ಮಣಿರತ್ನಂ–ಸೇತುಪತಿ–ಪಲ್ಲವಿ ಹೊಸ ಸಿನಿಮಾ : ಪ್ರೇಮಕಥೆಗೆ ಫ್ರೆಶ್ ಜೋಡಿ

 ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ‘ಥಗ್ ಲೈಫ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದ ಬಳಿಕ, ಮಣಿರತ್ನಂ ಇದೀಗ ರೊಮ್ಯಾಂಟಿಕ್ ಪ್ರೇಮಕಥೆ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದು, ಈ ಫ್ರೆಶ್ ಕಾಂಬಿನೇಷನ್ ಸಿನಿಪ್ರೇಮಿಗಳ ಕುತೂಹಲ್ ಹೆಚ್ಚಿಸಿದೆ.

 

ಮೂಲಗಳ ಪ್ರಕಾರ, ಕಥೆಯನ್ನು ಮೊದಲು ಧನುಷ್ ಅವರಿಗೆ ವಿವರಿಸಲಾಗಿತ್ತು. ಕಥೆ ಇಷ್ಟವಾದರೂ ಸಂಭಾವನೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಅವರು ಯೋಜನೆಯಿಂದ ಹಿಂದೆ ಸರಿದರು. ನಂತರ ಸಿಂಬು ಮತ್ತು ಧ್ರುವ್ ವಿಕ್ರಮ್ ಹೆಸರುಗಳು ಕೇಳಿಬಂದರೂ, ಅಂತಿಮವಾಗಿ ವಿಜಯ್ ಸೇತುಪತಿಯನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ‘ಚೆಕ್ಕ ಚಿವಂತ ವಾನಂ’ ನಂತರ ಮಣಿರತ್ನಂ–ಸೇತುಪತಿ ಎರಡನೇ ಬಾರಿ ಕೈಜೋಡಿಸುತ್ತಿದ್ದಾರೆ. ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡಲಿದ್ದಾರೆ.

 

ಸಾಯಿ ಪಲ್ಲವಿ ಮಣಿರತ್ನಂ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಮೊದಲು ರುಕ್ಮಿಣಿ ವಸಂತ್ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಮಣಿರತ್ನಂ ದೃಶ್ಯ ವೈಭವಕ್ಕೆ ರೆಹಮಾನ್ ಮೆಲೋಡಿ ಸೇರ್ಪಡೆ — ಸಿನಿಪ್ರೇಮಿಗಳಿಗೆ ಮತ್ತೊಂದು ಅದ್ಭುತ ಅನುಭವ ಸಿಗಲಿದೆಯೇ ಎಂಬ ನಿರೀಕ್ಷೆ ಹೆಚ್ಚಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೊಬೈಲ್ ಮಹಜರ್ ವಿವಾದ – ಗೃಹಸಚಿವ ಪರಮೇಶ್ವರ್ ಸ್ಪಷ್ಟನೆ

ದರ್ಶನ್ ನಟರ ಹೆಸರು ಸ್ಫೋಟಕವಾಗಿ ಬಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

‘ಕಲ್ಕಿ 2898 ಎಡಿ’ ಸೀಕ್ವೆಲ್ ಅಧಿಕೃತವಾಗಿ ಶುರು: ಅಮಿತಾಭ್–ಕಮಲ್ ಭೇಟಿಯ ಫೋಟೋ ವೈರಲ್

ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಬಗ್ಗೆ ದೀರ್ಘಕಾಲಿನ ಕುತೂಹಲ ಅಂತ್ಯಕ್ಕೆ ಬಂದಿದೆ.... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

ವಿಜಯ್ ದೇವರಕೊಂಡ್–ರಶ್ಮಿಕಾ ಮಂದಣ್ಣ ‘ವಿರೋಷ್’ ವಿವಾಹ: ಕುಟುಂಬದ ಒಪ್ಪಿಗೆ + ಒಂದು ಷರತ್ತು

ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ದೇವರಕೊಂಡ್ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1

ಸಮಂತಾ ಸ್ಪಷ್ಟನೆ: “ರಾಜ್ ಪರಿಚಯವಿದ್ದರೂ ವಿಚ್ಛೇದನ ಬಳಿಕ ಪ್ರೀತಿ ಸ್ವೀಕರಿಸಿದೆ”

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಮಂತಾ ರುತ್‌ಪ್ರಭು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಜೈಲು ಊಟ ಸಾಕಾಗುತ್ತಿಲ್ಲ: ಕೋರ್ಟ್‌ಗೆ ನೇರ ಹಾಜರಾತಿಗೆ ನಟ ದರ್ಶನ್ ಮನವಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ನಟ ದರ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ: 7 ವರ್ಷದ ವ್ಯತ್ಯಾಸದ ಜೋಡಿ ಫೆಬ್ರವರಿ 26ರಂದು ಹಸೆಮಣೆ

ಟಾಲಿವುಡ್  ಅಭಿಮಾನಿಗಳ ಬಹುಕಾಲದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಟಾಲಿವುಡ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

‘ಪರಮ್ ಸುಂದರಿ’ ನಟಿ ಕೃತಿ ಸನನ್–ಕಬೀರ್ ಬಹಿಯಾ ಲಂಡನ್ ಮೆರವಣಿಗೆ: ವಯಸ್ಸಿನ ವ್ಯತ್ಯಾಸ ತೀವ್ರ ಚರ್ಚೆ

ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಲಂಡನ್‌ನಲ್ಲಿ ಉದ್ಯಮಿ ಕಬೀ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ದೈವಪಾತ್ರ ಮಿಮಿಕ್ರಿ ವಿವಾದ: ರಣವೀರ್ ಸಿಂಗ್‌ಗೆ ನ್ಯಾಯಾಲಯದ ಮಧ್ಯಂತರ ರಕ್ಷಣೆ

ಬೆಂಗಳೂರು: ‘ಕಾಂತಾರ ಚಾಪ್ಟರ್–1’ ಚಿತ್ರದ ದೈವಪಾತ್ರದ ಬಗ್ಗೆ ಅವಹ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಕೊಪ್ಪಳ

ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ’ ಚಿತ್ರಕ್ಕೆ ಮುಹೂರ್ತ; ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಭಾಗಿ

ಕೊಪ್ಪಳ : ಪುರಾಣ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ನಟ ರಿ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಮಂಡ್ಯ

“ಡಿ ಬಾಸ್ ತುಂಬಾ ಸ್ಟ್ರಾಂಗ್”: ದರ್ಶನ್ ಬಗ್ಗೆ ವಿಜಯಲಕ್ಷ್ಮೀ ದೊಡ್ಡ ಅಪ್ಡೇಟ್

ಮಂಡ್ಯ: ನಟ ದರ್ಶನ್ ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿದ್ದಾರೆ ಎಂಬ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1