಂದುವರಿದ ಭಾಗವಾಗಿ High Grounds Police Stationನಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು. ಅರ್ಜಿದಾರ ರಣವೀರ್ ಸಿಂಗ್ ತಮ್ಮ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಕೋರಿರುವುದಾಗಿ ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಪ್ರಕರಣದ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯವರೆಗೆ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿತು. ಜೊತೆಗೆ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಹಾಗೂ ದೂರುದಾರರಿಗೆ ಸೂಚನೆ ನೀಡಿ ವಿಚಾರಣೆಯನ್ನು ಸೋಮವಾರ (ಮಾ.2) ಸಂಜೆ 4 ಗಂಟೆಗೆ ಮುಂದೂಡಿತು.
ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ, ಗೋವಾದಲ್ಲಿ ಇತ್ತೀಚೆಗೆ ನಡೆದ International Film Festival of India (ಐಎಫ್‌ಎಫ್‌ಐ)ದಲ್ಲಿ ‘ಕಾಂತಾರ ಚಾಪ್ಟರ್–1’ ಕುರಿತು ಮಾತನಾಡುವ ವೇಳೆ ಮಾಡಿದ ಹೇಳಿಕೆಗೆ ತಕ್ಷಣವೇ ಕ್ಷಮೆ ಕೋರಲಾಗಿದೆ ಎಂದು ತಿಳಿಸಿದರು. ಉದ್ದೇಶಪೂರ್ವಕವಾಗಿ ಯಾವುದೇ ಅವಹೇಳನ ಮಾಡಿಲ್ಲ; ನಡೆದ ಪ್ರಮಾದವನ್ನು ಸರಿಪಡಿಸಲು ಸಿದ್ಧರಾಗಿದ್ದಾರೆ ಎಂದು ವಾದಿಸಿದರು.
ಇದಕ್ಕೆ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದೈವಪಾತ್ರವನ್ನು ನಿರ್ವಹಿಸಿರುವ Rishab Shetty ಅವರ ಅಭಿನಯವನ್ನು “ಮಹಿಳಾ ದೆವ್ವ” ಎಂದು ಮಿಮಿಕ್ರಿ ಮಾಡಿರುವುದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ತಿಳಿಸಿತು. ಜನರ ಮೇಲೆ ಪ್ರಭಾವ ಹೊಂದಿರುವ ನಟನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು; ದೈವವನ್ನು ದೆವ್ವ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಪೀಠ ಹೇಳಿತು. “ಕ್ಷಮೆ ಕೋರಿರಬಹುದು, ಆದರೆ ಇಂಟರ್‌ನೆಟ್ ಏನನ್ನೂ ಮರೆತುದಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ದೂರುದಾರರ ಪರ ವಕೀಲರು, ಘಟನೆ ನಡೆದ ವೇಳೆ ರಿಷಭ್ ಶೆಟ್ಟಿ ಬೇಡವೆಂದು ಸೂಚಿಸಿದ್ದರೂ ರಣವೀರ್ ಸಿಂಗ್ ತಮ್ಮ ಮಾತು ಮುಂದುವರಿಸಿದ್ದರು ಎಂದು ಹೇಳಿದರು. ಜೊತೆಗೆ, ರಣವೀರ್ ಸಿಂಗ್ ಅವರ ಪತ್ನಿ Deepika Padukone ಕರ್ನಾಟಕದವರಾಗಿರುವುದರಿಂದ ಇಲ್ಲಿನ ಆಚರಣೆಗಳ ಬಗ್ಗೆ ಅರಿವು ಇರಬೇಕೆಂದು ವಾದಿಸಿದರು. ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊಬೈಲ್ ಮಹಜರ್ ವಿವಾದ – ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ
ದರ್ಶನ್ ನಟರ ಹೆಸರು ಸ್ಫೋಟಕವಾಗಿ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾ... ಓದನ್ನು ಮುಂದುವರಿಸಿ
‘ಕಲ್ಕಿ 2898 ಎಡಿ’ ಸೀಕ್ವೆಲ್ ಅಧಿಕೃತವಾಗಿ ಶುರು: ಅಮಿತಾಭ್–ಕಮಲ್ ಭೇಟಿಯ ಫೋಟೋ ವೈರಲ್
ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಬಗ್ಗೆ ದೀರ್ಘಕಾಲಿನ ಕುತೂಹಲ ಅಂತ್ಯಕ್ಕೆ ಬಂದಿದೆ.... ಓದನ್ನು ಮುಂದುವರಿಸಿ
ವಿಜಯ್ ದೇವರಕೊಂಡ್–ರಶ್ಮಿಕಾ ಮಂದಣ್ಣ ‘ವಿರೋಷ್’ ವಿವಾಹ: ಕುಟುಂಬದ ಒಪ್ಪಿಗೆ + ಒಂದು ಷರತ್ತು
ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ದೇವರಕೊಂಡ್ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ... ಓದನ್ನು ಮುಂದುವರಿಸಿ
ಸಮಂತಾ ಸ್ಪಷ್ಟನೆ: “ರಾಜ್ ಪರಿಚಯವಿದ್ದರೂ ವಿಚ್ಛೇದನ ಬಳಿಕ ಪ್ರೀತಿ ಸ್ವೀಕರಿಸಿದೆ”
ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ರುತ್‌ಪ್ರಭು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.... ಓದನ್ನು ಮುಂದುವರಿಸಿ
ಜೈಲು ಊಟ ಸಾಕಾಗುತ್ತಿಲ್ಲ: ಕೋರ್ಟ್‌ಗೆ ನೇರ ಹಾಜರಾತಿಗೆ ನಟ ದರ್ಶನ್ ಮನವಿ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ನಟ ದರ... ಓದನ್ನು ಮುಂದುವರಿಸಿ
ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ: 7 ವರ್ಷದ ವ್ಯತ್ಯಾಸದ ಜೋಡಿ ಫೆಬ್ರವರಿ 26ರಂದು ಹಸೆಮಣೆ
ಟಾಲಿವುಡ್ ಅಭಿಮಾನಿಗಳ ಬಹುಕಾಲದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಟಾಲಿವುಡ... ಓದನ್ನು ಮುಂದುವರಿಸಿ
ಮಣಿರತ್ನಂ–ಸೇತುಪತಿ–ಪಲ್ಲವಿ ಹೊಸ ಸಿನಿಮಾ : ಪ್ರೇಮಕಥೆಗೆ ಫ್ರೆಶ್ ಜೋಡಿ
ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಭಾರೀ... ಓದನ್ನು ಮುಂದುವರಿಸಿ
‘ಪರಮ್ ಸುಂದರಿ’ ನಟಿ ಕೃತಿ ಸನನ್–ಕಬೀರ್ ಬಹಿಯಾ ಲಂಡನ್ ಮೆರವಣಿಗೆ: ವಯಸ್ಸಿನ ವ್ಯತ್ಯಾಸ ತೀವ್ರ ಚರ್ಚೆ
ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಲಂಡನ್‌ನಲ್ಲಿ ಉದ್ಯಮಿ ಕಬೀ... ಓದನ್ನು ಮುಂದುವರಿಸಿ
ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ
ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ
“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್
ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ