ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಗಮನಕ್ಕೆ ತನ್ನಿ - ಜಿಲ್ಲಾಧಿಕಾರಿ ಜಗದೀಶ.ಜಿ
ಬೆಂಗಳೂರು : ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಶಿಕ್ಷಕರು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಅವರು ತಿಳಿಸಿದರು. ಅವರು ಇಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಬೆಂಗಳೂರು ನಗರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯ ಮುಕ್ತ ಭಾರತ್ ಅಭಿಯಾನ್- PHASE-2, ಕ್ಷಯರೋಗ ವೇದಿಕೆ ಸಭೆ ಹಾಗೂ ಕ್ಷಯರೋಗ ಶೋ-ಮಾರ್ಬಿಡಿಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳು ಮಾದಕ ಚಟಗಳಿಗೆ ಬಲಿಯಾಗುತ್ತಿದ್ದು, ಶಿಕ್ಷಣ ಇಲಾಖೆ ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ಸರ್ಕಾರ ನಶಾ ಮುಕ್ತ ಭಾರತವನ್ನಾಗಿ ಮಾಡಲು ಕ್ರಮವಹಿಸಿದ್ದು, ಈ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದಲ್ಲಿ ಶಿಕ್ಷಕರು ಕೂಡಲೇ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸುವಂತೆ ಶಾಲೆಗಳಿಗೆ ಆದೇಶವನ್ನು ಹೊರಡಿಸುವಂತೆ ಡಿಡಿಪಿಐಗಳಿಗೆ ಸೂಚಿಸಲಾಗುವುದು ಎಂದರು.
ಬೆಂಗಳೂರು ನಗರ ಜಿಲ್ಲೆಯ ವತಿಯಿಂದ 2030 ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ಇದರ ಅಂಗವಾಗಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕ್ಷಯ ಮುಕ್ತ ಭಾರತ ಅಭಿಯಾನ – ಹಂತ–2 (Phase-2) ಕಾರ್ಯಕ್ರಮವನ್ನು ಮಾರ್ಚ್ 02 ರಿಂದ ಮಾರ್ಚ್ 16 ರವರೆಗೆ ಹಮ್ಮಿಕೊಳ್ಳಲಾಗಿದ್ದು ಇತರೆ ಇಲಾಖೆಗಳ ಸಮನ್ವಯ ಹಾಗೂ ಸಹಕಾರವು ಅಗತ್ಯವಾಗಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಕ್ಷಯರೋಗದ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಶಿಕ್ಷಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಯಲ್ಲಿ ಆಪ್ತ ಸಮಾಲೋಚನೆ ಮಾಡುವವರಿಗೆ ಕೂಡ ತರಬೇತಿಯನ್ನು ನೀಡುವಂತೆ ತಿಳಿಸಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ. ರಮೇಶ್ ಎಚ್. ಮಾತನಾಡಿ ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯಲ್ಲಿ 1443 ಕ್ಷಯರೋಗಿಗಳು ಇದ್ದು, ಇವರ ಸಂಪೂರ್ಣ ಆರೈಕೆಯನ್ನು ಆರೋಗ್ಯ ಇಲಾಖೆ ಹೊತ್ತುಕೊಂಡಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಘೋಷಿತ ಯೋಜನೆ ಅಡಿಯಲ್ಲಿ ಪ್ರತಿ ಕ್ಷಯರೋಗಿಗೆ ಪ್ರತಿ ತಿಂಗಳು ರೂ.1000/- ಸಹಾಯಧನವನ್ನು ನೀಡಲಾಗುತ್ತಿದೆ. ಜೊತೆಗೆ ಸಂಪೂರ್ಣ ಉಚಿತ ಚಿಕಿತ್ಸೆ ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ ಎಂದರು.
ಜನವರಿ 16 2026 ರಿಂದ ಜನವರಿ 30 2026 ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದುರ್ಬಲ ಜನಸಂಖ್ಯೆಯನ್ನು ತಲುಪುವ ಉದ್ದೇಶದಿಂದ ಮನೆಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಈ ಅವಧಿಯಲ್ಲಿ 41 ಹೊಸ ಕ್ಷಯರೋಗಿಗಳನ್ನು ಪತ್ತೆ ಹಚ್ಚಲಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಜಿಲ್ಲಾ ಸರ್ವೇಕ್ಷಾಧಿಕಾರಿಗಳಾದ ಡಾ.ಶರತ್ ಬಾಬು ಹೆಚ್.ಡಿ. ಮಾತನಾಡಿ 2026 ರ ಜನವರಿ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಒಟ್ಟು 27 ಹಾವು ಕಡಿತ ಪ್ರಕರಣಗಳು ಪತ್ತೆಯಾಗಿವೆ. ಆನೇಕಲ್ ತಾಲ್ಲೂಕಿನಲ್ಲಿ 02, ಬೆಂಗಳೂರು ದಕ್ಷಿಣ 16, ಬೆಂಗಳೂರು ಉತ್ತರ 07, ಬೆಂಗಳೂರು ಪೂರ್ವ 02 ಪ್ರಕರಣಗಳು ಪತ್ತೆಯಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ, 2025ರಲ್ಲಿ ಹಾವು ಕಡಿತದಿದಂದ ಆನೇಕಲ್ ತಾಲ್ಲೂಕಿನ ಓರ್ವ ನಿವಾಸಿ ಮೃತಪಟ್ಟಿರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರವೀಂದ್ರನಾಥ್ ಎಂ. ಮೇಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಸುರೇಶ್ ಕುಮಾರ್ ರವರು ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗನ ಕಾಯಿಲೆಗೆ ಶಿವಮೊಗ್ಗದಲ್ಲಿ ಯುವಕ ಬಲಿ.. ಚಿಕ್ಕಮಗಳೂರಲ್ಲಿ ಹೆಚ್ಚಾಯ್ತು ಕಾಯಿಲೆ..! 595 ಮಂದಿಗೆ ರಕ್ತ ಪರೀಕ್ಷೆ
ಚಿಕ್ಕಮಗಳೂರು : ಮಂಗನ ಕಾಯಿಲೆ ರಾಜ್ಯದ ಜನರಿಗೆ ಮತ್ತೆ ಆತಂಕ ತಂದೊ... ಓದನ್ನು ಮುಂದುವರಿಸಿ
ಮುಂಡಗೋಡ
ಮುಂಡಗೋಡದಲ್ಲಿ ದ್ಯಾಮವ್ವ–ಮಾರಿಕಾಂಬ ದೇವಿಯ ರಥೋತ್ಸವಕ್ಕೆ ಭಕ್ತರ ಸಾಗರ
ಮುಂಡಗೋಡ: ಮುಂಡಗೋಡ ನಗರದ ಅಧಿದೇವತೆಯಾದ ಶ್ರೀ ದ್ಯಾಮವ್ವ ದೇವಿಯ ರ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ರಾಸು ಖರೀದಿಗೆ ನೆರವು: ಬಮೂಲ್ ನಿರ್ದೇಶಕ ರಮೇಶ್
ಆನೇಕಲ್ : ಆನೇಕಲ್ ಪಟ್ಟಣದ ಬಮೂಲ್ ಶಿಬಿರ ಕಚೇರಿಯಲ್ಲಿ ಕರ್ನಾಟಕ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ವೈಭವದ ಕೋದಂಡರಾಮ ರಥೋತ್ಸವ
ಆನೇಕಲ್ : ಸರ್ಜಾಪುರದ ಕೋದಂಡರಾಮ ರಥೋತ್ಸವ ವೈಭವದಿಂದ ಮಂಗಳವಾರ ನಡ... ಓದನ್ನು ಮುಂದುವರಿಸಿ
ಟ್ಯೂಷನ್ ಗೆ ಹೋಗು ಎಂದಿದ್ದೇ ತಪ್ಪಾಯ್ತಾ - ಮನೆ ಬಿಟ್ಟು ಉಚಿತ ಬಸ್ ಹಿಡಿದ ಪುಟಾಣಿಗಳು!
ಬೆಂಗಳೂರು: 13 ಮತ್ತು 9 ವರ್ಷದ ಅಕ್ಕ ತಮ್ಮ ಜೋಡಿ ನಾಪತ್ತೆಯಾಗಿದ್... ಓದನ್ನು ಮುಂದುವರಿಸಿ
ಕೋಣೆಗೆ ಕರೆದು ವಿದ್ಯಾರ್ಥಿನಿಯರಿಗೆ 'ಲೈಂಗಿಕ ಕಿರುಕುಳ' : ಖಾಸಗಿ ಶಾಲಾ ಶಿಕ್ಷಕನ ವಿರುದ್ಧ 'ಪೋಸ್ಕೊ' ಕೇಸ್ ದಾಖಲು!
ಚಿತ್ರದುರ್ಗ : ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ... ಓದನ್ನು ಮುಂದುವರಿಸಿ
ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ
ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿ... ಓದನ್ನು ಮುಂದುವರಿಸಿ
ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು
ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ : ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ
ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ