ಟ್ಯೂಷನ್ ಗೆ ಹೋಗು ಎಂದಿದ್ದೇ ತಪ್ಪಾಯ್ತಾ - ಮನೆ ಬಿಟ್ಟು ಉಚಿತ ಬಸ್ ಹಿಡಿದ ಪುಟಾಣಿಗಳು!
ಬೆಂಗಳೂರು: 13 ಮತ್ತು 9 ವರ್ಷದ ಅಕ್ಕ ತಮ್ಮ ಜೋಡಿ ನಾಪತ್ತೆಯಾಗಿದ್ದ ಘಟನೆ ಈಗ ಸುಖಾಂತ್ಯ ಕಂಡಿದೆ. 13 ವರ್ಷದ ಬಾಲಕಿಗೆ ಆಧಾರ್ ಕಾರ್ಡ್ ಇದ್ದ ಕಾರಣ ಉಚಿತ ಪ್ರಯಾಣ ಸೌಲಭ್ಯ ದೊರಕಿದ್ದು, 9 ವರ್ಷದ ಬಾಲಕ ಟಿಕೆಟ್ ಪಡೆಯದೇ ಸಹ ಪ್ರಯಾಣ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಮಕ್ಕಳು ಶಿವಮೊಗ್ಗ ಸೇರಿದಂತೆ ಚಿತ್ರದುರ್ಗ ಭಾಗಗಳಿಗೆ ಸಂಚರಿಸಿದ್ದಾಗಿ ತಿಳಿದುಬಂದಿದೆ. ಶಕ್ತಿ ಯೋಜನೆಯ ದುರುಪಯೋಗವನ್ನು ಕಂಡು ಪೊಲೀಸರೇ ಸುಸ್ತಾಗಿದ್ದಾರೆ.
ಮಾರತ್ತಹಳ್ಳಿಯ ಅಶ್ವತ್ಥನಗರದಿಂದ 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನೊಂದಿಗೆ ಮನೆ ಬಿಟ್ಟು ತೆರಳಿದ್ದ ಘಟನೆ ಬೆಂಗಳೂರಿನಲ್ಲಿ ಆತಂಕ ಮೂಡಿಸಿತ್ತು. ಟ್ಯೂಷನ್‌ಗೆ ಹೋಗುವುದಿಲ್ಲ ಎಂದು ಮಕ್ಕಳನ್ನು ಪೋಷಕರು ಬೈದಿದ್ದರಿಂದ ಕೋಪಗೊಂಡ ಅಕ್ಕ-ತಮ್ಮ, ಫೆಬ್ರವರಿ 1 ರಂದು ಸಂಜೆ 3 ಗಂಟೆ ಸುಮಾರಿಗೆ ಮನೆ ಬಿಟ್ಟು ಹೊರಟಿದ್ದರು. ಮಕ್ಕಳ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಪೋಷಕರು ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು.
ದೂರು ಪಡೆದ ತಕ್ಷಣ ಹೆಚ್‌ಎಎಲ್ ಪೊಲೀಸರು ಅಲರ್ಟ್ ಆಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಮಕ್ಕಳ ಫೋಟೊ ಹಾಗೂ ವಿವರಗಳನ್ನು ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಚಿತ್ರದುರ್ಗದ ಸಾರ್ವಜನಿಕರು ಮಕ್ಕಳನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ಕ-ತಮ್ಮನನ್ನು ಹೆಚ್‌ಎಎಲ್ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿ ಯುವಕ ಬಲಿ.. ಚಿಕ್ಕಮಗಳೂರಲ್ಲಿ ಹೆಚ್ಚಾಯ್ತು ಕಾಯಿಲೆ..! 595 ಮಂದಿಗೆ ರಕ್ತ ಪರೀಕ್ಷೆ
ಚಿಕ್ಕಮಗಳೂರು : ಮಂಗನ ಕಾಯಿಲೆ ರಾಜ್ಯದ ಜನರಿಗೆ ಮತ್ತೆ ಆತಂಕ ತಂದೊ... ಓದನ್ನು ಮುಂದುವರಿಸಿ
ಮುಂಡಗೋಡ
ಮುಂಡಗೋಡದಲ್ಲಿ ದ್ಯಾಮವ್ವ–ಮಾರಿಕಾಂಬ ದೇವಿಯ ರಥೋತ್ಸವಕ್ಕೆ ಭಕ್ತರ ಸಾಗರ
ಮುಂಡಗೋಡ: ಮುಂಡಗೋಡ ನಗರದ ಅಧಿದೇವತೆಯಾದ ಶ್ರೀ ದ್ಯಾಮವ್ವ ದೇವಿಯ ರ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ರಾಸು ಖರೀದಿಗೆ ನೆರವು: ಬಮೂಲ್ ನಿರ್ದೇಶಕ ರಮೇಶ್
ಆನೇಕಲ್ : ಆನೇಕಲ್ ಪಟ್ಟಣದ ಬಮೂಲ್ ಶಿಬಿರ ಕಚೇರಿಯಲ್ಲಿ ಕರ್ನಾಟಕ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ವೈಭವದ ಕೋದಂಡರಾಮ ರಥೋತ್ಸವ
ಆನೇಕಲ್ : ಸರ್ಜಾಪುರದ ಕೋದಂಡರಾಮ ರಥೋತ್ಸವ ವೈಭವದಿಂದ ಮಂಗಳವಾರ ನಡ... ಓದನ್ನು ಮುಂದುವರಿಸಿ
ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಗಮನಕ್ಕೆ ತನ್ನಿ - ಜಿಲ್ಲಾಧಿಕಾರಿ ಜಗದೀಶ.ಜಿ
ಬೆಂಗಳೂರು : ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಶಿಕ್ಷಕ... ಓದನ್ನು ಮುಂದುವರಿಸಿ
ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ 'ಲೈಂಗಿಕ ಕಿರುಕುಳ' : ಖಾಸಗಿ ಶಾಲಾ ಶಿಕ್ಷಕನ ವಿರುದ್ಧ 'ಪೋಸ್ಕೊ' ಕೇಸ್ ದಾಖಲು!
ಚಿತ್ರದುರ್ಗ : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ... ಓದನ್ನು ಮುಂದುವರಿಸಿ
ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ
ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿ... ಓದನ್ನು ಮುಂದುವರಿಸಿ
ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು
ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ : ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ
ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ