ಮುಂಡಗೋಡದಲ್ಲಿ ದ್ಯಾಮವ್ವ–ಮಾರಿಕಾಂಬ ದೇವಿಯ ರಥೋತ್ಸವಕ್ಕೆ ಭಕ್ತರ ಸಾಗರ

ಮುಂಡಗೋಡ: ಮುಂಡಗೋಡ ನಗರದ ಅಧಿದೇವತೆಯಾದ ಶ್ರೀ ದ್ಯಾಮವ್ವ ದೇವಿಯ ರಥೋತ್ಸವ ಹಾಗೂ ನಗರದ ಹಳೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಮಾರಿಕಾಂಬ ದೇವಿಯ ರಥೋತ್ಸವ ಶ್ರದ್ಧಾ-ಭಕ್ತಿಯಿಂದ, ಸಂಭ್ರಮ-ಸಡಗರದಿಂದ ಜರುಗಿತು. ದೇವಿಯ ನಾಮಸ್ಮರಣೆ, ಜಯಘೋಷಣೆಗಳೊಂದಿಗೆ ನಡೆದ ರಥೋತ್ಸವದಲ್ಲಿ ಎಲ್ಲ ಸಮುದಾಯಗಳ ಭಕ್ತರು ಉತ್ಸಾಹದಿಂದ ಭಾಗವಹಿಸಿದರು. ರಥೋತ್ಸವದ ವೇಳೆ “ಅಮ್ಮನವರೇ ಕಾಪಾಡು”, “ಜೈ ದ್ಯಾಮವ್ವ”, “ಜೈ ಮಾರಿಕಾಂಬ” ಎಂಬ ಘೋಷಣೆಗಳು ಮೊಳಗಿದವು. ದೇವಿಯ ದರ್ಶನ ಪಡೆದ ಭಕ್ತರು ತಮ್ಮ ಕುಟುಂಬಕ್ಕೆ ಸುಖ-ಶಾಂತಿ, ಆರೋಗ್ಯ-ಆಯುಷ್ಯ, ನೆಮ್ಮದಿ ಹಾಗೂ ಸಹೋದರತ್ವ-ಪ್ರೀತಿ-ಮಮತೆಯ ಜೀವನ ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.

 

ರಥೋತ್ಸವದ ಪ್ರಯುಕ್ತ ದೇವಸ್ಥಾನ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಹೂವು-ತೋರಣಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳ, ಭಜನೆ, ಪೂಜೆ-ಪುನಸ್ಕಾರಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ವಿಶೇಷ ಕಳೆ ತುಂಬಿತ್ತು. ಈ ಸಂದರ್ಭದಲ್ಲಿ ಮುಂಡಗೋಡ ತಾಲೂಕಿನ ಪ್ರಮುಖ ಗಣ್ಯರು, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಮಿಟಿಗಳ ಪದಾಧಿಕಾರಿಗಳು, ಸಾರ್ವಜನಿಕರು ರಥವನ್ನು ಎಳೆಯುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಭವ್ಯ ಚಾಲನೆ ನೀಡಿದರು. ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಿಂದ ಮುಂಡಗೋಡ ನಗರ ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.

 

ವರದಿ: ಸೋಮಶೇಖರ ಲಮಾಣಿ


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

10 hours ago

   
Image 1
Image 1
ಚಿಕ್ಕಮಗಳೂರು

ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿ ಯುವಕ ಬಲಿ.. ಚಿಕ್ಕಮಗಳೂರಲ್ಲಿ ಹೆಚ್ಚಾಯ್ತು ಕಾಯಿಲೆ..! 595 ಮಂದಿಗೆ ರಕ್ತ ಪರೀಕ್ಷೆ

ಚಿಕ್ಕಮಗಳೂರು : ಮಂಗನ ಕಾಯಿಲೆ ರಾಜ್ಯದ ಜನರಿಗೆ ಮತ್ತೆ ಆತಂಕ ತಂದೊ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ರಾಸು ಖರೀದಿಗೆ ನೆರವು: ಬಮೂಲ್‌ ನಿರ್ದೇಶಕ ರಮೇಶ್‌

ಆನೇಕಲ್ : ಆನೇಕಲ್ ಪಟ್ಟಣದ ಬಮೂಲ್‌ ಶಿಬಿರ ಕಚೇರಿಯಲ್ಲಿ ಕರ್ನಾಟಕ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ಗ್ರಾಮಾಂತರ

ಆನೇಕಲ್ ತಾಲ್ಲೂಕು

ವೈಭವದ ಕೋದಂಡರಾಮ ರಥೋತ್ಸವ

ಆನೇಕಲ್ : ಸರ್ಜಾಪುರದ ಕೋದಂಡರಾಮ ರಥೋತ್ಸವ ವೈಭವದಿಂದ ಮಂಗಳವಾರ ನಡ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಗಮನಕ್ಕೆ ತನ್ನಿ - ಜಿಲ್ಲಾಧಿಕಾರಿ ಜಗದೀಶ.ಜಿ

ಬೆಂಗಳೂರು : ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಶಿಕ್ಷಕ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಟ್ಯೂಷನ್‌ ಗೆ ಹೋಗು ಎಂದಿದ್ದೇ ತಪ್ಪಾಯ್ತಾ - ಮನೆ ಬಿಟ್ಟು ಉಚಿತ ಬಸ್‌ ಹಿಡಿದ ಪುಟಾಣಿಗಳು!

ಬೆಂಗಳೂರು: 13 ಮತ್ತು 9 ವರ್ಷದ ಅಕ್ಕ ತಮ್ಮ ಜೋಡಿ ನಾಪತ್ತೆಯಾಗಿದ್... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಚಿತ್ರದುರ್ಗ

ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ 'ಲೈಂಗಿಕ ಕಿರುಕುಳ' : ಖಾಸಗಿ ಶಾಲಾ ಶಿಕ್ಷಕನ ವಿರುದ್ಧ 'ಪೋಸ್ಕೊ' ಕೇಸ್ ದಾಖಲು!

ಚಿತ್ರದುರ್ಗ : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೀದರ್

ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ

ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಕೋಲಾರ

ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು

ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು

ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ ‌: ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಬೆಂಗಳೂರು ನಗರ

ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1